ರಾಹುಲ್ ಗಾಂಧಿ ಕೈಹಿಡಿದು ಸುದ್ದಿಯಾದ ನಟಿಯಿಂದ ನಿರ್ದೇಶಕ ತ್ರಿವಿಕ್ರಮ್ ವಿರುದ್ಧ ಬಲತ್ಕಾರದ ಆರೋಪ!

Published : Sep 17, 2024, 10:21 PM IST
ರಾಹುಲ್ ಗಾಂಧಿ ಕೈಹಿಡಿದು ಸುದ್ದಿಯಾದ ನಟಿಯಿಂದ ನಿರ್ದೇಶಕ ತ್ರಿವಿಕ್ರಮ್ ವಿರುದ್ಧ ಬಲತ್ಕಾರದ ಆರೋಪ!

ಸಾರಾಂಶ

ಮಾಲಿವುಡ್ ನಂತರ ಈಗ ಟಾಲಿವುಡ್‌ನಲ್ಲಿಯೂ ಲೈಂಗಿಕ ಕಿರುಕುಳದ ಆರೋಪಗಳು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿವೆ. ಕೋರಿಯೋಗ್ರಾಫರ್ ಜಾನಿ ಮಾಸ್ಟರ್ ಬಳಿಕ ಈಗ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ವಿರುದ್ಧ ನಟಿ ಪೂನಮ್ ಕೌರ್ ಆರೋಪ ಮಾಡಿದ್ದಾರೆ.

ಮಂಚಕ್ಕೆ ಕರೆಯುವ ಸಂಸ್ಕೃತಿ ಮಲಯಾಳ ಚಿತ್ರರಂಗವನ್ನು ಬೆಚ್ಚಿ ಬೀಳಿಸಿತ್ತು. ಮಾಲಿವುಡ್‌ನಲ್ಲಿ ಕೆಲಸದ ಸ್ಥಳದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ, ಅವರು ಕಿರುಕುಳಕ್ಕೆ ಒಳಗಾಗುತ್ತಿದ್ದಾರೆ ಎಂದು ಹೇಮಾ ಸಮಿತಿ ನೀಡಿದ ವರದಿ ದೊಡ್ಡ ಮಟ್ಟದಲ್ಲಿ ಸಂಚಲನ ಮೂಡಿಸಿತ್ತು. ಇದು ದೇಶಾದ್ಯಂತ ಚರ್ಚೆಯ ವಿಷಯವಾಗಿತ್ತು. 

ಈ ಹಿನ್ನೆಲೆಯಲ್ಲಿ ಈಗ ಟಾಲಿವುಡ್‌ನಲ್ಲೂ ಇದೇ ರೀತಿಯ ಕಿರುಕುಳದ ಆರೋಪಗಳು ದೊಡ್ಡ ಸಂಚಲನವನ್ನು ಸೃಷ್ಟಿಸುತ್ತಿವೆ. ದಕ್ಷಿಣ ಭಾರತದ ಸ್ಟಾರ್ ಡ್ಯಾನ್ಸ್ ಕೋರಿಯೋಗ್ರಾಫರ್ ಜಾನಿ ಮಾಸ್ಟರ್ ವಿರುದ್ಧ ಯುವತಿಯೊಬ್ಬಳು ತನ್ನನ್ನು ಬಲಾತ್ಕಾರ ಮಾಡಿ ತೀವ್ರವಾಗಿ ಗಾಯಗೊಳಿಸಿದ್ದಾನೆ ಎಂದು ದೂರು ನೀಡಿದ್ದಾಳೆ. ಈ ಹಿನ್ನೆಲೆಯಲ್ಲಿ ಪೊಲೀಸರು ಯುವತಿ ದೂರಿನ ಆಧಾರದಲ್ಲಿ ಜಾನಿ ಮಾಸ್ಟರ್ ವಿರುದ್ಧ ಕೇಸ್ ದಾಖಲಿಸಿಕೊಂಡಿದ್ದಾರೆ. ತೆಲುಗು, ತಮಿಳು, ಕನ್ನಡದಲ್ಲಿ ಫುಲ್ ಡಿಮ್ಯಾಂಡ್ ಹೊಂದಿರುವ ಜಾನಿ ಮಾಸ್ಟರ್ ಈಗ ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿದ್ದಾರೆ. ಇದರಿಂದಾಗಿ ಜಾನಿ ಮಾಸ್ಟರ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಈ ಪ್ರಕರಣ ಇಡೀ ಸೌತ್ ಸಿನಿ ಇಂಡಸ್ಟ್ರಿಯನ್ನು ಅನ್ನು ಬೆಚ್ಚಿ ಬೀಳಿಸಿದೆ.

