ಬಾಲಿವುಡ್ ನಟಿ ತಾಪ್ಸಿ ಪನ್ನು ಬ್ಯಾಡ್ಮಿಂಟನ್ ಆಟಗಾರ ಮಥಿಯಾಸ್ ಬೋಯ್ ಅವರ ಜೊತೆಗೆ ಗುಟ್ಟಾಗಿ ಮದುವೆಯಾಗಿ ಐದು ತಿಂಗಳಾಗಿದೆ. ಈ ಸಂದರ್ಭದಲ್ಲಿ ಅವರು ಫನ್ನಿ ವಿಷಯವೊಂದನ್ನು ಹೇಳಿದ್ದಾರೆ. ಅದೇನು?
ಬಾಲಿವುಡ್ ನಟಿ ತಾಪ್ಸಿ ಪನ್ನು ಅವರು ಇತ್ತೀಚೆಗೆ ಗುಟ್ಟಾಗಿ ಮದುವೆಯಾಗಿದ್ದು ಇದರಿಂದ ಭಾರಿ ಸುದ್ದಿಯಾಗಿದ್ದಾರೆ. ಬ್ಯಾಡ್ಮಿಂಟನ್ ಆಟಗಾರ ಮಥಿಯಾಸ್ ಬೋಯ್ ಸುಮಾರು 10 ವರ್ಷಗಳಿಂದ ಡೇಟಿಂಗ್ ಬಳಿಕ ಕಳೆದ ಮಾರ್ಚ್ನಲ್ಲಿ ಮದುವೆಯಾಗಿದ್ದರು. ತಿಂಗಳ ಬಳಿಕ ಇವರ ಮದುವೆ ವಿಡಿಯೋಗಳು ಸೋಷಿಯಲ್ಮೀಡಿಯಾದಲ್ಲಿ ವೈರಲ್ ಆಗಿದ್ದವು. ಸಾಮಾನ್ಯವಾಗಿ ಚಿತ್ರತಾರೆಯರ ಮದುವೆ ಎಂದರೆ ಅದು ತಿಂಗಳುಗಟ್ಟಲೆ ಸಂಭ್ರಮದ ಜೊತೆಗೆ ಪ್ರತಿದಿನ ಇಂಚಿಂಚು ಮಾಹಿತಿ ಸೋಷಿಯಲ್ ಮೀಡಿಯಾದಲ್ಲಿ ಕಾಣಬಹುದು. ಆದರೆ ಇದಕ್ಕೆ ವ್ಯತಿರಿಕ್ತವಾಗಿ ತಾಪ್ಸಿ ಅವರು, ಮದುವೆ ಬಗ್ಗೆ ಯಾವುದೇ ಮಾಹಿತಿಯನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿರಲಿಲ್ಲ. ನಂತರ ಮದುವೆ ವಿಡಿಯೋ ವೈರಲ್ ಆದ ಬಳಿಕ ಫ್ಯಾನ್ಸ್ ಶಾಕ್ ಆಗಿದ್ದರು. ಮೊದಲು ಇದು ಶೂಟಿಂಗ್ ವಿಡಿಯೋ ಎಂದುಕೊಂಡಿದ್ದರು ಎಲ್ಲರೂ.ಕೊನೆಗೆ ಇದು ಅಸಲಿ ಮದುವೆ ಎನ್ನುವುದು ತಿಳಿಯಿತು.
ಇದೀಗ ನಟಿ ತಮ್ಮ ಪತಿಯ ಬಗ್ಗೆ ಕೆಲವೊಂದು ವಿಷಯಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಪ್ರೀತಿಗಾಗಿ ಯಾವ ಪರಿಯ ಹುಚ್ಚುತನಕ್ಕೆ ಹೋಗಿದ್ದೆ ಎಂಬ ಬಗ್ಗೆ ಹೇಳಿಕೊಂಡಿರುವ ತಾಪ್ಸಿ, ನಾವಿಬ್ಬರೂ ಮೊದಲು ಡೇಟಿಂಗ್ ಆರಂಭಿಸಿದಾಗ ಮಥಿಯಾಸ್ ಅವರು ನನ್ನನ್ನು ಡೆನ್ಮಾರ್ಕ್ ಅಥವಾ ದುಬೈಗೆ ಡೇಟಿಂಗ್ಗೆ ಕರೆದುಕೊಂಡು ಹೋಗಲು ಬಯಸಿದ್ದರು. ವಿದೇಶಕ್ಕೆ ಹೋಗುವ ಬಗ್ಗೆ ನನ್ನಲ್ಲಿ ಭಯವಿತ್ತು. ಆ ವ್ಯಕ್ತಿ ವಿದೇಶಕ್ಕೆ ಯಾಕೆ ಕರೆದುಕೊಂಡು ಹೋಗುತ್ತಾನೆ ಎನ್ನುವ ಚಿಕ್ಕ ಆತಂಕವೂ ಇತ್ತು. ಹೇಳಿ ಕೇಳಿ ಬಿಳಿ ವ್ಯಕ್ತಿ ಆತ. ವಿದೇಶಕ್ಕೆ ಆತನ ಜೊತೆ ಹೋಗಲು ಹಿಂಜರಿಕೆ ಇತ್ತು ಎನ್ನುತ್ತಲೇ ಸ್ನೇಹಿತರು ಹೇಳಿದ ಮಾತುಗಳನ್ನು ಕೇಳಿ ತಾವು ಅಂದು ಕಂಗಾಲಾಗಿ ಹೋಗಿದ್ದ ಬಗ್ಗೆ ನಟಿ ಹೇಳಿಕೊಂಡಿದ್ದಾರೆ.
