ಕೃಷ್ಣರಾವ್-ನೀಲಾವತಿ ದಂಪತಿಗಳ ಮಗಳಾಗಿದ್ದ ಲಲಿತಾರಾಣಿ ತಮ್ಮ 13ನೇ ವಯಸ್ಸಿಗೇ ಸಿನಿಮಾರಂಗಕ್ಕೆ ಬಂದರು.10 ರೂಪಾಯಿಗೆ ಸಿನಿಮಾ ಉದ್ಯಮಕ್ಕೆ ಬಂದು ಕೋಟಿ ಕೋಟಿ ಸಂಪಾದನೆ ಮಾಡಿದರು.
ತೆಲುಗು ಸಿನಿಮಾ ಮೂಲಕ ಸಿನಿರಂಗಕ್ಕೆ ಧುಮುಕಿದ ಈ ನಟಿ ಬಳಿಕ ಬಾಲಿವುಡ್ ಉದ್ಯಮಕ್ಕೆ ಜಿಗಿದರು. ಅಂದಿನ ಕಾಲ ಇಂದಿನಂತಿರಲಿಲ್ಲ. ಅಂದು ಯಾವುದೇ ನಟ ಅಥವಾ ನಟಿ ಬಾಲಿವುಡ್ ಬಾಗಿಲಿಗೆ ಹೋದರೆ ಸಾಕು, ಅವರ ಐಡೆಂಟಿಟಿಯೇ ಬದಲಾಗಿಬಿಡುತ್ತಿತ್ತು. ಬಾಲಿವುಡ್, ಮುಂಬೈ ಚಿತ್ರೋದ್ಯಮ ಎಂದರೆ, ಅದು ಭಾರತದ ಸರ್ವೋಚ್ಛ ಸಿನಿಮಾ ಇಂಡಸ್ಟ್ರಿ ಎಂಬ ಕಾಲ ಅದಾಗಿತ್ತು. ಇಂದು ಸೌತ್ ಇಂಡಸ್ಟ್ರಿಯೇ ಬಾಲಿವುಡ್‌ಗಿಂತ ಮುಂದೆ ಎಂಬಂತಿದೆ, ಅದು ಈಗಿನ ಮಾತು.
ಕಳಪೆ ಪಟ್ಟಕ್ಕೆ ಗರಂ ಆದ್ರಾ ವರ್ತೂರು ಸಂತೋಷ್; ಸ್ಫೋರ್ಟ್ಸ್ ಹುಟ್ಟುಹಾಕಿದ್ದೇ ನಾವು ಅಂದ್ಬಿಟ್ರಾ!?
ಆದರೆ, ಅಂದು ಬಾಲಿವುಡ್‌ಗೆ ಹೋದ ಈ ಸುಂದರಿ ನಟಿಯ ಹಣೆಬರಹವೇ ಬದಲಾಯಿತು. ಅಂದಿನ ಕಾಲದ ಸೂಪರ್ ಸ್ಟಾರ್‌ಗಳಾದ ಅಮಿತಾಭ್ ಬಚ್ಚನ್, ದರ್ಮೇಂದ್ರ, ರಾಕೇಶ್ ರೋಶನ್ ಹಾಗೂ ಜೀತೇಂದ್ರ ಅವರೊಂದಿಗೆ ಈ ನಟಿ ಬಹಳಷ್ಟು ಸಿನಿಮಾಗಳಲ್ಲಿ ನಟಿಸಿದರು. ಅಂದಿನ ಕಾಲದ ಎಲ್ಲ ಹಿರೋಯಿನ್‌ಗಳಿಗಿಂತ ಹೆಚ್ಚು ಸಂಭಾವನೆಯನ್ನೂ ಪಡೆದರು. ಆದರೆ, ಅಚ್ಚರಿ ಎಂಬಂತೆ ಇವರು ಪಡೆದ ಮೊದಲ ಸಂಭಾವನೆ ರೂ. 10 ಮಾತ್ರ!
ಭಾಗ್ಯಾಳ ಎದೆಗೊರಗಿ ಅಳುತ್ತಿರುವ ಗುಂಡಣ್ಣ; ತಾಂಡವ್ ಬಳಿ ಕಾಸು ಕೇಳಿ ಕಮಂಗಿಯಾದ್ಲಾ ತನ್ವಿ!
