3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್

Published : Dec 09, 2025, 02:46 PM IST
3 idiots

ಸಾರಾಂಶ

ಬಾಲಿವುಡ್ ನ ಆಲ್ ಟೈಮ ಫೆವರೆಟ್ 3 ಈಡಿಯಟ್ಸ್ ಸಿನಿಮಾ ಬಗ್ಗೆ ಹೊಸ ಅಪ್ಡೇಟ್ ಬಂದಿದೆ. ಆಮೀರ್ ಖಾನ್ ಪ್ರೇಮಿಗಳಿಗೆ ಖುಷಿ ಸುದ್ದಿ ಸಿಕ್ಕಿದೆ. ಶೀಘ್ರವೇ 3 ಈಡಿಯಟ್ಸ್ ಸೀಕ್ವೆಲ್ ಶೂಟಿಂಗ್ ಶುರುವಾಗಲಿದೆ.

ಆಲ್ ಈಸ್ ವೆಲ್ (All is well) ಕೇಳಿದಾಗ ಮಿಲೇನಿಯಲ್ಸ್ ಗೆ ನೆನಪಾಗೋದು 3 ಈಡಿಯಟ್ಸ್ (3 idiots) ಸಿನಿಮಾ. ಮೂವರು ಸ್ನೇಹಿತರ ಕಥೆ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿತ್ತು. ಡಿಸೆಂಬರ್ 25, 2009ರಲ್ಲಿ ಬಿಡುಗಡೆಯಾಗಿದ್ದ ಸಿನಿಮಾ 400 ಕೋಟಿ ಬಾಚಿಕೊಂಡಿತ್ತು. ಸಿನಿಮಾ ತೆರೆಗೆ ಬಂದು 15 ವರ್ಷ ಕಳೆದಿದೆ. ಈಗ್ಲೂ ಜನ 3 ಈಡಿಯಟ್ಸ್ ಸಿನಿಮಾ ನೋಡಿ ರಿಲ್ಯಾಕ್ಸ್ ಆಗ್ತಾರೆ. ಅಮೀರ್ ಖಾನ್ ಫ್ಯಾನ್ಸ್ ಗೆ ಈಗ ಮತ್ತೊಂದು ಖುಷಿ ಸುದ್ದಿ ಇದೆ. 3 ಈಡಿಯಟ್ಸ್ ಸೀಕ್ವೆನ್ಸ್ ಬರ್ತಿದೆ. ವಿಶೇಷ ಅಂದ್ರೆ ಈ ಸಿನಿಮಾದಲ್ಲೂ ಅದೇ ನಟರು ಕಾಣಿಸಿಕೊಳ್ಳಲಿದ್ದಾರೆ.

ಬರ್ತಿದೆ 3 ಈಡಿಯಟ್ಸ್ 2 :

3 ಈಡಿಯಟ್ಸ್ ಸಿನಿಮಾದಲ್ಲಿ ಅಮೀರ್ ಖಾನ್, ಶರ್ಮಾನ್ ಜೋಶಿ, ಮಾಧವನ್ ಮತ್ತು ಕರೀನಾ ಕಪೂರ್ರಂತಹ ಸೂಪರ್ ಸ್ಟಾರ್ ಗಳು ನಟಿಸಿದ್ದರು. ಸಿನಿಮಾ ಹಣ ಬಾಚಿಕೊಳ್ಳೋದ್ರಲ್ಲಿ ಸಕ್ಸಸ್ ಆಗಿತ್ತು. ಈಗ 3 ಈಡಿಯಟ್ಸ್ 2 ಗೆ ತಯಾರಿ ನಡಿತಿದೆ ಎನ್ನುವ ಸುದ್ದಿ ಬಂದಿದೆ. ರಾಜ್ಕುಮಾರ್ ಹಿರಾನಿ 3 ಈಡಿಯಟ್ಸ್ 2 ಗಾಗಿ ಸ್ಕ್ರಿಪ್ಟ್ ಸಿದ್ಧಪಡಿಸಿದ್ದಾರೆ. ಮುಂದಿನ ವರ್ಷ ಅಂದ್ರೆ 2026 ರಲ್ಲಿ ಶೂಟಿಂಗ್ ಶುರುವಾಗಲಿದೆ.

ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!

3 ಈಡಿಯಟ್ಸ್ ಸಿನಿಮಾ ಕಥೆಯ ಮುಂದುವರೆದ ಭಾಗವೇ ಸಿನಿಮಾ ಆಗಲಿದೆ. ಕಾಲೇಜಿನಲ್ಲಿ ಸಾಕಷ್ಟು ತರಲೆ, ತಮಾಷೆ ಮಾಡಿದ್ದ ಮೂರು ಸ್ನೇಹಿತರು, ಕಾಲೇಜ್ ಮುಗಿತಿದ್ದಂತೆ ದೂರವಾಗಿದ್ರು. ರಾಂಚೊ ಹುಡುಕಾಟದ ಮೂಲಕವೇ ಸಿನಿಮಾ ಕಥೆ ಸಾಗಿತ್ತು. ಮೂವರು ಸ್ನೇಹಿತರು ಒಂದಾಗ್ತಿದ್ದಂತೆ 3 ಈಡಿಯಟ್ಸ್ ಕಥೆ ಮುಗಿದಿತ್ತು. ಈಗ ಅದ್ರ ಮುಂದುವರೆದ ಭಾಗ ಸಿದ್ಧವಾಗಲಿದೆ. ಹೊಸ ಸಾಹಸಕ್ಕಾಗಿ ಮತ್ತೆ ಸ್ನೇಹಿತರು ಒಂದಾಗಲಿದ್ದಾರೆ. ರಾಂಚೊ, ಫರ್ಹಾನ್, ರಾಜು ಮತ್ತು ಪಿಯಾ ಮತ್ತೊಮ್ಮೆ ಹೊಸ ರೀತಿಯಲ್ಲಿ ಮನರಂಜನೆ ನೀಡಲು ಸಿದ್ಧರಾಗಿದ್ದಾರೆ. ಬಹಳ ದಿನಗಳಿಂದ 3 ಈಡಿಯಟ್ಸ್ ಸೀಕ್ವೆಲ್ ಮಾಡುವ ಆಲೋಚನೆಯನ್ನು ರಾಜ್ಕುಮಾರ್ ಹಿರಾನಿ ಹೊಂದಿದ್ದರು. ಆದ್ರೆ ದಾದಾಸಾಹೇಬ್ ಫಾಲ್ಕೆ ಅವರ ಜೀವನ ಚರಿತ್ರೆಯ ಕೆಲಸ ಮಾಡ್ತಿದ್ದರಿಂದ ಕೆಲ್ಸ ಆಗಿರಲಿಲ್ಲ.

