ಮಾಜಿ ಪತ್ನಿಯನ್ನು ತಬ್ಬಿಕೊಂಡ ಬೆನ್ನಲ್ಲೇ ಹೃತಿಕ್​ಗೆ ಇದೇನಾಯ್ತು? ಊರುಗೋಲು ಹಿಡಿದ ಫೋಟೋ ವೈರಲ್​!

Published : Feb 14, 2024, 10:25 PM IST
ಮಾಜಿ ಪತ್ನಿಯನ್ನು ತಬ್ಬಿಕೊಂಡ ಬೆನ್ನಲ್ಲೇ ಹೃತಿಕ್​ಗೆ ಇದೇನಾಯ್ತು? ಊರುಗೋಲು ಹಿಡಿದ ಫೋಟೋ ವೈರಲ್​!

ಸಾರಾಂಶ

ಗಾಯಕಿ ಸಬಾ ಅಜಾದ್ ಜೊತೆ ಸಂಬಂಧದಲ್ಲಿರೋ ಹೃತಿಕ್​ ರೋಷನ್​ ಈಚೆಗಷ್ಟೇ ಬಹಿರಂಗವಾಗಿ ಮಾಜಿ ಪತ್ನಿಗೂ ಕಿಸ್​ ಕೊಟ್ಟಿದ್ದರು. ಇದೀಗ ಊರುಗೋಲು ಹಿಡಿದ ಫೋಟೋ ವೈರಲ್​ ಆಗಿದೆ. ಏನಿದು ವಿಷ್ಯ?  

ಊರುಗೋಲು ಹಿಡಿದುಕೊಂಡಿರುವ ಬಾಲಿವುಡ್​ ನಟ ಹೃತಿಕ್​ ರೋಷನ್​ ಈ ಫೋಟೋ ಅನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಇದನ್ನು ನೋಡಿ ಹೃತಿಕ್​ ಅಭಿಮಾನಿಗಳಿಗೆ ಶಾಕ್​ ಆಗಿದೆ. ಇದೇನಾಯ್ತು ಎಂದು ಒಂದೇ ಸಮನೆ ಪ್ರಶ್ನೆ ಮಾಡುತ್ತಿದ್ದಾರೆ.  ತಮ್ಮ Instagram ಹ್ಯಾಂಡಲ್‌ನಲ್ಲಿ ಹೃತಿಕ್​, ತಮಗೆ ಗಾಯವಾಗಿದೆ  ಎಂದು ಬಹಿರಂಗಪಡಿಸಿದ್ದಾರೆ. ಇದು ಹೇಗೆ ಆಯಿತು ಎಂದು ಅವರು ಹೇಳಲಿಲ್ಲ. ಆದರೆ  ಊರುಗೋಲುಗಳನ್ನು ಹಿಡಿದಿರುವ  ತಮ್ಮ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.  ಇದು ಸ್ನಾಯು ಎಳೆತದ ಕಾರಣ ಎಂದು ಹೇಳಿದ್ದಾರೆ. ನನ್ನ ಅಜ್ಜ ಗಾಯಗೊಂಡಾಗ  ಗಾಲಿಕುರ್ಚಿಯಲ್ಲಿ ಕುಳಿತುಕೊಳ್ಳಲು ನಿರಾಕರಿಸಿದ್ದರು. ಆ ಸಮಯ ನನಗೀಗ ನೆನಪಾಗುತ್ತಿದೆ. ಹೀಗೆ ಗಾಲಿ ಖುರ್ಚಿಯಲ್ಲಿ ಕುಳಿತುಕೊಂಡರೆ ತಾವು ಅಸಮರ್ಥರು ಎನ್ನುವ ಭಾವನೆ ಬರುತ್ತದೆ ಎಂದು ಅವರು ಹೇಳಿದ್ದು ನನಗೆ ನೆನಪಿಗೆ ಬರುತ್ತದೆ. ಆ ಮಾತನ್ನು ನೆನಪಿಸಿಕೊಳ್ಳುತ್ತಲೇ ಅವರಿಗೆ ಎಷ್ಟು ಶಕ್ತಿ ಇತ್ತು ಎನ್ನುವುದು ನೆನಪಾಗುತ್ತದೆ ಎಂದು  ಹೃತಿಕ್​ ಬರೆದುಕೊಂಡಿದ್ದಾರೆ. ಇವರಿಗೆ ಬೆನ್ನಿನ ನೋವಿನ ಹಿನ್ನೆಲೆಯಲ್ಲಿ ಕ್ಲಚಸ್​ ನೆರವು ಪಡೆದಿದ್ದಾರೆ ಎನ್ನಲಾಗುತ್ತಿದೆ. 

