ಮೋದಿಯನ್ನು ಹಾಡಿ ಹೊಗಳಿದ ಆಮೀರ್​: ಬಿಡ್ತಾರಾ ನೆಟ್ಟಿಗರು! ಕಮೆಂಟ್​ಗಳ ಸುರಿಮಳೆ...

By Suvarna News  |  First Published Apr 27, 2023, 5:45 PM IST

ಪ್ರಧಾನಿ ನರೇಂದ್ರ  ಮೋದಿಯವರ ಮನ್​ ಕಿ ಬಾತ್​ 100ನೇ ಕಂತನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ನಟ ಆಮೀರ್​ ಖಾನ್​ ಈ ಸರಣಿ ಮತ್ತು ಪ್ರಧಾನಿಯನ್ನು ಹಾಡಿ ಹೊಗಳಿದ್ದಾರೆ. ಮುಂದೆ?
 


ಪ್ರಧಾನಿ ನರೇಂದ್ರ ಮೋದಿಯವರು (PM Narendra Modi) ಪ್ರತಿ ತಿಂಗಳ ಕೊನೆಯ ಭಾನುವಾರ ಆಕಾಶವಾಣಿಯಲ್ಲಿ ಪ್ರಸಾರ  ಮಾಡುವ ಮನ್​ ಕೀ ಬಾತ್​ ಕಾರ್ಯಕ್ರಮಕ್ಕೆ ಇದೀಗ ನೂರರ ಸಂಭ್ರಮ. ಇದೇ  30ನೇ ತಾರೀಖಿನ ಭಾನುವಾರ ನಡೆಯಲಿರುವ ಈ ಕಾರ್ಯಕ್ರಮ 100ನೇ ಸರಣಿಯಾಗಿದ್ದು, ಅದಕ್ಕೆ ಸಂಬಂಧಿಸಿದಂತೆ ಪೂರ್ವಭಾವಿ ಕಾರ್ಯಕ್ರಮಗಳನ್ನು ಹಲವೆಡೆ ಆಯೋಜಿಸಲಾಗಿತ್ತು. ಮನ್​ ಕೀ ಬಾತ್​ನಲ್ಲಿ ಪ್ರಧಾನಿ ಮೋದಿಯವರು ಹೆಸರಿಸಿದ್ದ ವಿವಿಧ ಕ್ಷೇತ್ರಗಳ ಸಾಧಕರು ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಾಜರಿದ್ದರು. ಅವರ ಪೈಕಿ ಒಬ್ಬರು ನಟ ಆಮೀರ್​ ಖಾನ್​. ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ ಎಂದು ಎರಡು ವರ್ಷಗಳ ಹಿಂದೆ ಹೇಳಿಕೆ ನೀಡಿ ಪೇಚಿಗೆ ಸಿಲುಕಿದ್ದರು ಆಮೀರ್​ ಖಾನ್​.  ಅಸಹಿಷ್ಣುತೆ ವಾತಾವರಣದಿಂದ ದೇಶ ತೊರೆಯಲು ಪತ್ನಿ ಸಲಹೆ ನೀಡಿದ್ದಳು ಎಂಬ ಹೇಳಿಕೆ ಕೊಟ್ಟು ಪರಬಾರದ ಕಷ್ಟಪಟ್ಟಿದ್ದರು ನಟ. ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಹೀಗೆ ಸಮಯ ಸಿಕ್ಕಾಗಲೆಲ್ಲ ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸುತ್ತಲೇ ಬಂದಿರುವ ನಟ ಆಮೀರ್​ (Aamir Khan) ಈಗ ಏಕಾಏಕಿಯಾಗಿ ಪ್ರಧಾನಿಯವರನ್ನು ಹಾಡಿ ಹೊಗಳಿಬಿಟ್ಟಿದ್ದಾರೆ!