ಖಾಸಗಿ ಭಾಗದ ವಿಡಿಯೋ ಮಾಡಿದ ಅಭಿಮಾನಿಗಳ ನಡವಳಿಕೆಗೆ ಅರ್ಧಕ್ಕೆ ನೃತ್ಯ ನಿಲ್ಲಿಸಿ ವೇದಿಕೆ ಇಳಿದ ಪ್ರಸಿದ್ಧ ಗಾಯಕಿ!

ಇದ್ದಕ್ಕಿದ್ದಂತೆ ಈ ಸುದ್ದಿಗೆ ಇಡೀ ಚಿತ್ರರಂಗವೇ ಶಾಕ್ ಆಗಿದೆ. ಈ ಬಗ್ಗೆ ಟಾಲಿವುಡ್ ಫಿಲ್ಮ್ ಚೇಂಬರ್ ಕೂಡ ಪ್ರತಿಕ್ರಿಯಿಸಿದೆ. ತನಿಖೆ ನಡೆಯುತ್ತಿದೆ ಎಂದು ಹೇಳಿ, ವರದಿಯ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದೆ. ಪ್ರಸ್ತುತ ಜಾನಿ ಮಾಸ್ಟರ್ ಅವರನ್ನು ಡ್ಯಾನ್ಸರ್ಸ್ ಅಸೋಸಿಯೇಷನ್ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಲಾಗಿದೆ. ಅಲ್ಲದೆ, ಜನಸೇನಾ ಪಕ್ಷದ ಕಾರ್ಯಕ್ರಮಗಳಿಂದಲೂ ಪವನ್ ಕಲ್ಯಾಣ್ ಜಾನಿಯನ್ನು ದೂರ ಇಟ್ಟಿದ್ದಾರೆ.

ಒಂದು ಕಡೆ ಪೊಲೀಸ್ ಪ್ರಕರಣದ ವಿಚಾರಣೆ ನಡೆಯುತ್ತಿದ್ದರೆ, ಮತ್ತೊಂದೆಡೆ ಫಿಲ್ಮ್ ಚೇಂಬರ್‌ನಿಂದ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದ ತಂಡವೂ ವಿಚಾರಣೆ ನಡೆಸುತ್ತಿದೆ. ಈ ಪ್ರಕರಣದಲ್ಲಿ ಹಲವು ಅಂಶಗಳಿವೆ, ಲೈಂಗಿಕ ಕಿರುಕುಳ ಮಾತ್ರವಲ್ಲ, ಇನ್ನೂ ಹಲವು ವಿಷಯಗಳಿವೆ ಎಂದು ಪತ್ರಿಕಾಗೋಷ್ಠಿಯಲ್ಲಿ ನಟಿ ಜಾನ್ಸಿ ತಿಳಿಸಿದ್ದಾರೆ. ಇಷ್ಟೆಲ್ಲ ಬೆಳವಣಿಗೆಯ ಮಧ್ಯದಲ್ಲಿ ಮತ್ತೊಂದು ಸಂಚಲನ ಸೃಷ್ಟಿಸಿದ್ದಾರೆ ನಟಿ ಪೂನಮ್ ಕೌರ್. ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್  ವಿರುದ್ಧದ ಆರೋಪಗಳನ್ನು ಪುನರುಚ್ಚರಿಸಿದ್ದಾರೆ. ಈ ಹಿಂದೆಯೂ ಪರೋಕ್ಷವಾಗಿ ತ್ರಿವಿಕ್ರಮ್ ಮತ್ತು ಪವನ್ ಕಲ್ಯಾಣ್ ವಿರುದ್ಧ ಆರೋಪ ಮಾಡಿದ್ದರು. ಗುರೂಜಿ ಎಂದು ಹೇಳಿಕೊಂಡು ಆತ ಮೋಸ ಮಾಡಿದ್ದಾನೆ, ತನ್ನನ್ನು ತುಳಿದು ಮೇಲೇರಿದ್ದಾನೆ ಎಂದು ಆರೋಪಿಸಿದ್ದರು. ಅಲ್ಲದೆ, ಓರ್ವ ರಾಜಕೀಯ ನಾಯಕ ಎಂದು ಪವನ್ ವಿರುದ್ಧವೂ ಆಕೆ ಆರೋಪ ಮಾಡಿದ್ದರು. ಅವರು ತನ್ನನ್ನು ಮೋಸ ಮಾಡಿದ್ದಾರೆ, ಬಳಸಿಕೊಂಡು ಬಿಸಾಕಿದ್ದಾರೆ ಎಂದು ಆರೋಪಿಸಿದ್ದರು.