ಹೃತಿಕ್​ ಅಭಿಮಾನಿಗಳು ಕೂಡಲೇ ಗುಣಮುಖರಾಗಿ ಬರುವಂತೆ ಶುಭ ಹಾರೈಸುತ್ತಿದ್ದಾರೆ. ಇನ್ನು ಕೆಲವರು ನಟನ ಕಾಲೆಳೆಯುತ್ತಿದ್ದಾರೆ. ಮಾಜಿ ಪತ್ನಿಯನ್ನು ತಬ್ಬಿಕೊಂಡ ಬೆನ್ನಲ್ಲೇ ಇದೆಂಥ ಸಮಸ್ಯೆಯಾಯಿತು ಎಂದು ಪ್ರಶ್ನಿಸುತ್ತಿದ್ದಾರೆ. ಅಷ್ಟಕ್ಕೂ ಆಗಿದ್ದೇನೆಂದರೆ, ಹೃತಿಕ್​ ರೋಷನ್​ ಮತ್ತು ಸುಸ್ಸಾನೇ ಖಾನ್​ ವಿಚ್ಛೇದನ ಪಡೆದು ವರ್ಷಗಳೇ ಕಳೆದಿವೆ. ಮದ್ವೆಯಾಗಿರುವಾಗಲೇ ಕಂಗನಾ ರಣಾವತ್​ ಜೊತೆ ಅಫೇರ್​ ಇಟ್ಟುಕೊಂಡಿದ್ದ ಹೃತಿಕ್​ ಕೊನೆಗೂ ಅವರಿಗೂ ಕೈಕೊಟ್ಟು, ಸುಸ್ಸಾನೇ ಖಾನ್​ಗೂ ಡಿವೋರ್ಸ್​ ಕೊಟ್ಟು, ಸದ್ಯ  ಗಾಯಕಿ ಸಬಾ ಅಜಾದ್ ಜೊತೆ ಸಂಬಂಧದಲ್ಲಿದ್ದಾರೆ. ಇವರ ಲವ್ ವಿಚಾರ ಇದೀಗ ಗುಟ್ಟಾಗಿಯೇನು ಉಳಿದಿಲ್ಲ. 

ದೀಪಿಕಾ ಬೆತ್ತಲಾದರೂ ಓಡಲಿಲ್ಲವೇಕೆ 'ಫೈಟರ್'​ ಚಿತ್ರ? ನಿರ್ದೇಶಕ ಕೊಟ್ಟ ಉತ್ತರ ಕೇಳಿ...

