ಬೆತ್ತಲೆ ಫೋಟೋ ಶೂಟ್, ಬಾಯ್ ಫ್ರೆಂಡ್ ಕೈಯಲ್ಲಿ ಒಳ ಉಡುಪು ಕ್ಲೀನ್ ಮಾಡಿಸಿದ್ದ ನಟಿ ಈಗೆಲ್ಲಿ?

ಕೆಲ ನಟಿಯರ ಹೆಸರು ಕೇಳ್ತಿದ್ದಂತೆ ಈಗ್ಲೂ ಹುಡುಗ್ರ ಎದೆ ಬಡಿತ ಹೆಚ್ಚಾಗುತ್ತೆ. ಅದ್ರಲ್ಲಿ ಹಾಟ್, ಬೋಲ್ಡ್ ನಟಿ ವೀಣಾ ಮಲ್ಲಿಕ್ ಸೇರಿದ್ದಾರೆ. ಮೆನ್ಸ್ ಮ್ಯಾಗಜಿನ್ ನಲ್ಲಿ ಬೆತ್ತಲಾಗಿದ್ದ ನಟಿ ಕಥೆ ಒಂದಾ ಎರಡಾ.. 
 


ಪಾಕಿಸ್ತಾನದ ಕಾಂಟ್ರವರ್ಸಿ ನಟಿ ವೀಣಾ ಮಲ್ಲಿಕ್ ( Pakistani controversial actress Veena Mallik) ಸಿನಿಮಾಗಿಂತ ಪರ್ಸನಲ್ ಲೈಫ್ ನಲ್ಲಿ ಸುದ್ದಿಯಾಗಿದ್ದೆ ಹೆಚ್ಚು. ಈಗ ಪಾಕಿಸ್ತಾನ (Pakistan)ದ ಟಿವಿ ಚಾನೆಲ್‌ನಲ್ಲಿ ಆ್ಯಂಕರ್ ಆಗಿ ಮಿಂಚುತ್ತಿರುವ ವೀಣಾ ಮಲ್ಲಿಕ್ ಹಿನ್ನಲೆ ಭರ್ಜರಿಯಾಗೇ ಇದೆ. ಒಂದ್ಕಾಲದಲ್ಲಿ ಸಿಕ್ಕಾಪಟ್ಟೆ ನೌಟಂಕಿ ಮಾಡಿದ್ದ ವೀಣಾ ಮಲ್ಲಿಕ್, ಪ್ರಸಿದ್ಧ ಮಾಜಿ ಕ್ರಿಕೆಟರ್ (cricketer) ಜೊತೆ ಪ್ರೀತಿಯಾಟ ಆಡಿದ್ರು. ಅಷ್ಟೇ ಅಲ್ಲ, ಬಾಯ್ ಫ್ರೆಂಡ್ ಕೈನಲ್ಲಿ ತನ್ನ ಅಂಡರ್ ಗಾರ್ಮೆಂಟ್ (Under Garment ) ತೊಳೆಸಿದ್ದು ದೊಡ್ಡ ಸುದ್ದಿಯಾಗಿತ್ತು.

