
ಇತ್ತೀಚಿನ ದಿನಗಳಲ್ಲಿ ಸಿನಿಮಾ ಸೆಲೆಬ್ರಿಟಿಗಳು ಸೋಷಿಯಲ್ ಮಿಡಿಯಾದಲ್ಲಿ (Social media) ಆಕ್ಟೀವ್ ಆಗಿರುವ ಕಾರಣ ಅವರ ಫೋಟೋಗಳನ್ನು ಯಾರು ಬಳಸುತ್ತಾರೆ, ಎಲ್ಲಿಂದ ವೈರಲ್ ಆಗುತ್ತಿದೆ ಎಂದು ಸುಲಭವಾಗಿ ತಿಳಿದುಕೊಳ್ಳಬಹುದು. ಕೆಲವೊಂದು ಫೋಟೋಗಳನ್ನು ಸಾಂದರ್ಭಿಕವಾಗಿಯೂ ಬಳಸಲಾಗುತ್ತದೆ. ಹೇರ್‌ಕಟ್ ಅಂಗಡಿಯಲ್ಲಿ, ಬೇಕರಿಯಲ್ಲಿ, ಆಟೋ ಮತ್ತು ಬಸ್‌ಗಳ ಮೇಲೆ, ಪುಸ್ತಕಗಳಲ್ಲಿ ಹೀಗಾಗೆ ನೂರಾರು ಕಡೆ ನೋಡಬಹುದು. ಇದೀಗ ಮಲಯಾಳಂ ನಟ ತಮ್ಮ ಫೋಟೋ ಹೀಗೆ ಬಳಸಿಕೊಳ್ಳಲಾಗಿದೆ ಎಂದು ವಿಭಿನ್ನವಾಗಿ ಹಂಚಿಕೊಂಡಿದ್ದಾರೆ.
1997ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ನಟ ಕುಂಚಾಕೋ ಬೋಬನ್ (Kunchacko Boban) ನೂರಾರು ಸಿನಿಮಾಗಳು ಮತ್ತು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. 28ಕ್ಕೂ ಹೆಚ್ಚು ಬೆಸ್ಟ್ ನಟ ಪ್ರಶಸ್ತಿಯನ್ನು (Best Actor Award) ಗಿಟ್ಟಿಸಿಕೊಂಡಿದ್ದಾರೆ. ಹೀಗೆ ವಿಭಿನ್ನ ಪಾತ್ರಗಳಲ್ಲಿ ಮಿಂಚಿರುವ ಕುಂಚಾಕೋ ಬೋಬನ್ ಫೋಟೋವನ್ನು ಕರ್ನಾಟಕದ ಪುಸ್ತಕವೊಂದರಲ್ಲಿ ಬಳಸಲಾಗಿದೆ. ಅದುವೇ ಪೋಸ್ಟ್ ಮ್ಯಾನ್ ಆಗಿ ಎಂಬುದು ವಿಶೇಷ.
ಕುಂಚಾಕೋ ಬೋಬನ್ ಮಾತು:
'ಕೊನೆಗೂ ಕರ್ನಾಟಕದಲ್ಲಿ ಸರ್ಕಾರಿ (Karnataka Government) ಕೆಲಸ ಗಿಟ್ಟಿಸಿಕೊಂಡಿರುವೆ. ನಮ್ಮ ಪಾತ್ರ ಆದಷ್ಟು ಬೇಗ ನಮಗೆ ಸಿಗಲಿ ಎಂದು ಪೋಸ್ಟ್‌ಮ್ಯಾನ್‌ಗಾಗಿ (Postman) ಪ್ರಾರ್ಥನೆ ಮಾಡುತ್ತಿದ್ದ ದಿನಗಳು ಆಗಿನ ಕಾಲವಾಯ್ತು' ಎಂದು ಬರೆದುಕೊಂಡಿದ್ದಾರೆ. ನೀಲಿ ಬಣ್ಣದ ಶರ್ಟ್ ಧರಿಸಿ ಅಂಚೆ ಬ್ಯಾಗ್ ಹಾಕಿಕೊಂಡು ಕುಂಚಾಕೋ ಬೋಬನ್ ಪೋಸ್ಟ್ ಹಿಡಿದುಕೊಂಡಿದ್ದಾರೆ. ತಮ್ಮ ಚಿತ್ರದ ಮೇಲೆ ಸರ್ಕಲ್‌ನಲ್ಲಿ ಮಾರ್ಕ್ ಮಾಡಿದ್ದಾರೆ. 2010 ರಲ್ಲಿ ಬಿಡುಗಡೆಯಾದ ಒರಿದತ್ತೋರು ಪೋಸ್ಟ್ಮ್ಯಾನ್ ಸಿನಿಮಾದಲ್ಲಿ ಕುಂಚಾಕೋ ಬೋಬನ್ ಹಳ್ಳಿ ಪೋಸ್ಟ್‌ಮ್ಯಾನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾದ ಫೋಟೋ ಇದು ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.