ಇದರ ನಡುವೆಯೇ,  ಹೃತಿಕ್​ ಅವರ  ಮುಂಬರುವ ಚಿತ್ರ 'ಫೈಟರ್' ಚಿತ್ರದ ಪ್ರಮೋಷನ್​ ಸಂದರ್ಭದಲ್ಲಿ ಕಾರ್ಯಕ್ರಮವೊಂದಕ್ಕೆ ಆಗಮಿಸಿದ್ದರು.  ಅಲ್ಲಿ ಅವರ ಮಾಜಿ ಪತ್ನಿ ಸುಸ್ಸಾನೇ ಖಾನ್ ಕೂಡ ಇದ್ದರು.  ಈ ವಿಡಿಯೋದಲ್ಲಿ ಹೃತಿಕ್ ರೋಷನ್ ಮತ್ತು ಸುಸ್ಸಾನೇ ಖಾನ್ ಒಬ್ಬರನ್ನೊಬ್ಬರು ತಬ್ಬಿಕೊಂಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿತ್ತು. ಅತ್ತ  ಸಾರ್ವಜನಿಕ ಸ್ಥಳದಲ್ಲಿ ಸಬಾ- ಹೃತಿಕ್ ಇಬ್ಬರು ಲಿಪ್ ಕಿಸ್ ಮಾಡಿ ತಮ್ಮ ಸಂಬಂಧವನ್ನು ಬಹಿರಂಗಪಡಿಸುತ್ತಲೇ, ಮಾಜಿ ಪತ್ನಿಯನ್ನೂ ಬಿಡುತ್ತಿಲ್ಲ ಎಂದು ಸಾಕಷ್ಟು ಮಂದಿ ಟೀಕೆ ಮಾಡಿದ್ದರು. ಈಗ ಅದನ್ನೇ ಮತ್ತೆ ಇಲ್ಲಿ ಎಳೆದು ತಂದಿದ್ದಾರೆ. 

ಈ ಕಾರ್ಯಕ್ರಮದಲ್ಲಿ ಸುಸ್ಸಾನೇ ಬಂದದ್ದು ಏಕೆ  ಏಕೆ ಎನ್ನುವ ಪ್ರಶ್ನೆ ನೆಟ್ಟಿಗರದ್ದಾಗಿತ್ತು. ಅದೂ ಅಲ್ಲದೇ,  ಹೃತಿಕ್ ರೋಷನ್ ಕಾರ್ಯಕ್ರಮಕ್ಕೆ ಬಂದ ತಕ್ಷಣ, ಅವರು ಸುಸ್ಸಾನೇ  ಖಾನ್ ಅವರನ್ನು ತಬ್ಬಿಕೊಳ್ಳುತ್ತಾರೆ ಮತ್ತು ಇಬ್ಬರೂ ಪರಸ್ಪರ ಪ್ರೀತಿಯಿಂದ ಇರುವುದನ್ನು ವಿಡಿಯೋದಲ್ಲಿ ನೋಡಬಹುದು.  ಅಷ್ಟೇ ಅಲ್ಲ, ಸುಸ್ಸಾನೇ ತಮ್ಮ ಮಾಜಿ ಗಂಡನ ಫೋಟೋವನ್ನೂ ಕ್ಲಿಕ್ಕಿಸಿರುವುದನ್ನೂ ನೋಡಬಹುದು. ಈ ಸೆಲೆಬ್ರಿಟಿಗಳ ವಿಷಯ ಅವರೇ ಬಲ್ಲರು ಎಂದು ಹಲವರು ಹೇಳುತ್ತಿದ್ದಾರೆ. ಸಿನಿಮಾ ತಾರೆಯರಿಗೆ ಡಿವೋರ್ಸ್​ ಆದ್ಮೇಲೆ  ಲವ್​ ಜಾಸ್ತಿಯಾಗೋದ್ಯಾಕೆ ಎಂದು ಹಲವರು ಪ್ರಶ್ನಿಸಿದ್ದರು. ಇದರ ನಡುವೆ ಈಗ ಈ ಸ್ಥಿತಿ ಬಂದಿದ್ದನ್ನು ನೋಡಿ ಮಾಜಿ ಪತ್ನಿ ಏನಾದ್ರೂ ಮಾಡಿದ್ಲೋ ಅಥ್ವಾ ಲವ್ವರ್​ ಏನಾದ್ರೂ ಮಾಡಿದ್ಲೋ ಎಂದು ನಟನ ಕಾಲೆಳೆಯುತ್ತಿದ್ದಾರೆ. 

ಸುಸ್ಸಾನೆ ಖಾನ್- ಹೃತಿಕ್ ಆಲಿಂಗನ​! ಸಿನಿಮಾ ತಾರೆಯರಿಗೆ ಡಿವೋರ್ಸ್​ ಆದ್ಮೇಲೆ ಲವ್​ ಜಾಸ್ತಿಯಾಗೋದ್ಯಾಕೆ?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?