ನನಗೆ ಕ್ಯಾಮೆರಾ ಎದುರು ನಾನು ಚೆನ್ನಾಗಿ ನಟನೆ ಮಾಡಿದ್ದೀನಾ ಅಥವಾ ಕೆಟ್ಟದಾಗಿ ಮಾಡಿದ್ದೀನಾ ಎಂಬುದನ್ನು ನೋಡಬೇಕಾದ ಅವಶ್ಯಕತೆ ಇಲ್ಲ.
ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರು ಇತ್ತೀಚೆಗೆ ಹಲವಾರು ಹಾಲಿವುಡ್ ಸಂದರ್ಶಕರ ಜತೆ ಮಾತನಾಡಿದ್ದಾರೆ. ಇಂಥ ಸಂದರ್ಶನಗಳಲ್ಲಿ ನಟಿ ಪ್ರಿಯಾಂಕಾ ಅವರು ತಮ್ಮ ವೃತ್ತಿ ಜೀವನದ ಹಲವಾರು ಸೀಕ್ರೆಟ್‌ಗಳನ್ನು, ಕೆಲವು ದುರಂತ ಘಟನೆಗಳನ್ನು ಹೊರಜಗತ್ತಿಗೆ ಬಿಚ್ಚಿಟ್ಟಿದ್ದಾರೆ. ಸಂದರ್ಶಕಿ ಕೇಳಿದ ಟ್ರಿಕ್ಕಿ ಪ್ರಶ್ನೆಯೊಂದಕ್ಕೆ ಉತ್ತರಿಸಿರುವ ನಟಿ ಪ್ರಿಯಾಂಕಾ ಚೋಪ್ರಾ 'ನಾನು ಮೈಕ್ರೋ ಶಾಟ್ಸ್' ನಟಿ ಅಲ್ಲ. ನಾನು ಸೀನ್ ಶೂಟ್ ಆದ ಬಳಿಕ ಅದನ್ನು ಸ್ಕ್ರೀನ್‌ನಲ್ಲಿ ನೋಡುವುದಿಲ್ಲ.
ಏಕೆಂದರೆ, ನನಗೆ ಕ್ಯಾಮೆರಾ ಎದುರು ನಾನು ಚೆನ್ನಾಗಿ ಮಾಡಿದ್ದೀನಾ ಅಥವಾ ಕೆಟ್ಟದಾಗಿ ಮಾಡಿದ್ದೀನಾ ಎಂಬುದನ್ನು ನೋಡಬೇಕಾದ ಅವಶ್ಯಕತೆ ಇಲ್ಲ. ಏಕೆಂದರೆ, ನಾನು ಚೆನ್ನಾಗಿ ಮಾಡಿದ್ಧೇನೆ ಅಥವಾ ಇಲ್ಲ ಎಂಬುದನ್ನು ನನಗಿಂತ ಬೇರೆ ಯಾರೂ ಚೆನ್ನಾಗಿ ತಿಳಿದಿರಲು ಸಾಧ್ಯವಿಲ್ಲ. ನಾನು ಯಾವತ್ತೂ ನನಗೇ ಸುಳ್ಳು ಹೇಳಿಕೊಳ್ಳಲು ಬಯಸುವ ವ್ಯಕ್ತಿ ಅಲ್ಲ. ಕೆಲವೊಮ್ಮೆ ನನಗೆ ನಾನು ಚೆನ್ನಾಗಿ ಮಾಡಿದ್ದೇನೆ ಎಂಬ ಕಾನ್ಫಿಡೆನ್ಸ್ ಇದ್ದರೆ ನಾನು ಮುಂದಕ್ಕೆ ಹೋಗುತ್ತೇನೆ, ಇಲ್ಲದಿದ್ದರೆ ಇನ್ನೊಂದು ಶಾಟ್ ತೆಗೆದುಕೊಳ್ಳಿ ಎಂದು ಹೇಳುತ್ತೇನೆ.
ಎಷ್ಟೋ ಬಾರಿ ನಿರ್ದೇಶಕರು 'ಚೆನ್ನಾಗಿದೆ' ಎಂದು ಹೇಳಿದ್ದರೂ ನನಗೆ ಯಾಕೋ ಅಷ್ಟು ಚೆನ್ನಾಗಿಲ್ಲ ಎಂದು ಎನಿಸುತ್ತದೆ. ಆಗ ನಾನು ಇಲ್ಲ, ನಾನು ಇದನ್ನೇ ಇನ್ನೊಮ್ಮೆ ಮಾಡುತ್ತೇನೆ. ನನಗೆ ಇನ್ನೂ ಸ್ವಲ್ಪ ಬೆಟರ್ ಮಾಡಬಹುದು ಎನ್ನಿಸುತ್ತದೆ' ಎಂದು ಹೇಳಿದ್ದಿದೆ. ನಾನು ಇಂತಹ ನನ್ನ ಟ್ರಿಕ್‌ಗಳನ್ನು ಹೀಗೆ ಕ್ಯಾಮಾರಾ ಎದುರು ಹೇಳುವುದು ಸರಿಯಲ್ಲ. ಏಕೆಂದರೆ, ನನ್ನ ಮುಂದಿನ ಸಿನಿಮಾ ನಿರ್ದೇಶಕರಿಗೆ ನನ್ನ ಬಗ್ಗೆ ಪೂರ್ವಾಗ್ರಹ ಮೂಡಬಹುದು.
