Dhurandhar Review: ಹಿಂದೂಗಳಿಗೆ ಪ್ರಥಮ ಶತ್ರು ಹಿಂದೂ-ಮೊಬೈಲ್‌ ಕೂಡ ನೋಡದಂತೆ ಮಾಡೋ Ranveer Singh ಸಿನಿಮಾ!

Published : Dec 10, 2025, 10:39 AM IST
ranveer singh Dhurandhar REVIEW

ಸಾರಾಂಶ

Bollywood actor Ranveer Singh: ರಣ್‌ವೀರ್‌ ಸಿಂಗ್ ನಟನೆಯ ‘Dhurandhar’ ಸಿನಿಮಾ ರಿಲೀಸ್‌ ಆಗಿದ್ದು, ಎಲ್ಲೆಡೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಸಿನಿಮಾದಲ್ಲಿ ಸಾಕಷ್ಟು ವಿಷಯಗಳಿದ್ದು, ಸ್ವಲ್ಪವೂ ಕೂಡ ಬೇರೆ ಕಡೆ ವೀಕ್ಷಕರು ಗಮನ ಕೊಡಲು ಆಗದಂತೆ ಸಿನಿಮಾ ಸಾಗುತ್ತದೆ.

ರಣ್‌ವೀರ್‌ ಸಿಂಗ್ ನಟನೆಯ ‘ಧುರಂಧರ್’‌ ಸಿನಿಮಾ ( Dhurandhar Movie ) ಬಗ್ಗೆ ಲೇಖಕ ರಂಗಸ್ವಾಮಿ ಮೂಕನಹಳ್ಳಿ ಅವರು ಬರೆದ ವಿಮರ್ಶೆ ಇಲ್ಲಿದೆ.

ಸಿನಿಮಾದಲ್ಲಿ ಎರಡು ಡೈಲಾಗ್ ಮರೆವಂತಿಲ್ಲ , ಮೆದುಳಿನ ಚಿಪ್ಪು ತೆಗೆದು ಅದರಲ್ಲಿ ಹಾಕಿದಂತೆ ಮನಸ್ಸಿನಲ್ಲಿ ಅಚ್ಚಾಗಿದೆ. ಅದರಲ್ಲಿ ಮೊದಲನೆಯ ಡೈಲಾಗ್ ನಾವೆಲ್ಲಾ ಕೇಳಿರುವ , ಅನುಮೋದಿಸುವ ಆದರೆ ಅದನ್ನು ಅರ್ಥ ಮಾಡಿಕೊಳ್ಳದೆ ಮತ್ತೆ ಅದದೇ ರೀತಿಯಲ್ಲಿ ಬದುಕುವ ಡೈಲಾಗ್ . ಹಿಂದೂಗಳಿಗೆ ಪ್ರಥಮ ಶತ್ರು ಹಿಂದೂ ! ಎರಡನೆಯ ಸ್ಥಾನದಲ್ಲಿ ಪಾಕಿಸ್ತಾನ ಬರುತ್ತದೆ ಎನ್ನುವುದು !

ಎರಡನೆಯ ಡೈಲಾಗ್ ಯಾವುದು?

ಎರಡನೆಯ ಡೈಲಾಗ್ ಅಜಿತ್ ದೋವಲ್ ಪಾತ್ರಧಾರಿ ನಮ್ಮ ಮಾಧವನ್ ಹೇಳುವುದು ' ಎಷ್ಟು ಸಾಧ್ಯವೂ ಅಷ್ಟು ಸಾಕ್ಷಿಗಳನ್ನು ಸಂಗ್ರಹಿಸು , ಈಗಲೇ ಆಕ್ಷನ್ ತೆಗೆದುಕೊಳ್ಳಲು ಆಗುವುದಿಲ್ಲ. ಮುಂದೊಂದು ದಿನ ದೇಶದ ಬಗ್ಗೆ ನಿಜವಾದ ಕಾಳಜಿ ಇರುವವರು ಬರಬಹುದು ಆಗ ಬೇಕಾಗುತ್ತದೆ . ನಮ್ಮ ವೇಳೆ ಬರುವವರೆಗೂ ಕಾಯಬೇಕು ! ನಮ್ಮ ವೇಳೆ ಬರುವವರೆಗೂ ಕಾಯಬೇಕು ಎನ್ನುವುದು ನನ್ನ ಜೀವನದಲ್ಲಿ ಈ ಚಿತ್ರ ನೋಡುವುದಕ್ಕಿಂತ ಮುಂಚಿನಿಂದ ಅಳವಡಿಸಿಕೊಂಡ ಬಂದ ಅಂಶ. ನಾನು ನಗುತ್ತಿರಲಿಲ್ಲ . ನಗಲು ಕೂಡ ಅರ್ಹತೆ ಗಳಿಸಿಕೊಳ್ಳಬೇಕು . ಅಲ್ಲಿಯವರೆಗೆ , ನಮ್ಮ ಸಮಯ ಬರುವವರೆಗೆ ಕಾಯಬೇಕು ಎಂದು ನನ್ನ ಅಣ್ಣ ಮತ್ತು ತಮ್ಮನಿಗೆ ಹೇಳುತ್ತಿದ್ದೆ !

