ರಾಜಕೀಯಕ್ಕೂ ಪ್ರವೇಶಿಸುವ ಮುನ್ನ ದೊಡ್ಡ ಸೂಚನೆ ಕೊಟ್ಟ ವಿಜಯ್ ದಳಪತಿ. ಕಾರು ನಂಬರ್ ಪ್ಲೇಟ್ ನೋಡಿ ಎಲ್ಲರೂ ಶಾಕ್......
ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಫ್ಯಾನ್ಸ್ ಹೊಂದಿರುವ ನಟರಲ್ಲಿ ತಮಿಳಿನ ಸೂಪರ್ ಸ್ಟಾರ್ ವಿಜಯ್ ದಳಪತಿ ಒಬ್ಬರು. ಅಲ್ಲದೆ ಅತಿ ಹೆಚ್ಚು ತೆರಿಗೆ ಪಾವತಿ ಮಾಡುವ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಬಾಲಿವುಡ್ ಸ್ಟಾರ್‌ಗಳನ್ನು ಹಿಂದಿಕ್ಕೆ ಎರಡನೇ ಸ್ಥಾನದಲ್ಲಿ ದಳಪತಿ ನಿಂತಿದ್ದಾರೆ. ಸೂಪರ್ ಹಿಟ್ ಸಿನಿಮಾಗಳನ್ನು ನೀಡುತ್ತಿದ್ದ ವಿಜಯ್ ದಳಪತಿ ಈಗ ರಾಜಕೀಯಕ್ಕೆ ಪ್ರವೇಶಿಸಲು ಸಜ್ಜಾಗಿದ್ದಾರೆ. ವಿಜಯ್ ಮುಂದಿನ ಸಿಎಂ ಅನ್ನೋ ಘೋಷಣೆಯನ್ನು ಈಗಾಗಲೆ ಶುರು ಮಾಡಿದ್ದಾರೆ ಫ್ಯಾನ್ಸ್ ಕೂಗುತ್ತಿದ್ದಾರೆ.
ನಂಬರ್ ಪ್ಲೇಟ್ ರಹಸ್ಯ:
ರಾಜಕೀಯ ಕೆಲಸಕ್ಕೆ ವಿಜಯ್ ದಳಪತಿ ಸುಝುಕಿ ಕಾರನ್ನು ಬಳಸುತ್ತಿದ್ದಾರೆ. ಇದು ಬಿಳಿ ಬಣ್ಣದ ಕಾರು ಆಗಿದ್ದು ನಂಬರ್ ಪ್ಲೇಟ್ TN 07 CM 2026. ಈ ಕಾರನ್ನು ವಿಜಯ್ ತಮ್ಮ ಚಿತ್ರದ ನಿರ್ದೇಶಕರಾದ ವೆಂಕಟ್ ಪ್ರಭು ಹೆಸರಿನಲ್ಲಿ ಖರೀದಿಸಿದ್ದಾರೆ. ವೆಂಕಟ್ ಪ್ರಭು ಮತ್ತು ವಿಜಯ್ ದಳಪತಿ ....ಮಹೇಂದ್ರ ಸಿಂಗ್ ಧೋನಿ ಅಪ್ಪಟ್ಟ ಅಭಿಮಾನಿ ಹೀಗಾಗಿ 07 ಸೀರಿಸ್ ಆಯ್ಕೆ ಮಾಡಿಕೊಂಡಿದ್ದಾರೆ. ಈ ನಂಬರ್ ಪ್ಲೇಟ್‌ನ ಅರ್ಥ ಏನೆಂದರೆ ತಮಿಳು ನಾಡಿನ (TN) (07) ಧೋನಿ ಲಕ್ಕಿ ನಂಬರ್ (CM 2026)2026ರ ಸಿಎಂ ಆಗುವುದು ವಿಜಯ್ ಅವರೇ ಎಂದು. ಇಷ್ಟು ಫ್ಯಾನ್ಸ್ ಬಿಡಿಸಿರುವ ಗುಟ್ಟು.
ಕೋಟಿಯಲ್ಲಿ ಆಸ್ತಿ ಹೊಂದಿರುವ ವಿಜಯ್ ದಳಪತಿ ಯಾಕೆ ಕೇವಲ 11-15 ಬೆಲೆಯ ಕಾರಿನಲ್ಲಿ ಯಾಕೆ ಓಡಾಡುತ್ತಿದ್ದಾರೆ ಅನ್ನೋದು ಎಲ್ಲರ ಕುತೂಹಲ. ಅಲ್ಲದೆ ವೆಂಕಟ್ ಪ್ರಭು ಮತ್ತು ದಳಪತಿ ಕ್ಲೋಸ್ ಫ್ರೆಂಡ್ ಆಗಿರುವ ಕಾರಣ ಅವರ ಹೆಸರಿನಲ್ಲಿ ಖರೀದಿಸಿರಬಹುದು. ವಿಜಯ್ ಮತ್ತು ವೆಂಕಟ್ ಪ್ರಭು ಒಟ್ಟಿಗೆ ಗ್ರೇಟೆಸ್ಟ್ ಆಫ್ ಆಲ್ ಟೈಮ್ ಸಿನಿಮಾದಲ್ಲಿ ಕೆಲಸ ಮಾಡಿದ್ದರು. ಈ ಸಿನಿಮಾ ದೊಡ್ಡ ಫ್ಲಾಪ್ ಆಗಿದ್ದರೂ ವಿಜಯ್ ತಲೆ ಕೆಡಿಸಿಕೊಳ್ಳದೆ ಮುಂದಿನ ಚಿತ್ರಕ್ಕೆ ಸಹಿ ಹಾಕಿದ್ದಾರೆ.
ಒಂದು ಹೊತ್ತು ಊಟಕ್ಕೂ ಕಷ್ಟ ಪಡುತ್ತಿದ್ವಿ; ಗಿಚ್ಚಿ ಗಿಲಿಗಿಲಿ ವೇದಿಕೆ ಮೇಲೆ ಕಣ್ಣಿರಿಟ್ಟ ಚಿಲ್ಲರ್ ಮಂಜು
ವಿಜಯ್ ತಮ್ಮ ಮುಂದಿನ ಸಿನಿಮಾ ಟೈಟಲ್ ಮತ್ತು ಲುಕ್ ರಿವೀಲ್ ಮಾಡುವ ಮುನ್ನವೇ 275 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಒಟ್ಟಾರೆ ವಿಜಯ್ ನಂಬರ್ ಪ್ಲೇಟ್ ವೈರಲ್ ಆಗೋದು ಗ್ಯಾರಂಟಿ.