ರಾಮಸೇತು ಥಿಯೇಟರ್‌ಗಳಲ್ಲೇ ರಿಲೀಸ್ ಆಗಲಿದೆ : ಒಟಿಟಿ ವದಂತಿ ನಿರಾಕರಿಸಿದ ನಿರ್ಮಾಪಕ

By Anusha KbFirst Published Jun 18, 2022, 3:27 PM IST
Highlights

ಅಕ್ಷಯ್ ಕುಮಾರ್ ಅಭಿನಯದ ರಾಮ್ ಸೇತು ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಸಿನಿಮಾ ನಿರ್ಮಾಪಕ ವಿಕ್ರಮ್ ಮಲ್ಹೋತ್ರಾ ಹೇಳಿದ್ದಾರೆ. OTT ಯಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ ಎಂಬ ವದಂತಿಯನ್ನು ತಳ್ಳಿಹಾಕಿದ ನಿರ್ಮಾಪಕ, ಈ ಸಿನಿಮಾ ದೀಪಾವಳಿ ಹೊತ್ತಿಗೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಿದ್ದಾರೆ.

ಅಕ್ಷಯ್ ಕುಮಾರ್ ಅಭಿನಯದ ರಾಮ್ ಸೇತು ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಸಿನಿಮಾ ನಿರ್ಮಾಪಕ ವಿಕ್ರಮ್ ಮಲ್ಹೋತ್ರಾ ಹೇಳಿದ್ದಾರೆ. OTT ಯಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ ಎಂಬ ವದಂತಿಯನ್ನು ತಳ್ಳಿಹಾಕಿದ ನಿರ್ಮಾಪಕ, ಈ ಸಿನಿಮಾ ದೀಪಾವಳಿ ಹೊತ್ತಿಗೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಿದರು.

ಅಕ್ಷಯ್ ಕುಮಾರ್ ಅವರ ಮುಂಬರುವ ಚಿತ್ರ ರಾಮಸೇತು OTT ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾಗಲಿದೆ ಮತ್ತು ಮೊದಲೇ ಘೋಷಿಸಿದಂತೆ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗುವುದಿಲ್ಲ ಎಂದು ವರದಿಗಳು ಬಂದಿದ್ದವು. ಅಕ್ಷಯ್ ಅವರ ಇತ್ತೀಚಿನ ಚಿತ್ರಗಳಾದ ಸಾಮ್ರಾಟ್ ಪೃಥ್ವಿರಾಜ್ (Samrat Prithviraj) ಮತ್ತು ಬಚ್ಚನ್ ಪಾಂಡೆ (Bachchhan Paandey) ಅವರ ಕಳಪೆ ಪ್ರದರ್ಶನದಿಂದಾಗಿ ಈ ನಿರ್ಧಾರ ಮಾಡಲಾಗಿದೆ ಎಂದು ವರದಿಯಾಗಿದ್ದವು. ಆದರೆ ಈಗ ರಾಮಸೇತು ಚಿತ್ರದ ನಿರ್ಮಾಪಕ ವಿಕ್ರಮ್ ಮಲ್ಹೋತ್ರಾ (Vikram Malhotra) ಈ ಎಲ್ಲಾ ವರದಿಗಳನ್ನು ತಳ್ಳಿಹಾಕಿದ್ದಾರೆ. 

'RAM SETU': IN CINEMAS, *NOT* OTT... - starring - will release in *cinemas*, NOT on any digital platform, as speculated on social media... “ will celebrate 2022 in theatres, as committed," producer sets the record straight. pic.twitter.com/YbI6IvkPJb

— taran adarsh (@taran_adarsh)

ರಾಮ್ ಸೇತು (Ram Setu) ಚಿತ್ರದಲ್ಲಿ ಜಾಕ್ವೆಲಿನ್ ಫೆರ್ನಾಂಡಿಸ್ (Jacqueline Fernandez) ಮತ್ತು ನುಶ್ರತ್ ಭರುಚ್ಚ (Nushrratt Bharuccha) ಕೂಡ ನಟಿಸಿದ್ದಾರೆ. ಅಭಿಷೇಕ್ ಶರ್ಮಾ (Abhishek Sharma) ನಿರ್ದೇಶನದ ಈ ಚಿತ್ರದಲ್ಲಿ ಅಕ್ಷಯ್ ಅವರು ರಾಮಾಯಣದಲ್ಲಿ ಉಲ್ಲೇಖಿಸಲಾದ ಭಾರತ ಮತ್ತು ಶ್ರೀಲಂಕಾ ನಡುವಿನ ಕಲ್ಪಿತ ಸೇತುವೆಯಾದ ರಾಮಸೇತುವಿನ ಹಿಂದಿನ ರಹಸ್ಯವನ್ನು ತನಿಖೆ ಮಾಡುವ ಪುರಾತತ್ವಶಾಸ್ತ್ರಜ್ಞರಾಗಿ (archaeologist) ನಟಿಸಿದ್ದಾರೆ. ಚಿತ್ರವು ದೀಪಾವಳಿಯ ಆಸುಪಾಸಿನಲ್ಲಿ ಅಕ್ಟೋಬರ್ 24 ರಂದು ಬಿಡುಗಡೆಯಾಗಲಿದೆ.

