ಸುರಸುಂದರ ನಟರನ್ನು ತಿರಸ್ಕರಿಸಿ, ಬಾಲ್ಡಿಯನ್ನು ಮದ್ವೆಯಾದ ಗುಟ್ಟು ಬಹಿರಂಗಗೊಳಿಸಿದ 'ಅಣ್ಣಯ್ಯ' ನಟಿ ಮಧುಬಾಲ!

By Suvarna News  |  First Published Dec 10, 2023, 4:03 PM IST

ಬಹುಭಾಷಾ ನಟಿ ಮಧುಮಾಲಾ ಅವರು ಸುರಸುಂದರರಾಗಿರುವ ನಟರನ್ನು ಬಿಟ್ಟು ತಲೆಗೂದಲು ಇಲ್ಲದ ಉದ್ಯಮಿಯನ್ನು ಮದ್ವೆಯಾಗಿದ್ದೇಕೆ? ನಟಿ ಹೇಳಿದ್ದೇನು? 
 


ಕನ್ನಡದಲ್ಲಿ ಬೆರಳಣಿಕೆ ಚಿತ್ರದಲ್ಲಿ ನಟಿಸಿದರೂ ತಮ್ಮ ಅಭಿನಯ ಮತ್ತು ಸಹಜ ಸೌಂದರ್ಯದಿಂದಲೇ  ತಮ್ಮದೇಯಾದ ಛಾಪು ಮೂಡಿಸಿರೋ ನಟ ಮಧುಬಾಲಾ. 1993ರಲ್ಲಿ ಅಣ್ಣಯ್ಯ, ನಂತರ ರನ್ನ ಚಿತ್ರದಲ್ಲಿ ಕಿಚ್ಚ ಸುದೀಪ್​ ಅವರ ಅತ್ತೆಯಾಗಿ ನಟಿಸುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿದ ನಟಿ ಮಧುಬಾಲ ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂ ಸಿನಿಮಾಗಳಲ್ಲಿಯೂ ಫೇಮಸ್​ ಆಗಿದ್ದಾರೆ. ರನ್ನ ಚಿತ್ರದಲ್ಲಿನ ಅತ್ತೆಯ ಪಾತ್ರವಂತೂ ಎಂದಿಗೂ ಮರೆಯುವಂತಿಲ್ಲತಮ್ಮ ವೈಯಕ್ತಿಕ ಜೀವನದ ಕೆಲವೊಂದಿಷ್ಟು ಆಸಕ್ತಿಕರ ಸಂಗತಿಗಳನ್ನು ತಿಳಿಸಿದ್ದಾರೆ. ಅದೇನೆಂದರೆ, ಬಹುಭಾಷಾ ನಟಿಯಾಗಿರುವ ಮಧುಬಾಲಾ ಅವರು . ಒಂದೇ ಸಮಯದಲ್ಲಿ ಮೂರ್ನಾಲ್ಕು ಭಾಷೆಗಳಲ್ಲಿ ಕೆಲಸ ಮಾಡುತ್ತಿದ್ದ ಕಾರಣ ಅದೆಷ್ಟೋ ಸೂಪರ್ ಹಿಟ್‌ ಆಫರ್‌ಗಳನ್ನೂ ಕೈಬಿಟ್ಟವರು. ಆದರೆ   ಸಿನಿಮಾ ಕೆರಿಯರ್​ನ ಉತ್ತುಂಗದಲ್ಲಿರುವಾಗಲೇ ಉದ್ಯಮಿ ಆನಂದ್​ ಎಂಬುವರನ್ನು ಮದುವೆಯಾಗಿದ್ದು, ಈಗ ಸುಖ ಸಂಸಾರ ನಡೆಸುತ್ತಿದ್ದಾರೆ. ಕೆಲಕಾಲ ಚಿತ್ರರಂಗದಿಂದ ದೂರ ಉಳಿದು ಇದೀಗ ಮತ್ತೆ  ಸಿನಿಮಾ ರಂಗಕ್ಕೆ ಕಂಬ್ಯಾಕ್​ ಮಾಡಿದ್ದಾರೆ.  ಆದರೆ ಸ್ಫುರದ್ರೂಪಿಯಾಗಿರುವ ಮಧುಬಾಲಾ ಅವರನ್ನು ಮದುವೆಯಾಗಲು ನಟರೆಲ್ಲರೂ ರೆಡಿ ಇರುವಾಗ ಉದ್ಯಮಿಯನ್ನು ಆಯ್ಕೆ ಮಾಡಿಕೊಂಡರು. ಮದುವೆಯ ಸಂದರ್ಭದಲ್ಲಿ ಆನಂದ್​ ಅವರಿಗೆ ತಲೆಗೂದಲು ಇರಲಿಲ್ಲ. ಇದೀಗ ತಲೆ ಬೋಳಿಸುವುದು ಫ್ಯಾಷನ್​ ಆಗಿದ್ದು, ಅದೇ ಚೆಂದ ಎನ್ನುವವರೂ ಇದ್ದರೂ, ಮಧುಬಾಲಾ ಅವರ ಮದುವೆಯ ಸಂದರ್ಭದಲ್ಲಿ ನಟರನ್ನುಬಿಟ್ಟು ಇವರನ್ನೇಕೆ ಆಯ್ಕೆ ಮಾಡಿಕೊಂಡರು ಎಂದು ಹಲವರು ಪ್ರಶ್ನಿಸಿದ್ದರಂತೆ.

