ಮಾಜಿ ನೀಲಿ ಚಿತ್ರಗಳ ತಾರೆ ಮಿಯಾ ಖಲೀಫ್ ಹೊರಟೋದ್ರಾ... ಸೋಮವಾರ ಮುಂಜಾನೆದು ಫೇಸ್‌ಬುಕ್‌ನಲ್ಲಿ ಮಿಯಾ ಪ್ರೊಫೈಲ್‌ಗೆ ಹೋದವರು ಶಾಕ್‌ಗೆ ಒಳಗಾಗಿದ್ದರು. ಇದಕ್ಕೆ ಕಾರಣವಾಗಿದ್ದು, ಮೀಯಾಳ ಫೇಸ್‌ಬುಕ್ ಪ್ರೊಫೈಲ್ ಸ್ಮರಣಾರ್ಥ ಪೇಜ್ ಆಗಿ ಬದಲಾಗಿದ್ದು, 'ಮೀಯಾ ಖಲೀಫ್ (Mia Khalifa) ಅವರನ್ನು ನೆನಪಿಸಿಕೊಳ್ಳುತ್ತಾ... ಮಿಯಾ ಖಲೀಫಾ ಅವರನ್ನು ಪ್ರೀತಿಸುವ ಜನರು ಅವರ ಜೀವನವನ್ನು ನೆನಪಿಟ್ಟುಕೊಳ್ಳಲು ಮತ್ತು ಆಚರಿಸಲು ಅವರ ಪ್ರೊಫೈಲ್‌ಗೆ ಭೇಟಿ ನೀಡುವುದರಿಂದ ಆರಾಮವನ್ನು ಕಂಡುಕೊಳ್ಳುತ್ತಾರೆ ಎಂದು ನಾವು ಭಾವಿಸುತ್ತೇವೆ.' ಎಂದು ಮೀಯಾ ಫೇಸ್‌ಬುಕ್‌ನಲ್ಲಿ ಬರೆದಿತ್ತು.
ಇದನ್ನು ನೋಡಿದ ಅಭಿಮಾನಿಗಳಿಗೆ ಹಾಗಿದ್ದರೆ, ಮಾಜಿ ನೀಲಿ ಸಿನಿಮಾಗಳ ತಾರೆ ಮಿಯಾ ಖಲೀಫಾ ಸತ್ತಿದ್ದಾರೆಯೇ ಎಂಬ ಆಶ್ಚರ್ಯದ ಜೊತೆ ಬೇಸರ ಪಡುವಂತೆ ಮಾಡಿತು. ಇದಾದ ಬಳಿಕ ಮೀಯಾ ಖಲೀಫ್ ಟ್ವಿಟ್ ಮಾಡಿದ್ದು ತನಗೇನು ಆಗಿಲ್ಲ ತಾನು ಬದುಕಿದ್ದೇನೆ ಎಂದು ಹೇಳಿದ್ದಾರೆ.
ಪ್ರಪಂಚದಾದ್ಯಂತ ಜನಪ್ರಿಯ ಆಗಿರುವ ಮಿಯಾ ಖಲೀಫಾ ಮಾಜಿ ವಯಸ್ಕ ತಾರೆ, ಇವರು ಆಗಾಗ ತನ್ನ ಚಿತ್ರಗಳಿಗಾಗಿ ಅಥವಾ ವಿವಾದಗಳಿಂದಾಗಿ ಪಡ್ಡೆಗಳ ಗಮನವನ್ನು ಸೆಳೆಯುತ್ತಲೇ ಇರುತ್ತಾರೆ. ಆದರೆ ನಿನ್ನೆ ಆಕೆಯ ಅಧಿಕೃತ ಫೇಸ್‌ಬುಕ್ ಪುಟವು, ಆಕಸ್ಮಿಕವಾಗಿ 'ಮಿಯಾ ಖಲೀಫಾರನ್ನು ನೆನಪಿಸಿಕೊಳ್ಳುತ್ತಾ ಎಂಬ ಶೀರ್ಷಿಕೆಯ ಸ್ಮಾರಕ ಖಾತೆಯಾಗಿ ಬದಲಾಗಿದ್ದು, ಇದು ಅನೇಕರನ್ನು ಗೊಂದಲಕ್ಕೆ ತಳ್ಳಿತ್ತು. ಅಲ್ಲದೇ ಇದು ಆಕೆಯ ಎಫ್‌ಬಿ ಪೇಜ್‌ನ ಕವರ್ ಫೋಟೋವಾಗಿತ್ತು. ಇದರಿಂದ ಆಕೆಯ ಅಭಿಮಾನಿಗಳು ಆತಂಕಕ್ಕೊಳಗಾಗಿದ್ದಲ್ಲದೇ ಏನಾಯಿತು ಎಂಬ ಅಚ್ಚರಿಗೆ ಒಳಗಾದರೂ. ಜೊತೆಗೆ ಸಂತಾಪ ಸೂಚಕ ಸಂದೇಶಗಳನ್ನು ಕಳುಹಿಸಲು ಶುರು ಮಾಡಿದರು.
