KGF 2ಗೂ ತಪ್ಪಿಲ್ಲ ಪೈರಸಿ ಕಾಟ; Onlineನಲ್ಲಿ ಹರಿದಾಡುತ್ತಿದೆ ರಾಕಿ ಭಾಯ್ ಸಿನಿಮಾ

Published : Apr 14, 2022, 12:48 PM ISTUpdated : Apr 14, 2022, 01:02 PM IST
KGF 2ಗೂ ತಪ್ಪಿಲ್ಲ ಪೈರಸಿ ಕಾಟ; Onlineನಲ್ಲಿ ಹರಿದಾಡುತ್ತಿದೆ ರಾಕಿ ಭಾಯ್ ಸಿನಿಮಾ

ಸಾರಾಂಶ

ಯಶ್ ನಟನೆಯ ಕೆಜಿಎಫ್-2 ಸಿನಿಮಾಗೂ ಪೈರಸಿ ಕಾಟ ತಪ್ಪಿಲ್ಲ. ಬಹುನಿರೀಕ್ಷೆಯ ಸಿನಿಮಾ ಪೈರಸಿಯಾಗಿದ್ದು ಆನ್ ಲೈನ್ ನಲ್ಲಿ ಹರಿದಾಡುತ್ತಿದೆ. ಸಿನಿಮಾತಂಡ ಬೇಡಿಕೊಂಡಿದ್ದರು ಸಹ ಕಿಡಿಗೇಡಿಗಳು ಪೈರಸಿ ಮಾಡಿ ಲೀಕ್ ಮಾಡಿದ್ದಾರೆ. 

‘ಪೈರಸಿ ವಿರುದ್ಧದ ಹೋರಾಟ ನಿಮ್ಮಿಂದಲೇ ಶುರುವಾಗಲಿ. ದಯವಿಟ್ಟು ಸಿನಿಮಾ ವೀಕ್ಷಿಸುವಾಗ ವೀಡಿಯೋ, ಫೋಟೋಗಳನ್ನು ತೆಗೆಯಬೇಡಿ. ಅವುಗಳನ್ನು ಆನ್‌ಲೈನ್‌ನಲ್ಲಿ ಪೋಸ್ಟ್‌ ಮಾಡಬೇಡಿ’ ಎಂದು ಪ್ರಶಾಂತ್ ನೀಲ್‌ ಕೇಳಿಕೊಂಡರೂ ಸಹ ಕಿಡಿಗೇಡಿಗಳು ಕೆಜಿಎಫ್-2 ಸಿನಿಮಾವನ್ನು ಪೈರಸಿ ಮಾಡಿ ಆನ್ ಲೈನ್ ನಲ್ಲಿ ಹರಿಬಿಟ್ಟಿದ್ದಾರೆ.

ಇಡೀ ವಿಶ್ವವೇ ಕಾತರದಿಂದ ಕಾಯುತ್ತಿದ್ದ ಕೆಜಿಎಫ್-2 ಸಿನಿಮಾ ಅದ್ದೂರಿಯಾಗಿ ತೆರೆಗೆ ಬಂದಿದೆ. ಎಲ್ಲಾ ಭಾಷೆಯಲ್ಲೂ ಪ್ರೇಕ್ಷಕರು ಭರ್ಜರಿಯಾಗಿ ಸ್ವಾಗತ ಮಾಡಿದ್ದಾರೆ. ಸಿನಿಮಾ ನೋಡಿ ಹಾಡಿಹೊಗಳಿದ್ದಾರೆ. ವಿಶ್ವದಾದ್ಯಂತ 12ಸಾವಿರಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ಕೆಜಿಎಫ್-2 ರಾರಾಜಿಸುತ್ತಿದೆ. ಏಪ್ರಿಲ್ 14ರಂದು ತೆರೆಗೆ ಬಂದ ಸಿನಿಮಾವನ್ನು ನೋಡಿ ಕಣ್ತುಂಬಿಕೊಂಡಿದ್ದಾರೆ. ಈಗಾಗಲೇ ಅನೇಕ ಸಿನಿಮಾಗಳ ದಾಖಲೆ ಧೂಳಿಪಟ ಮಾಡಿರುವ ಕೆಜಿಎಫ್2, ಬಿಡುಗಡೆ ಬಳಿಕ ಯಾವೆಲ್ಲ ದಾಖಲೆ ಬರೆಯಲಿದೆ ಎಂದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಕೆಜಿಎಫ್-2ಗೂ ಪೈರಸಿ ಕಾಟ ಶುರುವಾಗಿದೆ. ಬಿಡುಗಡೆಯಾಗಿ ಸ್ವಲ್ಪ ಸಮಯದಲ್ಲೇ ಸಿನಿಮಾ ಆನ್ ಲೈನ್ ನಲ್ಲಿ ಹರಿದಾಡುತ್ತಿದೆ.

