
ಸಿನಿವಾರ್ತೆ(ನ.07): ನಿರ್ದೇಶಕ ಪ್ರಶಾಂತ್ ನೀಲ್ ಇತ್ತೀಚಿನ ಸಂದರ್ಶನವೊಂದರಲ್ಲಿ ಶಾರೂಕ್ ಖಾನ್ ಮತ್ತು ರಾಜ್‌ಕುಮಾರ್ ಹಿರಾನಿ ತಂಡದ ಜೊತೆ ಕ್ಷಮೆಯಾಚಿಸಿದ್ದಾಗಿ ತಿಳಿಸಿದ್ದಾರೆ. ಅದಕ್ಕೆ ಕಾರಣ 'ಸಲಾರ್' ಮತ್ತು 'ಡಂಕಿ' ಒಂದೇ ದಿನ ರಿಲೀಸ್ ಆಗಿದ್ದು.
ಶಾರೂಕ್ ಅಭಿನಯದ 'ಡಂಕಿ' ಬಿಡುಗಡೆ ದಿನಾಂಕ ಮೊದಲೇ ಘೋಷಣೆಯಾಗಿದ್ದರೂ'ಸಲಾರ್' ತಂಡ ಕೂಡ ಡಿ.22ರಂದೇ ಸಿನಿಮಾ ಬಿಡುಗಡೆ ಮಾಡಲು ನಿರ್ಧರಿಸಿತ್ತು. ಈ ಕುರಿತು ಈಗ ಮಾತನಾಡಿರುವ ಪ್ರಶಾಂತ್ ನೀಲ್, 'ರಾಜ್ ಕುಮಾರ್ ಸರ್ ಮತ್ತು ಶಾರೂಕ್ ಸರ್ ಮೊದಲೇ ಸಿನಿಮಾ ಬಿಡುಗಡೆ ದಿನಾಂಕ ಘೋಷಿಸಿದ್ದರು.
2 ಭಾಗಗಳಲ್ಲಿ ಬರಲಿದೆ ರಾಕಿಂಗ್ ಸ್ಟಾರ್ ಯಶ್ ನಟನೆ, ನಿರ್ಮಾಣದ 'ರಾಮಾಯಣ'!
ಜ್ಯೋತಿಷ್ಯದ ಕಾರಣದಿಂದಾಗಿ ನಾವು ಅವತ್ತೇ ಸಿನಿಮಾ ಬಿಡುಗಡೆ ಮಾಡಬೇಕಾಗಿ ಬಂತು. ನಮ್ಮ ನಿರ್ಮಾಪಕರಾದ ವಿಜಯ್ ಕಿರಗಂದೂರು ಅವರು ಜ್ಯೋತಿಷ್ಯವನ್ನು ಬಹಳ ನಂಬುತ್ತಾರೆ. ಹಾಗಾಗಿ ಬೇರೆ ದಿನಾಂಕ ಮತ್ತು ದಾರಿ ಎರಡೂ ಇರಲಿಲ್ಲ. ಹಾಗಾಗಿ ಆ ತಂಡದ ಜೊತೆ ಕ್ಷಮೆ ಯಾಚಿಸಿದ್ದೆ. ಆ ಥರ ಆಗುವುದು ಒಳ್ಳೆಯಲ್ಲ' ಎಂದು ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.