ಕೇದಾರನಾಥ ಚಿತ್ರಕ್ಕೆ 5 ವರ್ಷ: ನೀಲಿ ಬಣ್ಣಕ್ಕೆ ತಿರುಗಿದ್ದ ಸುಶಾಂತ್​ ಸಿಂಗ್! ಶೂಟಿಂಗ್​ ತಲ್ಲಣಗಳ ವಿವರಿಸಿದ ಸಾರಾ ಅಲಿ

By Suvarna News  |  First Published Dec 10, 2023, 4:55 PM IST

ಸುಶಾಂತ್​ ಸಿಂಗ್​ ಮತ್ತು ಸಾರಾ ಅಲಿ ಖಾನ್​ ಅಭಿನಯದ ಕೇದಾರನಾಥ ಚಿತ್ರಕ್ಕೆ ಐದು ವರ್ಷ ಪೂರ್ಣಗೊಂಡಿದ್ದು, ಈ ಸಂದರ್ಭದಲ್ಲಿ ನಟಿ ಸಾರಾ ಅಲಿ ಶೂಟಿಂಗ್​ ದಿನಗಳ ನೆನಪಿಸಿಕೊಂಡಿದ್ದಾರೆ.
 


ಸುಶಾಂತ್​ ಸಿಂಗ್​ ಮತ್ತು ಸಾರಾ ಅಲಿ ಖಾನ್​ ಅಭಿನಯದ ಕೇದಾರನಾಥ ಚಿತ್ರ ಬಿಡುಗಡೆಯಾಗಿ ಐದು ವರ್ಷಗಳು ತುಂಬಿವೆ.   ಈ ಚಿತ್ರವು ಅಭಿಮಾನಿಗಳ ಹೃದಯದಲ್ಲಿ ವಿಶೇಷ ಸ್ಥಾನವನ್ನು ಗಳಿಸಿದೆ. ಚಿತ್ರವು ಗಲ್ಲಾಪೆಟ್ಟಿಗೆಯಲ್ಲೂ ಉತ್ತಮ ಪ್ರದರ್ಶನ ನೀಡಿತು. ಸುಶಾಂತ್ ಮತ್ತು ಸಾರಾ ಚಿತ್ರಕ್ಕಾಗಿ ಶ್ರಮಿಸಿದ್ದಾರೆ. ಈ ಚಿತ್ರದ ಮೂಲಕ ಸಾರಾ ಅಲಿ ಖಾನ್​ ಬಾಲಿವುಡ್​ಗೆ ಪದಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಶೂಟಿಂಗ್​ ದಿನಗಳನ್ನು ನೆನಪಿಸಿಕೊಂಡಿದ್ದಾರೆ ಸಾರಾ ಅಲಿ ಖಾನ್​. ಕೇದಾರನಾಥಕ್ಕೆ ಭೇಟಿ ಕೊಟ್ಟಿರುವ ಅವರು, ಅಂದು ಶೂಟಿಂಗ್​ ಸಮಯದಲ್ಲಿ ಆದ ಕೆಲವೊಂದು ಕಹಿ ಘಟನೆಗಳನ್ನು ನೆನಪಿಸಿಕೊಂಡಿದ್ದಾರೆ. ಸುಶಾಂತ್​ ಸಿಂಗ್​ ಅವರು ತಮಗೆ ನೆರವಾದ ರೀತಿ ಹಾಗೂ ಎಷ್ಟೇ ಕಷ್ಟದ ಸ್ಥಿತಿ ಇದ್ದರೂ ಅವರು ಅದನ್ನು ಎದುರಿಸಿ ಶೂಟಿಂಗ್​ ಪೂರ್ಣಗೊಳಿಸಿದ ಕುರಿತು ಸಾರಾ ಅಲಿ ಖಾನ್​ ಹೇಳಿದ್ದಾರೆ. 

ಕೇದಾರನಾಥ ಚಿತ್ರೀಕರಣ ಎಲ್ಲಿ ನಡೆದಿತ್ತು. ತಾವು ಎಲ್ಲಿ ಉಳಿದುಕೊಂಡಿದ್ದು ಎಂಬ ಬಗ್ಗೆ ನಟಿ ಮಾಹಿತಿ ನೀಡಿದ್ದಾರೆ. ಇದೇ ವೇಳೆ ಶೂಟಿಂಗ್​ ಸಮಯದಲ್ಲಿ ಜೋರಾಗಿ ಮಳೆ ಸುರಿಯುತ್ತಿತ್ತು. ಆಗ ನಾನು ಮಳೆಯಲ್ಲಿ ಮುದ್ದೆಯಾಗಿ ಹೋಗಿದ್ದೆ. ನಡುಕದಲ್ಲಿ ನಡೆಯಲೂ ಆಗುತ್ತಿರಲಿಲ್ಲ. ಆ ಸಂದರ್ಭದಲ್ಲಿ ಸುಶಾಂತ್​ ಸಿಂಗ್​ ಅವರೇ ನನ್ನನ್ನು ಎತ್ತಿಕೊಂಡು ಹೋದರು. ಬಹುಶಃ ಅವರು ಹಾಗೆ ಮಾಡದಿದ್ದರೆ ನಾನು ಏನಾಗುತ್ತಿದ್ದೆನೋ ಗೊತ್ತಿಲ್ಲ ಎಂದು ಸಾರಾ ಅಲಿ ಖಾನ್​ ಹೇಳಿದ್ದಾರೆ. ಅಂದು ಖುದ್ದು ಸುಶಾಂತ್​ ಅವರೂ ಸಾಕಷ್ಟು ಶ್ರಮ ವಹಿಸಿ ಶೂಟಿಂಗ್​ನಲ್ಲಿ ಪಾಲ್ಗೊಂಡಿದ್ದರು. ಅವರೂ ತೊಂದರೆ ಅನುಭವಿಸುತ್ತಿದ್ದರು. ಆದರೆ ನಾನು ತೊಂದರೆಯಲ್ಲಿ ಸಿಲುಕಿದ್ದರಿಂದ ಅವರು ನನ್ನ ರಕ್ಷಣೆ ಮಾಡಿದರು ಎಂದು ಸಾರಾ ಅಲಿ ಹೇಳಿದ್ದಾರೆ.