ಅದಕ್ಕೆ ಮಧುಬಾಲಾ ತಾವು ಆಗಲೂ ಇದಕ್ಕೆ ಉತ್ತರ ಕೊಟ್ಟಿದ್ದಿದೆ, ಈಗಲೂ ಮತ್ತೊಮ್ಮೆ ಹೇಳುತ್ತಿದ್ದೇನೆ ಎನ್ನುವ ಮೂಲಕ ನಟರನ್ನು ರಿಜೆಕ್ಟ್​  ಮಾಡಿ ಕೂದಲೇ ಸೌಂದರ್ಯ ಎನ್ನುವ ಸಂದರ್ಭದಲ್ಲಿಯೂ ಬೋಳು ತಲೆಯ ಉದ್ಯಮಿಯನ್ನು ಆಯ್ಕೆ ಮಾಡಿಕೊಂಡಿರುವುದಕ್ಕೆ ಕಾರಣ ಕೊಟ್ಟಿದ್ದಾರೆ. 'ಅಷ್ಟಕ್ಕೂ ನಾನು ಚಿತ್ರರಂಗಕ್ಕೆ ಕಾಲಿಟ್ಟಾಗ ನಟನನ್ನೇ ಮದುವೆಯಾಗಬೇಕೆಂದು ಬಯಸಿದವಳು. ಆದರೆ ಸಿನಿಮಾದಲ್ಲಿ ತಳವೂರಿದ ಮೇಲೆ ನಟರ ಬಗ್ಗೆ ಚೆನ್ನಾಗಿ ಅರಿತುಬಿಟ್ಟೆ. ನಟರ ಬಗ್ಗೆ ಸಾಕಷ್ಟು ಅನುಭವವೂ ಆಯಿತು.  ಇಂದು ಒಬ್ಬಳು, ನಾಳೆ ಇನ್ನೊಬ್ಬಳು, ಮತ್ತೊಂದು ದಿನ ಮತ್ತೊಬ್ಬಳು... ಇದು ಬಹುತೇಕ ನಟರ ಪ್ರವೃತ್ತಿ. ಇದನ್ನು ನೋಡಿ ಅಸಹ್ಯ ಹುಟ್ಟಿತು. ಆಗಲೇ ನಾನು ಯಾವುದೇ ಕಾರಣಕ್ಕೂ ನಟರನ್ನು ಮದುವೆಯಾಗಬಾರದು ಎಂದು ಡಿಸೈಡ್​ ಮಾಡಿಬಿಟ್ಟೆ ಎಂದಿದ್ದಾರೆ. 

Tap to resize

Latest Videos

ಬೆತ್ತಲೆ ಸೀನ್​ ವೇಳೆ ನಾಲ್ವರು ಇದ್ವಿ, ರಣಬೀರ್​ ನರ್ವಸ್​ ಆಗಿದ್ರು: ಶೂಟಿಂಗ್ ಸಮಯದ ಘಟನೆ ವಿವರಿಸಿದ ನಟಿ ತೃಪ್ತಿ

 ಆನಂದ್ ಅವರನ್ನು ಭೇಟಿಯಾದ ಬಗೆಯನ್ನು ತಿಳಿಸಿದ ನಟಿ, ಒಮ್ಮೆ ಜಾಹೀರಾತು ಶೂಟಿಂಗ್​ಗೆಂದು ತೆರಳಿದ್ದೆ. ಅದು ಆನಂದ್​ ಅವರ ಕಂಪೆನಿಯಾಗಿತ್ತು. ಅಲ್ಲಿ ಅವರ ಭೇಟಿಯಾಯಿತು. ಆಗಲೇ ಅವರಿಗೆ ನನ್ನ ಮೇಲೆ ಮನಸ್ಸಾಗಿತ್ತು.  ಅನೇಕ ಸಂದರ್ಭಗಳಲ್ಲಿ ಪ್ರೀತಿಯ ವಿಚಾರವನ್ನು ಪ್ರಸ್ತಾಪ ಮಾಡಿದರು. ಆದರೆ ಅವರು ಒಂದು ಘಟನೆಯಲ್ಲಿ ಅವರು ತಮ್ಮ ಕೂದಲನ್ನು ಕಳೆದುಕೊಂಡಿದ್ದರು. ಆತ್ಮವಿಶ್ವಾಸ ಕಡಿಮೆಯಾಗಿತ್ತು. ಪ್ರೀತಿಯ ಬಗ್ಗೆ ಹೇಳುವಾಗಲೂ ಅವರು ಇದೇ ಕುಗ್ಗಿನಿಂದಲೇ ಇದ್ದರು. ಆದರೆ ಸುಂದರವಾದ ನಟರು ಹೇಗಿದ್ದಾರೆ ಎಂದು ಚೆನ್ನಾಗಿ ತಿಳಿದುಬಿಟ್ಟಿದ್ದೆ. ಆದ್ದರಿಂದ ಆಂತರಿಕ ಸೌಂದರ್ಯವೇ ಮೇಲೆಂದು ತಿಳಿದ ನಾನು ಆನಂದ್​​ ಅವರನ್ನು ಆಯ್ಕೆ ಮಾಡಿಕೊಂಡೆ. ಅವರ ಪ್ರೀತಿಯ ಪ್ರಸ್ತಾವ ಒಪ್ಪಿದೆ. ಮದುವೆಯಾಗಿ ಸುಖವಾಗಿದ್ದೇವೆ ಎಂದರು.
 