3 ಈಡಿಯಟ್ಸ್ ಸಿನಿಮಾ ಬಗ್ಗೆ ಹೇಳೋದಾದ್ರೆ ಸಿನಿಮಾವನ್ನು 55 ಕೋಟಿ ರೂಪಾಯಿ ಬಜೆಟ್ನಲ್ಲಿ ನಿರ್ಮಿಸಲಾಗಿತ್ತು. ಇದು ವಿಶ್ವಾದ್ಯಂತ 400 ಕೋಟಿ ರೂಪಾಯಿ ಗಳಿಸಿತ್ತು. ಆ ಸಿನಿಮಾದಲ್ಲಿದ್ದ ಆಮಿರ್ ಖಾನ್, ಕರೀನಾ ಕಪೂರ್, ಶರ್ಮಾನ್ ಜೋಶಿ, ಆರ್. ಮಾಧವನ್ ಮತ್ತು ಬೋಮನ್ ಇರಾನಿ ಸೀಕ್ವೆಲ್ ನಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಚಿತ್ರ ಯಾವಾಗ ಬಿಡುಗಡೆಯಾಗಲಿದೆ ಎನ್ನುವ ಬಗ್ಗೆ ಸದ್ಯ ಯಾವುದೇ ಮಾಹಿತಿ ಇಲ್ಲ.

ರಾಜ್ ಜೊತೆ ರೊಮ್ಯಾಂಟಿಕ್ ಹನಿಮೂನ್ ಟ್ರಿಪ್ ಪ್ಲಾನ್ ಮಾಡಿದ ಸಮಂತಾ.. ಎಲ್ಲಿಗೆ ಹೋಗ್ತಿದ್ದಾರೆ?

ಇನ್ನು ಆಮೀರ್ ಖಾನ್ ಸಿನಿಮಾ ಹಾಗೂ ನಿರ್ಮಾಣ ಎರಡರಲ್ಲೂ ಬ್ಯುಸಿಯಿದ್ದಾರೆ. ಆಮಿರ್ ಖಾನ್ ಲಾಹೋರ್ 1947 ಸಿನಿಮಾ ನಿರ್ಮಿಸುತ್ತಿದ್ದಾರೆ. ರಾಜ್ಕುಮಾರ್ ಸಂತೋಷಿ ನಿರ್ದೇಶಿಸಿದ ಈ ಚಿತ್ರದಲ್ಲಿ ಸನ್ನಿ ಡಿಯೋಲ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಆಮಿರ್ ಖಾನ್ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಿಸಲಾದ "ಮಿಸ್ಸಿಂಗ್ ಲೇಡೀಸ್" ಪ್ರೇಕ್ಷಕರನ್ನು ಸಂಪೂರ್ಣವಾಗಿ ರಂಜಿಸ್ತಿದೆ. ಆಮಿರ್ ಖಾನ್ ಕೈನಲ್ಲಿ ಹ್ಯಾಪಿ ಪಟೇಲ್ ಸಿನಿಮಾ ಇದೆ. ಕರೀನಾ ಕಪೂರ್ ಕೂಡ ಸಿನಿಮಾಗಳಲ್ಲಿ ಬ್ಯುಸಿಯಿದ್ದಾರೆ. ಅವರ ದೈರಾ ಚಿತ್ರ, 2026ರಲ್ಲಿ ತೆರೆಗೆ ಬರಲಿದೆ. 2024ರಲ್ಲಿ ಕರೀನಾ ಅಭಿನಯಿಸಿದ್ದ ಕ್ರೂ ಸಾಕಷ್ಟು ಸುದ್ದಿ ಮಾಡಿತ್ತು. ಅದ್ರ ಸೀಕ್ವೆಲ್ ಬರಲಿದೆ ಎನ್ನುವ ಸುದ್ದಿ ಇದ್ದು, ಅದ್ರಲ್ಲೂ ಕರೀನಾ ನಟಿಸ್ತಾರೆ ಎನ್ನಲಾಗ್ತಿದೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಜಗಳದ ಕಾರಣದಿಂದ ನಾವು ದೂರವಾಗಲು ಬಯಸಲಿಲ್ಲ, ಜಗಳವನ್ನೇ ದೂರಮಾಡಲು ಬಯಸಿದ್ದೇವೆ; ಸೋನಾಕ್ಷಿ ಸಿನ್ಹಾ!
ಬಾಲಿವುಡ್‌ ಈ ಸ್ಟಾರ್ ನಟಿಯರು ರಿಜೆಕ್ಟ್ ಮಾಡಿದ್ರು ಆ ಸಿನಿಮಾ; ಆದ್ರೆ ಮುಂದೆ ಅವರೆಲ್ಲರ ಲೈಫ್‌ನಲ್ಲಿ ಏನಾಯ್ತು?