ಸಮಂತಾರನ್ನ ನಿರ್ದಯಿ ಅಂದುಬಿಟ್ರಾ ರಾಣಾ ದಗ್ಗುಬಾಟಿ? ಟಾಲಿವುಡ್‌ನಲ್ಲಿದ್ದಾಗ ಅತ್ತಿಗೆ, ಹಾಲಿವುಡ್‌ಗೆ ಹೋದ್ಮೇಲೆ ಸಂಬಂಧನೇ ಚೇಂಜ್!

By Bhavani Bhat  |  First Published Nov 6, 2024, 7:06 PM IST

ನಟಿ ಸಮಂತಾ ರುತ್‌ಪ್ರಭು ಅವರನ್ನು ಸಾರ್ವಜನಿಕ ವೇದಿಕೆಯಲ್ಲಿ 'ನಿರ್ದಯಿ' ಅಂತ ಹೇಳಿದ್ದಾರೆ ನಟ ರಾಣಾ ದಗ್ಗುಬಾಟಿ. ಟಾಲಿವುಡ್‌ನಲ್ಲಿದ್ದಾಗ ಅತ್ತಿಗೆ, ಹಾಲಿವುಡ್‌ಗೆ ಹೋದಮೇಲೆ ಸಂಬಂಧವೂ ಬದಲಾಯ್ತು ಅಂತಿದ್ದಾರೆ ಬಾಹುಬಲಿ ನಟ.
 


ರಾಣಾ ದಗ್ಗುಬಾಟಿ ದಕ್ಷಿಣ ಭಾರತದ ಪ್ರತಿಭಾವಂತ ನಟ. ಅವರ ಅಭಿನಯಕ್ಕೆ ಹೆಚ್ಚಿನ ಮನ್ನಣೆ ಸಿಕ್ಕಿದ್ದು ಪ್ರಭಾಸ್ ನಟನೆಯ 'ಬಾಹುಬಲಿ' ಸಿನಿಮಾ ಮೂಲಕ. ಈ ಸಿನಿಮಾ ಬಳಿಕ ದಕ್ಷಿಣ ಭಾರತದಲ್ಲಿ ದಗ್ಗುಬಾಟಿ ಮನೆಮಾತಾದ್ರು ಅನ್ನಬಹುದು. ಈ ರಾಣಾ ದಗ್ಗುಬಾಟಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ನಟಿ ಸಮಂತಾ ಹಾಗೂ ರಾಣಾ ದಗ್ಗುಬಾಟಿ ಅವರದು ತೀರಾ ಇತ್ತೀಚಿನ ಪರಿಚಯ ಏನಲ್ಲ. ಬಹಳ ಹಿಂದಿನಿಂದಲೇ ಇವರಿಬ್ಬರೂ ಪರಿಚಿತರು. ಇನ್ನೊಂದು ವಿಚಾರ ಅಂದರೆ ದಗ್ಗುಬಾಟಿ ಮತ್ತು ಸಮಂತಾ ಒಂದು ಕಾಲದಲ್ಲಿ ಸಂಬಂಧಿಗಳೂ ಆಗಿದ್ರು. ಅಂದರೆ ಸಮಂತಾ ಮಾಜಿ ಪತಿ ನಾಗ ಚೈತನ್ಯಗೆ ರಾಣಾ ಕಸಿನ್ ಬ್ರದರ್. ಅಂದರೆ ನಾಗಚೈತನ್ಯನ ತಾಯಿ ಲಕ್ಷ್ಮೀ ದಗ್ಗುಬಾಟಿ ಕಡೆಯ ಸಂಬಂಧದಿಂದ ನಾಗಚೈತನ್ಯ ಹಾಗೂ ರಾಣಾ ಕಸಿನ್ ಬ್ರದರ್ಸ್. ಸೋ ಹೀಗಾಗಿ ನಾಗಚೈತನ್ಯ ಜೊತೆಗೆ ಸಮಂತಾ ಇದ್ದಾಗ ಆಕೆಯನ್ನು ರಾಣಾ ಕರೆಯುತ್ತಿದ್ದದ್ದು ನಾದಿನಿ ಅಂತ. ಯಾಕಂದ್ರೆ ವಯಸ್ಸಲ್ಲಿ ನಾಗ ಚೈತನ್ಯ ರಾಣಾಗಿಂತ ಚಿಕ್ಕವರು. ಹೀಗಾಗಿ ಸಿಸ್ಟರ್ ಇನ್‌ ಲಾ ಅಂತಲೇ ಕರೀತಿದ್ದದ್ದು. ಆದರೆ ರಾಣಾಗೂ ಸಮಂತಾಗೂ ಆ ಹೊತ್ತಿಗೆ ಪರಿಚಯ ಆಗಿದ್ದು ಏನಲ್ಲ. 