ಗೆಲ್ಲಲು ಅತಿ ಮುಖ್ಯವಾಗಿ ನಾವು ಜೀವಂತವಾಗಿರಬೇಕು

ಸಮಯದ ತಾಕತ್ತು ನೋಡಿ , ಅಜಿತ್ ದೋವಲ್‌ನಂತಹ ಪ್ರಚಂಡ ವ್ಯಕ್ತಿ ಕೂಡ ಏನೂ ಮಾಡಲಾಗದ ಅಸಹಾಯಕ ವರ್ಷಗಳನ್ನು ಕಳೆದಿದ್ದಾರೆ. ಅಲ್ಲಿ ಇನ್ನೊಂದು ಡೈಲಾಗ್ ಬರುತ್ತೆ. ನಾವು ಗೆಲ್ಲಲು ಹೋರಾಟ ಮಾಡುತ್ತಿದ್ದೇವೆ. ಗೆಲ್ಲಲು ಅತಿ ಮುಖ್ಯವಾಗಿ ನಾವು ಜೀವಂತವಾಗಿರಬೇಕು ಎನ್ನುವ ಡೈಲಾಗ್ ಬೆನ್ನಹುರಿಯಲ್ಲಿ ವಿದ್ಯುತ್ ಸಂಚಾರ ಮಾಡಿಸುತ್ತೆ. ಮತ್ತದೇ ಪದವನ್ನು ಹೇಳುವೆ ಸಮಯದ ತಾಕತ್ತು ನೋಡಿ ! ಅಜಿತ್ ದೋವಲ್ ರಂತಹ ವ್ಯಕ್ತಿಗೆ ಮೋದಿಯಂತಹ ವ್ಯಕ್ತಿ ಸಿಕ್ಕಿಬಿಟ್ಟರು !

ಅದು 2016ರ ಸಮಯ ಆಗ ತಾನೇ ಡಿ ಮಾನಿಟೈಸಷನ್ ಆಗಿತ್ತು. ಅದನ್ನು ಕುರಿತು ಒಂದು ಅಂಕಣದಲ್ಲಿ ಬರೆದಿದ್ದೆ. ಅವತ್ತಿಗಿನ್ನೂ ಸೋಶಿಯಲ್ ಮೀಡಿಯಾದಲ್ಲಿ ನನಗೆ ಓದುಗರಿರಲಿಲ್ಲ. ಆದರೆ ಆ ಲೇಖನ ವೈರಲ್ ಆಗಿ ಹೋಯ್ತು. ನನ್ನ ಜೀವನದಲ್ಲಿ ಲೇಖನವೊಂದಕ್ಕೆ ಅತಿ ಹೆಚ್ಚು ಪ್ರತಿಕ್ರಿಯೆ ಪಡೆದುಕೊಂಡಿದ್ದೆ. ಲೆಕ್ಕವಿಡಲು ಹೋಗಲಿಲ್ಲ, ಬಟ್ ಐನೂರಕ್ಕೂ ಹೆಚ್ಚು ಮೇಲ್ ಬಂದಿತ್ತು !

