10 ಕೋಟಿ ಪಡೆದು ಪಾಕಿಸ್ತಾನದಲ್ಲಿ ಡಾನ್ಸ್‌: ಐಶ್ವರ್ಯಾ ರೈಯನ್ನು ಸುತ್ತಿಕೊಂಡಿದ್ದ ಆ ವಿವಾದ ನಿಜವೇ?

Published : Sep 15, 2024, 07:39 AM IST
10 ಕೋಟಿ ಪಡೆದು ಪಾಕಿಸ್ತಾನದಲ್ಲಿ ಡಾನ್ಸ್‌: ಐಶ್ವರ್ಯಾ  ರೈಯನ್ನು ಸುತ್ತಿಕೊಂಡಿದ್ದ ಆ ವಿವಾದ ನಿಜವೇ?

ಸಾರಾಂಶ

2008ರಲ್ಲಿ ಐಶ್ವರ್ಯಾ ರೈ ಪಾಕಿಸ್ತಾನದ ಅಂದಿನ ರಾಷ್ಟ್ರಪತಿ ಆಸಿಫ್ ಅಲಿ ಜರ್ದಾರಿ ಆಯೋಜಿಸಿದ್ದ ಪಾರ್ಟಿಯಲ್ಲಿ ಪ್ರದರ್ಶನ ನೀಡಿದ್ದರು ಎಂಬ ವರದಿಗಳು ಬಂದಿದ್ದವು.  ಪಾಕಿಸ್ತಾನಿ ರಾಜಕೀಯ ವಿಶ್ಲೇಷಕ ಡಾ. ಶಾಹಿದ್ ಮಸೂದ್ ಅವರು ಈ ಆರೋಪ ಮಾಡಿದ್ದರು. ಆದರೆ ಅವರ ಆರೋಪಕ್ಕೆ ಯಾವುದೇ ಸಾಕ್ಷ್ಯಗಳಿರಲಿಲ್ಲ

2008ರಲ್ಲಿ ಐಶ್ವರ್ಯಾ ರೈ ಪಾಕಿಸ್ತಾನದ ಅಂದಿನ ರಾಷ್ಟ್ರಪತಿ ಆಸಿಫ್ ಅಲಿ ಜರ್ದಾರಿ ಆಯೋಜಿಸಿದ್ದ ಪಾರ್ಟಿಯಲ್ಲಿ ಪ್ರದರ್ಶನ ನೀಡಿದ್ದರು ಎಂಬ ವರದಿಗಳು ಬಂದಿದ್ದವು.  ಪಾಕಿಸ್ತಾನಿ ರಾಜಕೀಯ ವಿಶ್ಲೇಷಕ ಡಾ. ಶಾಹಿದ್ ಮಸೂದ್ ಅವರು ಈ ಆರೋಪ ಮಾಡಿದ್ದರು. ಆದರೆ ಅವರ ಆರೋಪಕ್ಕೆ ಯಾವುದೇ ಸಾಕ್ಷ್ಯಗಳಿರಲಿಲ್ಲ. 

ಬಾಲಿವುಡ್ ನಟಿ ಮತ್ತು ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಜೀವನದಲ್ಲೂ ಹಲವು ವಿವಾದಗಳಾಗಿದ್ದವು. ಕೆಲವೊಮ್ಮೆ ವಿವಾದಗಳು ನಿಜವಾಗಿದ್ದರೆ, ಕೆಲವೊಮ್ಮೆ ಮಾಧ್ಯಮಗಳೇ ಅವರನ್ನು ವಿವಾದಗಳಲ್ಲಿ ಸಿಲುಕಿಸಿವೆ. ಅಂತಹದ್ದೇ ಒಂದು ವಿವಾದ 2008 ರಲ್ಲಿ ನಡೆದಿತ್ತು., ಐಶ್ವರ್ಯಾ ರೈ ಪಾಕಿಸ್ತಾನ ಪಾರ್ಟಿಯೊಂದರಲ್ಲಿ ಪ್ರದರ್ಶನ ನೀಡಿದ್ದರು, ಆಗಿನ ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಈ ಪಾರ್ಟಿಯನ್ನು ಆಯೋಜಿಸಿದ್ದರು ಮತ್ತು ಅನೇಕ ವಿಐಪಿ ಅತಿಥಿಗಳು ಇದರಲ್ಲಿ ಭಾಗವಹಿಸಿದ್ದರು ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಈ ವಿಚಾರವನ್ನು ನಾವು ಹೇಳುತ್ತಿಲ್ಲ. ಪಾಕಿಸ್ತಾನದ ರಾಜಕೀಯ ವಿಶ್ಲೇಷಕ ಡಾ. ಶಾಹಿದ್ ಮಸೂದ್ ಅವರೇ ವೀಡಿಯೊವೊಂದರಲ್ಲಿ ಈ ಬಗ್ಗೆ ಹೇಳಿಕೆ ನೀಡಿದ್ದಾರೆ.