ಏಕೆಂದರೆ ಅವರು ಬಹಳ ಹಳೆಯ ಸ್ನೇಹಿತರು. ಜೊತೆಗೆ ಆಡಾಡ್ತಾ ಬೆಳೆದವರು. ಪರಸ್ಪರ ಕಾಲೆಳೆದುಕೊಂದು, ಜಗಳ ಆಡಿಕೊಂಡು ದೊಡ್ಡವರಾದವರು. ಸಿನಿಮಾ ಫೀಲ್ಡ್‌ಗೆ ಬಂದು ಸಮಂತಾ ದೊಡ್ಡ ಹೆಸರು ಮಾಡಿದ ಮೇಲೂ ಈ ಸಲಿಗೆ ಹಾಗೇ ಮುಂದುವರಿಯಿತು. ಸಮಂತಾ ನಾಗಚೈತನ್ಯನ ಕೈ ಹಿಡಿದ ಮೇಲೆ ಸಂಬಂಧವೂ ಈ ಬಂಧಕ್ಕೆ ಸೇರಿಕೊಂಡು ಇವರಿಬ್ಬರ ಫ್ರೆಂಡ್‌ಶಿಪ್ ಇನ್ನಷ್ಟು ಗಟ್ಟಿ ಆಯಿತು. ಆದರೆ ನಾಗಚೈತನ್ಯ ಮತ್ತು ಸಮಂತಾ ಒಂದು ಹಂತದ ನಂತರ ಸಪರೇಟ್ ಆದರು. ಸಮಂತಾ ಡಿವೋರ್ಸ್‌ ಬಳಿಕ ತನ್ನ ಕೆರಿಯರ್ ಬಗ್ಗೆ ಫೋಕಸ್ ಮಾಡಿ ಹಲವಾರು ಸಿನಿಮಾಗಳಲ್ಲಿ ಮಿಂಚಿದರೆ. ನಾಗ ಚೈತನ್ಯ ಶೋಭಿತಾ ಜೊತೆ ಡೇಟಿಂಗ್‌ನಲ್ಲಿ ಕಾಲ ಕಳೆದಿದ್ದಾರೆ. ಇನ್ನೇನು ಡಿಸೆಂಬರ್‌ನಲ್ಲಿ ಅವರು ಶೋಭಿತಾ ಜೊತೆ ಮರುಮದುವೆಯೂ ಆಗುತ್ತಿದ್ದಾರೆ. ಇದರ ಬಗ್ಗೆ ಸಮಂತಾ ಕಾಮೆಂಟ್ ಏನೂ ಮಾಡಿಲ್ಲ. ಏಕೆಂದರೆ ಅವರು ಈಗಾಗಲೇ ಇಂಥಾ ಕ್ಷುಲ್ಲಕ ವಿಚಾರಗಳನ್ನು ದಾಟಿ ಮುಂದೆ ಹೋಗಿದ್ದಾರೆ. ಅವರ ಮಹತ್ವಾಕಾಂಕ್ಷೆಯ ವೆಬ್‌ ಸೀರೀಸ್ 'ಸಿಟಾಡೆಲ್ ಹನಿಬನಿ' ನಾಡಿದ್ದು ಗ್ರ್ಯಾಂಡ್ ಆಗಿ ರಿಲೀಸ್ ಆಗ್ತಿದೆ. ಅದಕ್ಕಾಗಿ ಫೋಟೋಶೂಟ್‌ಗಳೂ ನಡೆಯುತ್ತಿವೆ. 

