ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್ ಗೆ ವಯಸ್ಸಾಗೋದೇ ಇಲ್ಲ. ಮಗಳು ಬೆಳೆದು ನಿಂತ್ರೂ ತಾಯಿ ಈಗ್ಲೂ ಅಭಿಮಾನಿಗಳ ನಿದ್ರೆ ಕದಿಯುವಷ್ಟು ಸುಂದರವಾಗಿದ್ದಾರೆ. ಸೈಮಾದಲ್ಲಿ ಐಶ್ ಮಿಂಚಿದ್ರೆ ಇತ್ತ ಅವರ ಗೊಂಬೆಯೊಂದು ಸುದ್ದಿ ಮಾಡ್ತಿದೆ.
ಬಾಲಿವುಡ್ ನಟಿ, ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ (Bollywood actress former Miss World Aishwarya Rai) ಬ್ಯೂಟಿಗೆ ಸರಿಸಾಟಿ ಇಲ್ಲ. ವಯಸ್ಸು 50 ದಾಟಿದ್ರೂ ಐಶ್ ಹೊಳೆಯುವ ಮೈಬಣ್ಣ, ನೆರಿಗೆಯಿಲ್ಲದ ಸ್ಕಿನ್ ಹೊಂದಿದ್ದು, ಎಲ್ಲರ ಗಮನ ಸೆಳೆಯುತ್ತಾರೆ. ಅನಂತ್ ಅಂಬಾನಿ (Anant Ambani) ಮತ್ತು ರಾಧಿಕಾ ಮರ್ಚೆಂಟ್ (Radhika Merchant) ಮದುವೆ ಸಮಾರಂಭದಲ್ಲಿ ಐಶ್ವರ್ಯ ರೈ ಬಚ್ಚನ್ ಸ್ಟನ್ನಿಂಗ್ ಲುಕ್ ನೋಡೋಕೆ ಸಿಕ್ಕಿದೆ. ಕೆಂಪು ಲೆಹಂಗಾದಲ್ಲಿ ಮಿಂಚಿದ್ದ ಐಶ್ವರ್ಯ ರೈ ಬಚ್ಚನ್ ನೋಡೋಕೆ ಎರಡು ಕಣ್ಣು ಸಾಲದು ಅಂತ ಅಭಿಮಾನಿಗಳು ಕಮೆಂಟ್ ಮಾಡಿದ್ರು. ಐಶ್ ಇದೇ ಲುಕ್ ಗೆ ಆಕರ್ಷಿತರಾದ ಕಲಾವಿದರೊಬ್ಬರು ಅವರ ಗೊಂಬೆ ತಯಾರಿಸಿದ್ದಾರೆ. ಸೋಶಿಯಲ್ ಮೀಡಿಯಾ (social media ) ದಲ್ಲಿ ಐಶ್ ಗೊಂಬೆ ವೈರಲ್ ಆಗಿದ್ದು, ಗೊಂಬೆ ಅಟ್ರ್ಯಾಕ್ಟ್ ಮಾಡೋದ್ರಲ್ಲಿ ಫೇಲ್ ಆಗಿದೆ.
ಐಶ್ ಸೌಂದರ್ಯಕ್ಕೆ ಬೋಲ್ಡ್ ಆದವರಲ್ಲಿ ಶ್ರೀಲಂಕಾದ ಕಲಾವಿದ ನಿಗೇಶನ್ ಕೂಡ ಒಬ್ಬರು. ಅವರು ಈಗ ಐಶ್ ಕೆಂಪು ಲೆಹಂಗಾ ಲುಕ್ ಗೆ ಗೊಂಬೆ ರೂಪ ನೀಡಿದ್ದಾರೆ. ಐಶ್ವರ್ಯ ರೈ ಬಚ್ಚನ್ ಗೊಂಬೆಯನ್ನು ತಯಾರಿಸಿದ್ದಾರೆ. ಗೊಂಬೆ ನೋಡಿದ್ರೆ ಇದು ಐಶ್ವರ್ಯ ರೈ ಬಚ್ಚನ್ ಎನ್ನಲು ಸಾಧ್ಯವೇ ಇಲ್ಲ. ಡ್ರೆಸ್ ಮಾತ್ರ ಹೊಂದಾಣಿಕೆ ಆಗ್ತಿದೆಯೇ ವಿನಃ ಐಶ್ ಮುಖವಲ್ಲ. ಇದು ನೆಟ್ಟಿಗರ ಕೋಪಕ್ಕೆ ಕಾರಣವಾಗಿದೆ.
ನಿಗೇಶನ್ ತಮ್ಮ ಇನ್ಸ್ಟಾ ಖಾತೆಯಲ್ಲಿ ಇದ್ರ ವಿಡಿಯೋ ಹಂಚಿಕೊಂಡಿದ್ದಾರೆ. ಅಂಬಾನಿ ವೆಡ್ಡಿಂಗ್ ನಲ್ಲಿ ಮಿಂಚಿದ ಒನ್ ಆಂಡ್ ಒನ್ಲಿ ಐಶ್ವರ್ಯ ರೈ ಬಚ್ಚನ್ ಹೋಲುವ ಗೊಂಬೆ ಎಂದು ನಿಗೇಶ್ ಶೀರ್ಷಿಕೆ ಹಾಕಿದ್ದಾರೆ. ಈ ವಿಡಿಯೋ 4 ಮಿಲಿಯನ್ ಗಿಂತಲೂ ಹೆಚ್ಚು ವೀವ್ಸ್ ಪಡೆದಿದೆ. ಸಾವಿರಾರು ಮಂದಿ ಕಮೆಂಟ್ ಮಾಡಿದ್ದಾರೆ. ಬಹುತೇಕರು ಗೊಂಬೆ ಐಶ್ವರ್ಯ ರೈ ಬಚ್ಚನ್ ಹೋಲುತ್ತಿಲ್ಲ ಎಂದಿದ್ದಾರೆ.