ಐಶ್ವರ್ಯಾ ರೈ, ಪಾಕಿಸ್ತಾನ ಪಾರ್ಟಿ  ವಿವಾದ

ಡಾ. ಶಾಹಿದ್ ಮಸೂದ್ ಅವರು ಪಾಕಿಸ್ತಾನದ ಜಿಎನ್‌ ಚಾನೆಲ್‌ನಲ್ಲಿ ಪ್ರಸಾರವಾಗುತ್ತಿದ್ದ ಕಾರ್ಯಕ್ರಮವೊಂದನ್ನು ನಡೆಸಿಕೊಡುತ್ತಿದ್ದರು. ಈ ಕಾರ್ಯಕ್ರಮದಲ್ಲಿ ಆಸಿಫ್ ಅಲಿ ಜರ್ದಾರಿ ಆಯೋಜಿಸಿದ್ದ ಪಾರ್ಟಿ ಮತ್ತು ಅದರಲ್ಲಿ ಐಶ್ವರ್ಯಾ ರೈ ಅವರ ಪ್ರದರ್ಶನದ ಬಗ್ಗೆ ಅವರು ಹೇಳಿಕೆ ನೀಡಿದ್ದರು. ಈ ಪಾರ್ಟಿಯನ್ನು ಪಾಕಿಸ್ತಾನದ ರಾಷ್ಟ್ರಪತಿ ಭವನದಲ್ಲಿ ಆಯೋಜಿಸಲಾಗಿತ್ತು. ಆಗಿನ ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಐಶ್ವರ್ಯಾ ಅವರ ಅಭಿಮಾನಿಯಾಗಿದ್ದರು. ಹೀಗಾಗಿ ಅಲ್ಲಿ ಒಂದು ರಾತ್ರಿ ಪ್ರದರ್ಶನ ನೀಡಲು ನಟಿಗೆ 10 ಕೋಟಿ ರೂಪಾಯಿಗಳನ್ನು ನೀಡಿದ್ದರು. ಸ್ವತಃ ಜರ್ದಾರಿ ಅವರೇ ಈ ಪಾರ್ಟಿಯ ಬಗ್ಗೆ ತಮ್ಮ ಆಪ್ತ ಡಾ. ಶಾಹಿದ್ ಮಸೂದ್ ಅವರಿಗೆ ತಿಳಿಸಿದ್ದರು ಎಂದು ಹೇಳಲಾಗಿದೆ.

