ಬಾಲಿವುಡ್ ನಟಿ ಪ್ರೀತಿ ತಮ್ಮ ಮುದ್ದಾದ ಮಕ್ಕಳ ಹುಟ್ಟು ಹಬ್ಬದ ಪ್ರಯುಕ್ತ, ಕ್ಯೂಟ್ ಆಗಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಬಾಲಿವುಡ್(bollywood)ನಟಿ ಪ್ರೀತಿ ಜಿಂಟಾ ಮತ್ತು ಜೀನ್ ಗೂಡೆನೊಘ್ ಕಳೆದ ವರ್ಷ ಬಾಡಿಗೆ ತಾಯ್ತನದ ಮೂಲಕ ಅವಳಿ ಜವಳಿ(twins)ಮಕ್ಕಳ ಪೋಷಕರಾಗಿರುವ ವಿಚಾರ ಎಲ್ಲರಿಗೂ ಗೊತ್ತಿದೆ. ಅವರ ಮಕ್ಕಳಾದ ಗಿಯಾ ಮತ್ತು ಜೈ ಅವರ ಮೊದಲ ಹುಟ್ಟುಹಬ್ಬದ ಪ್ರಯುಕ್ತ ಮುದ್ದಾದ ಪೋಸ್ಟ್(post)ಗಳನ್ನು ಹಂಚಿಕೊಂಡಿದ್ದಾರೆ. ‘ನಾನು ನಿಮ್ಮನ್ನು ಬಯಸುತ್ತೇನೆ ಎಂದು ನನಗೆ ಯಾವಾಗಲೋ ತಿಳಿದಿತ್ತು. ನಾನು ನಿಮಗಾಗಿ ಪ್ರಾರ್ಥಿಸಿದೆ, ನಾನು ನಿಮಗಾಗಿ ಹಾರೈಸಿದೆ ಮತ್ತು ಈಗ ನೀವು ಇಲ್ಲಿದ್ದೀರಿ. ಒಂದು ವರ್ಷವಾಗಿದೆ’ ಎಂದು ಬರೆದುಕೊಂಡಿದ್ದಾರೆ.
ನನ್ನ ಹೃದಯ ತುಂಬಿದೆ. ನಿಮ್ಮ ಅಮೂಲ್ಯವಾದ ನಗು, ನಿಮ್ಮ ಬೆಚ್ಚಗಿನ ಅಪ್ಪುಗೆಗಳು ಮತ್ತು ನನ್ನ ಜೀವನದಲ್ಲಿ ನಿಮ್ಮ ಉಪಸ್ಥಿತಿ ನನ್ನ ಪುಟ್ಟ ಗಿಯಾ. ಜನ್ಮದಿನದ ಶುಭಾಶಯಗಳು ನನ್ನ ಪುಟ್ಟ ಗೊಂಬೆ. ನೀವು ನಾನು ನಿರೀಕ್ಷಿಸಿದ್ದೆಲ್ಲಕ್ಕಿಂತ ಹೆಚ್ಚು ಎಂದು ಬರೆದುಕೊಂಡಿದ್ದಾರೆ. ನಿಮ್ಮ ಜೀವನವು ಯಾವಾಗಲೂ ಪ್ರೀತಿ ಮತ್ತು ಸಂತೋಷದಿಂದ ತುಂಬಿರಲಿ. ಹ್ಯಾಪಿ ಬರ್ತ್‌ಡೇ ಎಂದು ಬರೆದು ಸೋಶಿಯಲ್ ಮೀಡಿಯಾದಲ್ಲಿ(social media)ಫೋಟೋ ಶೇರ್ ಮಾಡಿದ್ದಾರೆ.
undefined
ಪ್ರೀತಿ ಜಿಂಟಾ (preity zinta)2016ರಲ್ಲಿ ಜೀನ್ ಗೂಡೆನೊಘ್ ಅವರನ್ನು ವಿವಾಹವಾಗಿದ್ದು, ಮತ್ತು ಅವರು ಲಾಸ್ ಏಂಜಲೀಸ್ಗೆ ತೆರಳಿದ್ದಾರೆ. ಆಗಾಗ ಭಾರತಕ್ಕೆ ಭೇಟಿ ನೀಡುವ ಅವರು, ಕಳೆದ ವರ್ಷ ಬಾಡಿಗೆ ತಾಯ್ತನ(Surrogate)ದ ಮೂಲಕ ಅವಳಿ ಮಕ್ಕಳನ್ನು ಪಡೆದಿದ್ದಾರೆ. ಈ ಹಿಂದೆ ಅವರು ಜೈ ಜಿಂಟಾ ಗೂಡೆನೊಘ್ ಮತ್ತು ಜಿಯಾ ಜಿಂಟಾ ಗೂಡೆನೊಘ್ ನಮ್ಮ ಕುಟುಂಬಕ್ಕೆ ಸೇರ್ಪಡೆಯಾಗಿದ್ದಾರೆ. ಜೀವನದ ಹೊಸ ಘಟ್ಟಕ್ಕೆ ಕಾಲಿಟ್ಟಿರುವುದಕ್ಕೆ ನಮಗೆ ಖುಷಿಯಾಗಿದೆ. ನಮ್ಮ ಈ ಹೊಸ ಪಯಣಕ್ಕೆ ನೆರವಾದ ವೈದ್ಯರು, ನರ್ಸ್‌ಗಳು ಹಾಗೂ ಬಾಡಿಗೆ ತಾಯಿಗೆ ನಮ್ಮ ಹೃತ್ಪೂರ್ವಕ ಧನ್ಯವಾದಗಳು ಎಂದು ಬರೆದು ಹರ್ಷ ವ್ಯಕ್ತಪಡಿಸಿದ್ದರು. ಇದೀಗ ಆ ಮಕ್ಕಳ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.