ಕಷ್ಟವಿದ್ದಾಗ ಹಣಕ್ಕಾಗಿ ಪುರುಷರ ಜೊತೆ ಮಲಗುತ್ತಿದ್ದೆ ಸತ್ಯ ಬಹಿರಂಗಪಡಿಸಿದ ಬೋಲ್ಡ್ ಬೆಡಗಿ ಶರ್ಲಿನ್ ಚೋಪ್ರಾ!

ಆದರೆ, ಯಾವತ್ತೂ ಆಕೆ ಅವರ ಹೆಸರುಗಳನ್ನು ಉಲ್ಲೇಖಿಸಿರಲಿಲ್ಲ. ಆದರೆ, ವಿಷಯ ಅರ್ಥವಾಗುವಂತೆ, ಅವರು ಯಾರೆಂದು ಜನರಿಗೆ ಅರ್ಥವಾಗುವಂತೆ ತಮ್ಮ ಪೋಸ್ಟ್‌ಗಳನ್ನು ಹಾಕುತ್ತಿದ್ದರು. ಆದರೆ, ಈಗ ನೇರವಾಗಿ ತ್ರಿವಿಕ್ರಮ್ ಅವರ ಹೆಸರನ್ನೇ ಉಲ್ಲೇಖಿಸಿದ್ದಾರೆ. 

ಜಾನಿ ಮಾಸ್ಟರ್ ವಿರುದ್ಧ ಫಿಲ್ಮ್ ಚೇಂಬರ್ (MAA association) ಶೀಘ್ರ ಕ್ರಮ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಇದನ್ನು ಪ್ರಶ್ನಿಸಿರುವ  ಪೂನಮ್ ಕೌರ್.  ಈ ಹಿಂದೆ ತ್ರಿವಿಕ್ರಮ್ ವಿರುದ್ಧ ಹಲವು ಬಾರಿ ದೂರು ನೀಡಿದ್ದೆ. ಏಕೆ ವಿಚಾರಣೆ ನಡೆಸಲಿಲ್ಲ, ಕ್ರಮ ಕೈಗೊಳ್ಳಲಿಲ್ಲ ಎಂದು ಪ್ರಶ್ನಿಸಿದ್ದಾರೆ. ನನ್ನೊಂದಿಗೆ ಅನೇಕರಿಗೆ ರಾಜಕೀಯ ಸಂಕಷ್ಟಗಳು ಇರುತ್ತಿರಲಿಲ್ಲ. ಇದರಿಂದಾಗಿ ನಾನು ಚಿತ್ರರಂಗದಿಂದ ಸದ್ದಿಲ್ಲದೆ ದೂರವಾಗಬೇಕಾಯಿತು. ನಾನು ಕಾಲ್ ಟ್ಯಾಂಡ್ ನೀಡಿದ್ದೆ, ಹಿರಿಯರಿಗೆ ದೂರು ನೀಡಿದ್ದೆ. ನಿರ್ದೇಶಕ ತ್ರಿವಿಕ್ರಮ್ ಅವರನ್ನು ಪ್ರಶ್ನಿಸಬೇಕೆಂದು ಚಿತ್ರರಂಗದ ಹಿರಿಯರಲ್ಲಿ ವಿನಂತಿಸುತ್ತೇನೆ' ಎಂದು ಪೂನಮ್ ಕೌರ್ ಟ್ವೀಟ್ ಮಾಡಿದ್ದಾರೆ.

