11 ವರ್ಷ ಪ್ರೀತಿ, ಮದುವೆ ನಂತರವೂ ಗಂಟೆಗಟ್ಟಲೆ ಫೋನ್‌ನಲ್ಲಿ ಮಾತನಾಡುತ್ತೇವೆ: Rajkummar Rao

Suvarna News   | Asianet News
Published : Feb 01, 2022, 12:04 PM ISTUpdated : Feb 01, 2022, 12:06 PM IST
11 ವರ್ಷ ಪ್ರೀತಿ, ಮದುವೆ ನಂತರವೂ ಗಂಟೆಗಟ್ಟಲೆ ಫೋನ್‌ನಲ್ಲಿ ಮಾತನಾಡುತ್ತೇವೆ:  Rajkummar Rao

ಸಾರಾಂಶ

ವೈಯಕ್ತಿಕ ವಿಚಾರಗಳ ಬಗ್ಗೆ ಎಂದೂ ಹಂಚಿಕೊಳ್ಳದ ನಟ ರಾಜಕುಮಾರ್ ರಾವ್‌ ಇದೀಗ ಮ್ಯಾರೇಜ್ ಲೈಫ್‌ ಹೇಗಿದೆ ಎಂದು ರಿವೀಲ್ ಮಾಡಿದ್ದಾರೆ.   

ಬಾಲಿವುಡ್‌ ಚಿತ್ರರಂಗದ ಸಿಂಪಲ್ ನಟ ರಾಜಕುಮಾರ್ ರಾವ್ (Rajkumar Rao) ನವೆಂಬರ್ 2021ರಲ್ಲಿ 11 ವರ್ಷಗಳ ಕಾಲ ಪ್ರೀತಿಸಿದ ಸ್ನೇಹಿತೆ ಪತ್ರಲೇಖಾ (Patralekhaa) ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆಗೂ ಒಂದು ವರ್ಷ ಮುನ್ನ ತಮ್ಮ ಪ್ರೀತಿ ವಿಚಾರವನ್ನು ರಾವ್ ಹಂಚಿಕೊಂಡಿದ್ದರು, ಸಿನಿಮಾ ಹೊರತು ಪಡಿಸಿ ಎಲ್ಲಾ ವಿಚಾರಗಳನ್ನು ತುಂಬಾನೇ ಖಾಸಗಿಯಾಗಿಡಲು ಇಷ್ಟ ಪಡುವ ವ್ಯಕ್ತಿ.  ಇದೀಗ ಮದುವೆ ಫೇಸ್‌ (Marriage Phase) ಬಗ್ಗೆ ಹಂಚಿಕೊಂಡಿದ್ದಾರೆ. 

ಪತ್ರಲೇಖಾ ಹಣೆಗೆ ಸಿಂಧೂರ (Sindoora) ಇಡುತ್ತಿರುವ ಫೋಟೋ ಹಂಚಿಕೊಂಡು 'ಕೊನೆಗೂ 11 ವರ್ಷದ ಪ್ರೀತಿ, ರೊಮ್ಯಾನ್ಸ್‌ ಸ್ನೇಹ ಮತ್ತು ಫನ್ ಎಂಜಾಯ್ ಮಾಡಿದ ಗೆಳತಿ ಜೊತೆ ಇಂದು ಮದುವೆ ಆಗಿರುವೆ. ಆಕೆ ನನ್ನ ಸೋಲ್‌ಮೇಟ್, ನನ್ನ ಬೆಸ್ಟ್‌ ಫ್ರೆಂಡ್ ಈಗ ಫ್ಯಾಮಿಲಿ ಅಗಿದ್ದಾಳೆ. ನೀನು ನನ್ನನ್ನು ಪತಿ ಎಂದು ಕರೆಯುವುದಕ್ಕಿಂತ ದೊಡ್ಡ ಸಂತೋಷ ಜೀವನದಲ್ಲಿ ಏನಿಲ್ಲ' ಎಂದು ರಾಜ್‌ಕುಮಾರ್ ಬರೆದುಕೊಂಡಿದ್ದಾರೆ. 

 

Rajkumar Rao and Patralekha Wedding: ಹನಿಮೂನ್‌ ಹೋಗುವ ಬದಲು ಮುಂಬೈ ಬಂದ ನವ ದಂಪತಿ!

ರಾಜ್‌ಕುಮಾರ್ ಮಾತು:

'ನನ್ನ ಬೆಸ್ಟ್‌ಫ್ರೆಂಡ್ (Bestfriend), ನನ್ನ ಲವ್‌ ಆಫ್‌ ಮೈ ಲೈಫ್‌, ನಮ್ಮ ಫ್ಯಾಮಿಲಿ ಎಲ್ಲವೂ ಆಕೆ. ನಮ್ಮ ಮದುವೆಯಾಗಿ ಎರಡು ತಿಂಗಳುಗಳು ಕಳೆದಿದೆ. ಇದೊಂದು ಬ್ಯೂಟಿಫುಲ್ ಫೀಲಿಂಗ್. ನಾವು ವರ್ಷಗಳಿಂದ ಜೊತೆಗಿದ್ದೀವಿ. ನಾನು ಚಿತ್ರೀಕರಣದಲ್ಲಿ ಬ್ಯುಸಿಯಾಗಿರುತ್ತೇನೆ. ಆಕೆಯೂ ಶೂಟಿಂಗ್‌ಗೆಂದು (Film shooting) ಹೊರಗಡೆ ಹೋಗುತ್ತಿದ್ದಳು. ಕೊರೋನಾ ಲಾಕ್‌ಡೌನ್‌ನಿಂದ (Covid19 lockdown) ನಾವು ಕಳೆದು ಎರಡು ವರ್ಷಗಳಿಂದ ಒಟ್ಟಿಗೆ ಸಮಯ ಕಳೆಯುವುದಕ್ಕೆ ಅವಕಾಶ ಸಿಗ್ತು. ಆ ಕ್ಷಣದಲ್ಲಿ ನಮಗೆ ಅನಿಸಿದ್ದು, ಒಹ್, ನಾನು ಒಟ್ಟಿಗೆ ಜೀವನ ಮಾಡಬಹುದು ಮದುವೆ ಆಗೋಣ ಎಂದು ನಿರ್ಧಾರ ಮಾಡಿಕೊಂಡೆವು' ಎಂದು ರಾಜ್‌ಕುಮಾರ್ ಟೈಮ್ಸ್‌ ಆಫ್‌ ಇಂಡಿಯಾ ಜೊತೆ ಮಾತನಾಡಿದ್ದಾರೆ. 

