ಕೌರವನ ಪಾತ್ರ ಮಾಡಿದವರ ಬಾಳಲ್ಲಾಗುತ್ತಾ ಕರಾಳ ಕುರುಕ್ಷೇತ್ರ?

By Suvarna News  |  First Published Sep 18, 2024, 11:52 AM IST

ಪಾತ್ರಗಳಲ್ಲೇ ಪರಕಾಯ ಪ್ರವೇಶ ಮಾಡಿದವನು ಬಣ್ಣ ಕಳಚಲು ಮರೆತು ಬಿಟ್ಟನಾ..? ದುರ್ಯೋಧನನ ಪಾತ್ರಕ್ಕೆ ಬಣ್ಣ ಹಚ್ಚಿದ ಪಾತ್ರದಾರಿಗೆ ಸಂಕಷ್ಟ..!? ದರ್ಶನ್‌ಗೂ ಕಂಟಕವಾಯ್ತಾ ಕುರುಕ್ಷೇತ್ರದ ಕೌರವನ ಪಾತ್ರ.? ದರ್ಶನ್ ಸಂಕಷ್ಟ ಪರಿಹಾರಕ್ಕೆ ನಾಟಕ ಕಲಾವಿದರ ಸಲಹೆ ಏನು..? ಇಲ್ಲಿದೆ ಡಿಟೇಲ್ ಸ್ಟೋರಿ


ಅದೊಂದು ಸಿನಿಮಾ ಪಾತ್ರವೇ ದರ್ಶನ್ ಬಾಳಲ್ಲಿ ಸುಂಟರಗಾಳಿ ಎಬ್ಬಿಸಿರೋದಾ..? ದುರ್ಯೋಧನನ ಪಾತ್ರ ಮಾಡಿ ದುರ್ಯೋಧನನೇ ಆಗಿ ಹೋದ್ನಾ ದಾಸ..? ಕುರುಕ್ಷೇತ್ರ ಸಿನಿಮಾಗಾಗಿ ಕೌರವನ ಪಾತ್ರಕ್ಕೆ ಬಣ್ಣ ಹಚ್ಚಿದ್ದೇ ಕಾಟೇರನಿಗೆ ಕಂಟಕವಾಯ್ತಾ..? ದುರ್ಯೋಧನನ ಪಾತ್ರ ಮಾಡಿದವರ ನಿಜ ಜೀವನದಲ್ಲಿಯೂ ನಡೆಯುತ್ತಾ ಕರಾಳ ಕುರುಕ್ಷೇತ್ರ..? ದರ್ಶನ್ ಬಾಳಲ್ಲಿ ನಿಜವಾಗ್ತಿದೆ ಹಳ್ಳಿ ಜನರ ಅದೊಂದು ನಂಬಿಕೆ. ಇದೇ ಇವತ್ತಿನ ಸುವರ್ಣ ಸ್ಪೆಷಲ್ ಕಾಟೇರನಿಗೆ ಕೌರವ ಕಂಟಕ

ದಾಸನ ಬಾಳಲ್ಲಿ ನಿಜವಾಗ್ತಿದೆ ಹಳ್ಳಿ ಜನರ ಅದೊಂದು ನಂಬಿಕೆ..!

Tap to resize

Latest Videos

ಅದೇನು ಅಬ್ಬರ... ಅದೇನು ಆರ್ಭಟ... ಆರಡಿ ಎತ್ತರ .. ಅಜಾನುಬಾಹು ದೇಹ.. ನಡಿಗೆಯಲ್ಲಿ ಗತ್ತು, ದೌಲತ್ತು. ಕಣ್ಣಲ್ಲಿಯೇ ಕೊತ ಕೊತ ಕುದಿಯುವ ಕೋಪ. ಕೈನಲ್ಲಿ ಗದೆ ಹಿಡಿದು ಬರ್ತಾ ಇದ್ರೆ  ಕೌರವಾಧಿಪತಿ ದುರ್ಯೋಧನ ಹೀಗೆ ಇದ್ನಾ..? ಅಥವಾ ಕೌರವೇಂದ್ರನೇ ಎದ್ದು ಬಂದಿದ್ದಾನಾ..? ನಿಜಕ್ಕೂ ಇಂಥಹ ಅನುಮಾನ ಹುಟ್ಟಿಸುವಂತಿತ್ತು ದರ್ಶನ್‌ನ ಆ ಅದ್ಭುತ ನಟನೆ. 

