ಬಾಲಿವುಡ್ ನಟಿ ಇಲಿಯಾನಾ ಡಿಕ್ರೂಜ್ ಕೊನೆಗೂ ಮಗುವಿನ ಅಪ್ಪನ ಬಗ್ಗೆ ವಿವರಣೆ ನೀಡಿದ್ದು, ಮದ್ವೆಯಾಗಿದ್ದಾರೋ ಇಲ್ಲವೋ ಎಂಬ ಬಗ್ಗೆ ಮೌನ ತಾಳಿದ್ದಾರೆ.
ಬಾಲಿವುಡ್ ನಟಿ ಇಲಿಯಾನಾ ಡಿಕ್ರೂಜ್ (Ileana D'Cruz) ಕಳೆದ ವರ್ಷ ಭಾರಿ ಸುದ್ದಿಯಲ್ಲಿದ್ದ ನಟಿ. ಅವರು ಗರ್ಭವತಿ ಎಂದು ತಿಳಿದಾಗಿನಿಂದಲೂ ಬಹಳ ಸದ್ದು ಮಾಡುತ್ತಿದ್ದರೆ. ಏಕೆಂದರೆ ಈಕೆಗೆ ಇನ್ನೂ ಮದುವೆಯಾಗಿಲ್ಲ. ಆದ್ದರಿಂದ ಈಕೆಯ ಮಗುವಿನ ತಂದೆ ಯಾರೆಂದು ಫ್ಯಾನ್ಸ್ ಅಂದಿಗೂ ತಲೆಕೆಡಿಸಿಕೊಂಡಿದ್ದರು, ಈಗಲೂ ತಲೆಕೆಡಿಸಿಕೊಳ್ಳುತ್ತಲೇ ಇದ್ದಾರೆ. ಈ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ನಟಿ ಹಾರಿಕೆ ಉತ್ತರ ಕೊಟ್ಟು ತಪ್ಪಿಸಿಕೊಳ್ಳುತ್ತಲೇ ಬಂದಿದ್ದಾರೆ. ಕಳೆದ ವರ್ಷ ತಾವು ಗರ್ಭಿಣಿ ಎಂದು ಫೋಟೋ ಶೇರ್ ಮಾಡಿಕೊಂಡು ಬೇಬಿ ಬಂಪ್ ತೋರಿಸಿದಾಗಿನಿಂದಲೂ ಫ್ಯಾನ್ಸ್ ಈಕೆಯ ಮಗುವಿನ ತಂದೆಯ ಬಗ್ಗೆ ತಲೆ ಕೆಡಿಸಿಕೊಂಡಿದ್ದರು. ಫಿಲ್ಮ್‌ಫೇರ್ ನಾಮನಿರ್ದೇಶನ ಪಾರ್ಟಿಯಲ್ಲಿ ಆಸ್ಟ್ರೇಲಿಯಾದ ಸ್ನೇಹಿತನೊಂದಿಗೆ ಇಲಿಯಾನಾ ಕಾಣಿಸಿಕೊಂಡಿದ್ದ ಸಂದರ್ಭದಲ್ಲಿ ನೀವಿಬ್ಬರೂ ಡೇಟಿಂಗ್ ಮಾಡುತ್ತಿದ್ದಾರಾ ಎಂಬ ಪ್ರಶ್ನೆ ನಟಿಗೆ ಕೇಳಲಾಗಿತ್ತು. ಆಗಲೂ ಇಲಿಯಾನಾ ಡಿಕ್ರೂಜ್, ಇದರ ಬಗ್ಗೆ ಮಾತನಾಡಲು ಇದು ಸರಿಯಾದ ಸಮಯವಲ್ಲ ಎಂದು ನುಣುಚಿಕೊಂಡಿದ್ದರು.
ಅಂದಹಾಗೆ, ಇಲಿಯಾನಾ ಅವರ ಹೆಸರು ಈ ಹಿಂದೆ ಕೆಲವರ ಜೊತೆ ಥಳಕು ಹಾಕಿಕೊಂಡಿದೆ. ನಟಿ ಕತ್ರಿನಾ ಕೈಫ್ ಅವರ ಸಹೋದರ ಸೆಬಾಸ್ಟಿಯನ್ ಲಾರೆಂಟ್ ಮೈಕೆಲ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹಿಂದೆ ವದಂತಿಗಳು ಹರಿದಾಡಿದ್ದವು. ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್, ಮೈಕಲ್ ಅವರೊಂದಿಗೆ ಮಾಲ್ಡೀವ್ಸ್‌ನಲ್ಲಿ ರಜಾದಿನಗಳಲ್ಲಿ ಕಾಣಿಸಿಕೊಂಡ ನಂತರ, ಜೋಡಿಯ ಬಗ್ಗೆ ಡೇಟಿಂಗ್ ವದಂತಿಗಳು ಹರಡಿದ್ದವು. ಇಲಿಯಾನಾ ಮೊದಲು ಛಾಯಾಗ್ರಾಹಕ ಆಂಡ್ರ್ಯೂ ನೀಬೋನ್ ಜೊತೆ ದೀರ್ಘಾವಧಿಯ ಸಂಬಂಧದಲ್ಲಿದ್ದರು. 2019 ರಲ್ಲಿ ಈ ಸಂಬಂಧವನ್ನು ಇಲಿಯಾನಾ ದೂರಮಾಡಿಕೊಂಡಿದ್ದರು.
ಬಾಯ್ಫ್ರೆಂಡ್ ಜೊತೆ ಮತ್ತೆ ಜಾಹ್ನವಿ ಟೆಂಪಲ್ ರನ್: ಏನಮ್ಮಾ ನಿನ್ ಕಥೆ ಅಂತಿದ್ದಾರೆ ಫ್ಯಾನ್ಸ್!
