'ನಾನು ನನ್ನ ಪ್ರೇಮ-ಮದುವೆ ಬಗ್ಗೆ ತುಂಬಾ ಕನಸುಗಳನ್ನು ಕಟ್ಟಿಕೊಂಡಿದ್ದೆ. ಏಕೆಂದರೆ, ನಾನು ನನ್ನ ಅಪ್ಪ-ಅಮ್ಮ ಲವ್ ಮ್ಯಾರೇಜ್ ಆದವರು. ಅವರಿಬ್ಬರಲ್ಲಿ ಇರುವ ಪರಸ್ಪರ ಪ್ರೀತಿ, ಗೌರವ ಹಾಗು ಹೊಂದಾಣಿಕೆಗಳನ್ನು ನೋಡುತ್ತ ಬೆಳೆದವಳು ನಾನು...
ಬಾಲಿವುಡ್ ಬ್ಯೂಟಿ ನಟಿ ಕಿಯಾರಾ ಅಡ್ವಾನಿ (Kiara Advani) ಸಿದ್ದಾರ್ಥ್ ಮಲ್ಹೋತ್ರಾ (Sidharth Malhotra) ಅವರನ್ನು ಮದುವೆಯಾಗಿರುವುದು ಗೊತ್ತೇ ಇದೆ. 7 ಫೆಬ್ರವರಿ 2023ರಂದು ಅವರಿಬ್ಬರೂ ಪರಸ್ಪರ ಪ್ರೀತಿಸಿ ಎರಡೂ ಕುಟುಂಬಗಳ ಒಪ್ಪಿಗೆ ಪಡೆದು ಮದುವೆಯಾಗಿದ್ದಾರೆ. ಅದಕ್ಕೂ ಮೊದಲು ಅವರಿಬ್ಬರೂ ತಮ್ಮ ತಮ್ಮ ಸಿನಿಮಾ ಕೆರಿಯರ್‌ನಲ್ಲಿ ಬ್ಯುಸಿಯಾಗಿದ್ದರು. ಕಿಯಾರಾ ಅಡ್ವಾನಿಯವರು ಸಂದರ್ಶನವೊಂದರಲ್ಲಿ ತಮ್ಮ ಲವ್, ಮದುವೆ ಜೀವನದ ಬಗ್ಗೆ ಮಾತನಾಡಿದ್ದಾರೆ. ಅದೇನು ಹೇಳಿದ್ದಾರೆ ನೋಡೋಣ ಬನ್ನಿ..
ನಟಿ ಕಿಯಾರಾ ಅಡ್ವಾನಿ 'ನಾನು ನನ್ನ ಪ್ರೇಮ-ಮದುವೆ ಬಗ್ಗೆ ತುಂಬಾ ಕನಸುಗಳನ್ನು ಕಟ್ಟಿಕೊಂಡಿದ್ದೆ. ಏಕೆಂದರೆ, ನಾನು ನನ್ನ ಅಪ್ಪ-ಅಮ್ಮ ಲವ್ ಮ್ಯಾರೇಜ್ (Marriage) ಆದವರು. ಅವರಿಬ್ಬರಲ್ಲಿ ಇರುವ ಪರಸ್ಪರ ಪ್ರೀತಿ, ಗೌರವ ಹಾಗು ಹೊಂದಾಣಿಕೆಗಳನ್ನು ನೋಡುತ್ತ ಬೆಳೆದವಳು ನಾನು. ನನಗೆ ಕುಟುಂಬ, ಸಂಸಾರ, ಪ್ರೇಮ, ಮದುವೆ ಹಾಗೂ ಮಕ್ಕಳು ಈ ಎಲ್ಲದರಲ್ಲೂ ತುಂಬಾ ನಂಬಿಕೆಯಿದೆ. ನಮ್ಮ ಅಪ್ಪ-ಅಮ್ಮ ಕೂಡ ತಮ್ಮ ಹೈಸ್ಕೂಲು, ಕಾಲೇಜು ಲವ್ ಸ್ಟೋರಿಗಳನ್ನು ಕಣ್ಣರಳಿಸಿಕೊಂಡು ಎಲ್ಲರೆದುರೇ ಹೇಳಿಕೊಳ್ಳುವಾಗ ನನಗೆ ತುಂಬಾ ಹೆಮ್ಮೆ ಎನಿಸುತ್ತದೆ.
