ಮೀ ಟೂ ಕಾರಣಕ್ಕೆ 'ಪೊನ್ನಿಯಿನ್ ಸೆಲ್ವನ್' ಸಿನಿಮಾ ರಿಜೆಕ್ಟ್? ಏನಿದು ಅನುಷ್ಕಾ ಶೆಟ್ಟಿ ಬಗ್ಗೆ ಹೊಸ ಸುದ್ದಿ

Published : Apr 28, 2023, 10:51 AM IST
ಮೀ ಟೂ ಕಾರಣಕ್ಕೆ 'ಪೊನ್ನಿಯಿನ್ ಸೆಲ್ವನ್' ಸಿನಿಮಾ ರಿಜೆಕ್ಟ್? ಏನಿದು ಅನುಷ್ಕಾ ಶೆಟ್ಟಿ ಬಗ್ಗೆ ಹೊಸ ಸುದ್ದಿ

ಸಾರಾಂಶ

ಮೀ ಟೂ ಕಾರಣಕ್ಕೆ ನಟಿ ಅನುಷ್ಕಾ ಶೆಟ್ಟಿ 'ಪೊನ್ನಿಯಿನ್ ಸೆಲ್ವನ್' ಸಿನಿಮಾ ರಿಜೆಕ್ಟ್ ಮಾಡಿದ್ರು ಎನ್ನುವ ಸುದ್ದಿ ವೈರಲ್ ಆಗಿದೆ. 

ಖ್ಯಾತ ನಿರ್ದೇಶಕ ಮಣಿ ರತ್ನಂ ಸಾರಥ್ಯದಲ್ಲಿ ಬರ್ತಿರುವ 'ಪೊನ್ನಿಯಿನ್ ಸೆಲ್ವನ್' ಮೊದಲ ಭಾಗ ರಿಲೀಸ್ ಆಗಿ ದೊಡ್ಡ ಮಟ್ಟದ ಸಕ್ಸಸ್ ಕಂಡಿತ್ತು. ಇದೀಗ ಸಿನಿಮಾತಂಡ 2ನೇ ಭಾಗದ ಬಿಡುಗಡೆಗೆ ಸಿದ್ಧವಾಗಿದೆ. ಈಗಾಗಲೇ ಚಿತ್ರತಂಡ ಭರ್ಜರಿ ಪ್ರಚಾರ ಮಾಡುತ್ತಿದ್ದು ದೇಶದ ವಿವಿಧ ಭಾಗಗಳಿಗೆ ಭೇಟಿ ನೀಡುತ್ತಿದ್ದಾರೆ. ಈ ಸಿನಿಮಾದಲ್ಲಿ ದೊಡ್ಡ ತಾರಾಬಳಗವೇ ಇದ್ದು ಇಡೀ ಸಿನಿಮಾತಂಡ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದೆ. ಈ ನಡುವೆ ಪೊನ್ನಿಯಿನ್ ಸೆಲ್ವನ್ ಸಿನಿಮಾದ ಬಗ್ಗೆ ಇಂಟ್ರಸ್ಟಿಂಗ್ ವಿಚಾರ ಬಹಿರಂಗವಾಗಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ಸಿನಿಮಾದಲ್ಲಿ ಬಾಹುಬಲಿ ಸ್ಟಾರ್ ಅನುಷ್ಕಾ ಶೆಟ್ಟಿ ನಟಿಸಬೇಕಿತ್ತು. ಆದರೆ ಅದು ಸಾಧ್ಯವಾಗಿಲ್ಲ. ನಿರ್ದೇಶಕ ಮಣಿ ರತ್ನಂ ಅವರು ಮೊದಲು ಅನುಷ್ಕಾ ಶೆಟ್ಟಿ ಅವರನ್ನು ಸಂಪರ್ಕ ಮಾಡಿದ್ದರು ಆದರೆ ಅನುಷ್ಕಾ ಈ ಸಿನಿಮಾ ರಿಜೆಕ್ಟ್ ಮಾಡಿದರು ಎನ್ನುವ ಸುದ್ದಿ ವೈರಲ್ ಆಗಿದೆ.  

ಅಂದಹಾಗೆ ಅನುಷ್ಕಾ ಶೆಟ್ಟಿ ಸದ್ಯ ಪೊನ್ನಿಯಿನ್ ಸೆಲ್ವನ್‌ನಲ್ಲಿ ಐಶ್ವರ್ಯಾ ರೈ ನಟಿಸಿದ್ದ ನಂದಿನಿ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕಿತ್ತು. ಆದರೆ ಬಾಹುಬಲಿ ಸ್ಟಾರ್ ಈ ಸಿನಿಮಾದಲ್ಲಿ ನಟಿಸಲು ಹಿಂದೇಟು ಹಾಕಿದ್ದಾರೆ. ಕಾರಣ ಕೇಳಿದ್ರೆ ನಿಜಕ್ಕೂ ಅಚ್ಚರಿ ಆಗುತ್ತೆ. ಮಿ ಟೂ ಕಾರಣಕ್ಕೆ ಅನುಷ್ಕಾ ಶೆಟ್ಟಿ ಈ ಸಿನಿಮಾ ರಿಜೆಕ್ಟ್ ಮಾಡಿದ್ದಾರೆ ಎನ್ನುವ ಸುದ್ದಿ ಕಾಲಿವುಡ್ ಅಂಗಳದಲ್ಲಿ ಗುಲ್ಲಾಗಿದೆ. ಅನುಷ್ಕಾ ಶೆಟ್ಟಿ ಬಾಹುಬಲಿ ಮೂಲಕ ದೊಡ್ಡ ಸ್ಟಾರ್‌ಡಮ್ ಗಳಿಸಿದರು. ಹಾಗಾಗಿ ಪೊನ್ನಿಯಿನ್ ಸೆಲ್ವನ್ ಸಿನಿಮಾದ ನಂದಿನಿ ಪಾತ್ರಕ್ಕೆ ಅನುಷ್ಕಾ ಅವರನ್ನು ಸಂಪರ್ಕ ಮಾಡಿತ್ತು ಸಿನಿಮಾತಂ. ಆದರೆ ತಂಡದ ಆಸೆ ನೆರವೇರಿಲ್ಲ. ಅನುಷ್ಕಾ ಶೆಟ್ಟಿ ಪೊನ್ನಿಯಿನ್ ಸೆಲ್ವನ್ ಸಿನಿಮಾತಂಡದ ಒಬ್ಬರ ಮೇಲೆ ಮೀ ಟೂ ಆರೋಪ ಇದ್ದ ಕಾರಣ ತಿರಸ್ಕರಿಸಿದರು ಎನ್ನಲಾಗಿದೆ. ಪೊನ್ನಿಯಿನ್ ಸೆಲ್ವನ್ ಸಿನಿಮಾದಲ್ಲಿರುವ ಗೀತರಚನೆಕಾರ ಮೈರಮುತ್ತು ಮೀ ಟೂ ಆರೋಪ ಎದುರಿಸುತ್ತಿದ್ದಾರೆ. 

