ಇನಾಯ-ತೈಮೂರ್: ಖಾನ್‌ ಕುಟುಂಬದ ಮಕ್ಕಳು ಪಬ್ಲಿಕ್ ಕ್ಯಾಮೆರಾ ಕಂಡ್ರೆ ಗರಂ, ಹೀಗೆ ಟಾಂಗ್ ಕೊಡ್ತಾರಂತೆ!

Published : Nov 12, 2022, 12:27 PM IST
ಇನಾಯ-ತೈಮೂರ್: ಖಾನ್‌ ಕುಟುಂಬದ ಮಕ್ಕಳು ಪಬ್ಲಿಕ್ ಕ್ಯಾಮೆರಾ ಕಂಡ್ರೆ ಗರಂ, ಹೀಗೆ ಟಾಂಗ್ ಕೊಡ್ತಾರಂತೆ!

ಸಾರಾಂಶ

ಇನಾಯ ಮತ್ತು ತೈಮೂರ್ ಬಾಂಡ್‌ ಬಗ್ಗೆ ಮಾತನಾಡಿದ ಸೋಹಾ ಅಲಿ ಖಾನ್. ಮಕ್ಕಳ ವಿಚಾರದಲ್ಲಿ ಎಷ್ಟು  ಸ್ಟ್ರಿಕ್ಟ್ ಆಗಿರಬೇಕು ?

ಬಾಲಿವುಡ್ ಖಾನ್ ಕುಟುಂಬದ ಮಕ್ಕಳು ಹುಟ್ಟುತ್ತಲೇ ಸೆಲೆಬ್ರಿಟಿಗಳು. ಅದರಲ್ಲೂ ತೈಮೂರ್ ಅಲಿ ಖಾನ್, ಜೆಹ್ ಮತ್ತು ಇನಾಯ ಸದಾ ಲೈಮ್‌ ಲೈಟ್‌ನಲ್ಲಿರುತ್ತಾರೆ. ಪಬ್ಲಿಕ್ ಲೈಫ್‌ ಲೀಡ್ ಮಾಡುತ್ತಿದ್ದರೂ ಮಕ್ಕಳನ್ನು ಕ್ಯಾಮೆರಾದಿಂದ ದೂರು ಇಡುವುದು ಹೇಗೆ? ಎಷ್ಟ ಸ್ಟ್ರಿಕ್ಟ್‌ ಆಗಿದ್ದರೆ ಮಕ್ಕಳನ್ನು ಸರಿ ದಾರಿಗೆ ತರಬಹುದು ಎಂದು ಸೋಹಾ ಅಲಿ ಖಾನ್ ಮಾತನಾಡಿದ್ದಾರೆ. ಖಾನ್ ಕುಟುಂಬದ ನೆಕ್ಸಟ್‌ ಹೀರೋ ತೈಮೂರ್‌?

 ಸ್ಟ್ರಿಕ್ಟ್ ಪೇರೆಂಟ್:

'ನಮ್ಮ ಫ್ಯಾಮಿಲಿಯಲ್ಲಿ ನಾನೇ  ಸ್ಟ್ರಿಕ್ಟ್. ಜೀವನದಲ್ಲಿ routine and rulesನ ತಪ್ಪದೆ ಫಾಲೋ ಮಾಡಬೇಕು ಅನ್ನೋದು ನನ್ನ ಅಭಿಪ್ರಾಯ. ಪತಿ ಕುನಾಲ್‌ ಸ್ವಲ್ಪ ಕೂಲ್ ಆಗಿದ್ದಾರೆ ಯಾವುದೇ ರೂಲ್ಸ್‌ ಆಂಡ್ ಬ್ರೇಕ್ ಹಾಕುವುದಿಲ್ಲ. ನನ್ನ ಅನುಕುಲಕ್ಕೆ ತಕ್ಕಂತೆ ನಾನು ಪ್ಲ್ಯಾನ್ ಮಾಡುವೆ ಆದರೆ ಇದರಿಂದ ಅವಳ ಜೀವನಕ್ಕೆ ಒಳ್ಳೆಯದಾಗಲಿದೆ. ನನ್ನ ಪ್ರಾಮಾಣಿಕವಾಗಿ ಪಾಲಿಸುವುದು ಎರಡು ವಿಚಾರಗಳು ಸರಿಯಾದ ಸಮಯಕ್ಕೆ ಮಲಗುವುದು ಮತ್ತೊಂದು  nutritious diet ...ಅಂದ್ರೆ ಸರಿಯಾದ ಪ್ರಮಾಣದಲ್ಲಿ ತರಕಾರಿ ತಿನ್ನುವುದು ಹಾಗೇ ಸಕ್ಕರೆ ಅಂಶವನ್ನು ಆದಷ್ಟು ದೂರ ಮಾಡುತ್ತೀವಿ. ಆಕೆಗೆ ಏನು ಬೇಕು ಅದನ್ನು ಆಯ್ಕೆ ಮಾಡಿಕೊಳ್ಳಬಹುದು...ನನ್ನ ಇಷ್ಟಗಳನ್ನು ಇನಾಯ ಮೇಲೆ ಹೇರುತ್ತಿಲ್ಲ. ಆಕೆ 5 ವರ್ಷ ಹುಡುಗಿ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವಿದೆ. ಈ ಜರ್ನಿಯಲ್ಲಿ ಸುಸ್ತಾಗುತ್ತದೆ ಆದರೆ ಆಕೆಗೆ ಒಳ್ಳೆಯ ಬೆಳವಣಿಗೆ ಸಿಗಬೇಕು ಎಂದು ಕಷ್ಟ ಪಡುತ್ತಿರುವೆ. ಪೋಷಕರಾಗಿ ನಾವು ಒಳ್ಳೆಯದು ಮಾಡಬಹುದು ಇಲ್ಲವಾದರೆ ಡ್ಯಾಮೇಜ್ ಮಾಡಬಹುದು' ಎಂದು ಸೋಹಾ ಅಲಿ ಖಾನ್ ಖಾಸಗಿ ಸಂದರ್ಶನದಲ್ಲಿ ಮಾತನಾಡಿದ್ದಾರೆ. 

ಪ್ರಾಣಿ ಪ್ರೀತಿ:

ಇನಾಯಗೆ ಪ್ರಾಣಿ- ಪಕ್ಷಿಗಳು ತುಂಬಾನೇ ಇಷ್ಟ. ಇತ್ತೀಚಿಗೆ ಮಸ್ತಿ ಕಳೆದುಕೊಂಡೆವು. ಆದರೆ ನಮ್ಮ ಪಟೌಡಿ ಫಾರ್ಮ್‌ಹೌಸ್‌ನಲ್ಲಿ ದತ್ತು ತೆಗೆದುಕೊಂಡಿರುವ ಹಲವು ನಾಯಿಗಳು ಇದೆ.  ಅಮ್ಮ ಶರ್ಮಿಳಾ ಟ್ಯಾಗೂರ್‌ ಮನೆಯಲ್ಲಿ ಎರಡು ನಾಯಿಗಳಿದೆ. ಹುಟ್ಟುತಲ್ಲೇ ಇನಾಯ ಪ್ರಾಣಿಗಳ ಜೊತೆ ಹೊಂದಿಕೊಂಡಳು ಇದೆಲ್ಲಾ ಆಕೆಗೆ ನಾವು ಹೇಳಿಕೊಟ್ಟಿಲ್ಲ. ಇನಾಯ ಮುಂದೆ ಸೊಳ್ಳೆ ಕೂಡ ಸಾಯಿಸುವಂತಿಲ್ಲ ಅಳುತ್ತಾಳೆ. ಪ್ರಾಣಕ್ಕೆ ಅಷ್ಟು ಬೆಲೆ ಕೊಡುತ್ತಾಳೆ. ಆಕೆಯ ಈ ಗುಣ ನಮಗೆ ಬದಲಾಯಿಸುವುದಕ್ಕೆ ಇಷ್ಟವಿಲ್ಲ' ಎಂದು ಸೋಹಾ ಅಲಿ ಖಾನ್ ಹೇಳಿದ್ದಾರೆ.

