600 ವರ್ಷಕ್ಕೊಮ್ಮೆ ಸಂಭವಿಸೋ ಜಾತಕದಲ್ಲಿ ಹುಟ್ಟಿದ ಐಶ್​ ದಾಂಪತ್ಯಕ್ಕೆ ಈ ಡಾಕ್ಟರೇ ಬಿರುಗಾಳಿ?

Published : Aug 11, 2024, 12:30 PM IST
600 ವರ್ಷಕ್ಕೊಮ್ಮೆ ಸಂಭವಿಸೋ ಜಾತಕದಲ್ಲಿ ಹುಟ್ಟಿದ ಐಶ್​ ದಾಂಪತ್ಯಕ್ಕೆ ಈ ಡಾಕ್ಟರೇ ಬಿರುಗಾಳಿ?

ಸಾರಾಂಶ

ಐಶ್ವರ್ಯ ರೈ ಮತ್ತು ಅಭಿಷೇಕ್​ ಬಚ್ಚನ್​ ನಡುವೆ ಬಿರುಕು ಬರಲು ಈ ವೈದ್ಯ ಕಾರಣನೆ? ಏನಿದು ಹೊಸ ವಿಷಯ?   

ಐಶ್ವರ್ಯ ರೈ ಮತ್ತು ಅಭಿಷೇಕ್​ ಬಚ್ಚನ್​ ನಡುವಿನ ದಾಂಪತ್ಯ ಜೀವನದ ಕುರಿತು ಕಳೆದ ಏಳೆಂಟು ತಿಂಗಳುಗಳಿಂದ ಗುಸುಗುಸು-ಪಿಸುಪಿಸು ನಡೆಯುತ್ತಲೇ ಇದೆ. ಡಿವೋರ್ಸ್​ ಸುದ್ದಿ ವೈರಲ್​ ಆಗುತ್ತಿದ್ದಂತೆಯೇ ಈ ಜೋಡಿ ಒಟ್ಟಿಗೆ ಕಾಣಿಸಿಕೊಳ್ಳುವುದು ಒಂದೆಡೆ ಆಗುತ್ತಿದ್ದರೆ, ಹಲವು ಸಂದರ್ಭದಲ್ಲಿ ಇವರಿಬ್ಬರ ನಡುವೆ ಏನೂ ಸರಿಯಿಲ್ಲ ಎಂಬ ಸಾಕ್ಷ್ಯ ಪುರಾವೆಗಳು ಸಿಗುತ್ತಲೇ ಇವೆ. ಪರಸ್ಪರ ಒಟ್ಟಿಗೇ ಇರುವ ಫೋಟೋಗಳನ್ನು ಈ ದಂಪತಿ ಆಗಾಗ್ಗೆ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಇನ್ನೇನು ಎಲ್ಲವೂ ಸರಿಯಾಗಿದೆ ಎನ್ನಿಸಿದಾಗ, ಮತ್ತೆ ಡಿವೋರ್ಸ್​ ಸುದ್ದಿ ಸದ್ದು ಮಾಡುತ್ತಿರುತ್ತದೆ. ನಡುನಡುವೆ ಮಗ-ಸೊಸೆಯ ಬ್ರೇಕಪ್​ ಕುರಿತು ನಟ ಅಮಿತಾಭ್​ ಬಚ್ಚನ್​ ಅಡ್ಡ ಗೋಡೆಯ ಮೇಲೆ ದೀಪ ಇಟ್ಟಿರೋ ರೀತಿ ಸ್ಟೇಟ್​ಮೆಂಟ್​ ಕೊಟ್ಟು ಇನ್ನಷ್ಟು ಗೊಂದಲ ಉಂಟುಮಾಡುವುದು ಇದೆ.

ಅದೇನೇ ಇದ್ದರೂ ಇವರಿಬ್ಬರ ದಾಂಪತ್ಯ ಜೀವನದ ನಡುವೆ ವಿಚ್ಛೇದನದ ಸುದ್ದಿಯಾಗಲು ಕಾರಣ ಓರ್ವ ಡಾಕ್ಟರ್​ ಎನ್ನುವ ಮಾತು ಕೇಳಿಬಂದಿದೆ. ಅಷ್ಟಕ್ಕೂ ಐಶ್ವರ್ಯ ರೈ ಅವರದ್ದು, 600 ವರ್ಷಕ್ಕೊಮ್ಮೆ ಸಂಭವಿಸೋ ಜಾತಕದಲ್ಲಿ ಹುಟ್ಟಿರೋದಂತೆ. ಖ್ಯಾತ ಜ್ಯೋತಿಷಿಯೊಬ್ಬರು ಹೇಳಿದ ಮಾತನ್ನು  ಖುದ್ದು ಐಶ್ವರ್ಯ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಐಶ್ವರ್ಯಾ ರೈ ಜಾತಕದಲ್ಲಿ ಕುಜ ದೋಷ ಹಾಗೂ ರಾಜ ಯೋಗ ಎರಡು ಇದೆ. ಹೀಗಾಗಿನೇ ಐಶ್ವರ್ಯಾ ರೈ ವಿಶ್ವ ಸುಂದರಿ ಪಟ್ಟಕ್ಕೇರಿದ್ದಂತೆ. ಮಾತ್ರವಲ್ಲ, ಐಶ್ವರ್ಯ ರೈ ಜಾತಕದಲ್ಲಿ ಸಮಸ್ಯೆ ಇದ್ದ ಕಾರಣ ಮೊದಲು ಒಂದು ಮರದ ಜೊತೆ ಆಕೆ ಮದುವೆ ಮಾಡಿಸಿದ್ದರು. ಇದರ ಬಗ್ಗೆಯೂ ನಟಿ ಸ್ಪಷ್ಟನೆ ಕೊಟ್ಟಿದ್ದರು. ಆದರೆ  ಇಂಥ ಅಪೂರ್ವ ಜಾತಕ ಇರುವ ನಟಿಯ ಬಾಳಲ್ಲಿ ಬಿರುಗಾಳಿ ಏಳಲು ಕಾರಣ ವೈದ್ಯ ಎನ್ನುವ ಮಾತು ಕೇಳಿಬಂದಿದೆ.