ನಟಿ ತ್ರಿಷಾ ಸೆಲ್ವಾರ್ ನೋಡೋಕೆ ಸಿಂಪಲ್ ಆದ್ರೆ ಕೊಟ್ಟಿರೋ ಹಣ ಕೇಳಿದ್ರೆ ಹಾರ್ಟ್‌ ಅಟ್ಯಾಕ್ ಆಗುತ್ತೆ!

ಕಳೆದ ಕೆಲವು ವರ್ಷಗಳಿಂದ ಹಲವಾರು ಮಹಿಳೆಯರು ವೈರಮುತ್ತು ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದರು. ವಿವಾದಾತ್ಮಕ ವ್ಯಕ್ತಿಯಾಗಿರುವ ವೈರಮುತ್ತು ಜೊತೆ ಕೆಲಸ ಮಾಡಲು ನಟಿ ಅನುಷ್ಕಾ ಇಷ್ಟ ಪಡದ ಕಾರಣ ಹಿಂದಿ ಸರಿದರು ಎನ್ನಲಾಗಿದೆ. ಅಷ್ಟೆಯಲ್ಲದೆ ಸಂಬಳದ ವಿಚಾರದಲ್ಲೂ ಹೊಂದಾಣಿಕೆಯಾಗದ ಕಾರಣ ಪೊನ್ನಿಯಿನ್ ಸೆಲ್ವನ್ ಸಿನಿಮಾ ತಿರಸ್ಕರಿಸಿದರು ಎನ್ನಲಾಗಿದೆ. ಆದರೆ ಈ ಬಗ್ಗೆ ಅನುಷ್ಕಾ ಶೆಟ್ಟಿ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ.   

Ponniyin Selvan 2: ನೀಲಿ ಬಣ್ಣದ ಸೀರೆಯಲ್ಲಿ ಅಪ್ಸರೆಯಂತೆ ಮಿಂಚಿದ ತ್ರಿಷಾ ಕೃಷ್ಣನ್

ಪೊನ್ನಿಯಿನ್ ಸೆಲ್ವನ್ ನಿರ್ದೇಶಕ ಮಣಿರತ್ನಂ ಅವರ ದೀರ್ಘಾವಧಿಯ ಕನಸಿನ ಪ್ರಾಜೆಕ್ಟ್ ಆಗಿದೆ. ಕಲ್ಕಿ ಕೃಷ್ಣಮೂರ್ತಿ ಅವರ ಕಾದಂಬರಿ ಆಧಾರಿತ ಸಿನಿಮಾವಾಗಿದೆ. ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕ ಎ ಆರ್ ರೆಹಮಾನ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಚಿತ್ರದಲ್ಲಿ ಐಶ್ವರ್ಯಾ ರೈ, ತ್ರಿಷಾ, ಚಿಯಾನ್ ವಿಕ್ರಮ್, ಕಾರ್ತಿ, ಜಯಂ ರವಿ ಸೇರಿದಂತೆ ದೊಡ್ಡ ತಾರಾಬಳಗವೆ ಸಿನಿಮಾದಲ್ಲಿದೆ. ಮೊದಲ ಭಾಗದ ಸೂಪರ್ ಸಕ್ಸಸ್ ಬಳಿಕ ಸಿನಿಮಾತಂಡ 2ನೇ ಭಾಗದ ದೊಡ್ಡ ಗೆಲುವಿಗೆ ಎದುರು ನೋಡುತ್ತಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಡಾರ್ಲಿಂಗ್.. ಆ ಪ್ರೀತಿಯನ್ನು ಕಂಡು ನಿನಗೆ ಆನಂದಬಾಷ್ಪ ಬಂದಿರುತ್ತದೆ; ರಾಜಮೌಳಿ ಪತ್ರದ ಮರ್ಮವೇನು?
'ರೀನಾ, ಕಿರಣ್ & ಲವರ್ ಗೌರಿ.. 'ನಾವೆಲ್ಲರೂ ಒಂದೇ ಫ್ಯಾಮಿಲಿ' ಎಂದ ಅಮೀರ್ ಖಾನ್; ಒಳಗೊಳಗೇ ನಕ್ಕ ನೆಟ್ಟಿಗರು!