ಐಶ್ವರ್ಯಾ ರೈಯಂತೆ ಮಗಳಿಗಾಗಿ ದಾದಿ ನೇಮಿಸದೇ ತಾವೇ ನೋಡ್ಕೋತಾರಂತೆ ದೀಪಿಕಾ ಪಡುಕೋಣೆ

ಪಾಕಿಸ್ತಾನದ ಪ್ರಸಿದ್ಧ ವ್ಯಕ್ತಿಗಳಿಂದ  ಐಶ್ವರ್ಯಾ ರೈಗೆ ಆಹ್ವಾನ

ಪಾಕಿಸ್ತಾನದ ರಾಷ್ಟ್ರಪತಿ ಭವನದಲ್ಲಿ ನಡೆದ ಈ ರಹಸ್ಯ ಪಾರ್ಟಿಯಲ್ಲಿ ಪಾಕಿಸ್ತಾನದ ಕೆಲವು ಪ್ರಸಿದ್ಧ ವ್ಯಕ್ತಿಗಳು ಭಾರತದ ಪ್ರಸಿದ್ಧ ನಟಿಯಾದ ಐಶ್ವರ್ಯಾ ರೈಗೆ ಪಾರ್ಟಿಗೆ ಬಂದು ನೃತ್ಯ ಪ್ರದರ್ಶನ ನೀಡುವಂತೆ ಆಹ್ವಾನಿಸಿದ್ದರು ಎಂದು ಮಸೂದ್ ತಮ್ಮ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ಆದಾಗ್ಯೂ, ಐಶ್ವರ್ಯಾ ರೈ ಅವರು ಈ ರೀತಿಯ ಯಾವುದೇ ರಹಸ್ಯ ಪಾರ್ಟಿಯಲ್ಲಿ ಭಾಗವಹಿಸಿ ಪ್ರದರ್ಶನ ನೀಡಿದ್ದಾರೆ ಎಂಬುದಕ್ಕೆ ಯಾವುದೇ ವೀಡಿಯೊ ಅಥವಾ ಸಾಕ್ಷಿಗಳು ಲಭ್ಯವಿಲ್ಲ. ಈ ಸುದ್ದಿ ಮಾಧ್ಯಮಗಳಲ್ಲಿ ಬಂದಾಗ ಐಶ್ವರ್ಯಾ ರೈ ಅವರು ಕೋಪಗೊಂಡಿದ್ದರು ಎನ್ನಲಾಗಿದೆ. ಅಲ್ಲದೇ ಆ ಸಮಯದಲ್ಲಿ ಐಶ್ವರ್ಯಾ ರೈ ಅವರಿಗೆ ಮದುವೆಯೂ ಆಗಿತ್ತು. ಈ ಘಟನೆ ನಡೆದ ಸಮಯದಲ್ಲಿ ಐಶ್ವರ್ಯಾ ರೈ ಅವರು ಅಭಿಷೇಕ್ ಬಚ್ಚನ್ ಅವರನ್ನು ವಿವಾಹವಾಗಿದ್ದರು. ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ 2007 ರ  ಏಪ್ರಿಲ್ 20 ರಂದು ಮದುವೆಯಾಗಿದ್ದರು.

ವಿಚ್ಛೇದನ ವದಂತಿಗಳಿಂದ ಸುದ್ದಿಯಲ್ಲಿರುವ ಐಶ್‌

ಐಶ್ವರ್ಯಾ ಇತ್ತೀಚೆಗೆ ಅಭಿಷೇಕ್ ಬಚ್ಚನ್ ಅವರೊಂದಿಗಿನ ಡಿವೋರ್ಸ್‌ ವದಂತಿಗಳಿಂದಾಗಿ ಸುದ್ದಿಯಲ್ಲಿದ್ದಾರೆ. ಈ ವರ್ಷದ ಜುಲೈನಲ್ಲಿ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹದಲ್ಲಿ ಐಶ್ವರ್ಯಾ ತಮ್ಮ ಮಗಳು ಆರಾಧ್ಯಾ ಅವರೊಂದಿಗೆ ಕಾಣಿಸಿಕೊಂಡರೆ, ಇತ್ತ ಪತಿ ಅಭಿಷೇಕ್‌ ಬಚ್ಚನ್ ಅಪ್ಪ ಅಮ್ಮನೊಂದಿಗೆ ಕಾಣಿಸಿಕೊಂಡಿದ್ದರು ಮತ್ತು ಕುಟುಂಬದ ಫೋಟೋಗೂ ಫೋಸ್ ಕೊಡಲಿಲ್ಲ, ಇದಾದ ನಂತರ ಈ ಡಿವೋರ್ಸ್ ವದಂತಿಗಳಿಗೆ ರೆಕ್ಕೆಪುಕ್ಕ ಬಂದಿದ್ದವು. ಆದಾಗ್ಯೂ, ಐಶ್ವರ್ಯಾ, ಅಭಿಷೇಕ್ ಅಥವಾ ಬಚ್ಚನ್ ಕುಟುಂಬದ ಯಾರೂ ಕೂಡ ಈ ಬಗ್ಗೆ ಯಾವುದೇ ಹೇಳಿಕೆಯನ್ನು ಇದುವರೆಗೆ ನೀಡಿಲ್ಲ.  ಆರಾಧ್ಯಾ ತನ್ನ ತಾಯಿ ಐಶ್ವರ್ಯಾ ಅವರೊಂದಿಗೆ ಅಜ್ಜಿಯ ಮನೆಯಲ್ಲಿ ವಾಸಿಸುತ್ತಿದ್ದರೆ, ಅಭಿಷೇಕ್ ತಮ್ಮ ಪೋಷಕರಾದ ಅಮಿತಾಬ್ ಬಚ್ಚನ್ ಮತ್ತು ಜಯಾ ಬಚ್ಚನ್ ಅವರೊಂದಿಗೆ ಜಲ್ಸಾದಲ್ಲಿ ವಾಸಿಸುತ್ತಿದ್ದಾರೆ.

ಬಾಲಿವುಡ್’ನ ಈ ಸ್ಟಾರ್ ನಟರಿಗಿಂತ ಅವರ ಹೆಂಡ್ತಿಯರೇ ಶ್ರೀಮಂತರು!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ
ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?