ಮನ್​ ಕೀ ಬಾತ್​ ಕುರಿತ ಕಾರ್ಯಕ್ರಮದಲ್ಲಿ ನಟಿ ರವೀನಾ ಟಂಡನ್​ ಹಾಗೂ ವಿವಿಧ ಕ್ಷೇತ್ರಗಳ ಸಾಧಕರ ಜೊತೆ ಭಾಗಿಯಾಗಿದ್ದ ಆಮೀರ್​ ಖಾನ್​, ಪ್ರಧಾನಿ ಮತ್ತು  'ಮನ್ ಕಿ ಬಾತ್' (Mann ki Baath) ಅನ್ನು ಕೊಂಡಾಡಿದ್ದಾರೆ.  ಅಮೀರ್ ಅವರ ವೀಡಿಯೋ ವೈರಲ್ ಆಗುತ್ತಿದೆ.  'ಮನ್ ಕಿ ಬಾತ್ ಭಾರತದ ಜನರ ಮೇಲೆ ಹೆಚ್ಚಿನ ಪ್ರಭಾವ ಬೀರಿದೆ, ಅದರ ಪರಿಣಾಮವೂ ಕಂಡುಬರುತ್ತಿದೆ. ಇದು ಸಂವಹನದ ಉತ್ತಮ ಮಾರ್ಗವಾಗಿದೆ. ಇದು ಪ್ರಮುಖ ವಿಷಯಗಳ ಬಗ್ಗೆ ಮಾತನಾಡುತ್ತದೆ' ಎಂದಿದ್ದಾರೆ ಆಮೀರ್​ ಖಾನ್​. ಪ್ರಧಾನಿ ಮೋದಿಯನ್ನು ಶ್ಲಾಘಿಸಿದ ಅವರು,  'ನೀವು ಏನನ್ನು ಹುಡುಕುತ್ತಿದ್ದೀರಿ, ನಿಮ್ಮ ಭವಿಷ್ಯದ ಯೋಜನೆ ಏನು, ಸಾರ್ವಜನಿಕರಿಂದ ನೀವು ಯಾವ ರೀತಿಯ ಬೆಂಬಲವನ್ನು ಬಯಸುತ್ತೀರಿ ಎಂಬುದನ್ನು ಜನರಿಗೆ ಮನ್​ ಕೀ ಬಾತ್​ ಮೂಲಕ ತಿಳಿಸಿರುವ ಪ್ರಧಾನಿ, ಉತ್ತಮ ಕಾರ್ಯ ಮಾಡುತ್ತಿದ್ದಾರೆ' ಎಂದಿದ್ದಾರೆ.  ಅಮೀರ್ ಪ್ರಧಾನಿಯನ್ನು ಹೊಗಳಿದ್ದು ಇದೇ ಮೊದಲ ಬಾರಿ ಎಂದು ಹೇಳಲಾಗುತ್ತಿದೆ. 

Tap to resize

Latest Videos

ಎರಡು ವರ್ಷ ಕದ್ದುಮುಚ್ಚಿ ಹಿಂದೂ ಯುವತಿ ಜೊತೆ ಸಂಸಾರ ಮಾಡಿದ್ದ ಆಮೀರ್​ ಖಾನ್​!

ಇದರ ವಿಡಿಯೋ ಭಾರಿ ಟ್ರೋಲ್​ (Troll) ಆಗುತ್ತಿದೆ. ಆಮೀರ್​ ಖಾನ್​ ಪ್ರಧಾನಿ ವಿರುದ್ಧ ಮಾತನಾಡಿದಾಗಲೆಲ್ಲಾ ಖುಷಿ ಪಡುತ್ತಿದ್ದ ಒಂದಿಷ್ಟು ಮಂದಿ ಈಗ ಗರಂ ಆಗಿದ್ದರೆ, ಪ್ರಧಾನಿಯವರ ಬೆಂಬಲಿಗರು ಮಾತ್ರ ತಮಾಷೆಯ ಕಮೆಂಟ್​ಗಳ ಮೂಲಕ ನಟನಿಗೆ ಟಾಂಗ್​ ನೀಡುತ್ತಿದ್ದಾರೆ. ಇನ್ನು ಟ್ರೋಲಿಗರಿಗಂತೂ ಬಹುದೊಡ್ಡ ಆಹಾರ ಸಿಕ್ಕಂತಾಗಿದೆ.  

