ರಶ್ಮಿಕಾ ಬಳಿಕ ಕತ್ರಿನಾ ಡೀಪ್‌ ಫೇಕ್ ಫೋಟೊ ವೈರಲ್: ಸಾಮಾಜಿಕ ಜಾಲತಾಣಗಳಿಗೆ ಎಚ್ಚರಿಕೆ ನೀಡಿದ ಕೇಂದ್ರ

By Kannadaprabha News  |  First Published Nov 8, 2023, 9:18 AM IST

ಕೃತಕ ಬುದ್ಧಿಮತ್ತೆ ಬಳಸಿ ತಿರುಚಲಾಗಿದ್ದ ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್‌ಫೆಕ್‌ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್ ಆಗಿರುವ ಬೆನ್ನಲ್ಲೇ ಬಾಲಿವುಡ್ ನಟಿ ಕತ್ರಿನಾ ಕೈಫ್ ಅವರ ತಿರುಚಿದ ಡೀಪ್‌ಫೇಕ್ ಫೋಟೊವೊಂದು ವೈರಲ್ ಆಗಿದೆ.  


ಮುಂಬೈ: ಕೃತಕ ಬುದ್ಧಿಮತ್ತೆ ಬಳಸಿ ತಿರುಚಲಾಗಿದ್ದ ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್‌ಫೆಕ್‌ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್ ಆಗಿರುವ ಬೆನ್ನಲ್ಲೇ ಬಾಲಿವುಡ್ ನಟಿ ಕತ್ರಿನಾ ಕೈಫ್ ಅವರ ತಿರುಚಿದ ಡೀಪ್‌ಫೇಕ್ ಫೋಟೊವೊಂದು ವೈರಲ್ ಆಗಿದೆ.  ತಮ್ಮ ಮುಂಬರುವ 'ಟೈಗರ್ 3' ಚಿತ್ರದಲ್ಲಿ ನಟಿ ಕತ್ರಿನಾ ಅವರು ಬಿಳಿ ಟವಲೊಂದನ್ನು ಹಿಡಿದಿರುವ ದೃಶ್ಯದಲ್ಲಿ ಹಾಲಿವುಡ್‌ನ ಸ್ಟಂಟ್ ವುಮನ್‌ವೊಬ್ಬರ ಜೊತೆ ಬಹುತೇಕ ಅರೆಬೆತ್ತಲೆಯಾಗಿ ನಟಿಸಿದ್ದಾರೆ. ಈ ಮೂಲ ಪೋಟೋವನ್ನು ತಿರುಚಿ, ಟವಲ್‌ ಬದಲಿಗೆ ಅವರು ಬಿಳಿ ಬಿಕಿನಿ ಧರಿಸಿರುವಂತೆ ಅಸಭ್ಯವಾಗಿ ರೂಪಿಸಲಾಗಿದೆ. ಈ ಫೋಟೊ ವಿರುದ್ದ ಹಲವರು ಕಿಡಿಕಾರಿದ್ದು, ಕೃತಕ ಬುದ್ಧಿಮತ್ತೆಯು ಭಯಾನಕವಾಗಿದೆ ಹಾಗೂ ಅದನ್ನು ಮಹಿಳೆಯರನ್ನು ಅಶ್ಲೀಲಗೊಳಿಸಲು ಬಳಸುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದಿದ್ದಾರೆ.

'ಫೇಕ್‌' ವಿರುದ್ಧ ಕೇಂದ್ರ ಸರ್ಕಾರದ ಯುದ್ಧ: ಅಳಿಸಲು 24 ಗಂಟೆ ಗಡುವು

Latest Videos

undefined

ನವದೆಹಲಿ: ನಟಿ ರಶ್ಮಿಕಾ ಮಂದಣ್ಣರ ಡೀಪ್ ಫೇಕ್‌ ವಿಡಿಯೋ (Deep Fake video) ವೈರಲ್ ಆದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಿಗೆ ಮತ್ತೊಮ್ಮೆ ಎಚ್ಚರಿಕೆ ಸಂದೇಶ ರವಾನಿಸಿರುವ ಕೇಂದ್ರ ಸರ್ಕಾರ, ಇಂಥ ನಕಲಿ ಫೋಟೋ, ವಿಡಿಯೋ, ಕುರಿತು ದೂರು ಸಲ್ಲಿಕೆಯಾದ 24 ಗಂಟೆಗಳಲ್ಲಿ ಅವುಗಳನ್ನು ತೆಗೆದು ಹಾಕಬೇಕು ಎಂದು ಗಡುವು ನೀಡಿದೆ.