ಈಗ ನಟಿ ಗಂಡುಮಗುವಿನ ಅಮ್ಮ ಕೂಡ ಆಗಿದ್ದರೂ ಮಗುವಿನ ಅಪ್ಪ ಯಾರು ಎಂಬ ಬಗ್ಗೆಯಾಗಲೀ, ತಮ್ಮ ಮದುವೆ ಕುರಿತಾಗಲೀ ನೇರಾನೇರ ಬಾಯಿ ಬಿಟ್ಟಿರಲಿಲ್ಲ. ಇಲಿಯಾನಾ ಇತ್ತೀಚಿಗೆ ತನ್ನ ಮಗುವಿನ ಫೋಟೋವನ್ನು ಹಂಚಿಕೊಂಡಿದ್ದರು. ಮಗುವಿಗೆ ಫೀನಿಕ್ಸ್ ಡೋಲನ್ ಎಂದು ಹೆಸರಿಟ್ಟಿದ್ದಾರೆ. ಮದುವೆ ಮತ್ತು ಮಗುವಿನ ಅಪ್ಪನ ಬಗ್ಗೆ ರಹಸ್ಯವಾಗಿರುವ ಇಲಿಯಾನಾ ಕೊನೆಗೂ ತನ್ನ ಪತಿಯೊಂದಿಗಿರುವ ಫೋಟೋವನ್ನು ಹಂಚಿಕೊಂಡಿದ್ದರು. ಆದರೆ ವಿವರಗಳನ್ನು ನೀಡಿರಲಿಲ್ಲ. ಸಂದರ್ಶನದಲ್ಲಿ ಮದುವೆ ಬಗ್ಗೆ ಕೇಳಿದಾಗ ಅದನ್ನು ರಹಸ್ಯವಾಗಿಡಲು ತಮಗೆ ಇಷ್ಟ ಎಂದಿದ್ದರು. ಜೊತೆಗೆ ಈಗ ಹುಟ್ಟಿರುವ ಮಗುವಿನ ತಂದೆ ಕೂಡ ಇವರೇನಾ ಹೌದೋ, ಅಲ್ಲವೋ ಎಂದೂ ಸ್ಪಷ್ಟವಾಗಿ ಉತ್ತರ ಕೊಟ್ಟಿರಲಿಲ್ಲ.
ಆದರೆ ಇದೀಗ ಮೊದಲ ಬಾರಿಗೆ ಇಲಿಯಾನಾ ಬಾಯ್ಫ್ರೆಂಡ್ ಹಾಗೂ ಮಗುವಿನ ಅಪ್ಪ ಮೈಕೆಲ್ ಡೋಲನ್ ಕುರಿತು ಹೇಳಿದ್ದಾರೆ. ಅವರು ತುಂಬಾ ಒಳ್ಳೆಯ ವ್ಯಕ್ತಿ, ಅವರು ನನ್ನೊಂದಿಗೆ ಇರುವುದು ನನ್ನ ಅದೃಷ್ಟ ಎನ್ನುವ ಮೂಲಕ ಅವರೇ ಪತಿ ಎಂದು ಹೇಳಿದ್ದಾರೆ. ಮಗು ಹುಟ್ಟಿದ ಮೇಲೆ ತುಂಬಾ ಖಿನ್ನತೆಗೆ ಒಳಗಾಗಿದ್ದರಂತೆ. ಅಲ್ಲದೆ ಅಂತಹ ಸಂದರ್ಭದಲ್ಲಿ ಮೈಕೆಲ್ ನನ್ನ ಜೊತೆಯಾಗಿದ್ದು, ಸಮಾಧಾನ ಮಾಡಿದರು ಎಂದು ತಿಳಿಸಿದ್ದಾರೆ. ಅಂದಹಾಗೆ ಇಲಿಯಾನಾ, ಕಳೆದ ಆಗಸ್ಟ್ 1ರಂದು ಮಗುವಿಗೆ ಜನ್ಮ ನೀಡಿದ್ದಾರೆ. ನಂತರ ಸಂದರ್ಶನವೊಂದರಲ್ಲಿ ತಾವು ಪ್ರಸ್ತುತ ಮೈಕೆಲ್ ಡೋಲನ್ ಮತ್ತು ಅವರ ಮಗು ಕೋವಾ ಫೀನಿಕ್ಸ್ ಡೋಲನ್‌ನೊಂದಿಗೆ ಅಮೆರಿಕಾದಲ್ಲಿ ವಾಸಿಸುತ್ತಿರುವುದಾಗಿ ತಿಳಿಸಿದ್ದರು. ಆದರೆ ಇದುವರೆಗೂ ಮದುವೆಯಾಗಿರುವ ಬಗ್ಗೆ ನೇರವಾಗಿ ಹೇಳುತ್ತಿಲ್ಲ. ಆದರೆ ತಮ್ಮ ಕುಟುಂಬದ ಬಗ್ಗೆ ಕೆಟ್ಟದಾಗಿ ಮಾತನಾಡುವುದು ತಮಗಿಷ್ಟವಿಲ್ಲ ಎಂದಿದ್ದಾರೆ.
ಸೂಟ್-ಬೂಟ್ ಬದ್ಲು ಚೆಡ್ಡಿ-ಬನಿಯನ್‌ನಲ್ಲಿ ಮದ್ವೆಯಾದ ಗಂಡನ ಬಗ್ಗೆ ಆಮೀರ್ ಪುತ್ರಿ ಇರಾ ಹೇಳಿದ್ದೇನು?