ವೀಣಾ ಒಳ ಉಡುಪು ತೊಳೆದಿದ್ದ ಬಾಯ್ ಫ್ರೆಂಡ್: ಪಾಕಿಸ್ತಾನದ ಬೆಡಗಿ ಬಾಲಿವುಡ್ ಮಾತ್ರವಲ್ಲ ಟಾಲಿವುಡ್‌ನಲ್ಲೂ ಮಿಂಚಿದ್ದಳು. ಹೆಚ್ಚು ಚರ್ಚೆಗೆ ಬಂದಿದ್ದು ಬಿಗ್ ಬಾಸ್ 4ರ ಶೋನಲ್ಲಿ. ವೀಣಾ ಮಲ್ಲಿಕ್ ಎಂಟ್ರಿಯಾಗ್ತಿದ್ದಂತೆ ಬಿಗ್ ಬಾಸ್ ಶೋಗೆ ವಿಶೇಷ ಛಲಕ್ ಬಂದಿತ್ತು. ಕಾಂಟ್ರೋವರ್ಸಿ ರಾಣಿ (Controversial Queen) ಅಂತ ಟೈಟಲ್ ಸಿಕ್ಕಿದ್ದು ಅಲ್ಲಿಂದ್ಲೆ. ಅಶ್ಮಿತ್ ಪಟೇಲ್ ಜೊತೆ ಬಿಗ್‌ಬಾಸ್ ಮನೆಯಲ್ಲಿ ಕ್ಲೋಸ್ ಆಗಿದ್ದ ವೀಣಾ ಮಲ್ಲಿಕ್, ಸಿಕ್ಕ ಅವಕಾಶವೊಂದನ್ನೂ ಬಿಡ್ಲಿಲ್ಲ. ಅಶ್ಮಿತ್ ಪಟೇಲ್‌ಗೆ ಸಾರ್ವಜನಿಕವಾಗಿ ಕಿಸ್ ಮಾಡಿದ್ದ ವೀಣಾ ಮಲ್ಲಿಕ್ ಒಂದು ಕೈ ಮುಂದೆ ಹೋಗಿ ತಮ್ಮ ಒಳ ಉಡುಪನ್ನು ಬಾಯ್ ಫ್ರೆಂಡ್ ಕೈನಲ್ಲಿ ತೊಳೆಸಿದ್ರು. 2010ರಲ್ಲಿ ಬಿಗ್ ಬಾಸ್ ಮನೆಯಲ್ಲಿ, ವೀಣಾ ಮಲ್ಲಿಕ್ ಅಂಡರ್ ಗಾರ್ಮೆಂಟ್ ತೊಳೆದಿದ್ದರು ಅಶ್ಮಿತ್ ಪಟೇಲ್. ಇದಾದ್ಮೇಲೆ ಬಿಗ್ ಬಾಸ್ ಮನೆ, ಮನೆ ಹೊರಗೆ ಸಿಕ್ಕಾಪಟ್ಟೆ ಚರ್ಚೆಯಾಗಿತ್ತು. ಇದಕ್ಕೆ ಸಾಕಷ್ಟು ವಿರೋಧ ಕೂಡ ವ್ಯಕ್ತವಾಗಿತ್ತು.

Latest Videos

ವೀಣಾ ಮಲ್ಲಿಕ್‌  ಅವತಾರ ಹೇಗೇಗಿತ್ತು ನೋಡಿ!

ಪ್ರಸಿದ್ಧ ಕ್ರಿಕೆಟರ್ ಜೊತೆ ಅಫೇರ್ : ವೀಣಾ ಮಲಿಕ್ ಹಾಗೂ  ಪಾಕ್ ಕ್ರಿಕೆಟಿಗ ಮೊಹಮ್ಮದ್ ಆಸಿಫ್ ಜೊತೆಗಿನ ಸಂಬಂಧವೂ ಚರ್ಚೆಗೆ ಬಂದಿತ್ತು. ಸ್ವತಃ ವೀಣಾ ಮಲಿಕ್ ಕೂಡ ಸಂದರ್ಶನವೊಂದರಲ್ಲಿ ಮೊಹಮ್ಮದ್ ಆಸಿಫ್ ಅವರಿಂದ ತನ್ನ ಪಾದಗಳಿಗೆ ಮಸಾಜ್ ಮಾಡಿಸಿಕೊಂಡಿದ್ದೇನೆ ಎಂದಿದ್ದರು. ಮೊಹಮ್ಮದ್ ಆಸಿಫ್ ಸ್ವಭಾವವನ್ನು ಹಾಡಿ ಹೊಗಳಿದ್ದರು ವೀಣಾ ಮಲ್ಲಿಕ್. 

