
ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಖ್ಯಾತ ನೃತ್ಯ ನಿರ್ದೇಶಕ (Choreographer) ಗಣೇಶ್ ಆಚಾರ್ಯ(Ganesh Acharya) ಅವರಿಗೆ ಜಾಮೀನು ಸಿಕ್ಕಿದೆ (granted bail). ಮುಂಬೈನ ಮೆಜೆಸ್ಟ್ರೇಟ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಗಣೇಶ್ ಆಚಾರ್ಯ ವಿರುದ್ಧ 2020 ರಲ್ಲಿ ಅವರ ಸಹ ನೃತ್ಯಗಾರ್ತಿಯೊಬ್ಬರು ಲೈಂಗಿಕ ದೌರ್ಜನ್ಯದ ಆರೋಪ (sexual harassment case) ಹೊರಿಸಿ ಅಂಬೋಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. 2009-10ರಲ್ಲಿ ಗಣೇಶ್ ಆಚಾರ್ಯ ತನ್ನನ್ನು ಅವರ ಕಚೇರಿಯಲ್ಲಿ ಭೇಟಿಯಾಗುವಂತೆ ಹೇಳಿದ್ದರು.
ಭೇಟಿಯಾಗಲು ಹೋದಾಗಲೆಲ್ಲ ಅಶ್ಲೀಲ ವಿಡಿಯೋಗಳನ್ನು ನೋಡುವಂತೆ ಒತ್ತಾಯಸುತ್ತಿದ್ದ ಎಂದು ದೂರುದಾರೆ ಗಂಭೀರ ಆರೋಪ ಮಾಡಿದ್ದರು. 2022 ಏಪ್ರಿಲ್ ನಲ್ಲಿ ಮುಂಬೈ ಪೊಲೀಸರ್ ಗಣೇಶ್ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು.
ಆದರೆ ಈ ಪ್ರಕರಣದಲ್ಲಿ ಗಣೇಶ್ ಆಚಾರ್ಯ ಅವರನ್ನು ಇದುವರೆಗೂ ಬಂಧಿಸಿಲ್ಲ. ಗುರುವಾಗ (ಜೂನ್ 23) ಗಣೇಶ್ ಆಚಾರ್ಯ ಅವರನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ಜಾಮೀನು ಮಂಜೂರು ಮಾಡಲಾಗಿದೆ.
ಲೈಂಗಿಕ ಕಿರುಕುಳ ಆರೋಪ; 'ಹೂ ಅಂತೀಯಾ ಮಾವ..' ಹಾಡಿನ ನೃತ್ಯ ನಿರ್ದೇಶಕನ ವಿರುದ್ಧ ಚಾರ್ಜ್ ಶೀಟ್
ಗಣೇಶ್ ವಿರುದ್ಧ ಗಂಭೀರ ಆರೋಪ ಮಾಡಿದ್ದ ಸಹ ನೃತ್ಯಗಾರ್ತಿ
2020ರಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ ಮಹಿಳೆ, ಗಣೇಶ್ ಆಚಾರ್ಯ ಆಕೆಯನ್ನು ಕೆಟ್ಟ ರೀತಿಯಲ್ಲಿ ಮುಟ್ಟಿದ್ದಾಗಿ, ನೀಲಿ ಚಿತ್ರಗಳನ್ನು ಬಲವಂತದಿಂದ ತೋರಿಸುತ್ತಿದ್ದರು ಎಂದು ಹೇಳಿದ್ದರು. 2019 ರಲ್ಲಿ ತನ್ನ ಜೊತೆ ಲೈಂಗಿಕ ಸಂಪರ್ಕ ಬೆಳೆಸುವಂತೆ ಗಣೇಶ್ ಆಚಾರ್ಯ ಆ ನೃತ್ಯಗಾರ್ತಿಯನ್ನು ಕೇಳಿರುವುದಾಗಿ ನೃತ್ಯಗಾರ್ತಿ ಆರೋಪ ಮಾಡಿದ್ದರು. ಸಿನಿಮಾ ಇಂಡಸ್ಟ್ರಿಯಲ್ಲಿ ಬೆಳೆಯಬೇಕೆಂದರೆ ಇದನ್ನೆಲ್ಲಾ ಮಾಡಬೇಕು ಎಂದು ಗಣೇಶ್ ಆಚಾರ್ಯ ಹೇಳಿದ್ದರು ಎಂದು ಾರೋಪ ಮಾಡಿದ್ದರು.