ತೈಮೂರ್ ಎಂದರೆ ಕಬ್ಬಿಣ: ಬಾಲಿವುಡ್ ಟಾಪ್ ಸ್ಟಾರ್ ಮಕ್ಕಳ ಹೆಸರಿಗಿದೆ ವಿಶೇಷ ಅರ್ಥ

ಪ್ಯಾಪರಾಜಿಗಳು:

ಪ್ಯಾಪರಾಜಿಗಳ ಬಗ್ಗೆ ನಾನು ಕಾಮೆಂಟ್ ಮಾಡುವುದಿಲ್ಲ ಆದರೆ ಆಕೆಗೆ ಏನು ಭಾಸವಾಗುತ್ತದೆ ಒಮ್ಮೊಮ್ಮೆ ಹೇಳಿಕೊಳ್ಳುತ್ತಾಳೆ. ಈಗ ಪ್ಯಾಪರಾಜಿಗಳ ಬಗ್ಗೆ ಆಕೆಗೆ ಅರ್ಥ ಮಾಡಿಸುತ್ತಿದ್ದೇವೆ. ಅಮ್ಮ ಯಾಕೆ ಇವರೆಲ್ಲಾ ನನ್ನ ಫೋಟೋ ಕ್ಲಿಕ್ ಮಾಡುತ್ತಿದ್ದಾರೆ? ಎಂದು ಪ್ರಶ್ನೆ ಮಾಡುತ್ತಾಳೆ. ಪ್ಯಾಪರಾಜಿಗಳಿಂದ ಕ್ಯಾಮೆರಾದಿಂದ ದೂರ ಉಳಿಯುತ್ತಾರೆ ಹೀಗಾಗಿ ನಾನು ಫೋಟೋ ಅಥವಾ ವಿಡಿಯೋ ಮಾಡಿದ್ದರೂ ಕಿರಿಕಿರಿ ಮಾಡಿಕೊಳ್ಳುತ್ತಾಳೆ. ಅಮ್ಮ ನನ್ನನ್ನು ರೆಕಾರ್ಡ್‌ ಮಾಡುತ್ತಿದ್ದಾ? ಎಂದು ಪ್ರಶ್ನೆ ಮಾಡುತ್ತಾಳೆ ಹೌದು ಎಂದು ಹೇಳಿದರೆ ಬೇಡ ಬೇಡ ಮಾಡಬೇಡ ಎಂದು ಹಠ ಮಾಡುತ್ತಾಳೆ. ಆಕೆ ಹೇಳುವುದನ್ನು ನಾನು ಗೌರವಿಸುತ್ತೀನಿ ಏಕೆಂದರೆ ಪ್ರತಿಯೊಬ್ಬರಿಗೂ ಒಂದೊಂದು ಇಷ್ಟವಿರುತ್ತದೆ. ಆಕೆ ಪ್ರೈವಸಿಯನ್ನು ಹಾಳು ಮಾಡುವುದಿಲ್ಲ. ಮಕ್ಕಳನ್ನು ಗೊಂಬೆ ರೀತಿ ನೋಡಬಾರದು ಅವರನ್ನು ಕಂಟ್ರೋಲ್ ಮಾಡಬಾರದು. ಪಬ್ಲಿಕ್ ಫಿಗರ್‌ಗಳ ಫ್ಯಾಮಿಲಿಗೆ ನಾನು ಸೇರಿದವಳು ಅನ್ನೋ ತಿಳುವಳಿಕೆ ಇನಾಯಗೆ ಇದೆ ಕಂಫರ್ಟ್‌ ಇದ್ದರೆ ಸುಮ್ಮನೆ ಫೋಸ್ ಕೊಡುತ್ತಾಳೆ ಇಲ್ಲದಿದ್ದರೆ ಮಾಸ್ಕ್‌ ಧರಿಸಿಕೊಂಡು ಹೋಗುತ್ತಾಳೆ. ನಾವು ಪಬ್ಲಿಕ್ ಲೈಫ್ ಆಯ್ಕೆ ಮಾಡಿರುವುದು ಇನಾಯ ಮಾಡಿಲ್ಲ' ಎಂದಿದ್ದಾರೆ ಸೋಹಾ ಅಲಿ ಖಾನ್.

ಪಾಪಾರಾಜಿಗಳ ಮೇಲೆ ಸಿಟ್ಟಾದ Kareena Kapoor ಮಗ Taimur ವೀಡಿಯೋ ವೈರಲ್‌!