'ಸಮನಾದ ಸ್ತನ ಹೊಂದಿರದವರೇ ಸೌಂದರ್ಯವತಿಯರು' ಮಿಯಾ ಗುಟ್ಟು!
ಅಭಿಮಾನಿಗಳಿಂದ ಸಂತಾಪ ಸೂಚಕ ಸಂದೇಶ ಬರುವುದನ್ನು ತಿಳಿದ ಖಲೀಫಾ ಕೊನೆಗೆ ತಮ್ಮ ಅಧಿಕೃತ ಟ್ವಿಟರ್ ಖಾತೆಗೆ ತೆರಳಿ ನಾನು ಸತ್ತಿಲ್ಲ ಬದುಕಿದ್ದೇನೆ ಎಂದು ಪೋಸ್ಟ್ ಮಾಡುವ ಮೂಲಕ ತಮ್ಮ ಸಾವಿನ ಬಗೆಗಿನ ವದಂತಿಗಳನ್ನು ತಳ್ಳಿಹಾಕಿದರು. 4.2 ಮಿಲಿಯನ್ ಅನುಯಾಯಿಗಳನ್ನು ಹೊಂದಿರುವ ಮಿಯಾ, 1975 ರ ಚಲನಚಿತ್ರ 'ಮಾಂಟಿ ಪೈಥಾನ್ ಮತ್ತು ಹೋಲಿ ಗ್ರೇಲ್' ನ ದೃಶ್ಯದ ಫೋಟೋವೊಂದನ್ನು ಹಾಕಿ ನಾನು ಇನ್ನೂ ಸತ್ತಿಲ್ಲ! ನಾನು ಚೆನ್ನಾಗಿದ್ದೇನೆ ಎಂದು ಬರೆದು ಸಾವಿನ ವದಂತಿಗಳಿಗೆ ತೆರೆ ಎಳೆದರು.
ನೀಲಿತಾರೆ ಮಿಯಾ ಖಲೀಫಾಗೆ ವಿಶ್ ಮಾಡಿದ್ದ ಪಂಜಾಬ್ ಸ್ಪಿನ್ನರ್ ಬ್ರಾರ್ ಟ್ವೀಟ್ ವೈರಲ್..!
ಇದಾದ ತಕ್ಷಣ ಎಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಒಂದೆಡೆ, ಕೆಲವರು ಆಕೆಯ ಖಾತೆಯನ್ನು ಯಾರೋ ಹ್ಯಾಕ್ ಮಾಡಿರಬೇಕು ಎಂದು ಭಾವಿಸಿದರೆ, ಇತರರು ಫೇಸ್‌ಬುಕ್‌ನ ಮೇಲ್ವಿಚಾರಕರ ಅಜಾಗರೂಕತೆಯಿಂದ ಈ ರೀತಿಯಾಗಿದೆ ಎಂದರು. ವಯಸ್ಕ ಚಲನಚಿತ್ರೋದ್ಯಮವನ್ನು ತೊರೆದ ನಂತರ, ಮಿಯಾ ಕ್ರೀಡಾ ನಿರೂಪಕರಾಗಿಯೂ ಕೆಲಸ ಮಾಡಿದ್ದಾರೆ.