ಇದನ್ನೂ ಓದಿ:ಕೃಷ್ಣ ಜನ್ಮ ಸ್ಥಾನ ಸೇರಿದ ನಟ ದರ್ಶನ್ ಮತ್ತು ನಿರ್ಮಾಪಕ ಮುನಿರತ್ನ; 'ಕುರುಕ್ಷೇತ್ರ'ದಲ್ಲಿ ಆಗಿದ್ದ ಎಡವಟ್ಟು ಏನು?

ಕೌರವನನ ಪಾತ್ರ ಮಾಡಿದ್ದ ದರ್ಶನ್ ಕೌರವನೇ ಮೈ ಮೇಲೆ ಬಂದಂತೆ ಅಂದು ನಟಿಸಿದ್ದ. ಕುರುಕ್ಷೇತ್ರ ಸಿನಿಮಾ ಮೂಲಕ  ನಾನು ಕ್ಲಾಸ್ಗೂ ಸೈ.. ಮಾಸ್ಗೂ ಸೈ.. ಪೌರಾಣಿಕ ಪಾತ್ರ ಮಾಡೋದಿಕ್ಕೆ ಸೈ.. ಅಂತ ದರ್ಶನ್ ಪ್ರೂವ್ ಮಾಡಿದ್ದ. ದುರ್ಯೋಧನನಾಗಿ ಪರಕಾಯ ಪ್ರವೇಶ ಮಾಡಿದ್ದ ದರ್ಶನ್ ಸಿನಿಮಾಗಾಗಿ ಸಂಪೂರ್ಣ ಬದಲಾಗಿದ್ದ. ಆತನ ಡೆಡಿಕೇಷನ್‌ನಿಂದಾಗಿ ಆತನ ಅಮೋಘ ಆಕ್ಟಿಂಗ್‌ನಿಂದಾಗಿ ದರ್ಶನ್ ಕುರುಕ್ಷೇತ್ರ ಸಿನಿಮಾಗೆ ದೊಡ್ಡ ಸಕ್ಸಸ್ ಸಿಕ್ಕಿತ್ತು. ಕೌರವನ ಪಾತ್ರಕ್ಕಾಗಿ ಬಣ್ಣ ಹಚ್ಚಿದ್ದಕ್ಕೂ.. ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿದ್ದಕ್ಕೂ ಸಾರ್ಥಕ ಆಯ್ತು ಅಂತ ದರ್ಶನ್ ಅಂದುಕೊಂಡಿದ್ದ. ಅದ್ರೇ ಅದೇ ಬಣ್ಣ.. ಅದೇ  ಪರಾಕಯ ಪ್ರವೇಶ ದರ್ಶನ್ ಬಾಳಿಗೆ ಮುಳುವಾಯ್ತಾ..?

ಮೀಸೆ  ತಿರುವಿ ಕುರುಕ್ಷೇತ್ರದಲ್ಲಿ  ಮಣ್ಣು ಮುಕ್ಕಿದ್ದ ದುರ್ಯೋಧನ..!
ಮಹಾಭಾರತದಲ್ಲಿ ಪಾಂಡವರೇ ಹೀರೋ.. ಕೌರವರೇ ವಿಲನ್.. ಆ ಕೌರವರಲ್ಲಿ ಹಿರಿಯನೇ ದುರ್ಯೋಧನ. ಆತ ಕೋಪಕ್ಕೆ ಪ್ರತಿರೂಪ...ಅಹಂಕಾರಕ್ಕೆ ಅಲಂಕಾರ.. ಮೋಸದ ಜಾಲ ಹೂಡುವ ಮೋಡಿಗಾರ.. ನಾನೇ, ನಂದೇ ಎಂದು ಅಬ್ಬರಿಸುವ ಹುಂಬ. ಹೆಣ್ಣು -  ಹೊನ್ನಿನ ಹಿಂದೆ ಹೋಗಿ ತನ್ನ ಬಾಳಿಗೆ ತಾನೇ ಮಣ್ಣು ಎಳೆದುಕೊಂಡ ಧೂರ್ತ. ಇಂಥಹ  ಕೌರವನ ಪಾತ್ರ ಮಾಡೋದಿಕ್ಕೆ ಗುಂಡಿಗೆ ಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಪಾತ್ರ ಮಾಡಿದ ಬಳಿಕ ಆ ಪಾತ್ರದಿಂದ ಹೊರ ಬರೋದು ಗೊತ್ತಿರಬೇಕು. 

