ಬಾಲಿವುಡ್ನ ಹೆಚ್ಚು ಕಮ್ಮಿ ಎಲ್ಲ ಸೆಲೆಬ್ರಿಟಿಗಳೂ ಈಗ ಸಾಮಾನ್ಯ ಅಪ್ಪ ಅಮ್ಮನಂತೆ ಮಕ್ಕಳ ದೇಖಾರೇಖಿ ನೋಡಿಕೊಳ್ತಾ ಅವರ ಬಾಲ್ಯ ಎನ್ಜಾಯ್ ಮಾಡ್ತಿದ್ದಾರೆ.
ಈಗ ಯಾವ ಸೆಲೆಬ್ರಿಟಿಯ ಸೋಷಲ್ ಮೀಡಿಯಾ ಅಕೌಂಟ್ ಓಪನ್ ಮಾಡಿದರೂ ಕಾಣೋದು ದೀಪ ಹಚ್ಚಿ ನಿಂತ ಫೋಟೋ. ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ನಡುವೆ ಪುಟ್ಟ ಬಾಲೆ ಐರಾನೂ ದಿಟ್ಟಿಸಿ ನೋಡ್ತಿದ್ದಾಳೆ. ಮಲೆಯಾಳಂ ಹೀರೋ ದುಲ್ಖರ್ ಸಲ್ಮಾನ್ ಅವರ ಇನ್‌ಸ್ಟಾ ಅಕೌಂಟ್ ನಲ್ಲಿ ಮೂರು ಕೖಗಳು ದೀಪ ಬೆಳಗುವ ಫೋಟೋವಿದೆ. ಒಂದು ಪುಟಾಣಿ ಕೖಯಲ್ಲಿ ಆ ಮಗುವಿನ ಅಂಗೖಯಷ್ಟೇ ಪುಟ್ಟ ದೀಪ. ದು ಅವರ ಮಗಳ ಕೖ ಅನ್ನೋದನ್ನು ಮತ್ತೆ ಹೇಳಬೇಕಾಗಿಲ್ಲ. ಇನ್ನೂ ಒಂದಿಷ್ಟು ಜನ ಸಿನಿಮಾ ಕಲಾವಿದರು ಮಕ್ಕಳ ಜೊತೆಗೆ ದೀಪ ಬೆಳಗುವ ಫೋಟೋ ಹಾಕಿದ್ದಾರೆ. ಇದೆಲ್ಲ ಯಾಕೆ ಬಹುಶಃ ಈವರೆಗೆ ದೀಪಾವಳಿ ಹಬ್ಬದ ಟೖಮ್ ನಲ್ಲೂ ಒಂದಿಲ್ಲೊಂದು ಶೂಟಿಂಗ್ ನಲ್ಲಿ ಬ್ಯುಸಿಯಾಗಿರುತ್ತಿದ್ದ ತಾರೆಯರು ಮಕ್ಕಳ ಜೊತೆಗೆ ಜ್ಯೋತಿ ಬೆಳಗಿದ್ದೇ ಕಡಿಮೆ. ಅಂತ ಈಗಿನ ಸನ್ನಿವೇಶ ಬಹಳ ಕರುಣಾಜನಕದ್ದಾದರೂ ಸ್ಟಾರ್ ನಟ ನಟಿಯರು ತಮ್ಮ ಮಕ್ಕಳ ಜೊತೆಗೆ ದೀಪ ಹಚ್ಚುವಂತಾದ್ದು ಅವರ ಲೈಫ್ ಗ್ರಾಫ್ ನೋಡಿದ್ರೆ ಬಹಳ ಖುಷಿಯ ಗಳಿಗೆಯೇ.
