ರಣವೀರ್ ನಟನೆಯ ಧುರಂಧರ್ ಸಿನಿಮಾದ ಕತೆ ಭಾರತೀಯ ಸೇನೆಯ ಹೀರೋ ಮೇಜರ್ ಮೋಹಿತ್ ಶರ್ಮಾ ಅವರದ್ದಾ?

Published : Dec 10, 2025, 11:15 AM IST
Major Mohit Sharma family

ಸಾರಾಂಶ

ರಣ್‌ವೀರ್ ಸಿಂಗ್ ನಟನೆಯ ಧುರಂಧರ್ ಸಿನಿಮಾ ಥಿಯೇಟರ್‌ಗೆ ಅಪ್ಪಳಿಸುವುದಕ್ಕೂ ದಿನ ಮೊದಲು ಮೇಜರ್ ಮೋಹಿತ್ ಶರ್ಮಾ ಅವರ ಹೆಸರು ವ್ಯಾಪಕವಾಗಿ ಮುನ್ನೆಲೆಗೆ ಬಂತು. ಅವರ ಪೋಷಕರು ಇದು ತಮ್ಮ ಮಗನದ್ದೇ ಕತೆ ಎಂದರು. ಹಾಗಿದ್ದರೆ ಈ ಮೇಜರ್ ಮೋಹಿತ್ ಶರ್ಮಾ ಯಾರು ಇಲ್ಲಿದೆ ಡಿಟೇಲ್ ಸ್ಟೋರಿ..

ಧುರಂಧರ್ ಸಿನಿಮಾದ ಕತೆ ಭಾರತೀಯ ಸೇನೆಯ ಹೀರೋ ಮೇಜರ್ ಮೋಹಿತ್ ಶರ್ಮಾ ಅವರದ್ದಾ? 

ರಣ್‌ವೀರ್ ಸಿಂಗ್ ನಟನೆಯ ಧುರಂಧರ್ ಸಿನಿಮಾ ಥಿಯೇಟರ್‌ಗೆ ಅಪ್ಪಳಿಸುವುದಕ್ಕೂ ದಿನ ಮೊದಲು ಮೇಜರ್ ಮೋಹಿತ್ ಶರ್ಮಾ ಅವರ ಹೆಸರು ವ್ಯಾಪಕವಾಗಿ ಮುನ್ನೆಲೆಗೆ ಬಂತು. ವಿಶೇಷವಾಗಿ ಅವರ ಪೋಷಕರು, ಈ ಧುರಂಧರ್ ಸಿನಿಮಾ ತಮ್ಮ ಮಗನ ಬದುಕಿನ ಕತೆಯನ್ನು ಆಧರಿಸಿದ ಸಿನಿಮಾ ಎಂದು ಕೋರ್ಟ್ ಮೆಟ್ಟಿಲೇರಿದ್ದರಿಂದ ಮೇಜರ್ ಮೋಹಿತ್ ಶರ್ಮಾ ಅವರ ಹೆಸರು ಬೆಳಕಿಗೆ ಬಂದಿತ್ತು. ಆದರೆ ಧುರಂಧರ್ ಸಿನಿಮಾ ನಿರ್ದೇಶಕ ಆದಿತ್ಯ ಧಾರ್ ಅವರು ಈ ಆರೋಪವನ್ನು ನಿರಾಕರಿಸಿದ್ದರು. ರಣ್‌ವೀರ್ ಸಿಂಗ್ ಅವರ ಪಾತ್ರವೂ ಭಾರತೀಯ ಸೇನೆಯ ನಿಜ ಜೀವನದ ಹೀರೋ ಆಗಿರುವ ಮೇಜರ್ ಮೋಹಿತ್ ಶರ್ಮಾ ಅವರದ್ದು ಎಂಬ ಅವರ ಕುಟುಂಬದ ಆರೋಪವನ್ನು ಆದಿತ್ಯ ಧಾರ್ ಅವರು ನಿರಾಕರಿಸಿದರು. ಇದರ ಜೊತೆಗೆ ಮೋಹಿತ್ ಶರ್ಮಾ ಅವರ ಪೋಷಕರ ಅರ್ಜಿಯನ್ನು ಕೂಡ ಹೈಕೋರ್ಟ್ ವಜಾ ಮಾಡಿತ್ತು.

