ಬಾಲಿವುಡ್​ ನಟ Dharmendra ಅಡ್ಮಿಟ್​ ಆಗಿದ್ದ ಆಸ್ಪತ್ರೆ ಸಿಬ್ಬಂದಿ ಅರೆಸ್ಟ್​? ಅಷ್ಟಕ್ಕೂ ಆಗಿದ್ದೇನು?

Published : Nov 14, 2025, 01:37 PM IST
Dharmendra Viral Video

ಸಾರಾಂಶ

 ನಟ ಧರ್ಮೇಂದ್ರ  ಆಸ್ಪತ್ರೆಗೆ ದಾಖಲಾಗಿದ್ದ ಸಂದರ್ಭದಲ್ಲಿ ಐಸಿಯುನಿಂದ ಅವರ ಖಾಸಗಿ ಕ್ಷಣಗಳ ವಿಡಿಯೋವೊಂದು ವೈರಲ್ ಆಗಿದ್ದು, ಡಿಯೋಲ್ ಕುಟುಂಬವನ್ನು ನೋವಿನಲ್ಲಿ ತೋರಿಸಿದೆ. ಈ ವಿಡಿಯೋ ಚಿತ್ರೀಕರಿಸಿದ ಆಸ್ಪತ್ರೆ ಸಿಬ್ಬಂದಿಯನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ. ಅಧಿಕೃತ ಮಾಹಿತಿ ತಿಳಿಯಬೇಕಿದೆ

ಬಾಲಿವುಡ್​ನ ಹಿರಿಯ ನಟ ಧರ್ಮೇಂದ್ರ ಅವರು ಮೂರು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾದಾಗಿನಿಂದಲೂ ಅವರ ನಿಧನದ ಸುದ್ದಿ ಹರಿದಾಡುತ್ತಲೇ ಇದೆ. ಈ ಮಾತನ್ನು ನಂಬಿ ಗಣ್ಯರು ಸೇರಿದಂತೆ ಹಲವರು ಸಂತಾಪವನ್ನೂ ಸೂಚಿಸಿಬಿಟ್ಟಿದ್ದರು. ಮಾಧ್ಯಮಗಳಲ್ಲಿ ಈ ಸುದ್ದಿ ಕಾಳ್ಗಿಚ್ಚಿನಂತೆ ಹರಡಿತು. ಆದರೆ ಧರ್ಮೇಂದ್ರ ಅವರು ಹುಷಾರಾಗಿದ್ದಾರೆ, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅವರ ಪತ್ನಿ ನಟಿ, ಸಂಸದೆ ಹೇಮಾಮಾಲಿನಿ, ಮಗಳು ಇಶಾ ಡಿಯೋಲ್​ ಸೇರಿದಂತೆ ಕುಟುಂಬಸ್ಥರು ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡಿ ವದಂತಿ ಹರಡದಂತೆ ಮನವಿ ಮಾಡಿಕೊಂಡರು. ಎರಡನೆಯ ಬಾರಿಯೂ ಇದೇ ಸುದ್ದಿ ಮತ್ತೆ ಹರಡಿತ್ತು. ಆಗಲೂ ಕುಟುಂಬಸ್ಥರು ಅಸಮಾಧಾನ ಹೊರಹಾಕಿದ್ದರು.

ಆಸ್ಪತ್ರೆಯ ವಿಡಿಯೋ  ವೈರಲ್​

89 ವರ್ಷದ ನಟ ಧರ್ಮೇಂದ್ರ ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ ಉಸಿರಾಟದ ತೊಂದರೆ ಇತ್ತು. ಇದೀಗ ಅವರನ್ನು ಡಿಸ್​ಚಾರ್ಜ್​ ಮಾಡಲಾಗಿದ್ದು, ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವುಗಳ ನಡುವೆಯೇ ಆಸ್ಪತ್ರೆಯ ಸಿಬ್ಬಂದಿಯನ್ನು ಅರೆಸ್ಟ್​ ಮಾಡಲಾಗಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಬಂದಿಲ್ಲವಾದರೂ, ಕೆಲವರನ್ನು ಬಂಧಿಸಲಾಗಿದೆ ಎನ್ನಲಾಗುತ್ತಿದೆ. ಇದಕ್ಕೆ ಕಾರಣ, ಆಸ್ಪತ್ರೆಯ ಒಳಗಿನಿಂದ ಡಿಯೋಲ್ ಕುಟುಂಬವನ್ನು ತೋರಿಸುವ ವಿಡಿಯೋ ವೈರಲ್ ಆಗಿರುವುದು.

ವಿಡಿಯೋ ಮಾಡಿದವರು ಅ ರೆಸ್ಟ್​?

ಆಸ್ಪತ್ರೆಯ ಸಿಬ್ಬಂದಿ ವಿಡಿಯೋ ರೆಕಾರ್ಡ್ ಮಾಡಿದ್ದರು. ಈ ವೈರಲ್ ವಿಡಿಯೋದಲ್ಲಿ ಧರ್ಮೇಂದ್ರ ಅವರನ್ನು ಬ್ರೀಚ್ ಕ್ಯಾಂಡಿ ಐಸಿಯು ಒಳಗೆ ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿರುವುದನ್ನು ಕಾಣಬಹುದು. ಅವರು ಪ್ರಜ್ಞಾಹೀನರಾಗಿ ಕಾಣಿಸಿಕೊಂಡಿದ್ದಾರೆ, ಅವರ ಪುತ್ರರಾದ ಬಾಬಿ ಡಿಯೋಲ್ ಮತ್ತು ಸನ್ನಿ ಡಿಯೋಲ್ ಮತ್ತು ಇತರ ಕುಟುಂಬ ಸದಸ್ಯರು ನೋವಿನಿಂದ ಅಲ್ಲಿ ನಿಂತಿರುವುದನ್ನು ನೋಡಬಹುದು. ಸನ್ನಿ ಡಿಯೋಲ್ ಅವರ ಪುತ್ರರಾದ ಕರಣ್ ಡಿಯೋಲ್ ಮತ್ತು ರಾಜ್‌ವೀರ್ ಡಿಯೋಲ್ ಕೂಡ ಕ್ಲಿಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಧಮೇಂದ್ರ ಅವರ ಮೊದಲ ಪತ್ನಿ ಪ್ರಕಾಶ್ ಕೌರ್ ಅವರೂ ಅಲ್ಲಿದ್ದರು. ಡಿಯೋಲ್ ಕುಟುಂಬದ ಈ ಖಾಸಗಿ ಕ್ಷಣವನ್ನು ರೆಕಾರ್ಡ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಆಸ್ಪತ್ರೆ ಉದ್ಯೋಗಿಯನ್ನು ಬಂಧಿಸಲಾಗಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅಖಂಡ 2 ಪ್ರೀಮಿಯರ್ ಶೋಗಳು ರದ್ದು, ನಿರ್ಮಾಪಕರಿಗೆ ಸಂಕಷ್ಟ.. ಬಾಲಯ್ಯ ಸಿನಿಮಾ ರಿಲೀಸ್ ಕಥೆಯೇನು?
ಮೋಹನ್ ಬಾಬು ಮಾಡಿದ ಸಣ್ಣ ತಪ್ಪಿನಿಂದ ಸೌಂದರ್ಯ ಪ್ರಾಣ ಕಳೆದುಕೊಂಡ್ರಾ? ನಿರ್ದೇಶಕರು ಹೇಳಿದ ಸತ್ಯವೇನು?