
ಮುಂಬೈ (ನ.13) ಬಾಲಿವುಡ್ ನಟ ಧರ್ಮೇಂದ್ರ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಉಸಿರಾಟದ ಸಮಸ್ಯೆಯಿಂದ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆ ದಾಖಲಾಗಿದ್ದ ಧರ್ಮೇಂದ್ರ ಆರೋಗ್ಯ ಕುರಿತು ಹಲವು ಊಹಾಪೋಹ ಸುದ್ದಿಗಳು ಹರಿದಾಡಿತ್ತು. ಇದೇ ವೇಳೆ ಧರ್ಮೇಂದ್ರ ಕುಟುಂಬ ಸುಳ್ಳು ಸುದ್ದಿ ಹರದಂತೆ ಮನವಿ ಮಾಡಿದ್ದರು. ಇದೀಗ ಧರ್ಮೇಂದ್ರ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಕೆ ಕಾಣುತ್ತಿದ್ದಾರೆ. ಇದರ ನಡುವೆ ಧರ್ಮೇಂದ್ರ ಆರೋಗ್ಯ ಪ್ರಕರಣದಲ್ಲಿ ಆಸ್ಪತ್ರೆ ಸಿಬ್ಬಂದಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಹಿಂದುಸ್ಥಾನ್ ಟೈಮ್ಸ್ ವರದಿ ಮಾಡಿದೆ.
ನಟ ಧರ್ಮೇಂದ್ರ ಆಸ್ಪತ್ರೆ ದಾಖಲಾಗಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಂತೆ ನಕಲಿ ಸುದ್ದಿಗಳು ಹರಿದಾಡಿತ್ತು. ಇದರ ಜೊತೆಗೆ ವಿಡಿಯೋ ಒಂದು ಭಾರಿ ವೈರಲ್ ಆಗಿತ್ತು. ಈ ವಿಡಿಯೋದಲ್ಲಿ ನಟ ಧರ್ಮೇಂದ್ರ ಆಸ್ಪತ್ರೆ ಬೆಡ್ ಮೇಲೆ ಪ್ರಜ್ಞಾಹೀನ ಸ್ಥಿತಿಯಲ್ಲಿರುವುದು ವಿಡಿಯೋ ಆಗಿತ್ತು. ಇಷ್ಟೇ ಅಲ್ಲ ಧರ್ಮೇಂದ್ರ ಪಕ್ಕದಲ್ಲಿ ಪುತ್ರರಾದ ಸನ್ನಿ ಡಿಯೋಲ್, ಬಾಬಿ ಡಿಯೋಲ್ ತೀವ್ರ ನೋವಿನಿಂದ ನಿಂತಿದ್ದರೆ, ಧರ್ಮೇಂದ್ರ ಮೊದಲ ಪತ್ನಿ ಪ್ರಕಾಶ್ ಕೌರ್, ಸನ್ನಿ ಡಿಯೋಲ್ ಪುತ್ರರಾದ ಕರಣ್ ಡಿಯೋಲ್, ರಾಜ್‌ವೀರ್ ಡಿಯೋಲ್ ದುಃಖತಪ್ತರಾಗಿ ನಿಂತಿರುವ ವಿಡಿಯೋ ಹರಿದಾಡಿತ್ತು. ಧರ್ಮೇಂದ್ರ ಕುಟುಂಬದ ಪ್ರಮುಖರು ಧರ್ಮೇಂದ್ರ ಬೆಡ್ ಪಕ್ಕದಲ್ಲೇ ಇದ್ದು, ಒಬ್ಬರಿಗೊಬ್ಬರು ಸಾಂತ್ವನ ಹೇಳುತ್ತಿರುವ ದೃಶ್ಯವಿತ್ತು. ಇದೇ ವಿಡಿಯೋ ಧರ್ಮೇಂದ್ರ ಕುರಿತ ನಕಲಿ ಸುದ್ದಿಗಳಿಗೆ ಪುಷ್ಠಿ ನೀಡಿತ್ತು.
ಆಸ್ಪತ್ರೆ ಸಿಬ್ಬಂದಿ ಧರ್ಮೇಂದ್ರ ಕುಟುಂಬದ ತೀರಾ ಖಾಸಗಿ ಕ್ಷಣವನ್ನು ಚಿತ್ರೀಕರಿಸಿದ್ದರು. ಅನುಮತಿ ಇಲ್ಲದೆ, ನಿಷೇಧಿತ ವಲಯದಲ್ಲಿ ವಿಡಿಯೋ ಚಿತ್ರೀಕರಣ ಮಾಡಿದ್ದರು. ಇದೇ ವಿಡಿಯೋದಿಂದ ನಕಲಿ ಸುದ್ದಿಗಳು ಹುಟ್ಟಿಕೊಂಡಿತ್ತು. ಈ ವಿಡಿಯೋವನ್ನು ಸೋಶಿಯಲ್ ಮೀಡಯಾದಲ್ಲೂ ಪೋಸ್ಟ ಮಾಡಲಾಗಿತ್ತು. ಜೊತೆಗೆ ವ್ಯಾಟ್ಸಾಪ್ ಮೂಲಕ ಹರಿಬಿಡಲಾಗಿತ್ತು. ಇದೀಗ ಈ ವಿಡಿಯೋ ರೆಕಾರ್ಡ್ ಮಾಡಿದ ಆಸ್ಪತ್ರೆ ಸಿಬ್ಬಂದಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ ಎಂದು ವರದಿಯಾಗಿದೆ.
89 ವರ್ಷದ ಧರ್ಮೇಂದ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆಯೂ ನಕಲಿ ಸುದ್ದಿಗಳು ಹರಿದಾಡಿತ್ತು. ನವೆಂಬರ್ 11 ರಂದು ಧರ್ಮೇಂದ್ರ ಪುತ್ರಿ ಇಶಾ ಡಿಯೋಲ್ ಈ ನಕಲಿ ಸುದ್ದಿಗಳಿಗೆ ಫುಲ್ ಸ್ಟಾಪ್ ಇಟ್ಟಿದ್ದರು. ಧರ್ಮೇಂದ್ರ ಚಿಕಿತ್ಸೆ ಸ್ಪಂದಿಸುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದ್ದರು. ನವೆಂಬರ್ 12ರಂದು ಧರ್ಮೇಂದ್ರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು. ಸದ್ಯ ಧರ್ಮೇಂದ್ರಗೆ ಮನೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಚೇತರಿಕೆ ಕಾಣುತ್ತಿರುವ ಧರ್ಮೇಂದ್ರ ಜೊತೆ ಇಡೀ ಕುಟುಂಬ ಜೊತೆಯಾಗಿ ನಿಂತಿದೆ. ಈ ಕುರಿತು ಹೇಮಾ ಮಾಲಿನಿ ಟ್ವೀಟ್ ಮಾಡಿದ್ದರು. ಧರ್ಮೇಂದ್ರ ಆರೋಗ್ಯ ಕುರಿತು ಕಾಳಜಿ ವಹಿಸಿದ್ದ ಎಲ್ಲರಿಗೂ ಧನ್ಯವಾದ. ಸದ್ಯ ಧರ್ಮೇಂದ್ರ ಆರೋಗ್ಯವನ್ನು ವೈದ್ಯರು ಮಾನಿಟರ್ ಮಾಡುತ್ತಿದ್ದಾರೆ. ನಾವೆಲ್ಲರೂ ಧರ್ಮೇಂದ್ರ ಜೊತೆಗಿದ್ದೇವೆ. ನಿಮ್ಮ ಪ್ರಾರ್ಥನೆ ಇರಲಿ ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.