ಅಕ್ಷಯ್ ಕುಮಾರ್ ರಾಮಸೇತು ಚಿತ್ರದ 45 ಕಿರಿಯ ಕಲಾವಿದರಿಗೂ ಕೊರೊನಾ ಪಾಸಿಟಿವ್!

ಚಿತ್ರ ಟ್ರೇಡ್ ವಿಶ್ಲೇಷಕ ತರಣ್ ಆದರ್ಶ್ (Taran Adarsh) ಶುಕ್ರವಾರ ಈ ಬಗ್ಗೆ ಟ್ವೀಟ್ ಮಾಡಿದ್ದು, ಚಿತ್ರದ ನಿರ್ಮಾಪಕ ವಿಕ್ರಮ್ ಮಲ್ಹೋತ್ರಾ ಚಿತ್ರವು ಚಿತ್ರಮಂದಿರಗಳಲ್ಲಿ ಮಾತ್ರ ಬಿಡುಗಡೆಯಾಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಅಕ್ಷಯ್ ಅವರ ಕೊನೆಯ ಎರಡು ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ನೀಡಲಿಲ್ಲ. ಮಾರ್ಚ್‌ನಲ್ಲಿ ಬಿಡುಗಡೆಯಾದ ಬಚ್ಚನ್ ಪಾಂಡೆ  ಕೇವಲ ₹49 ಕೋಟಿ ಕಲೆಕ್ಷನ್ ಮಾಡಿದೆ. ಮತ್ತೊಂದೆಡೆ, ಅವರ ಇತ್ತೀಚಿನ ಬಿಡುಗಡೆಯಾದ ಸಾಮ್ರಾಟ್ ಪೃಥ್ವಿರಾಜ್ ಸಹ ಅದರ ಓಟದ ಮುಕ್ತಾಯದ ಹಂತದಲ್ಲಿದೆ, ಇದುವರೆಗೆ ಭಾರತದಲ್ಲಿ ಅದು  ₹66 ಕೋಟಿ ಗಳಿಸಿದೆ. ಈ ಚಿತ್ರಗಳು ನಿರಾಶಾದಾಯಕವಾಗಿವೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಹೀಗಾಗಿ ರಾಮ್ ಸೇತು ನಿರ್ಮಾಪಕರು ಚಿತ್ರಮಂದಿರಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಯೋಚಿಸುತ್ತಿದ್ದಾರೆ. 

ಪಠ್ಯಗಳು ಮೊಘಲರಿಂದಲೇ ತುಂಬಿವೆ, ಭಾರತೀಯ ರಾಜರಿಗೇ ಜಾಗವಿಲ್ಲ: ನಟ ಅಕ್ಷಯ್ ಕಿಡಿ
ಈ ಗೊಂದಲಕ್ಕೆ ಮತ್ತೊಂದು ಕಾರಣವೆಂದರೆ ರಾಮಸೇತುವನ್ನು ಅಮೆಜಾನ್ ಪ್ರೈಮ್ ವಿಡಿಯೋ ಜಂಟಿಯಾಗಿ ನಿರ್ಮಿಸುತ್ತಿರುವುದು. ಆನ್‌ಲೈನ್‌ ಸ್ಟ್ರೀಮಿಂಗ್ ದೈತ್ಯ ಅಮೆಜಾನ್ ಪ್ರೈಮ್ ಕಳೆದ ತಿಂಗಳು ತನ್ನ ಮೆಗಾ ಈವೆಂಟ್ ಪ್ರೈಮ್ ವಿಡಿಯೋ ಪ್ರೆಸೆಂಟ್ಸ್‌ನಲ್ಲಿ ಈ ಚಿತ್ರದ ಮೊದಲ ಫೋಟೋವನ್ನು ಬಿಡುಗಡೆ ಮಾಡಿತ್ತು. ಆದಾಗ್ಯೂ, ರಾಮ್ ಸೇತು ಭಾರತದಲ್ಲಿ ಅಮೆಜಾನ್ ಸ್ಟುಡಿಯೋಸ್‌ನ ಮೊದಲ ಥಿಯೇಟ್ರಿಕಲ್ ಬಿಡುಗಡೆಯಾಗಿದೆ ಮತ್ತು ಅದು ಥಿಯೇಟರ್‌ಗಳಲ್ಲಿ  ಬಿಡುಗಡೆಯಾಗಿ ಓಡಿದ ನಂತರವಷ್ಟೇ  OTTಯಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿಕಟ ಮೂಲಗಳು ಹೇಳಿವೆ. 

click me!