ಮಹಾಭಾರತದ ಆ ಪಾತ್ರಕ್ಕೆ  ಬಣ್ಣ ಹಚ್ಚೋದಕ್ಕೆ ಹೆದರಿಕೆ..!
ಮನೋರಂಜನೆ ಬೇಕೆಂದ್ರೆ ಈಗ ಜನ್ರು ಸಿನಿಮಾ ನೋಡ್ತಾರೆ. ಆದ್ರೆ, ಹಿಂದಿನ ಕಾಲದಲ್ಲಿ ನಾಟಕಗಳೇ ಜನರ ಎಂಟರ್‌ಟೈನ್‌ಮೆಂಟ್, ಅದರಲ್ಲಿಯೂ ಪೌರಾಣಿಕ ನಾಟಕಗಳು ನಡೆಯುತ್ತಿವೆ ಅಂದ್ರೆ ಅಲ್ಲಿ ಜನಸಾಗರವೇ ಸೇರ್ತಿತ್ತು. ಪೌರಾಣಿಕ ನಾಟಕದಲ್ಲಿ ಮಹಾಭಾರತವನ್ನ ಪ್ರದರ್ಶಿಸಲಾಗ್ತಿತ್ತು. ಮಹಾಭಾರತ  ನಾಟಕ ಎಂದಾಕ್ಷಣ ಎಲ್ಲಾ ಪಾತ್ರಗಳಿಗೂ ಕಲಾವಿದ್ರು ಸುಲಭವಾಗಿ ಸಿಕ್ತಿದ್ರು. ಆದ್ರೆ, ಅದೊಂದು ಪಾತ್ರಕ್ಕೆ ಮಾತ್ರ ಬಣ್ಣ ಹಚ್ಚೋದಿಕ್ಕೆ ಒಂದಲ್ಲ.. ನೂರು ಬಾರಿ ಅವರು ಯೋಚ್ನೆ ಮಾಡ್ತಿದ್ರು. ಆ ಪಾತ್ರವೇ ಅವರನ್ನೂ ಬೆಚ್ಚಿ ಬೀಳಿಸ್ತಾ ಇತ್ತು. ಅದೊಂದು ನಂಬಿಕೆ ಆ ಪಾತ್ರದ ಮೇಲೆ ಭಯ ಹುಟ್ಟಿಸಿತ್ತು.. ಆ ಪಾತ್ರ ಬೇರಾವುದೂ ಅಲ್ಲ. ಅದುವೇ ದುರ್ಯೋಧನನ ಪಾತ್ರ.. 

ಇದನ್ನೂ ಓದಿ ಕುರುಕ್ಷೇತ್ರ ಸಿನಿಮಾ ದುರ್ಯೋಧನ ಹೋದ ಜಾಗಕ್ಕೆ, ನಿರ್ಮಾಪಕ ಮುನಿರತ್ನನೂ ಎಂಟ್ರಿ: 14 ದಿನ ನ್ಯಾಯಾಂಗ ಬಂಧನ!