ಮದುವೆಯಾದ ಕೆಲವೇ ವರ್ಷದಲ್ಲಿ ವಿಚ್ಛೇದನ : ವೀಣಾ ಮಲ್ಲಿಕ್ 2013ರಲ್ಲಿ ದುಬೈನ ಉದ್ಯಮಿ ಅಸದ್ ಬಶೀರ್ ಖಟ್ಟಕ್ ಜೊತೆ ಮದುವೆ ಆಗಿ, ಅಭಿಮಾನಿಗಳಿಗೆ ಖುಷಿ ಸುದ್ದಿ ನೀಡಿದ್ದರು. ಆದ್ರೆ ಐದು ವರ್ಷದ ನಂತ್ರ ಇಬ್ಬರೂ ಬೇರೆಯಾಗುವ ನಿರ್ಧಾರಕ್ಕೆ ಬಂದಿದ್ದರು. 2018ರಲ್ಲಿ ವಿಚ್ಛೇದನ ಪಡೆದ ವೀಣಾ ಮಲ್ಲಿಕ್ ಇಬ್ಬರು ಮಕ್ಕಳ ತಾಯಿ. ಮದುವೆಯಾಗಿ, ಮಕ್ಕಳಾದ್ಮೇಲೆ ಮತ್ತೆ ಸಿನಿಮಾಗೆ ವಾಪಸ್ ಆಗುವ ಆಸೆ ಹೊಂದಿದ್ದರು ವೀಣಾ ಮಲ್ಲಿಕ್. ಆದ್ರೆ ಪತಿಗೆ ಇದು ಇಷ್ಟವಿರಲಿಲ್ಲ. ವೀಣಾ ಮಕ್ಕಳನ್ನು ನೋಡ್ಕೊಂಡು ಮನೆಯಲ್ಲಿರಬೇಕೆಂದು ಬಯಸಿದ್ರು ಅಸದ್. ಇದೇ ವಿಷ್ಯಕ್ಕೆ ಇಬ್ಬರ ಮಧ್ಯೆ ಭಿನ್ನಾಭಿಪ್ರಾಯ ಮೂಡಿದ್ದು, ಕೊನೆಯಲ್ಲಿ ವೀಣಾ, ನಟನೆಯನ್ನೇ ಆಯ್ಕೆ ಮಾಡ್ಕೊಂಡ್ರು.

ಸುದ್ದಿ ಮಾಡಿತ್ತು ಬೆತ್ತಲೆ ಫೋಟೋ : ಬಾಲಿವುಡ್ ನಲ್ಲಿ ವೀಣಾ ಮಲ್ಲಿಕ್ ಗೆ ಕೈತುಂಬ ಕೆಲಸ ಸಿಕ್ಕಿತ್ತು ಸುಳ್ಳಲ್ಲ. ಜಿಂದಗಿ 50-50  ಮತ್ತು  ಮುಂಬೈ 125 ಕಿಮೀ ಸೇರಿದಂತೆ ಕೆಲ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ವೀಣಾ, ಟಿವಿ ಶೋಗಳಲ್ಲಿ ಮಿಂಚಿದ್ದರು. ಮಲ್ಲಿಕ್ ಹೆಸರು ಅನೇಕ ಆಕ್ಟರ್ ಜೊತೆ ಥಳುಕು ಹಾಕಿಕೊಂಡಿತ್ತು. 

ಸ್ವಾತಂತ್ರ್ಯ ದಿನಾಚರಣೆಗೆ ಗೋಲ್ಡನ್ ಸ್ಟಾರ್ ಸರ್​ಪ್ರೈಸ್​; 'ಕೃಷ್ಣಂ ಪ್ರಣಯ ಸಖಿ' ಮತ್ತೊಂದು ಸಾಂಗ್ ರಿಲೀಸ್..!

ಪುರುಷರ ಮ್ಯಾಗ್ಸಿನ್ ಗೆ ಬೆತ್ತಲೆ ಫೋಟೋ ಶೂಟ್ ಮಾಡಿಸಿದ್ದ ವೀಣಾ ಮಲ್ಲಿಕ್, ಪಡ್ಡೆಗಳ ನಿದ್ದೆ ಕೆಡಿಸಿತ್ತು. ಆದ್ರೆ ಪಾಕಿಸ್ತಾನದಲ್ಲಿ ವೀಣಾ ಈ ಫೋಟೋ ಕೋಲಾಹಲ ಸೃಷ್ಟಿಸಿತ್ತು. ಅವರ ಅಪ್ಪ, ಮಗಳ ಫೋಟೋ ನೋಡಿ ಕೆಂಡಾಮಂಡಲವಾಗಿದ್ರು. 

click me!