ರಶ್ಮಿಕಾ ಅಭಿಮಾನಿಗಳಿಗೆ ಬೇಸರದ ಸುದ್ದಿ; ಪುಷ್ಪ-2ನಲ್ಲಿ ಶ್ರೀವಲ್ಲಿ ಪಾತ್ರಕ್ಕೆ ಕತ್ತರಿ

Published : Jun 18, 2022, 04:02 PM IST
ರಶ್ಮಿಕಾ ಅಭಿಮಾನಿಗಳಿಗೆ ಬೇಸರದ ಸುದ್ದಿ; ಪುಷ್ಪ-2ನಲ್ಲಿ ಶ್ರೀವಲ್ಲಿ ಪಾತ್ರಕ್ಕೆ ಕತ್ತರಿ

ಸಾರಾಂಶ

ಪುಷ್ಪ ಸಿನಿಮಾ ಮೂಲಕ ಮೋಡಿ ಮಾಡಿದ್ದ ರಶ್ಮಿಕಾ ಪುಷ್ಪ 2 ಮೂಲಕ ಹೇಗೆಲ್ಲಾ ಮೋಡಿ ಮಾಡಬಹುದು ಅಂತಾ ಕಾಯ್ತಿರುವ ಅಭಿಮಾನಿಗಳಿಗೆ ಪುಷ್ಪ 2 ಚಿತ್ರದಿಂದ ಬಂದ ಅಪ್‌ಡೇಟ್ ಇದೀಗ ಫ್ಯಾನ್ಸ್‌ಗೆ ಶಾಕ್ ಕೊಟ್ಟಿದೆ. ಹೌದು ಈ ಸಿನಿಮಾದಲ್ಲಿರಶ್ಮಿಕಾ ಪಾತ್ರಕ್ಕೆ ಕತ್ತರಿ ಹಾಕಲಾಗಿದೆಯಂತೆ. 

ನಟಿ ರಶ್ಮಿಕಾ ಮಂದಣ್ಣ(Rashmika Mandanna) ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬಾಲಿವುಡ್, ಟಾಲಿವುಡ್ ಮತ್ತು ಕಾಲಿವುಡ್ ಗಳಲ್ಲಿ ನಟಿ ರಶ್ಮಿಕಾ ಬ್ಯುಸಿಯಾಗಿದ್ದಾರೆ.   ಬಾಲಿವುಡ್ ಮತ್ತು ಸೌತ್ ಸಿನಿರಂಗದಲ್ಲಿ ರಶ್ಮಿಕಾ ಮಂದಣ್ಣ ಮಿಂಚ್ತಿದ್ದಾರೆ. ರಶ್ಮಿಕಾ ಸಿನಿಮಾ ಜೀವನಕ್ಕೆ ದೊದ್ದ ಬ್ರೇಕ್ ಕೊಟ್ಟ ಸಿನಿಮಾ ಪುಷ್ಪ(Pushpa). ಈ ಮೂಲಕ ರಶ್ಮಿಕಾ ಪ್ಯಾನ್ ಇಂಡಿಯಾ ನಟಿಯಾಗಿ ಇದೀಗ ರಶ್ಮಿಕಾ ಪಾರ್ಟ್-2ಗಾಗಿ ಕಾಯುತ್ತಿದ್ದಾರೆ. ಇನ್ನು ಚಿತ್ರೀಕರಣ ಪ್ರಾರಂಭವಾಗಿಲ್ಲ ಆಗಲೇ ಸಿನಿಮಾ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ಈ ಮೊದಲು ನಿರ್ದೇಶಕ ಸುಕುಮಾರ್ ಚಿತ್ರದ ಕಥೆಯಲ್ಲಿ ಬದಲಾವಣೆ  ಮಾಡಲಿದ್ದಾರೆ ಎನ್ನುವ ಮಾತು ಕೇಳಿಬಂದಿತ್ತು. ಆದರೀಗ ಮತ್ತೊಂದು ಸುದ್ದಿ ವೈರಲ್ ಆಗಿದೆ. ಹೌದು ಇದು  ರಶ್ಮಿಕಾ ಅಭಿಮಾನಿಗಳಿಗೆ ಬೇಸರ ಸಂಗತಿಯಾಗಿದೆ. 

