ಈ ನಟನ ನೋಡಿದಾಕ್ಷಣ ನಟಿಯರ ಸೆರಗು ಜಾರತ್ತೆ, ಚಪ್ಪಲಿ ಕಿತ್ತೋಗತ್ತೆ ಯಾಕೆ? ವಿಡಿಯೋಗೆ ತಲೆಬಿಸಿ ಮಾಡ್ಕೊಂಡ ನೆಟ್ಟಿಗರು

By Suvarna News  |  First Published Nov 9, 2024, 6:14 PM IST

ಬಾಲಿವುಡ್​ ಚಾಕಲೆಟ್​ ಬಾಯ್​ ಕಾರ್ತಿಕ್​ ಆರ್ಯನ್​ ಎಲ್ಲೇ ಹೋದ್ರೂ ನಟಿಯರ ಡ್ರೆಸ್​ ಸರಿ ಮಾಡೋದು, ಚಪ್ಪಲಿ ಕೊಡೋದು ಇದೇ ಕೆಲ್ಸ ಮಾಡೋದು ಯಾಕೆ? 
 


ನಟ ಕಾರ್ತಿಕ್​ ಆರ್ಯನ್​ ಸದಾ ಬ್ರೇಕಪ್​ನಿಂದಲೇ ಸದ್ದು ಮಾಡ್ತಿರೋರು. ಅದರಲ್ಲಿಯೂ ನಟಿ ಸಾರಾ ಅಲಿ ಖಾನ್​ ಜೊತೆ ಬ್ರೇಕಪ್​ ಆದ್ಮೇಲೆ ಖಿನ್ನತೆಗೂ ಜಾರಿದ್ದರು ಎಂದು ಬಿ-ಟೌನ್​ನಲ್ಲಿ ಸಕತ್​ ಸದ್ದು ಮಾಡಿತ್ತು. ಬ್ರೇಕಪ್​ ವಿಷ್ಯ ಏನೇ ಇದ್ರೂ, ಚಾಕಲೆಟ್​ ಬಾಯ್​ ಎನ್ನಿಸಿಕೊಳ್ತಿರೋ ನಟ ಕಾರ್ತಿಕ್​ ಆರ್ಯನ್​ ಮಾತ್ರ ಹೋದ ಹೋದಲ್ಲಿ ನಟಿಯರ ಸೀರೆ, ಡ್ರೆಸ್ಸು, ಚಪ್ಪಲಿ ಸರಿ ಮಾಡೋದೇ ಕೆಲ್ಸ ಆಗೋಗಿದೆ. ಇದಕ್ಕಾಗಿ ನಟ ಸಕತ್​ ಟ್ರೋಲ್​ ಆಗ್ತಿರೋದು ಇದೆ. ಅಷ್ಟಕ್ಕೂ ನಟಿ ಈಗ  ಭೂಲ್​ ಭುಲಯ್ಯ 3’ರ ಯಶಸ್ಸಿನಲ್ಲಿ ತೇಲಾಡುತ್ತಿದ್ದಾರೆ. ಈ ಹಿಂದೆ  ಕಿಯಾರಾ ಅಡ್ವಾಣಿ (Kiara Advani) ಜೊತೆ ಇದೇ ಚಿತ್ರದ ಪಾರ್ಟ್​-2ನಲ್ಲಿ ನಟಿಸಿದ್ದರು. ಇದು ಬ್ಲಾಕ್​ಬಸ್ಟರ್​ ಎಂದು ಸಾಬೀತಾಗಿತ್ತು. ಇದಾದ ಬಳಿಕ ಅವರು, ಇದೇ ನಟಿ ಜೊತೆ ಮಾಡಿದ  ‘ಸತ್ಯಪ್ರೇಮ್​ ಕಿ ಕಥಾ’ (Satyaprem Ki Katha) ಸಿನಿಮಾ ಕೂಡ ಸೂಪರ್​ ಹಿಟ್​ ಆಯಿತು. ವಿಶ್ವಾದ್ಯಂತ ಈ ಸಿನಿಮಾಗೆ 100 ಕೋಟಿ ರೂಪಾಯಿ ಕಲೆಕ್ಷನ್​ ಆಗಿತ್ತು. 
  