ಕುಂಚಾಕೋ ಬೋಬನ್ ಹಂಚಿಕೊಂಡಿರುವ ಈ ಫೋಟೋಗೆ ಸಿನಿ ಸ್ನೇಹಿತರಿಂದ ಫನ್ನಿಯಾಗಿ ಪ್ರತಿಕ್ರಿಯೆ ಸಿಕ್ಕಿದೆ. 'ನಿಮ್ಮ ಹೊಸ ಕೆಲಸ ಶುರು ಮಾಡುವುದಕ್ಕೆ ನಾವು ರಜೆ ಕೊಡುವುದಿಲ್ಲ. ನಾನು ಆಗಲೇ ಸ್ಕ್ರಿಪ್ಟ್ ಬರೆಯುವುದಕ್ಕೆ ಶುರು ಮಾಡಿರುವೆ. ನೀವು ಬಿಡುವು ಮಾಡಿಕೊಂಡು ನನಗೆ ರಾಜು ನಂಬರ್ ಕಳುಹಿಸಿ' ಎಂದು ನಿರ್ದೇಶಕ ಮಿಧುನ್ ಮ್ಯಾನುಯೆಲ್ ಥಾಮಸ್ ಕಾಮೆಂಟ್ ಮಾಡಿದ್ದಾರೆ.
ಕುಂಚಾಕೋ ಬೋಬನ್ ನಟನೆಯ ಭೀಮಂತೆ ವಝಿ ಸಿನಿಮಾ ಮಿಶ್ರ ಅಭಿಪ್ರಾಯ ಪಡೆದುಕೊಂಡಿತ್ತು. ಇದೊಂದು ಕಾಮಿಡಿ ಸಿನಿಮಾ ಆಗಿದ್ದು ನಿರ್ಮಾಪಕರಿಗೆ ಹಾಕಿದ ಬಂಡವಾಳ ಸಿಕ್ಕಿದೆ. ಇನ್ನು ಪಾದಾ, ರೆಂಡಗಂ,ಪಕಲುಂ ಪತಿರಾವನ್ ಮತ್ತು ಅರಿಯಿಪ್ಪು ಸಿನಿಮಾ ಕೆಲಸಗಳು ನಡೆಯುತ್ತಿದೆ.
ಕುಂಚಾಕೋ ಬೋಬನ್ ಮದುವೆ:
ಕುಂಚಾಕೋ ಬೋಬನ್ ಯಾರನ್ನ ಮದುವೆ ಆಗಿದ್ದಾರೆ ಎಂದು ಕೇಳಿದರೆ ನಿಮಗೆ ಶಾಕ್ ಆಗಬಹುದು ಆದರೆ ಇದು ಸತ್ಯವೇ. ತಮ್ಮ ಬಿಗ್ ಬಿಗ್ ಬಿಗ್ ಫ್ಯಾನ್ ಆಗಿದ್ದ ಪ್ರಿಯಾ ಅವರನ್ನು ಮದುವೆ (Marriage) ಆಗಿದ್ದಾರೆ. ಪ್ರೀತಿ ಮೇಲೆ ನಂಬಿಕೆ ಇಲ್ಲದವರೂ ಕೂಡ ಕುಂಚಾಕೋ ಬೋಬನ್ ಸಿನಿಮಾ ನೋಡಿದರೆ ಲವ್ ಮಾಡಲು ಶುರು ಮಾಡುತ್ತಿದ್ದರು. 90-2000ರ ದಶಕದ ಹೆಣ್ಣು ಮಕ್ಕಳಿಗೆ ಕುಂಚಾಕೋ ಬೋಬನ್ ಅಂದ್ರೆ ಸಿಕ್ಕಾಪಟ್ಟೆ ಕ್ರೇಜಿತ್ತು, ದಿನಕ್ಕೆ ನೂರಾರು ಪ್ರೇಮ ಪತ್ರಗಳನ್ನು (Love Letter) ಬರೆಯುತ್ತಿದ್ದರು. ಆದರೆ ಅಷ್ಟು ಜನರ ನಡುವೆ ಪ್ರಿಯಾ ಮಾತ್ರ ಕುಂಚಾಕೋ ಬೋಬನ್ ಗಮನ ಸೆಳೆದಿದ್ದು.
ಕುಂಚಾಕೋ ಬೋಬನ್ ಬಳಿ ಆಟೋಗ್ರಾಫ್ (Autograph) ಪಡೆಯಲು ಪ್ರಿಯಾ ಮತ್ತು ಸ್ನೇಹಿತರು ಆಗಮಿಸಿದ್ದರು ಇದೇ ಅವರ ಮೊದಲ ಭೇಟಿ. ಆ ನಂತರ ಪ್ರಿಯಾ ಅವರು ಪತ್ರ ಬರೆಯುತ್ತಿದ್ದರು ಸ್ನೇಹ ಬೆಳೆದು ಪ್ರೀತಿ ಹುಟ್ಟಿ ಮದುವೆ ಆಗಿ ಈಗ ಮಕ್ಕಳಿದ್ದಾರೆ. 1999ರಲ್ಲಿ ಪ್ರೇಮಿಗಳ ದಿನದಂದು ಪ್ರಿಯಾ (Priya) ಬರೆದ ಪತ್ರವನ್ನು ಕೆಲವು ದಿನಗಳ ಹಿಂದೆ ಕುಂಚಾಕೋ ಬೋಬನ್ ಹಂಚಿಕೊಂಡು 'ಈ ಹುಡುಗಿ ನನ್ನ ವ್ಯಾಲೆಂಟೈನ್ ಅಂದು ಇಂದು ಎಂದೆಂದಿಗೂ. ನನಗೆ ಬರುತ್ತಿದ್ದ ಲವ್ ಲೆಟರ್ ಬಗ್ಗೆ ಜನರು ಕೇಳುತ್ತಿದ್ದರು. ಹೌದು ನಾನು ಪ್ರತಿಕ್ರಿಯೆ ಕೊಡುತ್ತಿದದ್ದು ಪ್ರಿಯಾಗೆ ಮಾತ್ರ' ಎಂದು ಬರೆದುಕೊಂಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.