ಮಹಾಭಾರತದ ವಿಲನ್ ದುರ್ಯೋಧನನ ಪಾತ್ರ ಮಾಡೋದಿಕ್ಕೇನೆ ಈ ಹಿಂದೆ ಹಳ್ಳಿಗಳಲ್ಲಿ ನಾಟಕದವರು ಹೆದರುತ್ತಾ ಇದ್ದದ್ದು. ಆದ್ರೆ, ದರ್ಶನ್ ಕುರುಕ್ಷೇತ್ರ ಸಿನಿಮಾಗಾಗಿ ದುರ್ಯೋಧನನ ಪಾತ್ರ ಮಾಡಿದ. ಕೌರವೇಂದ್ರನಾಗಿ ಬಣ್ಣ ಹಚ್ಚಿ ನಟನೆಯಲ್ಲಿ ಅಬ್ಬರಿಸಿದ್ದ. 50ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ದರ್ಶನ್ ಅಭಿನಯಿಸಿದ್ದಾನೆ. ಒಂದೊಂದು ಸಿನಿಮಾದಲ್ಲಿ ಒಂದೊಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾನೆ. ಆದ್ರೆ, ಆ ದರ್ಶನ್ ಸಿನಿ ಜೀವನದಲ್ಲಿ ಆತನಿಗೆ ಒಂದು ದೊಡ್ಡ ಟರ್ನಿಂಗ್ ಪಾಯಿಂಟ್ ಸಿಕ್ಕಿದ್ದು ದುರ್ಯೋಧನನ ಪಾತ್ರ ಮಾಡಿದ ಮೇಲೆ. ಆತನಲ್ಲಿದ್ದ ವರ್ಸಟೈಲ್ ನಟನ ಅನಾವರಣಗೊಂಡಿದ್ದು ಅದೇ ದುರ್ಯೋಧನನ ಪಾತ್ರದಿಂದ. ದರ್ಶನ್ ಸಿನಿ ಬದುಕಿಗೆ ಸಿಹಿಯಾಗಿದ್ದ ಅದೇ ದುರ್ಯೊಧನನ ಪಾತ್ರ, ಆತನ ನಿಜ ಬದುಕಿಗೆ ಮುಳುವಾಗಿ ಬಿಡ್ತಾ..? ಆತನ ಹಳಿ ತಪ್ಪಿರುವ ಬದುಕಿನ ಹಿಂದೆ ಆ ಪಾತ್ರವೂ ಕಾರಣವಾಗಿ ಹೋಯ್ತಾ..? ಅನ್ನೋ ಅನುಮಾನ ಕಾಡ್ತಿದೆ. ಈ ಅನುಮಾನಕ್ಕೆ ಕಾರಣವಾಗಿರೋದು ಹಳ್ಳಿಗಳಲ್ಲಿ ದುರ್ಯೋಧನನ ಪಾತ್ರದಲ್ಲಿ ನಟಿಸೋಕೆ ನಾಟಕ ಕಲಾವಿದರಿಗೆ ಕಾಡ್ತಿದ್ದ  ಆ ಭಯ. 

ಕೌರವೇಂದ್ರನ ಪಾತ್ರದಿಂದ ನಿಜ ಬದುಕಲ್ಲೂ ಅಹಂಕಾರದ  ಆಹ್ವಾನವಾಗುತ್ತಾ..?

ದುರ್ಯೋಧನ ಅಂದಾಕ್ಷಣ ನೆನಪಿಗೆ ಬರೋದು ಆತನ ಅಹಂಕಾರ. ಯಾರ ಮಾತನ್ನೂ ಕೇಳದೇ.. ಯಾರ ಮಾತಿಗೂ ಬೆಲೆ ಕೊಡದೇ..ಆನೆ ನಡೆದಿದ್ದೇ ದಾರಿ ಅನ್ನೋ ಹಾಗೆ ಬದುಕ್ಕಿದ್ದವನು ದುರ್ಯೋಧನ. ಈತನ ಪಾತ್ರವನ್ನೂ ಮಾಡಿದವರಿಗೂ ಅಹಂಕಾರ ತಲೆಗೆ ಏರಿ ಬಿಡುತ್ತೇ ಅನ್ನೋ ಭಯ ಹಳ್ಳಿಗಳಲ್ಲಿ ನಾಟಕ ಮಾಡೋ ಜನರಿಗೆ ಇದೆ.  ಅದೇ ಕಾರಣಕ್ಕೆ ದುರ್ಯೋಧನನ ಮಾತ್ರ ಮಾಡೋದಿಕ್ಕೆ ನಾಟಕದ ಕಲಾವಿದರು ಹಿಂದೇಟು ಹಾಕ್ತಾಯಿದ್ರಂತೆ. ಬೇರೆ ಪಾತ್ರಗಳಂತೆ ದರ್ಯೋಧನನದ್ದು ಒಂದು ಪಾತ್ರವಲ್ಲವಾ..? ಅದರಲ್ಲೇನು ವಿಶೇಷವಿದೆ..? ಬೇರೆ ಪಾತ್ರಗಳಂತೆ ಇಲ್ಲಿಯೂ ನಟನೆಯನ್ನೇ ಮಾಡೋದಲ್ವಾ..? ಹೀಗಿರುವಾಗ ಇಲ್ಲಿ ಮಾತ್ರ ಅಹಂಕಾರದ ಆಹ್ವಾನವಾಗೋದು ಯಾಕೆ ಅನ್ನೋ ಪ್ರಶ್ನೆಗೂ ಉತ್ತರವಿದೆ.  

