ಮೆಗಾಸ್ಟಾರ್ ಚಿರಂಜೀವಿ ಸಹೋದರನ ಮಗಳು ನಿಹಾರಿಕಾ ಕೊನಿಡೇಲಾ ಕಾಡಿನ ಸುತ್ತಾಟದಲ್ಲಿ ತೊಡಗಿದ್ದು ಆನೆಯ ಜೊತೆಗೆ ಹೇಳಿಕೊಂಡಿದ್ದೇನು?
ಮೆಗಾಸ್ಟಾರ್ ಚಿರಂಜೀವಿ ಅವರ ಮನೆ ಮಗಳು ಅರ್ಥಾತ್ ಚಿರಂಜೀವಿ ಅವರ ಸಹೋದರನ ಮಗಳು ನಿಹಾರಿಕಾ ಕೊನಿಡೇಲಾ (Niharika Konidela) ಸಿನಿಮಾ ಮಾಡಿದ್ದು ಕಮ್ಮಿ. ಅವರು ಸಿನಿಮಾಗಿಂತಲೂ ವೈಯಕ್ತಿಕವಾಗಿಯೇ ಹೆಚ್ಚೆಚ್ಚು ಸುದ್ದಿಯಲ್ಲಿರುತ್ತಾರೆ. ಕೆಲ ತಿಂಗಳ ಹಿಂದೆ ಪತಿ ಚೈತನ್ಯ ಅವರಿಂದ ವಿಚ್ಛೇದನ ಪಡೆದುಕೊಂಡಿರುವ ನಿಹಾರಿಕಾ, ಮತ್ತೆ ಸದ್ದು ಮಾಡುತ್ತಲೇ ಇದ್ದಾರೆ. ನಿಹಾರಿಕಾ ಕೊನಿಡೆಲಾ ಅವರು ಚೈತನ್ಯ ಜೊನ್ನಲಗುಡ್ಡ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ರಾಜಸ್ಥಾನದಲ್ಲಿ ಅದ್ದೂರಿಯಾಗಿ ಮದುವೆ ಸಮಾರಂಭ ಕೂಡ ನಡೆದಿತ್ತು. ನಿಹಾರಿಕಾ ಹಾಗೂ ಚೈತನ್ಯ ಮದುವೆಗೆ ಇಡೀ ಮೆಗಾಸ್ಟರ್ ಕುಟುಂಬ ಸಾಕ್ಷಿಯಾಗಿತ್ತು. ಆದರೆ, ಅದೇನಾಯಿತೋ ಗೊತ್ತಿಲ್ಲ, ದಾಂಪತ್ಯ ಕೇವಲ ಎರಡೂವರೆ ವರ್ಷಕ್ಕೆ ಅಂತ್ಯವಾಗಿ ಹೋಯ್ತು.
ನಿಹಾರಿಕಾ ಈಗ ಸಿನಿಮಾ ಕಡೆ ಮುಖ ಮಾಡಿದ್ದಾರೆ. ಸದ್ಯ ಏಕಾಂಗಿಯಾಗಿ ಲೈಫ್ ಲೀಡ್ ಮಾಡುತ್ತಿರೋ ನಿಹಾರಿಕಾ 2ನೇ ಮದ್ವೆಗೆ ರೆಡಿಯಾಗಿದ್ದಾರೆ ಎನ್ನುವ ಸುದ್ದಿ ಕೆಲ ತಿಂಗಳಿನಿಂದ ಭಾರಿ ಹರಿದಾಡುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತಾಗಿ ವ್ಯಾಪಕವಾಗಿ ಸುದ್ದಿಯಾಗಿದ್ದು, ಬಾಲನಟನಾಗಿ ಬಳಿಕ ಹೀರೋ ಆಗಿಯೂ ಮಿಂಚಿರುವ ಸ್ಟಾರ್ ನಟನನ್ನು ನಿಹಾರಿಕಾ ಮದುವೆಯಾಗಲಿದ್ದಾರೆ ಎನ್ನಲಾಗಿತ್ತು. ಆದರೆ ಹೆಸರು ರಿವೀಲ್ ಆಗಲಿಲ್ಲ. ತೆಲುಗಿನ ನಟ ವರುಣ್ ಅವರನ್ನು ನಿಹಾರಿಕಾ ಕೊನಿಡೆಲಾ 2ನೇ ಮದುವೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದ್ದರೂ ಅದರ ಬಗ್ಗೆ ಯಾವುದೇ ಅಧಿಕೃತ ದಾಖಲೆಗಳು ಬಂದಿಲ್ಲ.