ಏನಿಲ್ಲ ಏನಿಲ್ಲ, ರಾಜ್-ವಿಷ್ಣು ಮಧ್ಯೆ ಏನೇನೂ ಇರಲಿಲ್ಲ; ಆದ್ರೂ ಯಾಕೆ ಸ್ಟಾರ್ ವಾರ್ ಸೃಷ್ಟಿಸಲಾಯ್ತು!
ಲವ್, ಮ್ಯಾರೇಜ್ ಹಾಗೂ ಕುಟುಂಬ ಇವೆಲ್ಲಾ ನಮ್ಮ ಜೀವನದ ಅವಿಭಾಜ್ಯ ಅಂಗ ಎಂಬ ನನ್ನ ಪೋಷಕರ ನಿಲುವು ಹಾಗು ಜೀವನ ನನಗೆ ಯಾವತ್ತೂ ಆದರ್ಶಪ್ರಾಯವಾಗಿದೆ. ನಾನು ಕೂಡ ಅದನ್ನೇ ಇಷ್ಟಪಡುತ್ತೇನೆ. ನನಗೆ ನನ್ನ ಸಂಗಾತಿ ಹೀಗಿರಬೇಕು, ಹಾಗಿರಬೇಕು ಎಂಬ ಕನಸಿತ್ತು. ಯಾರೇ ಬಾಯ್ ಫ್ರೆಂಡ್ ಆಗಲೀ, ನಾನು ಅವರಲ್ಲಿರುವ ಒಳ್ಳೆಯ ಗುಣಗಳನ್ನು ಗಮನಿಸಿ ಪಟ್ಟಿ ಮಾಡಿಕೊಳ್ಳುತ್ತಿದ್ದೆ. ಅವರಲ್ಲಿ ನನ್ನ ಪ್ರಕಾರ ಯಾವುದೇ ಸದ್ಗುಣಗಳ ಕೊರತೆ ಕಂಡರೆ ನಾನು ಸ್ನೇಹವನ್ನು ಮೀರಿ ಪ್ರೀತಿ ಕಡೆ ಮುಂದುವರೆಸುತ್ತಿರಲಿಲ್ಲ.
ಫೋಟೋ ಜೊತೆ ನಿಂತ ಪ್ರಕಾಶ್ ರಾಜ್; ನಿರ್ದಿಗಂತ ಮೂಲಕ ಎಂಥ ಕಥೆಯನ್ನು ಪ್ರೆಸೆಂಟ್ ಮಾಡ್ತಿದ್ದಾರೆ ನೋಡ್ರಿ!
ಆದರೆ, ಸಿದ್ಧರ್ಥ್ ಮಲ್ಹೋತ್ರಾ ಅವರ ಜತೆಗಿನ ನನ್ನ ಸ್ನೇಹ ನನಗೆ ಸ್ನೇಹಕ್ಕೆ ಮೀರಿದ್ದೆಂದು ಅನ್ನಿಸಿ ಪ್ರೇಮಕ್ಕೆ ಜಾರಿಕೊಂಡೆ. ನನ್ನ ಅಪ್ಪ-ಅಮ್ಮನ ಮಾದರಿ ಪ್ರೇಮವನ್ನು ನಾನು ನನ್ನ ಹಾಗೂ ಸಿದ್ಧಾರ್ಥ್ ಇಬ್ಬರಲ್ಲಿ ನೋಡಿದೆ. ಹೀಗಾಗಿ ನಾನು ಅವರನ್ನೇ ಮದುವೆಯಾಗಲು ಇಷ್ಟಪಟ್ಟು ಪೊಷಕರ ಒಪ್ಪಿಗೆ ಮೇರೆಗೆ ಮದುವೆಯೂ ಆದೆ. ನನಗೆ ನಮ್ಮಿಬ್ಬರ ಜೋಡಿಯ ಬಗ್ಗೆ ಹೆಮ್ಮೆಯಿದೆ. ನಾವಿಬ್ಬರೂ ಜೀವನಪರ್ಯಂತ ಪರಸ್ಪರ ಹೊಂದಿಕೊಂಡು ಹೋಗಲಿದ್ದೇವೆ ಎಂಬ ಬಗ್ಗೆ ನನಗೆ ವಿಶ್ವಾಸವಿದೆ' ಎಂದಿದ್ದಾರೆ ನಟಿ ಕಿಯಾರಾ ಅಡ್ವಾನಿ.
ಹೊಂದಿಕೆ ಇಲ್ಲ ಅಂದರೆ ಬದುಕಬಹುದು, ಹೊಂದಾಣಿಕೆ ಇಲ್ಲ ಅಂದ್ರೆ ಕಷ್ಟ; For REGNಗೆ ರೆಡಿಯಾಗ್ರಿ!