
ಈ ಚಿತ್ರದಲ್ಲಿ ಕಾಣಿಸ್ತಿರೋ ಮಾದಕ ನಟಿ ಹೆಸರು ಅವನೀತ್ ಕೌರ್. ವಯಸ್ಸು 23. ಕೆಲ ವರ್ಷಗಳ ಹಿಂದೆ ಇದೇ ನಟಿ ಜಾಹೀರಾತು ಒಂದರಲ್ಲಿ ಬಾಲಕಿಯಾಗಿ ಕಾಣಿಸಿಕೊಂಡಿದ್ದಳು. ಎಲ್ಲರ ಬಾಯಲ್ಲೂ ಆ ಜಾಹೀರಾತು ನಲಿದಾಡುತ್ತಿತ್ತು. ಈಗಲೂ ಆ ಡೈಲಾಗ್ ಹೇಳುವವರು ಇದ್ದಾರೆ. ಅಷ್ಟಕ್ಕೂ ಆ ಜಾಹೀರಾತು ಯಾವುದು ಎಂದು ಊಹಿಸಬಲ್ಲಿರಾ? ಅದೇ ಲೈಫ್ ಬಾಯ್ ಹ್ಯಾಂಡ್‌ವಾಷ್. ಬಹುಶಃ ಹೀಗೆ ಹೇಳಿದ್ರೆ ಅರ್ಥವಾಗಲಿಕ್ಕಿಲ್ಲ. ಆದ್ರೆ ಅರೆ ಬಂಟಿ ನಿನ್ನ ಸೋಪ್ ಸ್ಲೋನಾ ಅಂತ ಡೈಲಾಗ್ ಕೇಳಿದ್ರೆ ಥಟ್ ಅಂತ ಆ ಬಾಲಕಿ ನೆನಪಾಗುತ್ತಾಳೆ. ಕೆಲವೇ ವರ್ಷಗಳ ಹಿಂದೆ ಮಾಡಿದ್ದ ಈ ಜಾಹೀರಾತಿನಲ್ಲಿ ಕಾಣಿಸಿಕೊಂಡು ಇದೀಗ ಹಾಟ್ ಬ್ಯೂಟಿಯಾಗಿ ಮಿಂಚಿದ್ದಾರೆ ಅವನೀತ್ ಕೌರ್. ರಿಯಾಲಿಟಿ ಷೋನಿಂದ ಮನೊರಂಜನಾ ಕ್ಷೇತ್ರಕ್ಕೆ ಬಂದಿರೋ ಈಕೆ, ಸಿನಿಮಾ ನಟಿಯಾಗಿಯೂ ಮಿಂಚುತ್ತಿದ್ದಾರೆ.
ಈಕೆ ಮತ್ತೆ ಸದ್ದು ಮಾಡುತ್ತಿರುವ ಕಾರಣ, ಕ್ರಿಕೆಟಿಗ ವಿರಾಟ್ ಕೊಹ್ಲಿಯ ನಿದ್ದೆಗೆಡಿಸಿದ ಕಾರಣಕ್ಕೆ. ಈಕೆಯ ಫ್ಯಾನ್ ಪೇಜ್ ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ ಚಿತ್ರವೊಂದಕ್ಕೆ ವಿರಾಟ್ ಕೊಹ್ಲಿ ಲೈಕ್ ಒತ್ತಿದ್ದರು. ಇದೇ ಭಾರಿ ಸದ್ದು ಮಾಡಿತ್ತು. ಅದು ಎಷ್ಟರಮಟ್ಟಿಗೆ ಟ್ರೋಲ್ ಆಗೋಯ್ತು ಎಂದರೆ ಕೊನೆಗೆ, ಖುದ್ದು ವಿರಾಟ್ ಕೊಹ್ಲಿ ಅವರೇ ತಮ್ಮ ಇನ್ಸ್‌ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಅಧಿಕೃತ ಸ್ಪಷ್ಟೀಕರಣ ನೀಡುವ ಹಾಗಾಯಿತು. ಅವರು 'ಲೈಕ್'ಗೆ ಇನ್‌ಸ್ಟಾಗ್ರಾಮ್ ಅಲ್ಗಾರಿದಮ್ ಅನ್ನು ದೂಷಣೆ ಮಾಡಿದ್ದು, "ಇದರ ಹಿಂದೆ ಯಾವುದೇ ಉದ್ದೇಶವಿಲ್ಲ" ಎಂದು ತಿಳಿಸುವ ಹಾಗಾಗೋಯ್ತು! ಕೊಹ್ಲಿ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಸ್‌ನಲ್ಲಿ ಇದನ್ನು ಬರೆದುಕೊಂಡಿದ್ದಾರೆ. "ನನ್ನ ಫೀಡ್ ಅನ್ನು ತೆರವುಗೊಳಿಸುವಾಗ, ಅಲ್ಗಾರಿದಮ್ ತಪ್ಪಾಗಿ ನನ್ನ ಲೈಕ್‌ಅನ್ನು ಇರಿಸಿರಬಹುದು ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ. ಇದರ ಹಿಂದೆ ಯಾವುದೇ ಉದ್ದೇಶವಿರಲಿಲ್ಲ. ಯಾವುದೇ ಅನಗತ್ಯ ಊಹೆಗಳನ್ನು ಮಾಡದಂತೆ ನಾನು ವಿನಂತಿಸುತ್ತೇನೆ. ನಿಮ್ಮ ತಿಳುವಳಿಕೆಗೆ ಧನ್ಯವಾದಗಳು' ಎಂದು ಅವರು ಬರೆದುಕೊಂಡರು.