ಈಗಂತೂ ಕರೀನಾಗಿಂತಲೂ ಆಕೆಯ ಮುದ್ದು ಮಗ ತೖಮೂರ್ ಮೇಲೆಯೇ ಎಲ್ಲರ ಕಣ್ಣು. ಕರೀನಾ ಸಂದರ್ಶನಗಳಲ್ಲಿ, ಫ್ಯಾನ್ಸ್ ಮೀಟ್ ಗಳಲ್ಲಿ, ಇವೆಂಟ್ ಗಳಲ್ಲಿ ಆಕೆಗೆ ಕೇಳೋ ಹೆಚ್ಚಿನ ಪ್ರಶ್ನೆಗಳು ತೖಮೂರ್ ಬಗ್ಗೆಯೇ ಇರುತ್ತವೆ. ಮಗನ ಬಗ್ಗೆ ಮಾತಾಡಿ ಮಾತಾಡಿ ಸಾಕಾಗಿ ಕೊನೆಗೆ ನನ್ ಬಗ್ಗೆನೂ ಒಂಚೂರು ಕೇಳ್ರಪ್ಪಾ ಅನ್ನೋ ಸ್ಥಿತಿ ಕರೀನಾದು.
Pasta la vista. Handmade Jewellery by Taimur Ali Khan #QuaranTimDiaries
A post shared by Kareena Kapoor Khan (@kareenakapoorkhan) on Apr 4, 2020 at 7:09am PDT
ಈ ಕ್ವಾರೖಂಟೖನ್ ದಿನದಲ್ಲಿ ಕರೀನಾ ಕ್ಯೂಟ್ ಬಾಯ್ ತೖಮೂರ್ ಜೊತೆ ಕಳೆಯುತ್ತಿರುವ ಬಂಗಾರದ ಕ್ಷಣಗಳನ್ನು ತಮ್ಮ ಫ್ಯಾನ್ಸ್ ಮುಂದೆ ತೆರೆದಿಡುತ್ತಾ ಹೋಗಿದ್ದಾರೆ. ಅದರಲ್ಲೊಂದು ಸೋ ಸ್ವೀಟ್ ಅನಿಸೋ ಕ್ಷಣ ತೖಮೂರ್ ಕರೀನಾಗೆ ಮಾಡಿಕೊಟ್ಟ ಮಾಲೆ. ಹರಳು, ಮುತ್ತು ಪೋಣಿಸಿ ಮಾಡಿರೋ ಮಾಲೆಯಲ್ಲ. ಬದಲಾಗಿ ತಿನ್ನೋ ಪಾಸ್ತಾವನ್ನೇ ಮಾಲೆಯಾಗಿ ಮಾಡಿ ತುಂಟ ತೖಮೂರ್ ಅಮ್ಮ ಕರೀನಾ ಕೊರಳಿಗೆ ಹಾಕಿದ್ದಾನೆ. ಮಗ ಮಾಡಿರೋ ನೆಕ್ ಪೀಸ್ ಅನ್ನು ಸಖತ್ ಫನ್ನಿಯಾಗಿ ಹಾಕ್ಕೊಂಡಿರೋ ಕರೀನಾ ಮುಖದಲ್ಲೂ ತುಂಟ ನಗೆ ಇದೆ. ಪತಿ ಸೖಫ್ ಜೊತೆಗೆ ತೖಮೂರ್ ಬಾತ್ ಟವೆಲ್ ಸುತ್ಕೊಂಡು ಓಡ್ತಿರೋ ಫೋಟೋ, ಸೖಫ್ ಮತ್ತು ತೖಮೂರ್ ಗಾರ್ಡನಿಂಗ್ ಮಾಡ್ತಿರೋ ಫೋಟೋಗಳನ್ನೂ ಶೇರ್ ಮಾಡಿದ್ದಾರೆ.