ಈ ಗೊಂಬೆಗಿಂತ ಎಷ್ಟೋ ಪಟ್ಟು ಐಶ್ವರ್ಯ ಚೆನ್ನಾಗಿದ್ದಾರೆ ಎಂದು ಒಬ್ಬರು ಕಮೆಂಟ್ ಮಾಡಿದ್ರೆ, ಇದು ಬ್ಲಾಕ್ ಮ್ಯಾಜಿಕ್ ಗೆ ಬಳಸುವ ಗೊಂಬೆಯಂತಿದೆ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ಗೊಂಬೆಯು ಶೆಹನಾಜ್ ಹುಸೇನ್ ರಿಂದ ಸ್ಫೂರ್ತಿ ಪಡೆದಂತೆ ತೋರುತ್ತಿದೆ ಐಶ್ ರಿಂದ ಅಲ್ಲ ಎಂದು ಮತ್ತೊಬ್ಬರು ಬರೆದಿದ್ದಾರೆ. ಸದಾ ಭೂತದಂತೆ ವರ್ತಿಸುವ ಜಯಾ ಬಚ್ಚನ್ ರಂತೆ ಈ ಡಾಲ್ ಕಾಣುತ್ತೆ ಅಂತ ಮತ್ತೊಬ್ಬರು ಹೇಳಿದ್ದಾರೆ. ನಿಗೇಶನ್ ಶ್ರಮಕ್ಕೆ ಕೆಲವರು ಬೆನ್ನು ತಟ್ಟಿದ್ದಾರೆ. ಮುಖ ಐಶ್ ರಂತೆ ಕಾಣೋದಿಲ್ಲ ನಿಜ. ಆದ್ರೆ ಡ್ರೆಸ್ ಸೇರಿದಂತೆ ಮತ್ತೆಲ್ಲ ನಿಮ್ಮ ಶ್ರಮಕ್ಕೆ ಸಲಾಂ ಎಂದು ಕೆಲ ಬಳಕೆದಾರರು ನಿಗೇಶನ್ ಕೆಲಸವನ್ನು ಶ್ಲಾಘಿಸಿದ್ದಾರೆ.
ಐಶ್ವರ್ಯ ರೈ ಬಚ್ಚನ್ ಸದ್ಯ ಸೈಮಾ ಪ್ರಶಸ್ತಿ ಗೆದ್ದ ಖುಷಿಯಲ್ಲಿದ್ದಾರೆ. ಪೊನ್ನಿಯನ್ ಸೆಲ್ವನ್ ಚಿತ್ರದ ಅಭಿನಯಕ್ಕಾಗಿ ವಿಮರ್ಶಕರ ವಿಭಾಗದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಐಶ್ ಬಾಚಿಕೊಂಡಿದ್ದಾರೆ. ದುಬೈನಲ್ಲಿ ಮಗಳು ಆರಾಧ್ಯ ಜೊತೆ ಕಾಣಿಸಿಕೊಂಡಿದ್ದ ಐಶ್ವರ್ಯ, ತಮ್ಮ ಸೌಂದರ್ಯದಿಂದ ಎಲ್ಲರ ಗಮನ ಸೆಳೆದಿದ್ದು ಸುಳ್ಳಲ್ಲ.
ಮದುವೆ ನಂತ್ರವೂ ಬಾಲಿವುಡ್ ನಲ್ಲಿ ಬ್ಯೂಸಿ ಇರುವ ನಟಿಯರಲ್ಲಿ ಐಶ್ ಒಬ್ಬರು. ಆರಾಧ್ಯ ಜನನದ ನಂತ್ರ ಸ್ವಲ್ಪ ಸಮಯ ಬ್ರೇಕ್ ತೆಗೆದುಕೊಂಡಿದ್ದ ಐಶ್ವರ್ಯ ರೈ ಬಚ್ಚನ್ ಮತ್ತೆ ಬಣ್ಣ ಹಚ್ಚಿದ್ದಾರೆ. ಅಸಾಧಾರಣ ಸೌಂದರ್ಯ ಮತ್ತು ನಟನಾ ಕೌಶಲ್ಯಕ್ಕೆ ಹೆಸರುವಾಸಿಯಾಗಿರುವ ಐಶ್ವರ್ಯ, ಎರಡು ಫಿಲ್ಮ್‌ಫೇರ್ ಪ್ರಶಸ್ತಿಗಳು ಮತ್ತು ಅಂತರರಾಷ್ಟ್ರೀಯ ಮನ್ನಣೆ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. 2004 ರಲ್ಲಿ,ಟೈಮ್ ನಿಯತಕಾಲಿಕವು ಅವರನ್ನು ವಿಶ್ವದ 100 ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರೆಂದು ಗುರುತಿಸಿದೆ.