ಮಾಡೆಲ್​ ಫ್ಲರ್ಟ್​ ಮಾಡ್ತಿದ್ದಂತೆ ಕಂಟ್ರೋಲ್​ ಕಳಕೊಂಡ ಸಿದ್ಧಾರ್ಥ್​? ಪತ್ನಿ ಕಿಯಾರಾಗೆ ಸಾರಿ ಕೇಳಿದ ರೂಪದರ್ಶಿ!
 
 ವರದಿಗಳ ಪ್ರಕಾರ, ಐಶ್ವರ್ಯಾ ಮತ್ತು ಅಭಿಷೇಕ್ ವಿಚ್ಛೇದನಕ್ಕೆ ಕಾರಣವೆಂದರೆ ಜಿರಾಕ್ ಮಾರ್ಕರ್ ಎಂಬ ವೈದ್ಯ. ಐಶ್ವರ್ಯಾ ಮತ್ತು ಝಿರಾಕ್ ಮಾರ್ಕರ್ ಹಲವು ವರ್ಷಗಳಿಂದ ಆತ್ಮೀಯ ಸ್ನೇಹಿತರಾಗಿದ್ದು, ಇದು ಅಭಿಷೇಕ್ ಜೊತೆಗಿನ ಅವರ ದಾಂಪತ್ಯದಲ್ಲಿ ಒತ್ತಡಕ್ಕೆ ಕಾರಣವಾಗಿರಬಹುದು ಎನ್ನಲಾಗುತ್ತಿದೆ. ಐಶ್ವರ್ಯಾ ರೈ ಮತ್ತು ಜಿರಾಕ್ ಮಾರ್ಕರ್ ಬಹಳ ಹಿಂದಿನಿಂದಲೂ ಪರಸ್ಪರ ಪರಿಚಿತರು. ವರ್ಷಗಳ ಹಿಂದೆ, ಐಶ್ವರ್ಯಾ ಅವರ ಪುಸ್ತಕಗಳಲ್ಲಿ ಒಂದನ್ನು ಬಿಡುಗಡೆ ಮಾಡಿದರು. ಆ ಸಂದರ್ಭದಲ್ಲಿ ಐಶ್ವರ್ಯಾ ವೈದ್ಯನ ಕೆನ್ನೆಗೆ ಮುತ್ತಿಕ್ಕಿದ್ದರು. ಇವರೇ ದಂಪತಿ ನಡುವೆ ಬಿರುಗಾಳಿಯಂತೆ ಬಂದವರು ಎನ್ನಲಾಗುತ್ತಿದೆ.
 
ಮದುವೆ, ಮಕ್ಕಳು ಎಂಬ ವಿಷ್ಯ ಬಂದಾಗ ಮೊದಲು ಮನೆ, ಕುಟುಂಬದ ಹಿನ್ನೆಲೆಯನ್ನು ಜನರು ನೋಡ್ತಾರೆ.  ಐಶ್ವರ್ಯಾ ಮತ್ತು  ಅಭಿಷೇಕ್​ ವಿಚ್ಛೇದನ ಪಡೆಯದಿರಲು ಇದೇ ಕಾರಣ ಎಂದೂ ಹೇಳಲಾಗುತ್ತಿದೆ.  ಈವರೆಗೆ ಕುಟುಂಬದಲ್ಲಿ ಒಂದೇ ಒಂದು ಡಿವೋರ್ಸ್ ಆಗಿಲ್ಲ. ಈಗ ಆ ಲಕ್ಷ್ಮಣ ರೇಖೆಯನ್ನು ದಾಟಲು ಮಾಜಿ ವಿಶ್ವಸುಂದರಿ ಹಾಗೂ ಬಿಗ್ ಬಿ ಮಗನಿಗೆ ಇಷ್ಟವಿಲ್ಲ. ಕುಟುಂಬಕ್ಕಾಗಿ ಇವರು ವಿಚ್ಛೇದನ ನಿರ್ಧಾರದಿಂದ ಹೊರಗೆ ಬಂದಿದ್ದಾರೆ. ಕುಟುಂಬಕ್ಕಾಗಿ ಈ ತ್ಯಾಗ ಮಾಡ್ತಿದ್ದಾರೆ. ಇಬ್ಬರ ಮಧ್ಯೆ ಭಿನ್ನಾಭಿಪ್ರಾಯವಿದ್ರೂ ವಿಚ್ಛೇದನ ಪಡೆಯದಿರಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದ್ದರೂ,  2007 ರಲ್ಲಿ ನಡೆದ ವೈವಾಹಿಕ ಜೀವನಕ್ಕೆ ಜೋಡಿ ವಿದಾಯ ಹೇಳತ್ತಾ, ಇಲ್ವಾ ಎನ್ನುವುದು ಮಾತ್ರ  ಅಧಿಕೃತವಾಗಿ ಬಹಿರಂಗಗೊಳ್ಳಲಿಲ್ಲ. 

ಸತ್ಯ ಸೀರಿಯಲ್​ ಮುಗಿದ ಬೆನ್ನಲ್ಲೇ ರಿಯಲ್​ ಪತಿ ಜೊತೆ ಗೌತಮಿ ಜಾಲಿ ಮೂಡ್​- ವಿಡಿಯೋ ವೈರಲ್​
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?