ರಶ್ಮಿಕಾ ಮಂದಣ್ಣ ಡೀಪ್‌ಫೇಕ್‌ನ ರಿಯಲ್‌ ಫೇಸ್‌ ಜಾರಾ ಪಟೇಲ್‌, 'ನಾನು ಭಾಗಿಯಾಗಿಲ್ಲ' ಎಂದ ಎನ್ಆರ್‌ಐ!

ಮಾಹಿತಿ ತಂತ್ರಜ್ಞಾನ ಕಾಯ್ದೆಯಲ್ಲಿ ಈ ಕುರಿತು ಕೆಲ ಅಂಶಗಳ ಕುರಿತು ಮತ್ತೊಮ್ಮೆ ಸಲಹಾವಳಿ ಬಿಡುಗಡೆ ಮಾಡಿರುವ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯವು 'ತಿರುಚಿದ ಪೋಟೋ, ವಿಡಿಯೋ ಕುರಿತು ದೂರು ದಾಖಲಾದ 24 ಗಂಟೆಗಳಲ್ಲಿ ಅವುಗಳನ್ನು ತೆಗೆದುಹಾಕಬೇಕು. ಇಲ್ಲದೆ ಹೋದಲ್ಲಿ 3 ವರ್ಷ ಜೈಲು ಮತ್ತು 1 ಲಕ್ಷ ರು. ದಂಡ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಲಾಗಿದೆ.

ಈ ವಿಡಿಯೋ ಕುರಿತು ಸೋಮವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ಕೇಂದ್ರ ಮಾಹಿತಿ ತಂತ್ರ ಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್, ಸಾಮಾಜಿಕ ಜಾಲತಾಣಗಳು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ತಮ್ಮ ಕಾನೂನು ಬಾಧ್ಯತೆಯನ್ನು ಪೂರೈಸಬೇಕು ಎಂದು ಎಚ್ಚರಿಸಿದ್ದರು.

ರಶ್ಮಿಕಾ ತಿರುಚಿದ ವಿಡಿಯೋದಿಂದ ಬೇಸರ: ನಟಿ ಝಾರಾ ಪಟೇಲ್

ನವದೆಹಲಿ: ಭಾರಿ ವೈರಲ್ ಆಗಿರುವ ನಟಿ ರಶ್ಮಿಕಾ ಮಂದಣ್ಣ ಅವರ ತಿರುಚಿದ ವಿಡಿಯೋ ತುಣುಕಿನಲ್ಲಿರುವ ಇನ್ನೊಬ್ಬ ನಟಿ ಝಾರಾ ಪಟೇಲ್, ತಮ್ಮ ಮೂಲ ವಿಡಿಯೋವನ್ನು ಬಳಸಿಕೊಂಡ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. 'ಘಟನೆ ಬಗ್ಗೆ ತೀವ್ರ ಬೇಸರವಾಗಿದೆ. ಇದರಿಂದ ಭವಿಷ್ಯದಲ್ಲಿ ಮಹಿಳೆಯರು ಮತ್ತು ಹುಡುಗಿಯರು ಸಾಮಾಜಿಕ ಜಾಲತಾಣದಲ್ಲಿ ತಾವು ಸಕ್ರಿಯ ಆಗುವ ಬಗ್ಗೆ ಹಿಂದೆ ಮುಂದೆ ನೋಡುವಂತಾಗಿದೆ' ಎಂದು  ಅವರು ಹೇಳಿದ್ದಾರೆ.

ರಶ್ಮಿಕಾ ಮಂದಣ್ಣ ಡೀಪ್‌ಫೇಕ್ ವಿಡಿಯೋ ವೈರಲ್‌: ನಕಲಿ ವಿಡಿಯೋ ಗುರುತಿಸೋದು ಹೇಗೆ ತಿಳ್ಳೊಳ್ಳಿ..!

click me!