
ಉತ್ತರ ಭಾರತದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಕೊರೋನಾ ವೈರಸ್ ದಿನೇ ದಿನೇ ಬಾಲಿವುಡ್ ಮಂದಿ ಬಾಗಿಲು ಬಡೆದು ಎಚ್ಚರಿಸುತ್ತಿದೆ. ಕೆಲವು ದಿನಗಳ ಹಿಂದೆ ಗಾಯಕಿ ಕನಿಕಾ ಕಪೂರ್‌ಗೆ ಕಾಣಿಸಿಕೊಂಡ ಕೊರೋನಾ ವೈರಸ್ ಶಂಕೆ ಸತತ ಹಲವು ಟೆಸ್ಟ್‌ಗಳು ನಡೆದ ನಂತರ ನೆಗೆಟಿವ್ ಎಂದು ತಿಳಿದು ಬಂದು, ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಪುಣ್ಯ, ಇವರು ಪಾರ್ಟಿ ಮಾಡಿ, ಸಾಕಷ್ಟು ಗಣ್ಯರೊಂದಿಗೆ ನೇರ ಸಂಪರ್ಕ ಹೊಂದಿದ್ದರು. ಆ ಗಣ್ಯರು ರಾಷ್ಟ್ರಪತಿ ಸೇರಿ ಮತ್ತೆ ಹಲವು ಮಂದಿಯೊಂದಿಗೆ ಸಂಪರ್ಕ ಸಾಧಿಸಿದ್ದು, ಹಲವರಿಗೆ ರೋಗ ಹರಡುವ ಭೀತಿಯಿಂದ ಪಾರಾದಂತಾಯಿತು.
ಕೊರೋನಾ ವೈರಸ್ ನುಂಗೇ ಬಿಡ್ತು 'Star Wars'ನಟನ ಜೀವವನ್ನ!
ಈಗ ಬಾಲಿವುಡ್‌ನಲ್ಲಿ ಇನ್ನಿಬ್ಬರಿಗೆ ಕೊರೋನಾ ವೈರಸ್ ಕಾಣಿಸಿಕೊಂಡಿದೆ. ಖ್ಯಾತ ನಿರ್ದೇಶಕ ಕರೀಮ್ ಮೊರಾನಿ ಅವರ ಮಗಳು ಜೋಯಾ ಮಾರ್ಚ್ ಮಧ್ಯದಲ್ಲಿ ರಾಜಸ್ಥಾನದಿಂದ ಮುಂಬೈ ನಿವಾಸಕ್ಕೆ ಆಗಮಿಸಿದರು. ವೈದ್ಯ ತಪಾಸಣೆ ಮೂಲಕ ಜೋಯಾ ಅವರಿಗೂ ಕೋವಿಡ್-19 ಪಾಸಿಟಿವ್ ಬಂದಿದೆ ಎಂದು ತಿಳಿದು ಬಂದಿತು. ನಂತರ ಮತ್ತೊಬ್ಬ ಮಗಳು ಶಾಜಾ ಶ್ರೀಲಂಕಾದಿಂದ ಮಾರ್ಚ್ ಮೊದಲ ವಾರದಲ್ಲಿ ಭಾರತಕ್ಕೆ ಆಗಮಿಸಿದ್ದರು. ಆದರೆ ಆಕೆಯಲ್ಲಿ ರೋಗ ಯಾವ ಲಕ್ಷಣಗಳೂ ಕಾಣಿಸಿಕೊಂಡಿರಲಿಲ್ಲ. ಸೋಮವಾರ ಬೆಳಗ್ಗೆ ಆರೋಗ್ಯದಲ್ಲಿ ಏರು ಪೇರು ಕಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ತೆರಳಿ, ಕೋವಿಡ್-19 ಚೆಕ್ ಮಾಡಿಸಿಕೊಂಡಿದ್ದಾರೆ. ವರದಿ ಪ್ರಕಾರ ಜೀಯಾದಿಂದ ಶಾಜಾಗೂ ಕೊರೋನಾ ವೈರಸ್ ತಗುಲಿದೆ, ಎಂದು ಕರೀಮ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಕೊರೋನಾ ಟೆಸ್ಟ್ ನೆಗೆಟೀವ್; ಕನ್ನಿಕಾ ಕಪೂರ್ ಡಿಸ್ಚಾರ್ಜ್
ಶಾಜಾ ಕೋಕಿಲಾಬೆನ್ ಧೀರುಭಾಯ್ ಅಂಬಾನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಹಾಗೂ ಜೀಯಾ ನಾನಾವಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಕರೀಮ್ ಹೆಚ್ಚಾಗಿ ಶಾರುಖ್ ಖಾನ್ ಚಿತ್ರಗಳಾದ Ra one, ಚೆನ್ನೈ ಎಕ್ಸಪ್ರೆಸ್, ಹ್ಯಾಪಿ ನ್ಯೂ ಇಯರ್ ಹಾಗೂ ದಿಲ್ವಾಲೆ ಚಿತ್ರಗಳನ್ನು ನಿರ್ಮಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.