ಕೊರೋನಾ ಟೆಸ್ಟ್ ನೆಗೆಟೀವ್; ಕನ್ನಿಕಾ ಕಪೂರ್ ಡಿಸ್ಚಾರ್ಜ್

By Suvarna News  |  First Published Apr 6, 2020, 11:36 AM IST

ಬೇಬಿ ಡಾಲ್ ಖ್ಯಾತಿಯ ಕನ್ನಿಕಾ ಕಪೂರ್ ಕೊರೋನಾ ಟೆಸ್ಟ್‌ ನೆಗೆಟೀವ್ | ಆಸ್ಪತ್ರೆಯಿಂದ ಡಿಸ್ಚಾರ್ಜ್ | ಇನ್ನೂ 14 ದಿನಗಳ ಕಾಲ ಹೋಂ ಕ್ವಾರಂಟೈನ್‌ನಲ್ಲಿ ಇರಲಿದ್ದಾರೆ 


ಮುಂಬೈ (ಏ. 06): ಎರಡನೇ ಬಾರಿಗೆ ಕೊರೋನಾ ಟೆಸ್ಟ್‌ ನೆಗೆಟಿವ್ ಬಂದಿದ್ದು ಗಾಯಕಿ ಕನ್ನಿಕಾ ಕಪೂರ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಮಾರ್ಚ್ 20 ರಂದು ಮೊದಲ ಬಾರಿ ಟೆಸ್ಟ್‌ನಲ್ಲಿ ಕನ್ನಿಕಾ ಕಪೂರ್‌ಗೆ ಕೊರೋನಾ ಪಾಸಿಟೀವ್ ಬಂದಿತ್ತು. ಆ ನಂತರ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಇದೀಗ ಎರಡನೇ ಬಾರಿ ಟೆಸ್ಟ್ ನಡೆದಿದ್ದು ನೆಗೆಟಿವ್ ಬಂದಿದೆ. ಕನ್ನಿಕಾ ಹಾಗೂ ಕುಟುಂಬದವರು ಫುಲ್ ಖುಷಿಯಾಗಿದ್ದಾರೆ. ಇನ್ನು 14 ದಿನಗಳ ಕಾಲ ಹೋಮ್ ಕ್ವಾರಂಟೈನ್‌ನಲ್ಲಿರಲಿದ್ದಾರೆ.

Tap to resize

Latest Videos

ಲಾಕ್‌ಡೌನ್: 1 ಲಕ್ಷ ದಿನಗೂಲಿ ಕಾರ್ಮಿಕರಿಗೆ 1 ತಿಂಗಳ ರೇಶನ್ ಕೊಡಲಿದ್ದಾರೆ ಬಿಗ್ ಬಿ 

ಕನ್ನಿಕಾ ಕಪೂರ್ ಲಂಡನ್‌ನಿಂದ ವಾಪಸ್ಸಾದ ಬಳಿಕ  ಪಾರ್ಟಿಗಳಲ್ಲಿ ಭಾಗವಹಿಸಿದ್ದರು. ಫೈವ್ ಸ್ಟಾರ್ ಹೊಟೇಲ್‌ಗಳಲ್ಲಿ ತಂಗಿದ್ದರು. ಬೇಜವಾಬ್ದಾರಿಯುತ ವರ್ತನೆಗೆ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದರು. ಲಕ್ನೋ ಪೊಲೀಸರು ಎಫ್‌ಐಆರ್‌ನ್ನು ದಾಖಲಿಸಿದ್ದಾರೆ. 

"

 

click me!