ಹೀಗಿರುವಾಗ ಈ ಮೋಹಿತ್ ಶರ್ಮಾ ಯಾರು ಅವರ ಹಿನ್ನೆಲೆ ಏನು ಎಂಬ ಕುತೂಹಲ ಸಿನಿಮಾ ನೋಡಿದ ಹಾಗೂ ಸಿನಿಮಾ ನೋಡುವುದಕ್ಕೆ ಮುಂದಾದ ಅನೇಕ ಸಿನಿಮಾ ಪ್ರಿಯರದ್ದು, ಅವರಿಗಾಗಿ ಮೋಹಿತ್ ಶರ್ಮಾ ಅವರ ಬಗ್ಗೆ ಡಿಟೇಲ್ ಸ್ಟೋರಿ ಇಲ್ಲಿದೆ ನೋಡಿ. ಮೇಜರ್ ಮೋಹಿತ್ ಶರ್ಮಾ ಅವರು ತಮ್ಮ ಧೈರ್ಯ ಹಾಗೂ ಭಾರತೀಯ ಸೇನೆಯಲ್ಲಿ ಸಾಹಸಮಯ ಕಾರ್ಯಾಚರಣೆಗೆ ಹೆಸರಾದವರು. ಅವರು ಭಾರತೀಯ ಸೇನೆಯ ಬಹಳ ಅಪಾಯಕಾರಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಅದರಲ್ಲಿ ಅವರು, ರಹಸ್ಯವಾಗಿ ಅಂಡರ್ ಕವರ್ ಏಜೆಂಟ್ ಆಗಿ ಹಿಜ್ಬುಲ್ ಮುಜಾಹಿದ್ದೀನ್ ಗುಂಪನ್ನು ಸೇರುವ ಮೂಲಕ ಭಯೋತ್ಪಾದಕ ಸಂಘಟನೆಗಳಿಗೆ ನುಸುಳಲು ರಹಸ್ಯವಾಗಿ ಹೋಗಿದ್ದು ಕೂಡ ಸೇರಿತ್ತು.

ಇವರ ಸಾವಿನ ನಂತರ ಇವರ ವಿಧವೆ ಪತ್ನಿ ರಿಷಿಮಾ ಸರೀನ್ ಅವರಿಗೆ ಸೇನೆಯೂ ಹುತಾತ್ಮ ಯೋಧನ ನಂತರ ಆತನ ಸಂಬಂಧಿಗೆ ನೀಡಬೇಕಾದ ಗೌರವವನ್ನು ನೀಡಿತ್ತು. ಇದು ಅವರ ಕುಟುಂಬದೊಳಗೆ ದೊಡ್ಡ ಕಲಹವನ್ನು ಉಂಟು ಮಾಡಿತ್ತು.

ಹಾಗಿದ್ರೆ ಈ ಮೇಜರ್ ಮೋಹಿತ್ ಶರ್ಮಾ ಅವರ ಪತ್ನಿ ರಿಷಿಮಾ ಶರೀನ್ ಯಾರು?

ಮೂಲತಃ ಪಂಜಾಬ್‌ನ ಗುರುದಾಸ್‌ಪುರದಲ್ಲಿ ಜನಿಸಿದ ರಿಶಿಮಾ ಶರೀನ್ ಅವರಿಗೆ ಮೋಹಿತ್ ಶರ್ಮಾ ಅವರನ್ನು ವಿವಾಹವಾಗುವ ಮೊದಲೇ ಸೇನಾ ಹಿನ್ನೆಲೆ ಇತ್ತು. ಅವರ ತಂದೆ ನಿವೃತ್ತ ಕಲೋನಿಯಲ್ ಮೋಹನ್ ಲಾಲ್ ಶರೀನ್, ಆಕೆಯ ಸಹೋದರನು ಸೇನೆಯ ಒಂದು ಆರ್ಟಿಲರಿ ರೆಜಿಮೆಂಟ್‌ನಲ್ಲಿ ಕಲೋನಿಯಲ್ ಆಗಿದ್ದವರು. ಸ್ವತಃ ರಿಷಿಮಾ ಶರೀನ್ ಕೂಡ ಭಾರತೀಯ ಸೇನೆಯಲ್ಲಿ ಕಲೋನಿಯಲ್ ಆಗಿದ್ದವರು ಜೊತೆಗೆ ಉನ್ನತ ಶ್ರೇಣಿಯ ಅಧಿಕಾರಿಯಾಗಿದ್ದವರು. 2001ರಲ್ಲಿ ಅವರು ಆರ್ಮಿ ಸರ್ವೀಸ್ ಕಾರ್ಪ್ಸ್‌ಗೆ ಸೇರಿದರು. ಹಾಗೆಯೇ 2023ರಲ್ಲಿ ಅಗ್ನಿವೀರ್ ನೇಮಕಾತಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಮೊದಲ ಮಹಿಳಾ ಅಧಿಕಾರಿ ಎನಿಸಿದರು. ರಿಷಿಮಾ ಶರೀನ್ ಹಾಗೂ ಮೋಹಿತ್ ಶರ್ಮಾ ಅವರಿಗೆ ಇಬ್ಬರು ಮಕ್ಕಳಿದ್ದಾರೆ.