ಪುಷ್ಪ ಸಿನಿಮಾ ಮೂಲಕ ಮೋಡಿ ಮಾಡಿದ್ದ ರಶ್ಮಿಕಾ ಪುಷ್ಪ 2 ಮೂಲಕ ಹೇಗೆಲ್ಲಾ ಮೋಡಿ ಮಾಡಬಹುದು ಅಂತಾ ಕಾಯ್ತಿರುವ ಅಭಿಮಾನಿಗಳಿಗೆ ಪುಷ್ಪ 2 ಚಿತ್ರದಿಂದ ಬಂದ ಅಪ್‌ಡೇಟ್ ಇದೀಗ ಫ್ಯಾನ್ಸ್‌ಗೆ ಶಾಕ್ ಕೊಟ್ಟಿದೆ. ಹೌದು ಈ ಸಿನಿಮಾದಲ್ಲಿರಶ್ಮಿಕಾ ಪಾತ್ರಕ್ಕೆ ಕತ್ತರಿ ಹಾಕಲಾಗಿದೆಯಂತೆ. ಪುಷ್ಪ 2 ಸಿನಿಮಾ ಅಲ್ಲು ಅರ್ಜುನ್ ಒನ್ ಮ್ಯಾನ್ ಶೋ ಆಗಿರಲಿದೆ. ಇಲ್ಲಿ ಪುಷ್ಪ ರಾಜ್ ಹೇಗೆ ಹಂತ ಹಂತವಾಗಿ ಬೆಳೆಯುತ್ತಾ ಹೋಗುತ್ತಾನೆ ಹೇಗೆ ತನ್ನ ಯಶಸ್ಸಿನ ದಾರಿಯನ್ನು ಮುಂದುವರಿಸುತ್ತಾನೆ ಎನ್ನುವ ಅಂಶಗಳು ಇರುತ್ತವೆ. ಸದ್ಯ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ಇಡೀ ಚಿತ್ರದಲ್ಲಿ ಪುಷ್ಪರಾಜ್ ಅಬ್ಬರವೇ ಹೆಚ್ಚಾಗಿ ಇರಲಿದೆ ಎನ್ನಲಾಗುತ್ತಿದೆ. 

ಪುಷ್ಪ 2ನಲ್ಲಿ ಹೆಚ್ಚು ಕಾಲ ರಶ್ಮಿಕಾ ಮಂದಣ್ಣ ಶ್ರೀವಲ್ಲಿಯಾಗಿ ಹೆಚ್ಚು ಮಿಂಚುವುದಿಲ್ಲ. ಅವಶ್ಯಕ ಎನಿಸುವಂತಹ ಸನ್ನಿವೇಶಗಳಲ್ಲಿ ಮಾತ್ರ ಶ್ರೀವಲ್ಲಿಯ ಪಾತ್ರ ಬಂದು ಹೋಗುತ್ತದೆ. ಹೆಚ್ಚು ಹೊತ್ತು ರಶ್ಮಿಕಾ ತೆರೆಮೇಲೆ ಇರುವುದಿಲ್ಲ ಎನ್ನುವ ಮಾತು ಈಗ ಶ್ರೀವಲ್ಲಿ ಅಭಿಮಾನಿಗಳಿಗೆ ಬೇಸರ ತಂದಿದೆ. ಅಂದಹಾಗೆ ಈಗಾಗಲೇ ಚಿತ್ರದ ಕ್ಲೈಮ್ಯಾಕ್ಸ್  ಕೂಡ ಹೀಗೆ ಇರಲಿದೆ ಎನ್ನುವ ಮಾತು ಕೇಳಿಬರುತ್ತಿದೆ. ಕ್ಲೈಮ್ಯಾಕ್ಸ್ ನಲ್ಲಿ ರಶ್ಮಿಕಾ ಮಂದಣ್ಣ ಪಾತ್ರ ಟ್ರ‍್ಯಾಜಿಡಿಯಾಗಿ ಅಂತ್ಯವಾಗಲಿದೆಯಂತೆ. ಶ್ರೀವಲ್ಲಿ ಸಾವಿನ ನಂತರ ವಿಲನ್ ಮತ್ತು ಹೀರೋ ನಡುವಿನ ಕ್ಲೈಮ್ಯಾಕ್ಸ್‌ ದೃಶ್ಯಗಳು ಇರುತ್ತವೆ ಎಂಬ ಸುದ್ದಿ ಕೇಳಿಬರುತ್ತಿದೆ. ಹಾಗಾಗಿ ಪಾರ್ಟ್-2ನಲ್ಲಿ ರಶ್ಮಿಕಾ ಪಾತ್ರಕಾಲ ತೆರೆ ಮೇಲೆ ಇರಲ್ಲ ಎನ್ನುವ ಮಾತು ವೈರಲ್ ಆಗಿದೆ. 