Tap to resize

Latest Videos

ಸುರಸುಂದರ ನಟರನ್ನು ತಿರಸ್ಕರಿಸಿ, ಬಾಲ್ಡಿಯನ್ನು ಮದ್ವೆಯಾದ ಗುಟ್ಟು ಬಹಿರಂಗಗೊಳಿಸಿದ 'ಅಣ್ಣಯ್ಯ' ನಟಿ ಮಧುಬಾಲ!

ಈ ಚಿತ್ರವನ್ನು ಅಭಿಷೇಕ್ ಕಪೂರ್ ನಿರ್ದೇಶಿಸಿದ್ದಾರೆ. ನಿರ್ದೇಶಕ ಅಭಿಷೇಕ್ ಕಪೂರ್ ಕೂಡ  ಎಬಿಪಿ ನ್ಯೂಸ್ ಜೊತೆಗಿನ ಸಂಭಾಷಣೆಯಲ್ಲಿ, ಚಿತ್ರದ ಶೂಟಿಂಗ್‌ಗೆ ಸಂಬಂಧಿಸಿದ ವಿಷಯಗಳನ್ನು ಹಂಚಿಕೊಂಡಿದ್ದಾರೆ ಮತ್ತು ಸುಶಾಂತ್ ಅವರ ಪ್ರತಿಭೆಯನ್ನು ಶ್ಲಾಘಿಸಿದ್ದಾರೆ. ಚಿತ್ರದ ಚಿತ್ರೀಕರಣದ ದಿನಗಳನ್ನು ನೆನಪಿಸಿಕೊಂಡ ಅಭಿಷೇಕ್, 'ಒಂದು ಸಂಜೆ ನಾವು ಕೇದಾರನಾಥದಲ್ಲಿ ಶೂಟಿಂಗ್ ಮಾಡುತ್ತಿದ್ದಾಗ ನನಗೆ ನೆನಪಿದೆ. ಅಲ್ಲಿ ಮಳೆಯ ದೃಶ್ಯ ಕಂಡುಬಂತು. ಸಾರಾ ಮತ್ತು ಸುಶಾಂತ್ ಆ ಚಿತ್ರೀಕರಣವನ್ನು ಪೂರ್ಣಗೊಳಿಸಬೇಕಾಗಿತ್ತು. ಆ ಮಳೆಯಲ್ಲಿ ಇಬ್ಬರೂ ಒದ್ದೆಯಾಗಬೇಕಿತ್ತು. ಅವರು ಒದ್ದೆಯಾಗುತ್ತಲೇ ಅಂತಹ ಚಳಿಯಲ್ಲಿ ಶೂಟ್ ಮಾಡಿದರು. ಸುಶಾಂತ್ ನೀಲಿ ಬಣ್ಣಕ್ಕೆ ತಿರುಗುವುದನ್ನು ನಾನು ನೋಡಿದ್ದೇನೆ. ಆದರೆ ಅವರು ಆ ಚಿತ್ರೀಕರಣವನ್ನು ಪೂರ್ಣಗೊಳಿಸಿದರು. ಅವರ ಕುಶಲತೆ ಮತ್ತು ಸಾಮರ್ಥ್ಯ ಹೇಳಲು ಪದಗಳೇ ಸಾಲುತ್ತಿಲ್ಲ ಎಂದರು. 

ಇದೇ ವೇಳೆ ಮೊದಲ ಚಿತ್ರದಲ್ಲಿಯೇ ಸಾರಾ ಅಲಿ ಖಾನ್​ ಜನರ ಹೃದಯ ಗೆದ್ದಿದ್ದನ್ನು ಅವರು ನೆನಪಿಸಿಕೊಂಡರು. ಅವರನ್ನು ಭೇಟಿಯಾದಾಗ ಸಾರಾ ಮತ್ತು ಸುಶಾಂತ್​ ಅವರ ವ್ಯಕ್ತಿತ್ವಗಳು ತುಂಬಾ ಹೊಂದಿಕೆಯಾಗುತ್ತವೆ ಎಂದು ನನಗೆ ಅನಿಸಿತು.  ಆ ಸಮಯದಲ್ಲಿ ಸಾರಾ ತುಂಬಾ ಹೊಸಬರು. ಅವರಿಗೆ ಸಿನಿಮಾಗಳ ಬಗ್ಗೆ ಅಷ್ಟಾಗಿ ಗೊತ್ತಿರಲಿಲ್ಲ. ಆದರೆ ಅವರು ಕೆಲಸ ಮಾಡುವ ಉತ್ಸಾಹವನ್ನು ಹೊಂದಿದ್ದರು. ಅವರು ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಾರೆ ಎಂದಿದ್ದರು.

ಪಾತ್ರೆ ತೊಳಿತಿರೋ ಕತ್ರಿನಾ ವಿಡಿಯೋ ವೈರಲ್​: ಕೋಮಲ ಕೈ ಸವೆದು ಹೋಗತ್ತೆ ಮೇಡಂ ಅಂತಿದ್ದಾರೆ ಫ್ಯಾನ್ಸ್​

click me!