KGF 2 Twitter Review; ರಾಕಿ ಭಾಯ್ ನೋಡಿ ಹಾಡಿಹೊಗಳಿದ ಪ್ರೇಕ್ಷಕರು

Published : Apr 14, 2022, 12:04 PM ISTUpdated : Apr 14, 2022, 12:19 PM IST
KGF 2 Twitter Review; ರಾಕಿ ಭಾಯ್ ನೋಡಿ ಹಾಡಿಹೊಗಳಿದ ಪ್ರೇಕ್ಷಕರು

ಸಾರಾಂಶ

ಸಿನಿ ಪ್ರಿಯರು ಭಾರಿ ಕುತೂಹಲದಿಂದ ಕಾಯುತ್ತಿದ್ದ ಬಹುನಿರೀಕ್ಷೆಯ ಕೆಜಿಎಫ್ 2 (KGF 2) ಸಿನಿಮಾ ಅದ್ದೂರಿಯಾಗಿ ಬಿಡುಗಡೆಯಾಗಿದೆ. ಎಲ್ಲಾ ಭಾಷೆಯ ಪ್ರೇಕ್ಷಕರು ಸಿನಿಮಾ ನೋಡಿ ಹಾಡಿಹೊಗಳಿದ್ದಾರೆ. ಸಿನಿಮಾ ವೀಕ್ಷಿಸಿದ ಪ್ರೇಕ್ಷಕರು ಟ್ವಿಟ್ಟರ್ ನಲ್ಲಿ ಹಾಡಿಹೊಗಳಿದ್ದಾರೆ. 

ಸಿನಿ ಪ್ರಿಯರು ಭಾರಿ ಕುತೂಹಲದಿಂದ ಕಾಯುತ್ತಿದ್ದ ಬಹುನಿರೀಕ್ಷೆಯ ಕೆಜಿಎಫ್ 2 (KGF 2) ಸಿನಿಮಾ ಅದ್ದೂರಿಯಾಗಿ ಬಿಡುಗಡೆಯಾಗಿದೆ. ವಿಶ್ವದಾದ್ಯಂತ 12ಸಾವಿರಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ಕೆಜಿಎಫ್-2 ರಾರಾಜಿಸುತ್ತಿದೆ. ಏಪ್ರಿಲ್ 14ರಂದು ತೆರೆಗೆ ಬಂದ ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ನೋಡಿ ಕಣ್ತುಂಬಿಕೊಂಡಿದ್ದಾರೆ. ಇಂದು ಬೆಳ್ಳಂಬೆಳಗ್ಗೆಯೇ ಅಭಿಮಾನಿಗಳು ಮತ್ತು ಸಿನಿಮಾ ಗಣ್ಯರು ಚಿತ್ರ ವೀಕ್ಷಿಸಿ ಖುಷಿ ಪಟ್ಟಿದ್ದಾರೆ.

ಕೆಜಿಎಫ್-2 ವೀಕ್ಷಿಸಿದ ಪ್ರತಿಯೊಬ್ಬರು ಹಾಡಿಹೊಗಳುತ್ತಿದ್ದಾರೆ. ಅಭಿಮಾನಿಗಳ ಜೊತೆಗೆ ಅನೇಕ ಸಿನಿ ಗಣ್ಯರು ಸಹ ಚಿತ್ರ ವೀಕ್ಷಿಸಿ ಸಂಭ್ರಮಿಸುತ್ತಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನ, ಯಶ್ ನಟನೆ, ಸಂಜಯ್ ದತ್ ಪಾತ್ರ ಪ್ರತಿಯೊಂದು ಸಹ ಸಿನಿ ರಸಿಕರ ಹೃದಯ ಗೆದ್ದಿದೆ. ಕನ್ನಡ ಸೇರಿದಂತೆ ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಸೇರಿದಂತೆ ಎಲ್ಲಾ ಭಾಷೆಗಳಲ್ಲೂ ಕೆಜಿಎಫ್-2 ಚಿತ್ರವನ್ನು ಭರ್ಜರಿಯಾಗಿ ಸ್ವಾಗತಿಸಿದ್ದಾರೆ. ಚಿತ್ರ ವೀಕ್ಷಿಸಿದ ಪ್ರೇಕ್ಷಕರು ಟ್ವಿಟ್ಟರ್ ನಲ್ಲಿ ಹಾಡಿ ಹೊಗಳಿದ್ದಾರೆ. ರಾಕಿಂಗ್ ಸ್ಟಾರ್ ನಟನೆಯ ಸಿನಿಮಾವನ್ನು ಸಂಭ್ರಮಿಸಿದ್ದಾರೆ. ಪ್ರೇಕ್ಷಕರ ಪ್ರತಿಕ್ರಿಯೆ ಟ್ವಿಟ್ಟರ್ ನಲ್ಲಿ ಹೇಗಿದೆ ನೋಡಿ..

