ಸೇಲ್ಸ್‌ಮ್ಯಾನ್, ಕ್ಯಾಷಿಯರ್ ಆಗಿದ್ರು ವಿಜಯ್ ಸೇತುಪತಿ; ಕೋಟ್ಯಾಧಿಪತಿಯ ಹಿಂದಿನ ಕಥೆ ರೋಚಕ!

By Shriram Bhat  |  First Published Feb 15, 2024, 2:31 PM IST

2003ರಲ್ಲಿ ಜೆಸ್ಸಿ ಅವರನ್ನು ಮದುವೆಯಾಗಿರುವ ವಿಜಯ್ ಸೇತುಪತಿ ಅವರಿಗೆ ಸೂರ್ಯ ಹಾಗೂ ಶ್ರೀಜಾ ಎಂಬಿಬ್ಬರು ಮಕ್ಕಳಿದ್ದಾರೆ. ಹ್ಯಾಪಿ ಫ್ಯಾಮಿಲಿ ಲೀಡ್ ಮಾಡುತ್ತಿರುವ ನಟ ವಿಜಯ್ ಸೇತುಪತಿ ಅವರಿಗೆ ಕಳೆದ ವರ್ಷ ಬಿಡುಗಡೆಯಾಗಿದ್ದ ಅಲ್ಲು ಅರ್ಜುನ್ ಅಭಿನಯದ 'ಪುಷ್ಪಾ' ಸಿನಿಮಾ ಭಾರೀ ಹೆಸರು ತಂದು ಕೊಟ್ಟಿದೆ.


ನಟ ವಿಜಯ್ ಸೇತುಪತಿ ಇಂದು ಭಾರತದ ಅತ್ಯಂತ ಯಶಸ್ವಿ ನಟ. ಆದರೆ ಈ ಮಟ್ಟಕ್ಕೆ ಅವರು ಬೆಳೆಯುವ ಮೊದಲು ಜೀವನ ಹಾಗು ಅವರ ವೃತ್ತಿ ಜೀವನದಲ್ಲಿ ಬಹಳಷ್ಟು ಏಳುಬೀಳುಗಳನ್ನು ಕಂಡಿದ್ದಾರೆ. 16 ಜನವರಿ 1978ರಂದು ಜನಿಸಿರುವ ವಿಜಯ್ ಸೇತುಪತಿ ಅವರು ಸಿನಿಮಾ ನಟನೆಗೆ ಬರುವ ಮೊದಲು ಬೇರೆ ಬೇರೆ ಕೆಲಸಗಳನ್ನು ಕೂಡ ಮಾಡಿದ್ದಾರೆ, ಸೇಲ್ಸ್ ಮ್ಯಾನ್, ಟೆಲಿಫೋನ್ ಆಪರೇಟರ್, ಕ್ಯಾಷಿಯರ್ ಹಾಗೂ ಇನ್ನೂ ಅನೇಕ ಕೆಲಸಗಳನ್ನು ಮಾಡಿದ್ದರು. 16ನೆಯ ವಯಸ್ಸಿನಲ್ಲಿ ಸಿನಿಮಾ ಒಂದಕ್ಕೆ ಅಡಿಷನ್ ಕೊಟ್ಟಾಗ ಹೈಟ್ ಕಡಿಮೆ ಎಂದು ಅವರನ್ನು ರಿಜೆಕ್ಟ್ ಮಾಡಿದ್ದರಂತೆ. 

ನಟ ವಿಜಯ್ ಸೇತುಪತಿ ಅವರು ಮೊಟ್ಟಮೊದಲು ನಟಿಸಿದ ಚಿತ್ರ ತಮಿಳಿನ ಥೆನ್ಮೆರ್ಕು ಪರುವಾಕಾತ್ರು 2010ರಲ್ಲಿ ಬಿಡುಗಡೆಯಾಗಿತ್ತು. ಬಳಿಕ ಅವರಿಗೆ ತಮಿಳು ಸೇರಿದಂತೆ ಮಲಯಾಳಂ, ತೆಲುಗು ಹಾಗು ಕನ್ನಡ ಇಂಡಸ್ಟರಿಗಳಿಂದ ಆಫರ್‌ಗಳು ಬಂದವು. ಒಂದೊಂದೇ ಸಿನಿಮಾ ಮುಗಿಸುತ್ತಿದ್ದಂತೆ ನಟ ವಿಜಯ್ ಸೇತುಪತಿಯ ಖ್ಯಾತಿ ಭಾರತದುದ್ದಕ್ಕೂ ಹಬ್ಬತೊಡಗಿತು. ಹಿಂದಿಯಲ್ಲಿ ಕೂಡ ವಿಜಯ್ ಸೇತುಪತಿ ನಟಿಸಿ ಇಡೀ ಭಾರತದಲ್ಲಿ ಹೆಸರುವಾಸಿಯಾಗಿದ್ದಾರೆ. 