ಪಾಕಿಸ್ತಾನ ನಮ್ಮ ಹಣವನ್ನು ನಕಲು ಮಾಡುತ್ತಿತ್ತು

ಪಾಕಿಸ್ತಾನ ನಮ್ಮ ಐನೂರು ಮತ್ತು ಸಾವಿರ ರೂಪಾಯಿಯನ್ನು ನಕಲು ಮಾಡಿ ಭಾರತದ ವ್ಯವಸ್ಥೆಯೊಳಗೆ ಬಿಡುತ್ತಿತ್ತು. ಭಾರತ ಆರ್ಥಿಕವಾಗಿ ದಿವಾಳಿ ಎಬ್ಬಿಸುವುದು ಅದರ ಉದ್ದೇಶವಾಗಿತ್ತು. ನಕಲು ಎನ್ನಲು ಕೂಡ ಆಗುವುದಿಲ್ಲ. ಏಕೆಂದರೆ ನಾವು ಮಾಡುವ ಪ್ಲೇಟ್ ಅವರಿಗೂ ಸಿಕ್ಕಿತ್ತು. ಹೇಗೂ ಇಂಕು ಮತ್ತು ಪೇಪರ್ ಸಪ್ಪ್ಲೈ ಎರಡೂ ದೇಶಕ್ಕೂ ಮಾಡುತ್ತಿದ್ದದ್ದು ಬ್ರಿಟನ್ ! ಈ ಅಂಶವನ್ನು ಅಂದಿಗೆ ಪ್ರಸ್ತಾಪಿಸಿದ್ದೆ. ಈ ಚಿತ್ರದಲ್ಲೂ ಅದರ ಮಾತು ಬಂದು ಹೋಗುತ್ತದೆ . ನಿಜ ಹೇಳಬೇಕೆಂದರೆ ಕೇವಲ ಈ ವಿಷಯ ಇಟ್ಟುಕೊಂಡು ಒಂದು ಚಿತ್ರ ಮಾಡಬಹುದು. ಇರಲಿ ಪಾಕಿಗಳಿಗೆ ನಮ್ಮ ಹಣ ಮುದ್ರಿಸುವ ಪ್ಲೇಟು ಕೊಟ್ಟದ್ದು ಅಂದಿನ ಕೇಂದ್ರ ಸರಕಾರದ ಒಬ್ಬ ಮಂತ್ರಿ !

25 ವರ್ಷಗಳ ಇತಿಹಾಸ ತಿರುವಿ ಹಾಕಲಿ ಸಾಕು

ಮೋದಿಜೀ ಡಿ ಮಾನಿಟೈಸಷನ್ ಮಾಡಿದ್ದು ಪಾಕಿಸ್ತಾನದ ಬೆನ್ನು ಮುರಿಯಲು ಎನ್ನುವುದು ಇವತ್ತಿಗೆ ಎಲ್ಲರೂ ಒಪ್ಪಿರುವ ವಿಷಯ. ಮೋದಿಜೀ ಅವರನ್ನು ದ್ವೇಷಿಸುವ ಜನ ಒಮ್ಮೆ ನಿಧಾನವಾಗಿ ಕುಳಿತು ಕಳೆದ 25 ವರ್ಷಗಳ ಇತಿಹಾಸ ತಿರುವಿ ಹಾಕಲಿ ಸಾಕು. ದ್ವೇಷಿಸಲೇ ಬೇಕು ಎಂದು ಮನಸ್ಸು ಮಾಡಿಬಿಟ್ಟರೆ ಆಗ ಏನೂ ಮಾಡಲು ಸಾಧ್ಯವಿಲ್ಲ. ಆದರೆ ಅರ್ಥ ಮಾಡಿಕೊಳ್ಳುವ ಮನಸ್ಸಿಟ್ಟು ಕೊಂಡು ಈ ಚಿತ್ರ ನೋಡಿದರೂ ಸಾಕು . ನೂರಾರು ಸತ್ಯಗಳ ದರ್ಶನವಾಗುತ್ತದೆ.