ಸಿನಿಮಾ ವಿಶ್ಲೇಷಕ ತರಣ್ ಆದರ್ಶ್ ಟ್ವೀಟ್ ಮಾಡಿ ಕೆಜಿಎಫ್-2 ಸಿನಿಮಾವನ್ನು ಹಾಡಿ ಹೊಗಳಿದ್ದಾರೆ. ಚಿತ್ರಕ್ಕೆ 4.5 ಸ್ಟಾರ್ ನೀಡಿರುವ ತರಣ್ ಆದರ್ಶ್ ಬ್ಲಾಕ್ ಬಸ್ಟರ್ ಎಂದು ಹೇಳಿದ್ದಾರೆ. 'ಕೆಜಿಎಫ್2 ವಿನ್ನರ್ ಆಗಿದೆ. ಪ್ರಶಾಂತ್ ನೀಲ್ ನಮ್ಮನ್ನು ಕೆಜಿಎಫ್2 ಜಗತ್ತಿನಲ್ಲಿ ಮುಳಗಿಸಿದ್ದಾರೆ. ಕಿಂಗ್ ಸೈಜ್ ಮನರಂಜನೆ ನೀಡುತ್ತದೆ. ಈ ಸಿನಿಮಾವನ್ನು ಖಂಡಿತ ಎಲ್ಲರೂ ನೋಡಲೇ ಬೇಕು' ಎಂದು ಹೇಳಿದ್ದಾರೆ.

ಮತ್ತೋರ್ವ ಅಭಿಮಾನಿ ಚಿಕ್ಕದಾಗಿ ವಿಮರ್ಶೆ ಮಾಡಿದ್ದಾರೆ. ಕೆಜಿಎಫ್2 ಚಿತ್ರವನ್ನು ವಿವರಿಸಲು ಅಪದಗಳೇ ಇಲ್ಲ. ನಿರೀಕ್ಷೆಗೂ ಮಿಗಿಲಾಗಿದೆ. ಇಲ್ಲಿವರೆಗಿನ ಅತ್ಯುತ್ತಮವಾದ ಕಮರ್ಷಿಯಲ್ ಸಿನಿಮಾ ಇದಾಗಿದೆ. ರಿಯಲ್ ಮಾನ್ಸ್ಟಾರ್ ಎಂದು ಬಣ್ಣಿಸಿದ್ದಾರೆ.

 

ತಮಿಳು ನಟ ಸೂರ್ಯ ಅಭಿಮಾನಿ ಟ್ವೀಟ್ ಮಾಡಿ, ಚಿತ್ರಕ್ಕೆ 4 ಸ್ಟಾರ್ ನೀಡಿದ್ದಾರೆ. ಬ್ಲಾಕ್ ಬಸ್ಟರ್ ಎಂದಿರುವ ಅಭಿಮಾನಿ, ಇದು ಪಕ್ಕ ರಾ ಸಿನಿಮಾ. ತೀವ್ರವಾದ, ಶಕ್ತಿಯುತವಾದ ಮತ್ತು ಮನಸ್ಸಿಗೆ ಮುದ ನೀಡುವ ಚಿತ್ರವಾಗಿದೆ. ಯಶ್ ಅಧಿಕೃತವಾಗಿ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಲೀಗ್ ಪ್ರವೇಶ ಮಾಡಿದ್ದಾರೆ. ಪದೇ ಪದೇ ನೆನಪಾಗುವ ಸಾಹಸ ದೃಶ್ಯ ಮತ್ತು ಪಾತ್ರಗಳನ್ನು ಹೊಂದಿದೆ ಎಂದಿದ್ದಾರೆ.

 

ಮತ್ತೋರ್ವ ಅಭಿಮಾನಿ, ಮಾಸಿವ್ ಪವರ್ ಫುಲ್ ಮನರಂಜನೆಯ ಸಿನಿಮಾ. ರಾಕಿ ಭಾಯ್ ಅದ್ಭುತ. ಅತ್ಯುತ್ತಮವಾದ ಮೇಕಿಂಗ್. ಎಡಿಟಿಂಗ್, ಬ್ಯಾಗ್ರೌಂಡ್ ಮ್ಯೂಸಿಕ್, ಪವರ್ ಪ್ಯಾಕ್ಡ್ ಆಕ್ಷನ್, ಬ್ಲಾಕ್ ಬಸ್ಟರ್ ಸಿನಿಮಾ. ಪ್ರಶಾಂತ್ ನೀಲ್ ನಿರ್ದೇಶನ ಅದ್ಭುತ ಎಂದಿದ್ದಾರೆ.

ಒಟಿಟಿ ರೀಲಿಸ್ ಅವರು ಕೂಡ ಸಿನಿಮಾಗೆ 4 ಸ್ಟಾರ್ ನೀಡಿದ್ದಾರೆ. ಜೊತೆಗೆ ಸಿನಿಮಾವನ್ನು ಹಾಡಿ ಹೊಗಳಿದ್ದಾರೆ. ಪ್ರಶಾಂತ್ ನೀಲ್ ಕೆಜಿಎಫ್ 2ಪ್ರಪಂಚದಲ್ಲಿ ಮುಳುಗಿಸಿದ್ದಾರೆ. ಉತ್ತಮ ಮನರಂಜನೆ ನೀಡುತ್ತದೆ. ಅತ್ಯುತ್ತಮವಾದ ಬಿಜಿಎಂ. ನೋಡಲೇ ಬೇಕಾದ ಸಿನಿಮಾ ಎಲ್ಲರೂ ನೋಡಿ ಎಂದು ಹೇಳಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?