'ನಾನು ಜೀವನ ನೋಡುವ ರೀತಿ subconcious ಲೇವೆಲ್‌ನಲ್ಲಿ ಬದಲಾಗಿದೆ. ಈಗ ನಾನು ಸಂಪೂರ್ಣ ವ್ಯಕ್ತಿ ಎನಿಸುತ್ತಿದೆ. ನಾವು ಗಂಡ ಹೆಂಡತಿ ಆಗಿದ್ದೀವಿ ಅನ್ನುವ ಕಾನ್ಸೆಪ್ಟ್‌ಗೆ ಈಗ ಬಂದಿದ್ದೀವಿ ನಾನು ಆಕೆಯನ್ನು ವೈಫ್‌ ಎಂದು ಕರೆಯಬಹುದು ಕಾಲೆಳೆಯಬಹುದು. ಇತ್ತೀಚಿಗೆ ಪತ್ರಲೇಖ ಹೇಳಿದ್ದು ನಿಜ, ಒಬ್ಬನೇ ಸಿನಿಮಾ ನೋಡುವುದು ಪಾನಿ ಪೂರಿ (Pani puri) ತಿನ್ನುವ ಅಭ್ಯಾಸ ನನಗಿದೆ. ಪತ್ರ ಚಿತ್ರೀಕರಣದಲ್ಲಿ ಅಥವಾ ಹೊರಗಡೆ ಹೋಗಿದ್ದಾಗ ನಾನು ಹೀಗೆ ಮಾಡುವುದು. ಇತ್ತೀಚಿಗೆ Lucknow ನಲ್ಲಿ ಚಿತ್ರೀಕರಣ ಮಾಡುವಾಗ ನಾನು ಒಬ್ಬನೇ ಹೋಗಿ ಸಿನಿಮಾ ನೋಡಿಕೊಂಡು ಬಂದೆ. ಹೀಗೆ ಮಾಡುವುದಕ್ಕೆ ನನಗೆ ತುಂಬಾನೇ ಇಷ್ಟ.' ಎಂದು ರಾಜ್‌ಕುಮಾರ್ ಹೇಳಿದ್ದಾರೆ. 

Rajkumar Wedding: ಈ ಪತ್ರಲೇಖಾ ಯಾರು?

' ನಾವು ಆರಂಭದಲ್ಲಿ ಹೇಗಿದ್ವಿ ಈಗಲೂ ಹಾಗೇ ಇದ್ದೀವಿ. ನಮ್ಮ ಸಿನಿಮಾ ಚಿತ್ರೀಕರಣ ಇದ್ದರೂ ಸಹ ಸಮಯ ಮಾಡಿಕೊಂಡು ಹೆಚ್ಚಿಗೆ ಮಾತನಾಡುತ್ತೇವೆ. ಅದು ತುಂಬಾ ಸಮಯ ಮಾತನಾಡುತ್ತೇವೆ. ಥ್ಯಾಂಕ್ಸ್‌ ಟು ಟೆಕ್ನಾಲಜಿ (Technology) ನಾವು ವಿಡಿಯೋ ಕಾಲ್‌ (Video call) ಮೂಲಕ ಕನೆಕ್ಟ್‌ ಆಗುತ್ತೇವೆ. ನನಗೆ ತುಂಬಾ ಜನರು ಹೇಳಿದ್ದಾರೆ ಪ್ರೀತಿಯಲ್ಲಿ ಬಿದ್ದ ಮೊದಲೆರಡು ವರ್ಷ ಮಾತ್ರ ಹೆಚ್ಚಿಗೆ ಮಾತನಾಡುತ್ತೇವೆ 11 ವರ್ಷ ಪ್ರೀತಿ ಮಾಡಿದರೆ ಏನೂ ಇರುವುದಿಲ್ಲ ಎಂದು. ಬೇರೆ ಅವರ ಬಗ್ಗೆ ಗೊತ್ತಿಲ್ಲ ಆದರೆ ನಮ್ಮ ವಿಚಾರದಲ್ಲಿ ಅದು ಸುಳ್ಳು. ನಾವು ಹೆಚ್ಚಿಗೆ ಮಾತನಾಡಲು ಶುರು ಮಾಡಿದ್ದೇವೆ. ನಮಗೆ ಮಾತನಾಡಲು ಸಾಕಷ್ಟು ವಿಚಾರಗಳು ಇರುತ್ತದೆ' ಎಂದಿದ್ದಾರೆ ರಾಜ್‌ಕುಮಾರ್ ರಾವ್.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?