ಈ ಹಿಂದೆ ಅವರು, ವೃತ್ತಿ ಜೀವನ ಹಾಗೂ ಮದ್ವೆ ಕುರಿತು ಮಾತನಾಡಿದ್ದರು. '1997 ನಾನು restless ಆಗಿಬಿಟ್ಟೆ. ಚಿತ್ರರಂಗಕ್ಕೆ ಕಾಲಿಟ್ಟ 7 ವರ್ಷಕ್ಕೆ ಹೀಗೆ ಅನಿಸಿದ್ದು ನಿಜ ಏಕೆಂದರೆ ಸರಿಯಾಗಿ ಅವಕಾಶಗಳು ಸಿಗುತ್ತಿರಲಿಲ್ಲ. ಏಪ್ರಿಲ್‌ ತಿಂಗಳಿನಲ್ಲಿ ನನ್ನ ಪತಿಯನ್ನು ಮೊದಲ ಸಲ ಭೇಟಿ ಮಾಡಿದ್ದು ಅಕ್ಟೋಬರ್‌ ತಿಂಗಳಿನಲ್ಲಿ ನಾವು ಮದುವೆ ಮಾಡಿಕೊಂಡೆ. ನನ್ನ ಕೈಯಲ್ಲಿದ್ದ ಸಿನಿಮಾಗಳು ಮುಗಿಸಬೇಕಿತ್ತು ಹೀಗಾಗಿ ನಿರ್ದೇಶಕರಿಗೆ ಪತ್ರ ಬರೆದು ಹೇಳಿದ ಒಂದು ವರ್ಷದಲ್ಲಿ ಮುಗಿಸಿ ಎಂದು. ಆ ಸಮಯದಲ್ಲಿ ನಾನು ಪಬ್ಲಿಕ್ ಲೆಟರ್‌ ಕೂಡ ಬರೆದೆ. ಇದರಿಂದ ಜನರು ನನ್ನ ಬಗ್ಗೆ ತಪ್ಪು ತಿಳಿದುಕೊಂಡು ಆಫರ್‌ ಕೊಡುವುದು ನಿಲ್ಲಿಸಿಬಿಟ್ಟರು. ನಾನು ತೆಗೆದುಕೊಂಡ ಈ ನಿರ್ಧಾರದಿಂದ ನನ್ನ ವೃತ್ತಿ ಜೀವನ ಕುಸಿದಿತ್ತು. ಮದುವೆ ಆಗಬೇಕು ಮಗು ಮಾಡಿಕೊಳ್ಳಬೇಕು ಅನ್ನೋ ಆಸೆ ತುಂಬಾ ಇತ್ತು. ಹೆಣ್ಣು ಮಗು ಬೇಕು ಅಂತ ಪ್ರಾರ್ಥಿಸುತ್ತಿದ್ದೆ. ನನ್ನ ಪುಟ್ಟ ಮಕ್ಕಳ ಸಣ್ಣ ಪುಟ್ಟ ಮೈಲ್‌ ಸ್ಟೋನ್‌ಗಳನ್ನು ಶೂಟ್ ಮಾಡಿದ್ದೆ. ಜೀವನ ಹೀಗೆ ಇರಬೇಕು ಎಂದು ಪ್ಲ್ಯಾನ್ ಮಾಡಿದ್ದೆ ಅದೇ ರೀತಿ ನಡೆದುಕೊಂಡು ಬಂದೆ ಎಂದಿದ್ದರು. 

ಐಶ್​-ಅಭಿಷೇಕ್​ ಡಿವೋರ್ಸ್​ ಸುದ್ದಿ ಬೆನ್ನಲ್ಲೇ ಸೊಸೆಯನ್ನು ಅನ್​ಫಾಲೋ ಮಾಡಿದ ಅಮಿತಾಭ್​? ಅಸಲಿಯತ್ತೇನು?

click me!