Tap to resize

Latest Videos

ಭಾರತಿಯನ್ನು ಹೆಸರು ಹೇಳಿ ಕರೆಯುತ್ತಿರಲಿಲ್ಲ ವಿಷ್ಣುವರ್ಧನ್; ಮಾಹಿ ಅಂತ ಯಾಕೆ ಕರೀತಿದ್ರು?

2003ರಲ್ಲಿ ಜೆಸ್ಸಿ ಅವರನ್ನು ಮದುವೆಯಾಗಿರುವ ವಿಜಯ್ ಸೇತುಪತಿ ಅವರಿಗೆ ಸೂರ್ಯ ಹಾಗೂ ಶ್ರೀಜಾ ಎಂಬಿಬ್ಬರು ಮಕ್ಕಳಿದ್ದಾರೆ. ಹ್ಯಾಪಿ ಫ್ಯಾಮಿಲಿ ಲೀಡ್ ಮಾಡುತ್ತಿರುವ ನಟ ವಿಜಯ್ ಸೇತುಪತಿ ಅವರಿಗೆ ಕಳೆದ ವರ್ಷ ಬಿಡುಗಡೆಯಾಗಿದ್ದ ಅಲ್ಲು ಅರ್ಜುನ್ ಅಭಿನಯದ 'ಪುಷ್ಪಾ' ಸಿನಿಮಾ ಭಾರೀ ಹೆಸರು ತಂದು ಕೊಟ್ಟಿದೆ. ಇದೀಗ ಆ ಚಿತ್ರದ ಸೀಕ್ವೆಲ್ ಆಗಿರುವ 'ಪುಷ್ಪಾ 2' ಚಿತ್ರದಲ್ಲಿ ವಿಜಯ್ ಸೇತುಪತಿ ನಟಿಸುತ್ತಿದ್ದಾರೆ. ಕಡುಬಡತನದಲ್ಲಿ ಹುಟ್ಟಿರುವ ವಿಜಯ್ ಸೇತುಪತಿ ಇಂದು ಈ ಮಟ್ಟಕ್ಕೆ ಬೆಳೆದು ನಿಂತಿರುವುದು ಹಲವರಿಗೆ ಮಾದರಿ ಎನ್ನಬಹುದು. 

ಬಂಗಾರದ ಮನುಷ್ಯನಿಗೂ ನಾಗರಹಾವಿಗೂ ಮಧ್ಯೆ ದ್ವೇಷ ತಂದಿಟ್ಟಿದ್ದು ಯಾರು; ಹಳೆಯ ಗುಟ್ಟು ರಟ್ಟಾಯ್ತು!

ಯಾವುದೇ ಭಾಷೆಯ ಯಾವುದೇ ಸಿನಿಮಾದಲ್ಲಿ ಹೀರೋ ಯಾರೇ ಆಗಿದ್ದರೂ ಖಡಕ್ ವಿಲನ್ ಬೇಕೆಂದರೆ ನಟ ವಿಜಯ್ ಸೇತುಪತಿ ಹೆಸರು ಮೊದಲಿಗೆ ನೆನಪಿಗೆ ಬರುತ್ತದೆಯಂತೆ. ಹಾಗಂತ ಹಲವು ನಿರ್ಮಾಪಕರು ಹಾಗು ನಿರ್ದೇಶಕರು ಬಹಿರಂಗ ಹೇಳಿಕೆ ಕೂಡ ಕೊಟ್ಟಿದ್ದಾರೆ. ಇದು ನಿಜವಾಗಿಯೂ ನಟ ವಿಜಯ್ ಸೇತುಪತಿ ಅದೆಷ್ಟು ಒಳ್ಳೆಯ ನಟ, ಅದೆಷ್ಟು ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ ಎಂಬುದಕ್ಕೆ ಸಾಕ್ಷಿ ಎನ್ನಬಹುದು. 

ಸಿದ್ದಾರ್ಥ್ ಮಲ್ಹೋತ್ರಾ ಜತೆಗೇ ಕಿಯಾರಾ ಅಡ್ವಾನಿ ಮದುವೆಯಾಗಿದ್ದು ಯಾಕೆ; ಸೀಕ್ರೆಟ್ ರಿವೀಲ್ ಆಯ್ತು

click me!