ಸಂದರ ಮುಖ, ಕತ್ತಿ ಮೊನೆಯಂತೆ ಕೊಲ್ಲುಲು ಸಂಚು ಹಾಕುವಂಥ ಕಣ್ಣುಗಳು, ಬಳ್ಳಿಯಂತೆ ಬಳಕುವ ದೇಹ ಹೊಂದಿರು ಈ ನಟಿ ಸೂಪರ್ ಸ್ಟಾರ್ ಆಗಿ ಬೆಳೆದರು. ಆಕೆ ಬಾಲಿವುಡ್ ಸೇರಿದಂತೆ, ತೆಲುಗು, ತಮಿಳು ಹಾಗು ಕನ್ನಡ ಸಿನಿಮಾ ಇಂಡಸ್ಟ್ರಿಯ ಬಹುಬೇಡಿಕೆಯ ತಾರೆಯಾಗಿ ಮೆರೆದರು. ಬಳಿಕ, ರಾಜಕೀಯಕ್ಕೆ ಎಂಟ್ರಿ ಕೊಟ್ಟು ಅಲ್ಲಿ ಕೂಡ ತನ್ನ ಅದೃಷ್ಟ ಪರೀಕ್ಷೆಗೆ ಮುಂದಾದರು. ಜತೆಗೆ, ವ್ಯಕ್ತಿಯೊಬ್ಬನ ಮೇಲೆ ಲವ್ ಆಗಿ ಮದುವೆಯನ್ನೂ ಮಾಡಿಕೊಂಡರು. ಆದರೆ, ಹೆಂಡತಿಯಾದರೂ ಒಬ್ಬಂಟಿಯಾಗಿ ಬದುಕುವಂತಾಯಿತು. ಈ ನಟಿ ಬೇರಾರೂ ಅಲ್ಲ, ಜಯಪ್ರದಾ.
ಯಶ್ ಜತೆಯಾಗಲಿರುವ ಬಾಲಿವುಡ್ ಸುಂದರಿ; ರವೀನಾ ಟಂಡನ್ ಅಲ್ಲ, ಬೇರೆ ಬೆಡಗಿ!
ಆಂಧ್ರಪ್ರದೇಶದ ರಾಜಮುಂಡ್ರಿಯಲ್ಲಿ ಜನಿಸಿದ ಜಯಪ್ರದಾ ಮೊದಲ ಹೆಸರು ಲಲಿತಾರಾಣಿ. ಕೃಷ್ಣರಾವ್-ನೀಲಾವತಿ ದಂಪತಿಗಳ ಮಗಳಾಗಿದ್ದ ಲಲಿತಾರಾಣಿ ತಮ್ಮ 13ನೇ ವಯಸ್ಸಿಗೇ ಸಿನಿಮಾರಂಗಕ್ಕೆ ಬಂದಮೇಲೆ ಜಯಪ್ರದಾ ಆಗಿ ಬದಲಾದರು. 1986ರಲ್ಲಿ ಶ್ರೀಕಾಂತ್ ನೆಹತಾರನ್ನು ಮದುವೆಯಾದ ಜಯಪ್ರದಾ ಅವರಿಂದ ಬಳಿಕ ದೂರವಾಗಬೇಕಾಯ್ತು. 1994ರಲ್ಲಿ ಸಿನಿಮಾರಂಗದಿಂದ ದೂರವಾದ ನಟಿ ಜಯಪ್ರದಾ ತೆಲುಗು ದೇಶಂ ಪಾರ್ಟಿ (ಟಿಡಿಪಿ) ಸೇರಿಕೊಂಡರು. 2004 ರಿಂದ 2014ರವರೆಗೆ ಅವರು ರಾಜ್ಯಸಭಾ ಸದಸ್ಯರೂ ಆಗಿ ಕಾರ್ಯ ನಿರ್ವಹಿಸಿದ್ದಾರೆ.
ಈಗ ರಾಜಕೀಯದಿಂದ ಹೆಚ್ಚುಕಡಿಮೆ ನಿವೃತ್ತಿ ಘೋಷಿಸಿರುವ ಜಯಪ್ರದಾ ಒಂಟಿಯಾಗಿ ಜೀವನ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ, 10 ರೂಪಾಯಿಗೆ ಸಿನಿಮಾ ಉದ್ಯಮಕ್ಕೆ ಬಂದು ಕೋಟಿ ಕೋಟಿ ಸಂಪಾದನೆ ಮಾಡಿ ಕೊನೆಗೆ ಒಂಟಿಯಾಗಿ ಬದುಕುತ್ತಿರುವ ನಟಿ ಜಯಪ್ರದಾರ ಕಥೆಯಿದು.