20 ದಿನಗಳಲ್ಲಿ ಮೂರು ಮಕ್ಕಳ ತಂದೆಯಾದ ಯುಟ್ಯೂಬರ್​ Armaan Malik!

By Suvarna News  |  First Published Apr 27, 2023, 5:41 PM IST

ಇತ್ತೀಚಿಗೆ ಎರಡೂ ಪತ್ನಿಯನ್ನು ಒಟ್ಟಿಗೇ ಗರ್ಭಿಣಿ ಮಾಡಿ ಸುದ್ದಿಯಾಗಿರುವ ಯೂಟ್ಯೂಬರ್​ ಅರ್ಮಾನ್​ ಮಲಿಕ್​ ಕಳೆದ 20 ದಿನಗಳಲ್ಲಿ ಮೂರು ಮಕ್ಕಳ ತಂದೆಯಾಗಿದ್ದಾರೆ.
 


ಜನಪ್ರಿಯ ಯೂಟ್ಯೂಬರ್ ಅರ್ಮಾನ್ ಮಲಿಕ್ (Armaan Malik) ಮತ್ತೊಮ್ಮೆ ತಂದೆಯಾಗಿದ್ದಾರೆ. ಅವರ ಮೊದಲ ಪತ್ನಿ ಪಾಯಲ್ ಮಲಿಕ್ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಅರ್ಮಾನ್ ಸಾಮಾಜಿಕ ಮಾಧ್ಯಮದಲ್ಲಿ ಫೋಟೋವನ್ನು ಹಂಚಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಈ ಶುಭ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಪಾಯಲ್ ಹಾಸಿಗೆಯ ಮೇಲೆ ಮಲಗಿದ್ದಾಳೆ. ಅದೇ ಸಮಯದಲ್ಲಿ, ಅರ್ಮಾನ್ ಅವರ ಎರಡನೇ ಪತ್ನಿ ಕೃತಿಕಾ (Kruthika), ಅರ್ಮಾನ್ ಮತ್ತು ಪಾಯಲ್ (Payal) ಅವರ ಹಿರಿಯ ಮಗ ಚಿರಾಯು ಪೋಸ್ ನೀಡುತ್ತಿದ್ದಾರೆ. ಈ ಫೋಟೋವನ್ನು ಶೇರ್ ಮಾಡಿರುವ ಅರ್ಮಾನ್, 'ಏನೆಂದರೆ, ಪಾಯಲ್ ತಾಯಿಯಾಗಿದ್ದಾರೆ. ಯಾವ ಮಗುವೆಂದು ಊಹಿಸಿ ಎಂದಿದ್ದಾರೆ. ಮಕ್ಕಳ ಮುಖವನ್ನು ಅವರು ಇನ್ನೂ ಬಹಿರಂಗಪಡಿಸಿಲ್ಲ.

ಈಗ ಅರ್ಮಾನ್ ಅವರ ಈ ಪೋಸ್ಟ್ ನೋಡಿದ ನಂತರ, ಎಲ್ಲರೂ ಅರ್ಮಾನ್ ಮತ್ತೊಮ್ಮೆ ತಂದೆಯಾಗಲು ಅಭಿನಂದನೆ ಸಲ್ಲಿಸುತ್ತಿದ್ದಾರೆ. ಅಂದಹಾಗೆ,  ಯುಟ್ಯೂಬರ್ ಅರ್ಮಾನ್ ಮಲಿಕ್ ಅವರಿಗೆ ಇಬ್ಬರು ಪತ್ನಿಯರಿದ್ದಾರೆ. ಅವರು 2011 ರಲ್ಲಿ ಪಾಯಲ್ ಮಲಿಕ್ ಅವರನ್ನು ವಿವಾಹವಾದರು. ಈ ಮದುವೆಯಿಂದ ಅವರಿಗೆ ಒಬ್ಬ ಮಗನಿದ್ದಾನೆ, ಅವನಿಗೆ ಚಿರಾಯು ಎಂದು ಹೆಸರಿಟ್ಟಿದ್ದಾರೆ.  ಮದುವೆಯಾದ 7 ವರ್ಷಗಳ ನಂತರ, ಅರ್ಮಾನ್ 2018 ರಲ್ಲಿ ಕೃತಿಕಾ ಮಲಿಕ್ ಅವರನ್ನು ವಿವಾಹವಾದರು. ತಮಾಷೆಯೆಂದರೆ ಕೃತಿಕಾ ಅರ್ಮಾನ್ ಅವರ ಮೊದಲ ಪತ್ನಿ ಪಾಯಲ್ ಅವರ ಸ್ನೇಹಿತೆಯಾಗಿದ್ದು, ಅರ್ಮಾನ್ ಅವರನ್ನು ವಿವಾಹವಾದರು. ಕೆಲವು ದಿನಗಳ ಹಿಂದೆ ಕೃತಿಕಾಗೆ ಗಂಡು ಮಗು ಜನಿಸಿದೆ.