ಹೀಗೆ ಒಂದು ಕಾಲದಲ್ಲಿ ದುರ್ಯೋಧನನ ಪಾತ್ರಕ್ಕೆ ಬಣ್ಣ ಹಚ್ಚಿ ಕೌರವೇಂದ್ರನಾಗಿ ನಾಟಕಗಳಲ್ಲಿ ಅಬ್ಬರಿಸಿ ಬೊಬ್ಬಿರಿದ ಕೆಲವರು ಆ ಪಾತ್ರ ಮಾಡಿದ ಕಾರಣಕ್ಕೆ ನಿಜ ಬದುಕು ಹಾಳಾಗುತ್ತಾ ಹೋಯ್ತು. ಅದೊಂದು ಪಾತ್ರ ಮಾಡಿದ್ದಕ್ಕೆ ನಾನು ನನ್ನ ಜೀವನದಲ್ಲಿ ಸಾಕಷ್ಟು ಕಷ್ಟವನ್ನು ಎದುರಿಸಬೇಕಾಗಿ ಬಂತು ಅಂತ ಹೇಳಿಕೊಂಡಿದ್ದಾರೆ ನಾಟಕ ಕಲಾವಿದ ಚೌಡೇಗೌಡ. ಒಂದು ಕಾಲದಲ್ಲಿ ಇವರು ಸಹ ನಾಟಕಕ್ಕಾಗಿ ದುರ್ಯೋಧನನ ಪಾತ್ರ ಮಾಡಿದ್ದವರು.  ಆ ಪಾತ್ರ ಇವರ ಬದುಕನ್ನ ನುಂಗಿ ಬಿಡ್ತಂತೆ.. ಕೌರವೇಂದ್ರನಾಗಿ ಬಣ್ಣ ಹಚ್ಚಿದ್ರಿಂದ ಇವರ ಬದುಕಲ್ಲಿ ಏನೆಲ್ಲಾ ಸಂಕಷ್ಟಗಳು ಎದುರಾದ್ವು ಅನ್ನೋದನ್ನ ಅವರೇ ಹೇಳಿದ್ದಾರೆ

ದುರ್ಯೋಧನನ ಪಾತ್ರಕ್ಕೆ ಬಣ್ಣ ಹಚ್ಚಿದ್ರಿಂದಲೆ ದರ್ಶನ್ ಬದುಕು ಹಳಿ ತಪ್ತಿದೆ ಅಂತ ಹಳ್ಳಿಯ ನಾಟಕ ಕಲಾವಿದರು ಹೇಳ್ತಿದ್ದಾರೆ. ಇದಕ್ಕೆ ಪರಿಹಾರವನ್ನೂ ಅವರೇ ಕೊಡ್ತಿದ್ದಾರೆ. ದರ್ಶನ್ ಮುಂದೆ ಏನ್ ಮಾಡ್ಬೇಕು..? ಏನ್ ಮಾಡಿದ್ರೆ ಆತ ಸಂಕಷ್ಟಗಳ ಸರಪಳಿಯ ಕೊಂಡಿಯನ್ನ ಕಳಚಿಕೊಳ್ಳೋಕೆ ಸಾಧ್ಯ ಅಂತ ಸಲಹೆ ಕೊಟ್ಟಿದ್ದಾರೆ. ಕಟ್ಟ ಕಡೆಯದಾಗಿ ಹೇಳೋದಾದ್ರೆ, ದರ್ಶನ್ ಬೇರೆ ಪೌರಾಣಿಕ ಪಾತ್ರ ಮಾಡ್ಬೇಕು.. ಸೌಮ್ಯ ಸ್ವಭಾವದ ಪಾತ್ರದಲ್ಲಿ ದರ್ಶನ್ ನಟಿಸಬೇಕು. ಆಗ್ಲೇ ದರ್ಶನ್ ಈ ಕೌರವ ಕಂಟದಿಂದ ಪಾರಾಗ್ತಾನೆ- ಇದು ಗ್ರಾಮೀಣ ನಾಟಕ ಕಲಾವಿದರ ನಂಬಿಕೆ. ಆದ್ರೆ, ದರ್ಶನ್ ಅಂಥಹ ಪಾತ್ರ ಮಾಡ್ತಾನ ಅನ್ನೋದಕ್ಕೆ ಕಾಲವೇ ಉತ್ತರಿಸಬೇಕು.

click me!