ಇಲ್ಲಣ್ಣ ಇದು ಬೇರೆನೇ ಲೈನ್; ರಶ್ಮಿಕಾ ಹೆಸರು ಹೇಳಿದ್ದಕ್ಕೆ ರಿಷಬ್ ಶೆಟ್ಟಿ ರಿಯಾಕ್ಷನ್ ಇದು!

ಅಂದಹಾಗೆ ಪುಷ್ಪ-2ನಲ್ಲಿ ವಿಲನ್ ಆಗಿ ದಕ್ಷಿಣ ಭಾರತದ ಖ್ಯಾತ ನಟ ಫಹಾದ್ ಫಾಸಿಲ್ ಕಾಣಿಸಿಕೊಂಡಿದ್ದಾರೆ. ಫಹಾದ್ ಪಾತ್ರ ಮೊದಲ ಭಾಗದ ಕೊನೆಯಲ್ಲಿ ತೊರಿಸಲಾಗಿದೆ. ಪೊಲೀಸ್ ಅಧಿಕಾರಿಯಾಗಿ ಫಹಾದ್ ಎಂಟ್ರಿ ಕೊಟ್ಟಿದ್ದಾರೆ. ಪಾರ್ಟ-1ರಲ್ಲಿ ಫಹಾದ್ ಮತ್ತು ಅಲ್ಲು ಅರ್ಜುನ್ ನಡುವಿನ ದೃಶ್ಯ ಪಾರ್ಟ್-2ನ ತೀವ್ರರತೆಯನ್ನು ತೋರುತ್ತಿತ್ತು. ಹಾಗಾಗಿ ಪಾರ್ಟ್-2ನಲ್ಲಿ ಫಹಾದ್ ಮತ್ತು ಅಲ್ಲು ಅರ್ಜುನ್ ನಡುವಿನ ಕಿತ್ತಾಟವೆ ಜಾಸ್ತಿ ಇರುವ ಸಾದ್ಯತೆ ಇದೆ. 

ರಶ್ಮಿಕಾರಿಂದ ನ್ಯಾಷನಲ್ ಕ್ರಶ್ ಪಟ್ಟ ಕಿತ್ತುಕೊಂಡ್ರಾ ಆ ನಟಿ..?

ಪುಷ್ಪ-2 ಇನ್ನು ಚಿತ್ರೀಕರಣ ಪ್ರಾರಂಭವಾಗಿಲ್ಲ. ಮೂಲಗಳ ಪ್ರಕಾರ ಚಿತ್ರೀಕರಣ ತಡವಾಗಲು ಕಾರಣ ಕಥೆಯಲ್ಲಿ ನಡೆಯುತ್ತಿರುವ ಬದಲಾವಣೆ ಎನ್ನಲಾಗುತ್ತಿದೆ. ಮೊದಲ ಭಾಗದ ದೊಡ್ಡ ಮಟ್ಟದ ಹಿಟ್ ಮತ್ತು ಕೆಜಿಎಫ್-2 ಹಾಗೂ ಆರ್ ಆರ್ ಆರ್ ಸಿನಿಮಾಗಳ ಸಕ್ಸಸ್ ಬಳಿಕ ಪುಷ್ಪ ತಂಡ ಮತ್ತಷ್ಟು ಪವರ್ ಫುಲ್ ಆದ ಕಥೆಮೂಲಕ ಅಭಿಮಾನಿಗಳ ಮುಂದೆ ಬರುವ ಉದ್ದೇಶದಿಂದ ಒಂದಿಷ್ಟು ಬದಲಾವಣೆ ಮಾಡಿಕೊಳ್ಳಲಾಗುತ್ತಿದೆಯಂತೆ. ಈಗಾಗಲೇ ಸಾಕಷ್ಟು ಕತೂಹಲ ಮೂಡಿಸಿರುವ ಸಿನಿಮಾ ಯಾವಾಗ ತೆರೆಗೆ ಬರಲಿದೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.     

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?