Tap to resize

Latest Videos

Armaan Malik: ಯೂಟ್ಯೂಬರ್​ ಇಬ್ಬರು ಗರ್ಭಿಣಿ ಪತ್ನಿಯರಲ್ಲಿ ಎರಡನೆಯವಳಿಗೆ ಹುಟ್ಟಿತು ಮಗು
 
ಅರ್ಮಾನ್‌ನ ಪತ್ನಿಯರಿಬ್ಬರೂ ಒಟ್ಟಿಗೆ ಗರ್ಭಿಣಿಯಾದಾಗ (Pregnant) ಜನರು ನಾನಾ ಪ್ರಶ್ನೆಗಳನ್ನು ಎತ್ತತೊಡಗಿದರು. ಇದರಿಂದಾಗಿ ಅರ್ಮಾನ್ ಮತ್ತು ಅವರ ಪತ್ನಿಯರು ಕೂಡ ಸಾಕಷ್ಟು ಟ್ರೋಲ್‌ಗೆ ಒಳಗಾಗಿದ್ದರು. ಈ ವರ್ಷದ ಫೆಬ್ರವರಿಯಲ್ಲಿ ಅರ್ಮಾನ್ ಮಲಿಕ್ ಇಬ್ಬರೂ ಪತ್ನಿಯರ ಸೀಮಂತ ಸಮಾರಂಭವನ್ನು ಆಯೋಜಿಸಿದ್ದರು. ಈ ಸಮಾರಂಭದ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ವೈರಲ್ ಆಗಿದ್ದವು. 