ತೈಮೂರ್ ಅಂದ್ರೆ ಇಷ್ಟ:

ಇನಾಯಗೆ ತೈಮೂರ್ ಅಂದ್ರೆ ತುಂಬಾ ಇಷ್ಟ. ತೈಮೂರ್‌ನ ನೋಡುತ್ತಿದ್ದರೆ ಆಕೆ ಕಣ್ಣಲ್ಲಿ ನಕ್ಷತ್ರಗಳು ಕಾಣಿಸುತ್ತದೆ. ತೈಮೂರ್ ಏನ್ ಮಾಡಿದ್ದರೂ ಅದ್ಭುತ ಎನ್ನುತ್ತಾಳೆ. ಸುಮ್ಮನೆ ಕುಳಿತುಕೊಂಡು ಕವಿ ಕೆರೆದುಕೊಂಡರೂ ವಾವ್ ಅನ್ನುತ್ತಾಳೆ. ಜೆಹ್‌ ಅಂದ್ರೆ ತುಂಬಾನೇ ಇಷ್ಟ ಅವನು ಇನ್ನು ಚಿಕ್ಕ ಮಗು. ತೈಮೂರ್‌ನ ಆಗಲೇ ಹೀರೋ ರೀತಿ ನೋಡುತ್ತಿದ್ದಾರೆ. ಮಕ್ಕಳು ತಮ್ಮ ಭಾಷೆಯಲ್ಲಿ ಮತ್ತೊಂದು ಮಗುವಿಗೆ ಸ್ಪಂದಿಸುವ ರೀತಿ ಚೆನ್ನಾಗಿದೆ. ಅವರಿಗೆ ಯಾರು ಬೇಕು, ಯಾರ ಜೊತೆ ಆಟವಾಡಬೇಕು, ಎಷ್ಟು ಮಾತನಾಡಬೇಕು, ಯಾರನ್ನು ತಬ್ಬಿಕೊಲ್ಳಬೇಕು ಎನ್ನುವ ತಿಳುವಳಿಕೆ ಚೆನ್ನಾಗಿದೆ' ಎಂದು ಬಾಲಿವುಡ್ ಖಾನ್ ಕುಟುಂಬದ ಮಕ್ಕಳು ಹುಟ್ಟುತ್ತಲೇ ಸೆಲೆಬ್ರಿಟಿಗಳು. ಅದರಲ್ಲೂ ತೈಮೂರ್ ಅಲಿ ಖಾನ್, ಜೆಹ್ ಮತ್ತು ಇನಾಯ ಸದಾ ಲೈಮ್‌ ಲೈಟ್‌ನಲ್ಲಿರುತ್ತಾರೆ. ಪಬ್ಲಿಕ್ ಲೈಫ್‌ ಲೀಡ್ ಮಾಡುತ್ತಿದ್ದರೂ ಮಕ್ಕಳನ್ನು ಕ್ಯಾಮೆರಾದಿಂದ ದೂರು ಇಡುವುದು ಹೇಗೆ? ಎಷ್ಟ ಸ್ಟ್ರಿಕ್ಟ್‌ ಆಗಿದ್ದರೆ ಮಕ್ಕಳನ್ನು ಸರಿ ದಾರಿಗೆ ತರಬಹುದು ಎಂದು ಸೋಹಾ ಅಲಿ ಖಾನ್ ಮಾತನಾಡಿದ್ದಾರೆ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Bigg Boss ಗಿಲ್ಲಿ ಬಗ್ಗೆ ಅಂದೇ ಭವಿಷ್ಯ ನುಡಿದಿದ್ದ ನಟ ಜಗ್ಗೇಶ್​: ಮಾತು ನಿಜವಾಗೋಯ್ತು- ವಿಡಿಯೋ ವೈರಲ್​
ಅಮಿತಾಭ್ ಮಾತ್ರವಲ್ಲ, ಇವರೆಲ್ಲರೂ ಶೂಟಿಂಗ್ ಸೆಟ್‌ನಿಂದ ಜೀವ ಉಳಿಸಿಕೊಂಡು ಬಂದವರೇ