ಸ್ವಮೂತ್ರ ಅಮೃತಕ್ಕೆ ಸಮ... ಎನ್ನುತ್ತಲೇ ಕುಡಿಯುವ ಬಗೆ, ಪ್ರಯೋಜನ ತಿಳಿಸಿದ ನಟಿ ಅನು ಅಗರ್ವಾಲ್
ಇನ್ನು ಅವನೀತ್ ಕುರಿತು ಹೇಳುವುದಾದರೆ, 2012 ರಲ್ಲಿ ರಿಯಾಲಿಟಿ ಷೋ ಸ್ಪರ್ಧಿಯಾಗಿ ಪಾಲ್ಗೊಂಡಿದ್ದ ಅವನೀತ್, ಆ ಬಳಿಕ ಹಲವು ರಿಯಾಲಿಟಿ ಷೋ, ಟಿವಿ ಧಾರಾವಾಹಿಗಳಲ್ಲಿ ನಟಿಸಿದರು. ಅಲ್ಲಿಂದ ಬೆಳ್ಳಿ ಪರದೆಗೆ ಎಂಟ್ರಿ ಕೊಟ್ಟರೂ ಹೇಳಿಕೊಳ್ಳುವಂಥ ಅವಕಾಶಗಳು ಸಿಕ್ಕಿಲ್ಲ. ಸಿನಿಮಾಗಳಲ್ಲಿ ಬಹಳ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸಿರುವ ಇವರು, ದೊಡ್ಡ ಬ್ರೇಕ್ಗಾಗಿ ಕಾಯುತ್ತಿದ್ದಾರೆ. ಕಿರುತೆರೆಯಲ್ಲಿ ಬಾಲ ನಟಿಯಾಗಿ ಹಲವು ಜಾಹೀರಾತುಗಳಲ್ಲಿ ಬಣ್ಣ ಹಚ್ಚಿ ಜನಪ್ರಿಯರಾದರೂ ಸದ್ಯ ಐಟಂ ಹಾಡುಗಳಿಗೆ ತೃಪ್ತಿ ಪಟ್ಟಿಕೊಳ್ಳುತ್ತಿದ್ದಾರೆ. ನಟಿ ಅವನೀತ್ ಕೌರ್ ಸೋಶಿಯಲ್ ಮೀಡಿಯಾಗಳಲ್ಲಿ ಆಗಾಗ ಸಖತ್ ಹಾಟ್ ಲುಕ್ ಕೊಟ್ಟಿರುವ ಫೋಟೊಗಳನ್ನು ಶೇರ್ ಮಾಡುತ್ತಿದ್ದಾರೆ.
ನಟಿ ಬಾಲಿವುಡ್‌ನ 'ಮರ್ದಾನಿ' ಚಿತ್ರದಲ್ಲಿ ಮೀರಾ ಅನ್ನುವ ಪಾತ್ರದಲ್ಲಿ ಅಭಿನಯಿಸಿದ್ದಾರೆ. 'ಟಿಕು ವೆಡ್ಸ್ ಶೇರು', 'ಖರೀಬ್ ಖರೀಬ್ ಸಿಂಗಲೇ' ಚಿತ್ರಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ವೆಬ್ ಸೀರಿಯಸ್ ಹಾಗೂ ಮ್ಯೂಸಿಕ್ ವಿಡಿಯೋ ಮಾಡಿದ್ದಾರೆ. ಇನ್ನು ನಟಿಯ ಕೌಟುಂಬಿಕ ಹಿನ್ನೆಲೆ ಕುರಿತು ಹೇಳುವುದಾರೆ, ಸಿಖ್ ಕುಟುಂಬದ ಸೋನಿಯಾ ನಂದ್ರಾ, ಅಮನ್‌ದೀಪ್ ಸಿಂಗ್ ನಂದ್ರಾ ದಂಪತಿಯ ಮಗಳು ಈಕೆ. 2010 ರಿಂದಲೇ ಜಾಹೀರಾತು ಲೋಕದಲ್ಲಿ ಮಿಂಚಲು ಶುರು ಮಾಡಿದ್ದರು. ಆಗ ಇವರಿಗಿನ್ನೂ ಹತ್ತು ವರ್ಷ ವಯಸ್ಸಾಗಿತ್ತು. ಆಗಲೇ ಮಾಡೆಲಿಂಗ್, ಸಿನಿಮಾ, ಕಿರುತೆರೆಯಲ್ಲೂ ಗುರುತಿಸಿಕೊಂಡರು. ಮ್ಯೂಸಿಕ್ ವಿಡಿಯೋ ಮೂಲಕವೂ ಸದ್ದು ಮಾಡಿದ್ದ ಅವನೀತ್, ಬಂದಿಷ್ ಬಂಡಿತ್ ವೆಬ್ ಸಿರೀಸ್‌ನಲ್ಲೂ ನಟಿಸಿದ್ದಾರೆ.
ನೀರನ್ನು ಕಚ್ಚಿ ತಿನ್ನುವ ಪ್ರಪಂಚದ ಮೊದಲ ಮಹಿಳೆ, ನಟಿ ಊರ್ವಶಿ ರೌಟೇಲಾ! ವಿಡಿಯೋ ವೈರಲ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.