ಕಾಗೆ (Crow) ಯಾವಾಗ ಕೋಗಿಲೆಯಾಯ್ತು ಎಂದೇ ತಿಳಿಯುತ್ತಿಲ್ಲ, ಇದೊಂದು ಅಚ್ಚರಿಯ ಬೆಳವಣಿಗೆ ಎಂದು ಓರ್ವ ಬಳಕೆದಾರ ಹೇಳಿದರೆ, ಮತ್ತೇನೂ ಅಲ್ಲ, ಲಾಲ್​ ಸಿಂಗ್​ ಚಡ್ಡಾ ತೋಪೆದ್ದು ಹೋದ ಮೇಲೆ ಬುದ್ಧಿ ಬಂದಿದೆ ಅಷ್ಟೇ ಎಂದಿದ್ದಾರೆ ಇನ್ನೊಬ್ಬರು.  ಮಿಸ್ಟರ್ ಪ್ರೊಫೆಷನಲಿಸ್ಟ್​ ಎಂದೇ ಖ್ಯಾತಿ ಪಡೆದಿರುವ ಆಮೀರ್​ ಖಾನ್​ ಅವರನ್ನು ಉದ್ದೇಶಿಸಿದ ಬಳಕೆದಾರನೊಬ್ಬ,  ಮಿಸ್ಟರ್​ ಪ್ರೊಫೆಷನಲಿಸ್ಟ್​ಗೆ ತಮ್ಮ ಚಲನಚಿತ್ರವನ್ನು ಚಲಾಯಿಸಲು ಇದಕ್ಕಿಂತ ಕೆಟ್ಟ ಮಾರ್ಗ ಬೇರೆ ತೋರದೇ ಇದ್ದುದು ಶೋಚನೀಯ ಎಂದಿದ್ದಾರೆ. ಇನ್ನೊಬ್ಬ ಟ್ರೋಲಿಗ ಅಂತೂ ಗುಲಾಮ ಭಕ್ತನಾಗುವ ಕಾಲ ಬಂದಿದೆ, ಒಳ್ಳೆಯಾಗಲಿ ಎಂದಿದ್ದಾರೆ.  ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ, ಅವರಲ್ಲಿ ಈ ನಟ ಈಗ ಸೇರ್ಪಡೆಯಾಗಿದ್ದಾರೆ ಎಂದು ಮತ್ತೋರ್ವ ನೆಟ್ಟಿಗ ಕಮೆಂಟ್​ ಮಾಡಿದ್ದಾರೆ.   ಭಾರತ ಬಿಟ್ಟು ತೊಲಗಿಸಿಬಿಟ್ಟರೆ ಎನ್ನುವ ಭಯದಿಂದ ಈ ಮಾರ್ಗ ತಮ್ಮದು ಮಾಡಿಕೊಂಡಿದ್ದಾರಷ್ಟೇ ಎಂದು ಟ್ರೋಲಿಗರೊಬ್ಬರು(trollers) ಕಾಲೆಳೆದಿದ್ದಾರೆ.  ಒಟ್ಟಿನಲ್ಲಿ ಆಮೀರ್​ ಅವರನ್ನು ಕಿಚಾಯಿಸುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ.  

ಆಮೀರ್​ ಖಾನ್​ ಚಿತ್ರ ಹಿಟ್​ ಆಗಿದ್ರೆ ಅಕ್ಷಯ್​ ಕುಮಾರ್​ ಮದ್ವೆನೇ ಆಗ್ತಿರಲಿಲ್ಲ, ಯಾಕೆ ಗೊತ್ತಾ?

ಅಮೀರ್ ಖಾನ್ ಅವರ ಕೆಲಸದ ಬಗ್ಗೆ ಹೇಳುವುದಾದರೆ,  ಅವರು ಕೊನೆಯದಾಗಿ 2022 ರ ಚಲನಚಿತ್ರ ಲಾಲ್ ಸಿಂಗ್ ಚಡ್ಡಾದಲ್ಲಿ (Lal Singh Chadda) ಕಾಣಿಸಿಕೊಂಡರು. ಕರೀನಾ ಕಪೂರ್ ಜೊತೆಗಿನ ಅವರ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಸೂಪರ್ ಫ್ಲಾಪ್ ಎಂದು ಸಾಬೀತಾಯಿತು. ಕೋಲ್ ಚಿತ್ರ ಬಿಡುಗಡೆಗೂ ಮುನ್ನವೇ ಸಾಮಾಜಿಕ ಜಾಲತಾಣಗಳಲ್ಲಿ ಬಹಿಷ್ಕಾರ ಎದುರಿಸಬೇಕಾಯಿತು. ಮತ್ತು ಅದರ ಪರಿಣಾಮ ಪ್ರೇಕ್ಷಕರಿಗೂ ಚಿತ್ರ ಸಿಗಲಿಲ್ಲ. ಸದ್ಯಕ್ಕೆ ಅವರು ಯಾವುದೇ ಸಿನಿಮಾದಲ್ಲಿ ಕೆಲಸ ಮಾಡುತ್ತಿಲ್ಲ. ವರದಿಗಳನ್ನು ನಂಬುವುದಾದರೆ, ಅವರು ಕ್ರೀಡಾ ಚಿತ್ರದಲ್ಲಿ ಕೆಲಸ ಮಾಡಲು ಯೋಜಿಸುತ್ತಿದ್ದಾರೆ.

| 'Mann Ki Baat' has had a huge impact on the people of India, says Aamir Khan at "Mann Ki Baat@100" National Conclave in Delhi. pic.twitter.com/Jx7yUn7uOM

— ANI (@ANI)
click me!