ಸತ್ಯಪ್ರೇಮ್​ ಕಿ ಕಥಾ ಪ್ರಮೋಷನ್​ ಸಮಯದಲ್ಲಿ ಇವರು ಕಿಯಾರಾ ಅಡ್ವಾನಿ ಅವರ ಚಪ್ಪಲಿಯನ್ನು ಎತ್ತಿ ಕೊಟ್ಟು ಸುದ್ದಿ ಮಾಡಿದ್ದರು. ಇದೀಗ ಅವರು ವಿದ್ಯಾ ಬಾಲನ್​ ಅವರ ಸೆರಗನ್ನು ಸರಿ ಮಾಡುವ ಮೂಲಕ ಸುದ್ದಿಯಾಗಿದ್ದಾರೆ. ಇವರ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ. ಅಷ್ಟಕ್ಕೂ ನಟ, ಈಚೆಗೆ ಕಪಿಲ್‌ ಶರ್ಮಾ ಶೋನಲ್ಲಿ ತಾವು ಮತ್ತೊಮ್ಮೆ  ಪ್ರೀತಿಯಲ್ಲಿ ಬಿದ್ದುದು ನಿಜ ಎಂದಿದ್ದಾರೆ.  ಕಾರ್ತಿಕ್‌ ಆರ್ಯನ್‌ಗೆ ಕಪಿಲ್‌ ಡೇಟಿಂಗ್‌ ಬಗ್ಗೆ ಕೇಳಿದಾಗ ಮಾತನಾಡಿದ ವಿದ್ಯಾ ಬಾಲನ್‌ ಅವರು, ಕಾರ್ತಿಕ್‌ ಆರ್ಯನ್‌ಗೆ ಗರ್ಲ್‌ ಫ್ರೆಂಡ್‌ ಇದ್ದಾರೆ. ಶೂಟಿಂಗ್‌ ಅಲ್ಲಿ ಬಿಡುವು ಸಿಕ್ಕಾಗ ಆ ಫೋನ್‌ನಲ್ಲಿಯೇ ಇರುತ್ತಾನೆ. ಯಾವಾಗಲೂ ಮೀ ಟೂ ಎಂದು ಹೇಳುತ್ತಿರುತ್ತಾನೆ ಎಂದಾಗ,  ಕಾರ್ತಿಕ್‌ ಆರ್ಯನ್‌ ಮೀಟೂ ಅಲ್ಲ ಸಮೀತೂ ಎಂದು ಹೇಳಿ ನಕ್ಕಿದ್ದಾರೆ.

ನನ್ನದಲ್ಲದ ತಪ್ಪಿಗೆ ಭಿಕ್ಷುಕಿಯಾಗಿ ಜೀವನ ಮಾಡ್ತಿದ್ದೇನೆ: ಭಾರತದಿಂದ ಓಡಿ ಹೋದ ರಾಖಿ ಸಾವಂತ್ ಕಣ್ಣೀರು!

 
 
 
 
 
 
 
 
 
 
 
 
 
 
 

Tap to resize

Latest Videos

A post shared by Viral Bhayani (@viralbhayani)