ಸನ್ನಿ ಲಿಯೋನ್ ಇನ್‌ಸ್ಟಾಗ್ರಾಂನಲ್ಲಿ ತನ್ನ ಹಾಟ್ ಫೋಟೋಗಳನ್ನು ಪೋಸ್ಟ್ ಮಾಡ್ತಿದ್ದಾರೆ. ಜೊತೆಗೆ ಅಲ್ಲಲ್ಲಿ ಮಕ್ಕಳ ಜೊತೆಗೆ ಕಳೆಯುತ್ತಿರುವ ಬಗೆಗೂ ಹೇಳ್ಕೊಂಡಿದ್ದಾರೆ. ಪತಿ ಡ್ಯಾನಿ ಮಕ್ಕಳನ್ನು ಆಟ ಆಡಿಸ್ತಿರೋದು, ತಾನೂ ಮಕ್ಕಳ ಜೊತೆಗೆ ಆಟ ಆಡ್ತಾ ಅವರನ್ನು ಸಂಪೂರ್ಣ ಎಂಗೇಜ್ ಮಾಡ್ತಿರೋದನ್ನು ಹೇಳಿಕೊಂಡಿದ್ದಾರೆ.
ಕೊರೋನಾ ಟೆಸ್ಟ್ ನೆಗೆಟೀವ್; ಕನ್ನಿಕಾ ಕಪೂರ್ ಡಿಸ್ಚಾರ್ಜ್
ಇವರೆಲ್ಲರ ಜೊತೆಗೆ ಹೃತಿಕ್ ಮನೆಗೆ ಮಾಜಿ ಪತ್ನಿ ಜೊತೆಗೆ ಬಂದಿರುವ ಮಕ್ಕಳನ್ನು ಇನ್ನಿಲ್ಲದಂತೆ ಆಟ ಆಡಿಸ್ತಿದ್ದಾರಂತೆ.
ಇನ್ನು ಸೋಹಾ ಆಲಿಖಾನ್ ಕಥೆ ಪುಸ್ತಕ ಹಿಡ್ಕೊಂಡು ಕೂತಿದ್ದಾರೆ. ಉದ್ದೇಶ ಒಂದಲ್ಲ ಒಂದು ತುಂಟಾಟ ಮಾಡ್ತಾ ಮೖಮೇಲೆ ಬೀಳೋ ಮಗಳಿಗೆ ಕತೆ ಹೇಳೋದು. ಜೊತೆಗೆ ಸೋಷಲ್ ಮೀಡಿಯಾದಲ್ಲಿ ಕತೆ ಓದೋ ಮೂಲಕ ಉಳಿದ ತರಲೆ ಮಕ್ಕಳನ್ನೂ ಕತೆಯತ್ತ ಸೆಳೆಯುತ್ತಿದ್ದಾರೆ.
ಕಲ್ಕಿ ಕೊಚ್ಲಿನ್ ಎಳೆಯ ಕಂದಮ್ಮನ ಅಮ್ಮ. ಕೆಲವೇ ತಿಂಗಳು ಕಳೆದಿರುವ ಆ ಮುದ್ದಾದ ಮಗುವನ್ನು ಆಟ ಆಡಿಸುತ್ತಾ ನಗಿಸುತ್ತಾ ಇರುವ ಫೋಟೋವನ್ನು ಶೇರ್ ಮಾಡಿದ್ದಾರೆ. ಜೊತೆಗೆ ಈ ಟೖಮ್ ಸಂಪೂರ್ಣ ಮಗುವಿಗಾಗಿ ಮೀಸಲು ಅಂತನೂ ಬರೆದುಕೊಂಡಿದ್ದಾರೆ. ಲಿಟಲ್ ಐರಾ ಸಾಥ್; ರಾಕಿ ಬಾಯ್ ಶೇರ್ ಮಾಡಿದ ವಿಡಿಯೋ ಇದು..
ಅದೇ ಥರ ಬಾಲಿವುಡ್ ನ ಹೆಚ್ಚು ಕಮ್ಮಿ ಎಲ್ಲ ಸೆಲೆಬ್ರಿಟಿಗಳೂ ಈಗ ಸಾಮಾನ್ಯ ಅಪ್ಪ ಅಮ್ಮನಂತೆ ಮಕ್ಕಳ ದೇಖಾರೇಖಿ ನೋಡಿಕೊಳ್ತಾ ಅವರ ಬಾಲ್ಯ ಎನ್ ಜಾಯ್ ಮಾಡ್ತಿದ್ದಾರೆ.