ಗಂಡ ಮೋಹಿತ್ ಶರ್ಮಾ ಪೋಷಕರೊಂದಿಗೆ ಕಾದಾಟ

2009 ರ ಮಾರ್ಚ್‌ನಲ್ಲಿ ಮೋಹಿತ್ ಶರ್ಮಾ ಅವರು ಸೇನಾ ಕಾರ್ಯಾಚರಣೆಯೊಂದರಲ್ಲಿ ಹುತಾತ್ಮರಾದರು. ಇದಾದ ನಂತರ ಅವರ ಪತ್ನಿ ರಿಷಿಮಾ ಶರೀನ್ ಹಾಗೂ ಮೋಹಿತ್ ಶರ್ಮಾ ಅವರ ಪೋಷಕರ ಮಧ್ಯೆ ಕಾನೂನು ಸಮರ ನಡೆಯಿತು. ಪ್ರಕರಣದಲ್ಲಿ ಕಾನೂನು ಮೃತ ಯೋಧನ ವಿಧವೆ ಪತ್ನಿಗೆ ಸಂಪೂರ್ಣ ಹಕ್ಕುಗಳನ್ನು ನೀಡಿತು. ಆದರೆ ಆತನ ಪೋಷಕರ ಕಷ್ಟಗಳನ್ನು ಗಮನಿಸಲಿಲ್ಲ ಎಂದು ಮೇಜರ್ ಮೋಹಿತ್ ಶರ್ಮಾ ಅವರ ಪೋಷಕರು ವಾದಿಸಿದರು.

ಇದನ್ನೂ ಓದಿ: ರೀಲ್ಸ್‌ ನೋಡಿ ನೋಡಿ, ಗಂಡ ಮಕ್ಕಳ ಬಿಟ್ಟು ಸೋಶಿಯಲ್ ಮೀಡಿಯಾ ಗೆಳೆಯನಿಗಾಗಿ ಬಸ್ ಹತ್ತಿದ ಮಹಿಳೆ

ಮೇಜರ್ ಮೋಹಿತ್ ಶರ್ಮಾ ಅವರಿಗೆ ಅವರ ಸಾವಿನ ನಂತರ ನೀಡಿದ ಅಶೋಕ ಚಕ್ರ ಸ್ವೀಕರಿಸಲು ಮತ್ತು ಪ್ರಶಸ್ತಿ ಪ್ರದಾನ ಸಮಾರಂಭಗಳಲ್ಲಿ ಭಾಗವಹಿಸಲು ಅವರ ಪೋಷಕರನ್ನು ಆಹ್ವಾನಿಸಲಿಲ್ಲ, ಇದರ ಜೊತೆಗೆ ಓರ್ವ ಯೋಧನ ಪೋಷಕರಾಗಿ ಅವರಿಗೆ ನೀಡಬೇಕಾದ ಮೂಲಭೂತ ಸವಲತ್ತುಗಳಿಂದ ಅವರನ್ನು ಹೊರಗಿಡಲಾಯ್ತು. ಗಣರಾಜ್ಯೋತ್ಸವದ ಒಂದು ದಿನ ಮೊದಲು ಮಾತ್ರ ಅವರಿಗೆ ಪಾಸ್‌ಗಳು ದೊರೆತವು ಎಂದು ಅವರ ಪೋಷಕರು ಆರೋಪಿಸಿದ್ದರು.

ಕರ್ತವ್ಯದ ಸಮಯದಲ್ಲಿ ಮಗ ಧರಿಸಿದ್ದ ಬಟ್ಟೆ ಮತ್ತು ಬೂಟುಗಳನ್ನು ಸಹ ತಮಗೆ ನೀಡಲಾಗಿಲ್ಲ, ಅವರ ಪಾಸಿಂಗ್ ಔಟ್ ಪೆರೇಡ್‌ನಲ್ಲಿ ಛಾಯಾಚಿತ್ರ ತೆಗೆಯುವ ಹಕ್ಕನ್ನು ನಿರಾಕರಿಸಲಾಯ್ತು. ಸೇನಾ ಹಿನ್ನೆಲೆಯಿಂದ ಬಂದಿರುವ ಸೊಸೆ ರಿಷಿಮಾ ಅವರೇ ಇದಕ್ಕೆ ಕಾರಣ ಎಂದು ಅವರ ಪೋಷಕರು ಆರೋಪಿಸಿದ್ದರು. ಆದರೆ ರಿಷಿಮಾ ಶಿರಿನ್ ಅವರ ತಂದೆ ಬೇರೆಯದೇ ಆರೋಪ ಮಾಡಿದ್ದರು. ರಿಷಿಮಾ ತನ್ನ ಪತಿಯ ಮರಣದ ನಂತರ, ತನ್ನ ಅತ್ತೆ ಮಾವನೊಂದಿಗೆ ವ್ಯವಹರಿಸುವ ಒತ್ತಡವನ್ನು ನಿಭಾಯಿಸಲು ಒಂದು ತಿಂಗಳ ರಜೆ ತೆಗೆದುಕೊಂಡು ಮನೋ ವೈದ್ಯರ ಸಹಾಯ ಪಡೆಯಬೇಕಾಯಿತು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಎರಡು ಮಕ್ಕಳ ತಾಯಿಯ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Dhurandhar Review: ಹಿಂದೂಗಳಿಗೆ ಪ್ರಥಮ ಶತ್ರು ಹಿಂದೂ-ಮೊಬೈಲ್‌ ಕೂಡ ನೋಡದಂತೆ ಮಾಡೋ Ranveer Singh ಸಿನಿಮಾ!
3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್