ಬಿಗ್ ಬಾಸ್ ಮನೆಯಲ್ಲಿ ಮತ್ತೆ ಅರಳಿತಾ ಸ್ನೇಹದ ಹೂ; ವಿನಯ್ ಕಾರ್ತಿಕ್ ಒಂದಾಗಿದ್ದು ನೋಡಿ ನಕ್ಕ ಸಂಗೀತಾ ಶೃಂಗೇರಿ
ಪ್ರಶ್ನೆಯೊಂದಕ್ಕೆ ಉತ್ತರಿಸಿರುವ ನಟಿ ಪ್ರಿಯಾಂಕಾ ಚೋಪ್ರಾ 'ನಾನು ಬಾಲಿವುಡ್ ಸಿನಿಮಾಗಳಲ್ಲಿ ಕೆಲಸ ಮಾಡುವಾಗ ಶ್ರದ್ಧೆಯಿಂದ ಮಾಡಿದ್ದೇನೆ. ಈಗ ಆ ಬಗ್ಗೆ ನನಗೆ ಯಾವುದೇ ರಿಗ್ರೆಟ್ ಇಲ್ಲ. ನಾನು ಸಾಕಷ್ಟು ಉತ್ತಮ ಚಿತ್ರಗಳಲ್ಲಿ ನಟಿಸಿದ್ದೇನೆ, ಬಾಲಿವುಡ್ ಜರ್ನಿಯಲ್ಲಿ ನಾನು ನನಗಾಗಲೀ ಅಥವಾ ನನ್ನನ್ನು ನಂಬಿ ಬರುವ ನನ್ನ ಅಭಿಮಾನಿಗಳಿಗಾಗಲೀ ಮೋಸ ಮಾಡಿಲ್ಲ. ಸಿಕ್ಕ ಅವಕಾಶವನ್ನು ಚೆನ್ನಾಗಿಯೇ ಬಳಸಿಕೊಂಡಿದ್ದೇನೆ. ಈಗ ನಾನು ಅಲ್ಲಿ ಬಂದು ಮಾಡುವುದೇನೂ ಇಲ್ಲ. ನಾನೀಗ ಅಮೆರಿಕಾದಲ್ಲಿ ಇದ್ದೇನೆ, ಇಲ್ಲಿಯ ಸಿನಿಮಾಗಳಲ್ಲಿ ಕೆಲಸ ಮಾಡಲು ಇಷ್ಟಪಡುತ್ತೇನೆ' ಎಂದಿದ್ದಾರೆ ನಟಿ ಪ್ರಿಯಾಂಕಾ ಚೋಪ್ರಾ.
ಕ್ಯಾಪ್ಟನ್ ಇಲ್ಲದ ಬಿಗ್ ಬಾಸ್ ಮನೆ; ಕಿಚ್ಚ ಸುದೀಪ್ ಮಾತು ಕೇಳಿ ಶಾಕ್ ಆಗ್ಬಿಟ್ರಾ ಸ್ಪರ್ಧಿಗಳು!
ಸದ್ಯಕ್ಕೆ ನಟಿ ಪ್ರಿಯಾಂಕಾ ಚೋಪ್ರಾ ಅವರು ಹಾಲಿವುಡ್ ಸಿನಿಮಾಗಳು ಹಾಗೂ ವೆಬ್ ಸಿರೀಸ್‌ಗಳಲ್ಲಿ ನಟಿಸುತ್ತಿದ್ದಾರೆ. ಮದುವೆ ಬಳಿಕ ಗಂಡ ನಿಕ್ ಜೊನಾಸ್ ಜತೆ ಅಮೆರಿಕಾದಲ್ಲಿ ಸೆಟ್ಲ್ ಆಗಿರುವ ನಟಿ ಪ್ರಿಯಾಂಕಾ ಸದ್ಯಕ್ಕೆ ಯಾವುದೇ ಬಾಲಿವುಡ್ ಚಿತ್ರಗಳಲ್ಲಿ ನಟಿಸುತ್ತಿಲ್ಲ.