ನನ್ನ ನಾಯಿಗೂ ವಿಮಾನದ ಟಿಕೆಟ್ ಮಾಡಿಸಿ ಎಂದು ನಿರ್ಮಾಪಕರಿಗೆ ಹೇಳಿದ್ರಂತೆ ರಶ್ಮಿಕಾ!

Published : Jun 24, 2022, 09:51 PM IST
ನನ್ನ ನಾಯಿಗೂ ವಿಮಾನದ ಟಿಕೆಟ್ ಮಾಡಿಸಿ ಎಂದು ನಿರ್ಮಾಪಕರಿಗೆ ಹೇಳಿದ್ರಂತೆ ರಶ್ಮಿಕಾ!

ಸಾರಾಂಶ

ಪುಷ್ಪಾ ನಟಿ ರಶ್ಮಿಕಾ ಮಂದಣ್ಣ ಅವರು ನಿರ್ಮಾಪಕರಿಂದ ತಮ್ಮ ಸಾಕು ನಾಯಿಗೆ ವಿಮಾನ ಟಿಕೆಟ್‌ಗೆ ಬೇಡಿಕೆಯಿಟ್ಟಿದ್ದಾರೆ ಎಂಬ ವರದಿಯ ಬಗ್ಗೆ ಟ್ವಿಟರ್ ನಲ್ಲಿ ಸ್ಪಷ್ಟನೆ ನೀಡಿದ್ದಾರೆ. ಅಷ್ಟಕ್ಕೂ ರಶ್ಮಿಕಾ ಮಂದಣ್ಣ ಇಂಥದ್ದೊಂದು ಬೇಡಿಕೆ ಇಟ್ಟಿದ್ದು ನಿಜವೇ?

ಬೆಂಗಳೂರು (ಜೂನ್ 24): ರಶ್ಮಿಕಾ ಮಂದಣ್ಣ (Rashmika Mandanna) ದಕ್ಷಿಣದಲ್ಲಿ ದೊಡ್ಡ ಹೆಸರು ಪಡೆದುಕೊಂಡಿರುವ ನಟಿ. ಆದರೆ, ಪುಷ್ಪಾ (Pushpa) ಚಿತ್ರದ ಮೂಲಕ ಪ್ಯಾನ್ ಇಂಡಿಯಾ (Pan India Star) ಸ್ಟಾರ್ ಕೂಡ ಆಗಿದ್ದಾರೆ. ಇತ್ತೀಚಿನ ತಮ್ಮ ಚಿತ್ರಗಳ ಅಭೂತಪೂರ್ವ ಯಶಸ್ಸಿನ ಕಾರಣದಿಂದಾಗಿ ಪ್ರಖ್ಯಾತಿಯಲ್ಲಿರುವ ರಶ್ಮಿಕಾ ಮಂದಣ್ಣ ಇತ್ತೀಚೆಗೆ ನಿರ್ಮಾಪಕರ ಬಳಿ ತಮ್ಮ ಸಾಕು ನಾಯಿಗೂ ವಿಮಾನದ ಟಿಕೆಟ್ ಮಾಡಿಸಿ ಎಂದು ಹೇಳಿದ್ದಾರೆ ಎಂದು ವರದಿಯಾಗಿತ್ತು.

ತಮ್ಮ ಮುಂದಿನ ಚಿತ್ರಗಳ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಮಂದಣ್ಣ, ತಮ್ಮ ಸಾಕು ನಾಯಿಯನ್ನೂ ತಮ್ಮೊಂದಿಗೆ ಕರೆದುಕೊಂಡು ಹೋಗುತ್ತಿದ್ದಾರೆ ಎಂದು ವರದಿಯಾಗಿತ್ತು. ತಮ್ಮೊಂದಿಗೆ ಒಂದೇ ವಿಮಾನದಲ್ಲಿ ನಾಯಿಯನ್ನು ಕರೆದುಕೊಂಡು ಹೋಗಲು ರಶ್ಮಿಕಾ ಬಯಸಿದ್ದು, ನಾಯಿಯ ಟಿಕೆಟ್ ಅನ್ನು ನಿರ್ಮಾಪಕರೇ ಭರಿಸಬೇಕೆಂದು ಬೇಡಿಕೆ ಇಟ್ಟಿದ್ದಾರೆ ಎಂದು ವರದಿಯಾಗಿತ್ತು. ಈ ಬಗ್ಗೆ ಸ್ವತಃ ರಶ್ಮಿಕಾ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.

ನಟಿ ಟ್ವೀಟ್ ಮಾಡಿದ್ದು, “ಹೇ.. ಕಮಾನ್.. ಇಷ್ಟೆಲ್ಲಾ ಇಲ್ಲ. ಔರಾ (ನಾಯಿಯ ಹೆಸರು) ನನ್ನೊಂದಿಗೆ ಪ್ರಯಾಣಿಸಬೇಕು ಎಂದು ನೀವು ಬಯಸಿದ್ದರೂ ಕೂಡ, ಆಕೆ ನನ್ನೊಂದಿಗೆ ಪ್ರಯಾಣ ಮಾಡಲು ಇಷ್ಟ ಪಡೋದಿಲ್ಲ. ಆಕೆ ಹೈದರಾಬಾದ್‌ನಲ್ಲಿಯೇ ಖುಷಿಯಾಗಿದ್ದಾಳೆ. ನಿಮ್ಮ ಕಾಳಜಿಗೆ ತುಂಬಾ ಥ್ಯಾಂಕ್ಸ್' ಎಂದು ಪ್ರತಿಕ್ರಿಯೆ ನೀಡಿದ್ದಾರೆ. 