ಒಂದು ಕಡೆ ಜಾನಿ ಮಾಸ್ಟರ್ ವಿವಾದದ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ ಪೂನಮ್ ಕೌರ್ ಈ ರೀತಿಯ ಪೋಸ್ಟ್ ಹಾಕಿರುವುದರಿಂದ ಇದು ಮತ್ತಷ್ಟು ಸಂಚಲನ ಮೂಡಿಸುವ ಸಾಧ್ಯತೆಯಿದೆ. ಟಾಲಿವುಡ್‌ನಲ್ಲಿ ಲೈಂಗಿಕ ಕಿರುಕುಳದ ಆರೋಪಗಳು ಸಂಚಲನ ಮೂಡಿಸುತ್ತಿವೆ. ಈ ಹೊಸ ವಿವಾದ ಯಾವ ತಿರುವು ಪಡೆಯುತ್ತದೆ ಎಂಬುದನ್ನು ಕಾದು ನೋಡಬೇಕು. 

`ಒಕ ವಿಚಿತ್ರಂ` ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು ಪೂನಮ್ ಕೌರ್. ನಾಯಕಿಯಾಗಿ ಮಿಂಚಿದರು. ` ಕನ್ನಡದಲ್ಲಿ ಶಿವರಾಜಕುಮಾರ್ ಅಭಿನಯದ `ಬಂಧು ಬಳಗ' ಮತ್ತು ರವಿಚಂದ್ರನ್‌ರವರ `ಮಂಜಿನ ಹನಿ' ಚಿತ್ರದಲ್ಲಿ ನಟಿಸಿದ್ದಾರೆ. ಪೂನಂ ಅವರು ಈ ಹಿಂದೆ ಸಕತ್​ ಸುದ್ದಿಯಾಗಿದ್ದು,  ತೆಲಂಗಾಣದಲ್ಲಿ ನಡೆದ ಭಾರತ್ ಜೋಡೋ ಯಾತ್ರೆ ಸಂದರ್ಭದಲ್ಲಿ. ಆಗ ಇವರು ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ ಅವರ ಜೊತೆ ಕೈ  ಹಿಡಿದಿರುವ ಫೋಟೋ ವೈರಲ್ ಆಗಿದ್ದವು. ಫೋಟೋವನ್ನು ಟ್ವಿಟರ್​ನಲ್ಲಿ ಹಂಚಿಕೊಂಡ ಬಿಜೆಪಿಯ ಕಾರ್ಯಕರ್ತೆಯೊಬ್ಬರು, ಅವರ ಮುತ್ತಜ್ಜನ ಹೆಜ್ಜೆಗಳನ್ನು ಅನುಸರಿಸುತ್ತಿದ್ದಾರೆ ಎಂದು ಹೇಳಿದ್ದರು. ಇದಕ್ಕೆ ಪ್ರತಿಟ್ವೀಟ್ ಮಾಡಿದ ಪೂನಂ ಕೌರ್, ನಾನು ಹೀಗೆ ಮಾಡ್ತಿರೋದು  ನಿಮಗೆ ಸಂಪೂರ್ಣವಾಗಿ ಅವಮಾನಕರವಾಗಿದೆ ಎನ್ನಿಸಿರಬಹುದು. ಆದರೆ  ಪ್ರಧಾನಿಯವರು ನಾರಿಶಕ್ತಿ ಬಗ್ಗೆ ಮಾತನಾಡಿದ್ದು ನೆನಪಿರಲಿ ತಿರುಗೇಟು ನೀಡಿದ್ದರು. ಈ ಫೋಟೋ ಸಾಕಷ್ಟು ಸದ್ದು ಮಾಡಿತ್ತು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?