KGF 2 ಮುಂದೆ ಯಾವ ಬಾಹುಬಲೀನೂ ಇಲ್ಲ, ಕೊನೆಯ ಟ್ವಿಸ್ಟ್ ನೋಡಿದ್ರೆ KGF 3 ಪಕ್ಕಾ! ಸಿನಿಮಾ ಹೈಲೈಟ್ಸ್‌ ಏನು?

ಪೈರಸಿ ಮಾಡಿ ಆನ್ ಲೈನ್ ನಲ್ಲಿ ಹರಿಬಿಡುವುದರಿಂದ ಚಿತ್ರದ ಕಲೆಕ್ಷನ್ ಮೇಲೆ ಹೊಡೆತ ಬೀಳುವ ಸಾಧ್ಯತೆ ಇದೆ. ಪೈರಸಿ ಕಾಟ ಪ್ರತಿ ಸಿನಿಮಾಗೂ ಕಾಡುವ ದೊಡ್ಡ ಸಮಸ್ಯೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಸಿನಿಮಾ ಬಿಡುಗಡೆಯಾಗಿ ಕ್ಷಣಾರ್ಧದಲ್ಲಿ ಸಿನಿಮಾ ಪೈರಸಿಯಾಗಿ ಆನ್ ಲೈನ್ ನಲ್ಲಿ ಹರಿದಾಡುತ್ತಿರುತ್ತದೆ. ಇದೀಗ ಕೆಜಿಎಫ್-2 ಸಿನಿಮಾಗೂ ಸಮಸ್ಯೆ ತಪ್ಪಿದ್ದಲ್ಲ. ಅನೇಕ ಅಭಿಮಾನಿಗಳು ಸಹ ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಸಿನಿಮಾ ಅಭಿಮಾನಿಗಳು ಪೈರಸಿಗೆ ಬೆಂಬಲ ನೀಡಬೇಡಿ ಎಂದು ಕೇಳಿಕೊಳ್ಳುತ್ತಿದ್ದಾರೆ. ಆದರೂ ಪೈರಸಿ ಸಿನಿಮಾ ಆನ್ ಲೈನ್ ನಲ್ಲಿ ಹರಿದಾಡುತ್ತಿದೆ.

ಸಿನಿಮಾತಂಡ ಬಿಡುಗಡೆಗೂ ಮೊದಲು ಪೈರಸಿ ಮಾಡಬೇಡಿ ಎಂದು ಕೇಳಿಕೊಂಡಿದ್ದರು. '8 ವರ್ಷಗಳ ಕಾಲ ರಕ್ತ, ಬೆವರು, ಕಣ್ಣೀರು ಹರಿಸಿ ನಿಮಗಾಗಿ ಕೆಜಿಎಫ್ ಚಿತ್ರ ಮಾಡಿದ್ದೇವೆ. ಈ ಅಗಾಧ ಪರಿಶ್ರಮದ ಫಲವನ್ನು ಚಿತ್ರವನ್ನು ಥಿಯೇಟರ್‌ ನಲ್ಲೇ ಅನುಭವಿಸಿ' ಎಂದು ಚಿತ್ರತಂಡ ಹೇಳಿತ್ತು. ಅಲ್ಲದೇ ಪೈರಸಿ ಕಂಡುಬಂದಲ್ಲಿ ಆಂಟಿ ಪೈರಸಿ ಕಂಟ್ರೋಲ್ ರೂಮ್‌ಗೆ ದೂರು ನೀಡಬಹುದು ಎಂದು ಹೇಳಿದ್ದರು. ಆದರೂ ಕಿಡಿಗೇಡಿಗಳು ಪೈರಸಿ ಮಾಡಿ ಲೀಕ್ ಮಾಡುತ್ತಿದ್ದಾರೆ.

KGF2; Yash ಜೊತೆಗೆ ನಿಹಾರಿಕಾ I'M The Violence ವೀಡಿಯೋ ವೈರಲ್! ನಗಿಸಿ ಹೊಟ್ಟೆಹುಣ್ಣಾಗಿಸೋ Reels ಇದು

ಕೆಜಿಎಫ್-2 ಮೊದಲ ಭಾಗಕ್ಕಿಂತ ರೋಚಕವಾಗಿದ್ದು ಪ್ರೇಕ್ಷಕರು ಮುಗಿಬಿದ್ದು ಸಿನಿಮಾ ವೀಕ್ಷಿಸುತ್ತಿದ್ದಾರೆ. ಕಿಡಿಗೇಡಿಗಳು ಪೈರಸಿ ಮಾಡಿ ಲೀಕ್ ಮಾಡಿದರು ಸಹ ಪ್ರೇಕ್ಷಕರು ಚಿತ್ರಮಂದಿರಗಳಲ್ಲೇ ಸಿನಿಮಾ ವೀಕ್ಷಿಸಿ ಸಂಭ್ರಮಿಸುತ್ತಿರುವ ಪರಿ ನೋಡಿ ಇಡಿ ಸಿನಿಮಾತಂಡ ಫುಲ್ ಖುಷ್ ಆಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!