ಸುಮ್ಮನೆ ಹೀರೋಯಿನ್ ತುರುಕಿದ್ದಾರೆ

ಇನ್ನು ಚಿತ್ರದಲ್ಲಿ ಪಾಕಿಸ್ತಾನದಲ್ಲಿನ ವಾತಾವರಣವನ್ನು ಪೂರ್ಣವಾಗಿ ಕಟ್ಟಿಕೊಟ್ಟಿಲ್ಲ. ಅಧಿಕಾರ , ಹಣದ ಲಾಲಸೆಗೆ ಒಳಗಾಗಿರುವ ಅಲ್ಲಿನ ರಾಜಕಾರಿಣಿಗಳು, ಬಲೂಚಿಗಳ ಬಂಡಾಯ , ಅಲ್ಲಿ ಅವರನ್ನು ಪಾಕಿಗಳು ಹೇಗೆಲ್ಲಾ ಹತ್ಯೆ ಮಾಡುತ್ತಿದ್ದಾರೆ ಎನ್ನುವುದನ್ನು ಕಟ್ಟಿಕೊಡಬಹುದಿತ್ತು. ಚಿತ್ರ ಮೂರುವರೆ ಗಂಟೆಯಿದೆ. ಅದರಲ್ಲಿ ಅರ್ಧಗಂಟೆ ಬಕ್ವಾಸ್ ! ಸುಮ್ಮನೆ ಹೀರೋಯಿನ್ ತುರುಕಿದ್ದಾರೆ. ಅದೇ ಅರ್ಧ ಗಂಟೆಯನ್ನು ಮೂಲಭೂತವಾದ ಹೇಗೆ ಬದುಕನ್ನು ಮೂರಾಬಟ್ಟೆ ಮಾಡುತ್ತದೆ ಎನ್ನುವುದನ್ನು ತೋರಿಸಲು ಬಳಸಬಹುದಿತ್ತು.

ಮೂರುವರೆ ಗಂಟೆ ಹೇಗೆ ಕಳೆಯಿತು?

ಬಟ್ , ಪ್ರಮಾಣ ಮಾಡಿ ಹೇಳುತ್ತೇನೆ ಮೂರುವರೆ ಗಂಟೆ ಹೇಗೆ ಕಳೆಯಿತು ಎಂದು ಗೊತ್ತಾಗಲಿಲ್ಲ. ಎಲ್ಲಿಯೂ ಬೋರ್ ಹೊಡೆಸುವುದಿಲ್ಲ. ಚಿತ್ರಮಂದಿರದಲ್ಲಿ ಯಾರೊಬ್ಬರೂ ಮೊಬೈಲ್ ತೆಗೆದು ನೋಡಲಿಲ್ಲ ಎನ್ನುವುದು ಚಿತ್ರ ಎಷ್ಟು ಟೈಟ್ ಇದೆ ಎನ್ನುವುದಕ್ಕೆ ಉತ್ತಮ ಉದಾಹರಣೆ.

ಉಳಿದಂತೆ ರಣವೀರ್ , ಅಕ್ಷಯ್ ನಟನೆ ಬಗ್ಗೆ ಬಹಳಷ್ಟು ಜನ ಈಗಾಗಲೇ ಬರೆದಿದ್ದಾರೆ . ಅವರೆಲ್ಲರ ಅಭಿಮತ ನನ್ನದೂ ಕೂಡ. ಸಿನಿಮಾ ಮೇಕಿಂಗ್ , ಸತ್ಯಗಳ ಅನಾವರಣ ಒಂದಷ್ಟು ಜನರ ಅಂಡಿಗೆ ಬೆಂಕಿ ಇಟ್ಟಹಾಗೆ ಆಗಿರುತ್ತೆ. ಅಂತವರಿಗೆ ಬರ್ನಾಲ್ ಇದ್ದೆ ಇದೆ , ನಮ್ಮಂತವರಿಗೆ ಫುಲ್ ಮೀಲ್ಸ್ ಆಂಧ್ರ ಶೈಲಿಯ ಭೋಜನ ! ಹೋಗಿ ನೋಡಿ , ಎಂಜಾಯ್ ಮಾಡಿ . ಜೊತೆಗೆ ಸಿನಿಮಾದಲ್ಲಿ ಬರುವ ಡೈಲಾಗ್ , ಹಿಂದುಸ್ಥಾನದಲ್ಲಿ ಹಿಂದೂಗಳ ಮೊದಲ ಶತ್ರು ಹಿಂದೂ ಎನ್ನುವುದನ್ನು ಸುಳ್ಳು ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಿ .

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!