ಇಷ್ಟೇ ಅಲ್ಲದೆ, 'ಗಣೇಶ್ ಆಚಾರ್ಯರ ಸಹಾಯಕಿಯರು ನನ್ನನ್ನು ಹಿಗ್ಗಾ ಮುಗ್ಗಾ ಹೊಡೆದಿದ್ದರು. ಅವಾಚ್ಯವಾಗಿ ನಿಂದಿಸಿದರು. ನಂತರ ನಾನು ಪೊಲೀಸ್ ಠಾಣೆಗೆ ಹೋದಾಗ ಸಹ ನನ್ನ ದೂರನ್ನು ಸೂಕ್ತ ರೀತಿಯಲ್ಲಿ ಪೊಲೀಸರು ಸ್ವೀಕರಿಸಲಿಲ್ಲ. ಬಳಿಕ ನಾನು ವಕೀಲರ ಸಹಾಯದಿಂದ ಪ್ರಕರಣ ದಾಖಲಿಸಿದೆ' ಎಂದು ನೃತ್ಯಗಾರ್ತಿ ಆರೋಪಿಸಿದ್ದಾರೆ. 'ಗಣೇಶ್ ಆಚಾರ್ಯ ಬೇಡಿಕೆಗೆ ನಾನು ಒಪ್ಪದೇ ಹೋದಾಗ, ಭಾರತೀಯ ಸಿನಿಮಾ ಮತ್ತು ಟಿವಿ ಕೊರಿಯೋಗ್ರಾಫರ್ ಸಂಘದಿಂದ ನನ್ನನ್ನು ತೆಗೆದು ಹಾಕಲಾಯಿತು. ನನಗೆ ಬೆದರಿಕೆಗಳನ್ನು ಸಹ ಹಾಕಲಾಯಿತು' ಎಂದು ನೃತ್ಯಗಾರ್ತಿ ದೂರಿನಲ್ಲಿ ಉಲ್ಲೇಖಿಸಿದ್ದರು.
'Pushpa' ಊ ಅಂಟಾವ ಹಾಡಿಗ ಗಣೇಶ್ ಆಚಾರ್ಯ ಡ್ಯಾನ್ಸ್ ವೈರಲ್!
1992 ರಿಂದಲೂ ಗಣೇಶ್ ಆಚಾರ್ಯ ಸಿನಿಮಾಗಳಿಗೆ ನೃತ್ಯ ನಿರ್ದೇಶನ ಮಾಡುತ್ತಿದ್ದಾರೆ. ಬಾಲಿವುಡ್‌ನ ಬಹುತೇಕ ಎಲ್ಲಾ ಸ್ಟಾರ್ ನಟರು, ಈಗಿನ ಯುವ ನಟರೊಟ್ಟಿಗೆ ಗಣೇಶ್ ಆಚಾರ್ಯ ಕೆಲಸ ಮಾಡಿದ್ದಾರೆ. ಗಣೇಶ್ ಆಚಾರ್ಯ ನೃತ್ಯ ನಿರ್ದೇಶಿಸಿರುವ 'ಪುಷ್ಪ' ಸಿನಿಮಾದ ಹಾಡುಗಳು, ಸ್ಟೆಪ್ಪುಗಳು ಸಖತ್ ಫೇಮಸ್ ಆಗಿವೆ. ನೃತ್ಯ ನಿರ್ದೇಶಕ ಮಾತ್ರವೇ ಅಲ್ಲದೆ ನಟನಾಗಿಯೂ ಹಲವು ಸಿನಿಮಾಗಳಲ್ಲಿ ಗಣೇಶ್ ಆಚಾರ್ಯ ನಟಿಸಿದ್ದಾರೆ. ಕನ್ನಡದಲ್ಲಿ ಗಣೇಶ್ ಆಚಾರ್ಯ ಸುದೀಪ್ ನಟನೆಯ ಪೈಲ್ವಾನ್ ಸಿನಿಮಾಗೆ ನೃತ್ಯ ನಿರ್ದೇಶನ ಮಾಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.