ಮಾಡೆಲ್ ಜೊತೆ ಸಿದ್ಧಾರ್ಥ್ ಮಲ್ಹೋತ್ರಾ ಇದೇನು ರ‍್ಯಾಂಪ್ ವಾಕಾ, ರೊಮಾನ್ಸಾ? ಕಿಯಾರಾ ಎಲ್ಲಿದ್ಯಮ್ಮಾ?
ವಿದೇಶಕ್ಕೆ ಕರೆದುಕೊಂಡು ಹೋಗುತ್ತಾರೆ ಎನ್ನುವ ಮಾತನ್ನು ನನ್ನ ಸ್ನೇಹಿತರ ಬಳಿ ಹೇಳಿದಾಗ ಅವರು, ನನ್ನಲ್ಲಿ ಭಯ ಹುಟ್ಟಿಸಿದರು. ಅವನು ದುಬೈನಲ್ಲಿ ನಿನ್ನನ್ನು ಶೇಖ್‌ಗೆ ಮಾರಾಟ ಮಾಡುತ್ತಾನೆ. ಹಾಗೆ ಏಕಾಏಕಿ ಹೋಗಬೇಡ ಎಂದರು. ನನಗೆ ತುಂಬಾ ಭಯವಾಗಿಬಿಟ್ಟಿತ್ತು. ಆಮೇಲೆ ಆತ ಒಳ್ಳೆಯ ವ್ಯಕ್ತಿಯೆಂದು ತಿಳಿಯಿತು. ಈಗ ಸ್ನೇಹಿತರ ಆ ಮಾತುಗಳನ್ನು ನೆನಪಿಸಿಕೊಂಡರೆ ನಗು ಬರುತ್ತದೆ ಎಂದಿದ್ದಾರೆ. ಅಂದಹಾಗೆ, ಮಥಿಯಾಸ್ ಅವರು ಡೆನ್ಮಾರ್ಕ್‌ನ ನಿವಾಸಿ. 2012ರ ಸಮ್ಮರ್ ಒಲಿಂಪಿಕ್ಸ್ ನಲ್ಲೂ ಮಥಿಯಾಸ್ ಬೆಳ್ಳಿ ಪದಕ ಗೆದ್ದಿದ್ದಾರೆ. ಇದರೊಂದಿಗೆ 2015 ರಲ್ಲಿ ಯುರೋಪಿಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ವಿಜೇತರಾಗಿದ್ದಾರೆ.
ಇನ್ನು ಇವರ ಮದುವೆ ಕುರಿತು ಹೇಳುವುದಾದರೆ, ಉದಯಪುರದ ಪರಿಣಯಸೂತ್ರದಲ್ಲಿ ತಾಪ್ಸಿ ಮತ್ತು ಮಥಿಯಾಸ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಆದರೆ ಇವರಿಬ್ಬರೂ ತಮ್ಮ ಮದುವೆಯನ್ನು ಇನ್ನೂ ಅಧಿಕೃತವಾಗಿ ಅನೌನ್ಸ್ ಮಾಡಿರಲಿಲ್ಲ. ಕೊನೆಗೆ ವಿಡಿಯೋ ಶೇರ್ ಮಾಡಿದ್ದರು. ಇದರಲ್ಲಿ, ಅವರು ಡ್ಯಾನ್ಸ್ ಮಾಡುತ್ತಾ ವೇದಿಕೆ ಏರಿದ್ದರು. ಮಥಿಯಾಸ್ ಸೈಕಲ್ನಲ್ಲಿ ಎಂಟ್ರಿ ಕೊಟ್ಟಿದ್ದರು. ಅಲ್ಲಿ ಮದುವೆಯಲ್ಲಿ ಮಂಟಪದ ಬದಲು ಓಪನ್ ಸ್ಟೇಜ್ ಇತ್ತು. ಪಂಜಾಬಿ ಪದ್ಧತಿಯಂತೆ ಮದುವೆಯಾದರು.
36 ವರ್ಷದ ಬಳಿಕ ಏಕ್, ದೋ, ತೀನ್... ಎಂದ ಮಾಧುರಿ: ಅಮೆರಿಕದ ಅಭಿಮಾನಿಗಳಲ್ಲಿ ಹುಚ್ಚೆಬ್ಬಿಸಿದ ನಟಿ!