ಆಗ ಅಲ್ಲಿಗೆ ಬಂದಿದ್ದ ಕಾರ್ತಿಕ್​ ಅವರ ತಾಯಿಯನ್ನು ಕಪಿಲ್​ ಅವರು ಕೇಳಿದಾಗ, ನಿಮ್ಮ ಮಗನಿಗೆ ಪ್ರೇಯಸಿ ಇರುವುದು  ಗೊತ್ತಾ ಎಂದಾಗ ಅವರು ನಗುತ್ತಾ, ಎಷ್ಟು ಮಂದಿಯ ಹೆಸ್ರನ್ನು ಹೇಳ್ತಾನೆ ಎಂದು ತಮಾಷೆ ಮಾಡಿದ್ದಾರೆ. ಅಂದ ಹಾಗೆ ಕಾರ್ತಿಕ್​ ಹೆಸರು ಈ ಮೊದಲು ನಟಿ ಜಾಹ್ನವಿ ಕಪೂರ್‌ ಹಾಗೂ ಸಾರಾ ಅಲಿ ಖಾನ್‌ ಜೊತೆ ಕೇಳಿಬಂದಿತ್ತು. ಆ ಬಳಿಕ  ಅನನ್ಯಾ ಪಾಂಡೆ ಜತೆ  ಡೇಟಿಂಗ್​ನಲ್ಲಿದ್ದರು. ಈಗ ಫೋನ್​ನಲ್ಲಿ ಮಾತನಾಡುತ್ತಾ ಇರೋದು ಯಾರ ಬಳಿ ಎಂದಷ್ಟೇ ಗೊತ್ತಾಗಬೇಕಿದೆ. ಪ್ಯಾರ್ ಕಾ ಪಂಚನಾಮಾ ಚಿತ್ರದೊಂದಿಗೆ ಪದಾರ್ಪಣೆ ಮಾಡಿದ ಕಾರ್ತಿಕ್‌ ಹಲವಾರು ಹಿಟ್‌ ಚಿತ್ರವನ್ನು ನೀಡಿದ್ದಾರೆ. 
 
ಅವರು ಈಚೆಗೆ, ಪಾನ್​ ಮಸಾಲಾ ಜಾಹೀರಾತನ್ನು ಒಪ್ಪಿಕೊಳ್ಳದೇ 9 ಕೋಟಿ ಆಫರ್​ ಅನ್ನು ರಿಜೆಕ್ಟ್​ ಮಾಡಿ ಸುದ್ದಿಯಾಗಿದ್ದರು. ಶಾರುಖ್​ ಖಾನ್​, ಟೈಗರ್​ ಶ್ರಾಫ್​ ಮತ್ತು ಅಜೆಯ್​ ದೇವಗನ್​ ಈ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಯುವಕರ ಹಾದಿಯನ್ನು ನಾನು ತಪ್ಪಿಸುವುದಿಲ್ಲ. ಅವರು ಸೆಲೆಬ್ರಿಟಿಗಳನ್ನು ಫಾಲೋ ಮಾಡುತ್ತಾರೆ, ಅವರ ಜೀವನದ ಜೊತೆ ಚೆಲ್ಲಾಟ ಆಡುವುದಿಲ್ಲ ಎಂದು ಈಚೆಗೆ ಅಕ್ಷಯ್ ಕುಮಾರ್​ ಜಾಹೀರಾತಿನಿಂದ ಹಿಂದಕ್ಕೆ ಸರಿದಿದ್ದರು. ಅನಿಲ್​ ಕಪೂರ್​ 10 ಕೋಟಿ ಆಫರ್​ ರಿಜೆಕ್ಟ್​ ಮಾಡಿದ್ರು, ಈಗ ಕಾರ್ತಿಕ್​ ಆರ್ಯನ್​ ಕೂಡ ಈ ಜಾಹೀರಾತಿನಲ್ಲಿ ನಟಿಸಲ್ಲ ಎಂದಿರುವುದಾಗಿ ವರದಿಯಾಗಿದೆ. 

ತುಂಡುಡುಗೆ ಖ್ಯಾತಿಯ ಉರ್ಫಿ ಜಾವೇದ್​ ಮದುವೆ ದಿನ ಹಾಕೋ ಬಟ್ಟೆ ಹೇಗಿರುತ್ತೆ? ಅವರ ಆಸೆ ಹೀಗಿದೆ ಕೇಳಿ...

 
 
 
 
 
 
 
 
 
 
 
 
 
 
 

A post shared by Filmygalaxy (@filmygalaxy)

click me!