ಸಂಗೀತಾಗೆ ಪ್ರತಾಪ್ ಬಿಗ್ ಶಾಕ್! ಅಕ್ಕ-ತಮ್ಮನ ಸಂಬಂಧ ಮುಗಿದೇ ಹೋಯ್ತಾ? ಯಾರಿಗೆ ಎಷ್ಟು ಅಂಕ?
ಇದರ ನಡುವೆಯೇ, ನಿಹಾರಿಕಾ ಪ್ರವಾಸದಲ್ಲಿ ಟೈಂ ಪಾಸ್ ಮಾಡುತ್ತಿದ್ದಾರೆ. ಅವುಗಳ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಾರೆ. ಇತ್ತೀಚೆಗೆ ಇವರು ಥಾಯ್ಲೆಂಡ್‌ಗೆ ಹೋಗಿದ್ದು ಅಲ್ಲಿ ಕಾಡು, ಆನೆಗಳ ಜೊತೆ ಕಳೆದಿದ್ದಾರೆ. ಚಾಯ್‌ನಲ್ಲಿರುವ ಆರ್ಕಿಡ್ ರೆಸಾರ್ಟ್‌ನಲ್ಲಿ ಉಳಿದುಕೊಂಡಿದ್ದ ನಿಹಾರಿಕಾ, ಆನೆಗಳ ಜೊತೆ ಸಮಯ ಕಳೆದಿದ್ದಾರೆ. ನಾನು ನಿನ್ನನ್ನು ನೋಡುತ್ತಿರುವಂತೆಯೇ, ನನ್ನನ್ನೂ ಯಾರಾದರೂ ನೋಡಿಕೊಳ್ಳುವರೇ ಎಂದು ಕೇಳುವಂತಿದೆ ನಿಹಾರಿಕಾ ಫೋಟೋ. ಇದೇ ವೇಳೆ ಇನ್‌ಸ್ಟಾಗ್ರಾಮ್‌ನಲ್ಲಿ ಹಾಲಿಡೇ ಡೇ ಆಫ್ ಡ್ರೀಮ್ಸ್ ಶೀರ್ಷಿಕೆಯ ವೀಡಿಯೊವನ್ನು ಶೇರ್ ಮಾಡಿಕೊಂಡಿದ್ದಾರೆ.
ಥಾಯ್ಲೆಂಡ್ನ ಅರಣ್ಯ ಪ್ರದೇಶದಲ್ಲಿ ಅಲೆದಾಡುತ್ತಾ ಮೀನು ಹಿಡಿಯುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಕಾಡಿನಲ್ಲಿ ಕಟ್ಟಿಗೆಯಲ್ಲಿ ಆಹಾರ ತಯಾರಿಸಿ ಕಾಡುಪ್ರಾಣಿಗಳ ಜೊತೆ ಸಮಯ ಕಳೆದಿದ್ದಾರೆ. ಅಲ್ಲಿನ ಆನೆಗಳಿಗೆ ಆಹಾರ ನೀಡಿ ಜಲಪಾತಗಳಲ್ಲಿ ಸ್ನಾನ ಮಾಡಿದ ಸುಂದರ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಮನುಷ್ಯರಿಂತಲೂ ಪ್ರಾಣಿಗಳೇಲೇಟು ಅನಿಸಿಬಿಡ್ತಾ ಮೆಗಾ ಮನೆಮಗಳಿಗೆ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ. ಆನೆಯ ಜೊತೆಗಿನ ಫೋಟೋಗೂ ಸಾಕಷ್ಟು ಕಮೆಂಟ್ಸ್ ಬರುತ್ತಿವೆ.
ಮಹಾಲಕ್ಷ್ಮಿ ಪತಿ ರವೀಂದರ್ ಐಸಿಯುಗೆ ದಾಖಲು! ಏಕಾಏಕಿ ಆಗಿದ್ದೇನು? ಕಣ್ಣೀರಿಟ್ಟ ನಟಿ...