ಅಂದಹಾಗೆ,  ಯೂಟ್ಯೂಬರ್ ಅರ್ಮಾನ್ ಮಲಿಕ್ (Armaan Malik) ಇತ್ತೀಚಿನ ದಿನಗಳಲ್ಲಿ ಬಹಳ ಸುದ್ದಿಯಲ್ಲಿ ಇರುತ್ತಾರೆ. ತಮ್ಮ ಇಬ್ಬರು ಪತ್ನಿಯರನ್ನು ಒಟ್ಟಿಗೇ ಗರ್ಭಿಣಿ ಮಾಡಿ ಸುದ್ದಿಯಾದವರು ಅರ್ಮಾನ್​. ತಮ್ಮ ಪತ್ನಿಯರ ನಡುವೆ ಜಗಳ ಮಾಡಿಸುವ ನಾಟಕವಾಡಿಸಿ, ಅದನ್ನು ನಿಜವೆಂಬಂತೆ ಬಿಂಬಿಸಿ ಯೂಟ್ಯೂಬ್​ನಲ್ಲಿ ಲಕ್ಷಾಂತರ ವ್ಯೂಸ್​ಗಳನ್ನು ಪಡೆದುಕೊಳ್ಳುವಲ್ಲಿ ಇವರು ನಿಸ್ಸೀಮರು. ಇವರ ಇಬ್ಬರು ಪತ್ನಿಯರು ಕೂಡ ತಾವು ನಿಜವಾಗಿಯೂ ಜಗಳವಾಡುತ್ತಿರುವಂತೆ ಪೋಸ್​ ಕೊಡುವಲ್ಲಿ ಗಂಡನನ್ನು ಮೀರಿಸುತ್ತಾರೆ. ಕೆಲವೊಂದು ವಿಡಿಯೋಗಳಲ್ಲಿ ತಾವು ಮಾಡಿದ್ದ ತಮಾಷೆ ಎಂದು ಕೊನೆಯಲ್ಲಿ ಹೇಳಿದರೂ, ಹಲವು ವಿಡಿಯೋಗಳಲ್ಲಿ ಇವರ ಫ್ಯಾನ್ಸ್​ ಇದು ನಿಜವೇ ಎಂದು ನಂಬಿ ಇಬ್ಬರು ಪತ್ನಿಯರ ಜಗಳದ ಮಜ ತೆಗೆದುಕೊಳ್ಳುತ್ತಾರೆ. ಅದಕ್ಕೆ ತಕ್ಕಂತೆ ಥಹರೇವಾರಿ ಕಮೆಂಟ್​ ಹಾಕುತ್ತಾರೆ. ಇವೆಲ್ಲಾ ಸುಳ್ಳೆ ಆಗಿದ್ದರೂ ಇಬ್ಬರೂ ಪತ್ನಿಯರಂತೂ ಒಟ್ಟಿಗೇ ಗರ್ಭಿಣಿಯಾಗಿರುವ (Pregnant) ವಿಷಯ ಸತ್ಯವಾಗಿತ್ತು. ಇದೀಗ ಇಬ್ಬರೂ ಮಗುವನ್ನು ಹೆತ್ತಿದ್ದು, ಒಂದೇ ವರ್ಷದಲ್ಲಿ ಅರ್ಮಾನ್​ ಮೂರು ಮಕ್ಕಳ ತಂದೆಯಾಗಿದ್ದಾರೆ.

ದೂರವಾದ್ರೂ ಹೊಟ್ಟೆ ಬಳಿ ನಾಗಚೈತನ್ಯ ಕುರುಹು: ಯಾಕಪ್ಪಾ ಇದು ಅಂತಿದ್ದಾರೆ ಫ್ಯಾನ್ಸ್!

 ಅಷ್ಟಕ್ಕೂ ಅರ್ಮನ್​ ಮಲಿಕ್​ ಅವರ ಇತಿಹಾಸ ಕುತೂಹಲಕಾರಿಯಾಗಿದೆ. ಅದೇನೆಂದರೆ, ಅಸಲಿಗೆ ಗಾಯಕ ಅರ್ಮಾನ್​ ಮಲಿಕ್​  ಮೂಲತಃ ಹಿಂದೂ ವ್ಯಕ್ತಿ. ಹೆಸರು ಸಂದೀಪ್​ (Sandeep) ಎಂದು. ಆದರೆ ಮೊದಲ ಹೆಂಡತಿ ಇರುವಾಗಲೇ ಇನ್ನೊಂದು ಮದುವೆಯಾದರು. ಹಿಂದೂ ಸಂಪ್ರದಾಯದಲ್ಲಿ ಎರಡು ಮದುವೆಗೆ ಅವಕಾಶ ಇಲ್ಲದ ಕಾರಣ, ಇಸ್ಲಾಂಗೆ ಮತಾಂತರಗೊಂಡರು. ಈಗ ಅವರು ಕಾನೂನುಬದ್ಧವಾಗಿ  ಎರಡು ಪತ್ನಿಯನ್ನು (two wives) ಪಡೆದಂತಾಗಿದೆ. ಮೊದಲ ಪತ್ನಿಯಿಂದ ಒಂದು ಗಂಡು ಮಗುವನ್ನು ಹೊಂದಿರುವ ಅವರು, ಈಗ ಇಬ್ಬರೂ ಪತ್ನಿಯರನ್ನು ಒಟ್ಟಿಗೇ ಗರ್ಭಿಣಿ ಮಾಡಿದ್ದಾರೆ. 

 

click me!