Tap to resize

Latest Videos

undefined

ಐಶ್ವರ್ಯಾ ರೈ ಬರ್ತ್ ಡೇಗೆ ವಿಶ್ ಮಾಡದ ಬಚ್ಚನ್ ಕುಟುಂಬ, ಸಿಟ್ಟಲ್ಲಿ ಹೀಗೆ ಮಾಡೋದಾ ಫ್ಯಾನ್ಸ್!
 

ಇಂಥಾ ಟೈಮಲ್ಲಿ ಅವಾರ್ಡ್ ಪ್ರೋಗ್ರಾಂ ಒಂದರಲ್ಲಿ ರಾಣಾ ದಗ್ಗುಬಾಟಿ ಆಡಿದ ಮಾತು ಇದೀಗ ಸುದ್ದಿಯಲ್ಲಿದೆ. 'ಸಮಂತಾ ರುತ್‌ ಪ್ರಭು ಅನ್ನೋದನ್ನು ನಾವು ಚಿಕ್ಕವರಿದ್ದಾಗ ಸಮಂತಾ ರುತ್‌ಲೆಸ್ ಪ್ರಭು ಅಂತ ಕಾಲೆಳೀತಾ ಇದ್ವಿ' ಅಂತ ರಾಣಾ ಹಳೇ ತಮಾಷೆಯ ಪ್ರಸಂಗವನ್ನು ನೆನಪು ಮಾಡಿಕೊಂಡಿದ್ದಾರೆ. ಜೊತೆಗೆ ಹಳೆಯ ಫ್ರೆಂಡ್‌ಶಿಪ್ ಇಂದಿಗೂ ಹಾಗೇ ಇದೆ ಅನ್ನೋದನ್ನು ತೋರಿಸಿದ್ದಾರೆ. 

ಇದಷ್ಟೇ ಅಲ್ಲ. 'ಸಮಂತಾ ಟಾಲಿವುಡ್‌ನಲ್ಲಿದ್ದಾಗ ಸಿಸ್ಟರ್‌ ಇನ್‌ ಲಾ ಆಗಿದ್ದಳು. ಈಗ ಹಾಲಿವುಡ್‌ಗೆ ಹೋದಮೇಲೆ ಸಿಸ್ಟರ್‌ ಅಷ್ಟೇ ಆಗಿದ್ದಾಳೆ' ಅನ್ನೋ ಮಾತನ್ನೂ ಹೇಳಿ ಸಮಂತಾ ಕಾಲೆಳೆದಿದ್ದಾರೆ. ಅಂದರೆ ಹಿಂದೆ ನಾಗ ಚೈತನ್ಯ ಜೊತೆಗೆ ಇದ್ದಾಗ ಸಂಬಂಧದಲ್ಲಿ ಈಕೆ ಸಿಸ್ಟರ್‌ ಇನ್‌ ಲಾ ಅಂದರೆ ನಾದಿನಿ ಆಗಿದ್ದಳು. ಈಗ ಆ ಸಂಬಂಧ ಕಡಿದುಕೊಂಡ ಮೇಲೆ ತಂಗಿಯಾಗಷ್ಟೇ ಇದ್ದಾಳೆ. ಆಗ ಟಾಲಿವುಡ್‌ನಲ್ಲಷ್ಟೇ ಇದ್ದ ಸಮಂತ  ಇದೀಗ ಸಿಟಾಡೆಲ್ ಹನಿ ಬನಿ ಮೂಲಕ ಹಾಲಿವುಡ್ ಲೆವೆಲ್‌ಗೂ ಹೋದಂತಾಗಿದೆ. ಹಳೆಯ ಸಲುಗೆಯಲ್ಲಿ ರಾಣಾ ಹೀಗೆಲ್ಲ ಹೇಳಿದ್ದಾರೆ. ಅದನ್ನು ಸಮಂತಾನೂ ಲೈಟಾಗಿಯೇ ತಗೊಂಡಿದ್ದಾರೆ.

ರಶ್ಮಿಕಾ-ಪುನೀತ್ ಓಲ್ಡ್ ವಿಡಿಯೋ ವೈರಲ್, ಯಾರಿಗೆ ಕ್ಲಾಸ್ ತಗೋತಿದಾರೆ ನೆಟ್ಟಿಗರು?
 

click me!