ಕೊನೆಗೆ ಇದೇ ಟ್ವೀಟ್‌ಗೆ ಮತ್ತೊಂದು ಟ್ವೀಟ್‌ ಅನ್ನು ರಶ್ಮಿಕಾ ಸೇರಿಸಿದ್ದು, "ಕ್ಷಮಿಸಿ, ಆದರೆ, ಈ ಸುದ್ದಿ ನನ್ನ ದಿನವನ್ನು ಉಲ್ಲಾಸವನ್ನಾಗಿ ಮಾಡಿದೆ. ನನಗೆ ನಗು ತಡೆಯಲು ಈಗಲೂ ಸಾಧ್ಯವಾಗುತ್ತಿಲ್ಲ' ಎಂದು ಬರೆದುಕೊಂಡಿದ್ದಾರೆ. ಸಿನಿಮಾ ತಾರೆಯರ ಬಗ್ಗೆ ಇಂಥ ಗಾಸಿಪ್ ಹಾಗೂ ಸುದ್ದಿಗಳು ಸಾಮಾನ್ಯವಾಗಿ ಬರುತ್ತಿರುತ್ತವೆ. ಇದು ಹೊಸದೇನೂ ಅಲ್ಲ. ಬಹುತೇಕರು ಇದರ ಬಗ್ಗೆ ಯಾವುದೇ ಕಾಮೆಂಟ್ ಮಾಡದೇ ಮೌನವಾಗಿರಲು ಬಯಸುತ್ತಾರೆ. ಇನ್ನು ಕೆಲವರು ರಶ್ಮಿಕಾ ರೀತಿ ಪ್ರತಿಕ್ರಿಯೆ ನೀಡುತ್ತಾರೆ.

ಅಲ್ಲು ಅರ್ಜುನ್ 'ಪುಷ್ಪ-2'ನಲ್ಲಿ ಫಾರಿನ್ ಹಿರೋಯಿನ್; ರಶ್ಮಿಕಾ ಕಥೆಯೇನು?

ಇನ್ನು ರಶ್ಮಿಕಾ ಮಂದಣ್ಣ ಚಿತ್ರದ ಬಗ್ಗೆ ಮಾತನಾಡುವುದಾದರೆ, ಕೆಲವೊಂದು ವಿಭಿನ್ನ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ತೆಲುಗು ಭಾಷೆಯಲ್ಲಿ ಸೀತಾ ರಾಮನ್, ಪುಷ್ಪಾ: ದ ರೂಲ್, ತಮಿಳು ಭಾಷೆಯಲ್ಲಿ ವಾರಿಸು ಹಾಗೂ ಹಿಂದಿನಲ್ಲಿ ಮಿಷನ್ ಮಜ್ನು, ಗುಡ್‌ ಬೈ ಹಾಗೂ ಎನಿಮಲ್ ನಲ್ಲಿ ನಟಿಸುತ್ತಿದ್ದಾರೆ.

ಸಲ್ಮಾನ್‌ ಖಾನ್‌ 'ನೋ ಎಂಟ್ರಿ' ಗೆ ಎಂಟ್ರಿ ಕೊಡ್ತಾರಂತೆ ರಶ್ಮಿಕಾ ಮಂದಣ್ಣ..!

ಸಿದ್ಧಾರ್ಥ್ ಮಲ್ಹೋತ್ರಾ ಜೊತೆಯಾಗಿ ನಟಿಸುತ್ತಿರುವ ಮಿಷನ್ ಮಜ್ನು ಚಿತ್ರದ ಮೂಲಕ ರಶ್ಮಿಕಾ ಅವರ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲಿದ್ದಾರೆ. ಚಿತ್ರ ಇದೇ ತಿಂಗಳು ಬಿಡುಗಡೆಯಾಗಬೇಕಿತ್ತು, ಆದರೆ ಅದನ್ನು ಮುಂದೂಡಲಾಗಿದೆ ಮತ್ತು ಹೊಸ ಬಿಡುಗಡೆ ದಿನಾಂಕವನ್ನು ಇನ್ನೂ ಘೋಷಣೆ ಮಾಡಿಲ್ಲ. ಈ ನಡುವೆ ಪುಷ್ಪಾ 2 ಈ ವರ್ಷದ ಆಗಸ್ಟ್‌ನಲ್ಲಿ  ಚಿತ್ರೀಕರಣ ಆರಂಭವಾಗಲಿದೆ ಎಂದು ವರದಿಯಾಗಿದೆ ಮತ್ತು ರಶ್ಮಿಕಾ ಅವರ ಅಭಿಮಾನಿಗಳು ಅವರನ್ನು ಮತ್ತೆ ದೊಡ್ಡ ಪರದೆಯಲ್ಲಿ ಶ್ರೀವಲ್ಲಿಯಾಗಿ ವೀಕ್ಷಿಸಲು ಉತ್ಸುಕರಾಗಿದ್ದಾರೆ. ಗುಡ್‌ಬೈ ಚಿತ್ರ ಕೂಡ ಈ ವರ್ಷ ಬಿಡುಗಡೆಯಾಗಲಿದೆ, ಆದರೆ ತಯಾರಕರು ಇನ್ನೂ ಬಿಡುಗಡೆಯ ದಿನಾಂಕವನ್ನು ಘೋಷಿಸಿಲ್ಲ. ಈ ನಡುವೆ ಸೀತಾ ರಾಮನ್ ಈ ವರ್ಷದ ಆಗಸ್ಟ್‌ನಲ್ಲಿ ಬಿಡುಗಡೆಯಾಗಲಿದೆ. ಪುಷ್ಪ 2, ಅನಿಮಲ್ ಮತ್ತು ವರಿಸು 2023 ರಲ್ಲಿ ಬಿಡುಗಡೆಯಾಗಲಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?