ಪ್ರತಿ ತಿಂಗಳು ನನ್ನ ಹೊಟ್ಟೆ ಹುಡುಕ್ಬೇಡಿ; ಪ್ರೆಗ್ನೆಂಟ್ ಎಂದವರ ವಿರುದ್ಧ ವಿದ್ಯಾ ಬಾಲನ್ ಕಿಡಿ

Published : Mar 06, 2023, 02:10 PM IST
ಪ್ರತಿ ತಿಂಗಳು ನನ್ನ ಹೊಟ್ಟೆ ಹುಡುಕ್ಬೇಡಿ; ಪ್ರೆಗ್ನೆಂಟ್ ಎಂದವರ ವಿರುದ್ಧ ವಿದ್ಯಾ ಬಾಲನ್ ಕಿಡಿ

ಸಾರಾಂಶ

ಡರ್ಟಿ ಪಿಕ್ಚರ್ ಸಿನಿಮಾದಿಂದ ಸೆಲ್ಫ್‌ ಲವ್ ಏನೆಂದು ತಿಳಿದುಕೊಂಡೆ ಹಾಗೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಪ್ರೆಗ್ನೆಂಟ್‌ ಸುದ್ದಿಗೆ ವಿದ್ಯಾ ಉತ್ತರ ಕೊಟ್ಟಿದ್ದಾರೆ.

ಹಿಂದಿ ಚಿತ್ರರಂಗದಲ್ಲಿ ಅದ್ಭುತ ನಟಿ ಎಂದು ಗುರುತಿಸಿಕೊಂಡಿರುವ ವಿದ್ಯಾ ಬಾಲನ್ ಪ್ರತಿ ಸಂದರ್ಶನದಲ್ಲಿ ಬಾಡಿ ಶೇಮಿಂಗ್, ಸೆಲ್ಫ್‌ ಲವ್ ಮತ್ತು ಪರ್ಸನಲ್‌ ಲೈಫ್‌ ಬಗ್ಗೆ ಚರ್ಚೆ ಮಾಡುತ್ತಾರೆ. ಕೆಲವು ತಿಂಗಳುಗಳಿಂದ ಸಾಮಾಜಿಕ ಜಾಲತಾಣದಲ್ಲಿ ವಿದ್ಯಾ ಪ್ರೆಗ್ನೆಂಟ್‌ ಎಂದು ಸುದ್ದಿಗಳು ಹರಿದಾಡುತ್ತಿದೆ. ಬರ್ಕಾ ದತ್‌ ನಡೆಸಿದ ಸಂದರ್ಶನಲ್ಲಿ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ. 

'ಜನರು ನನಗೆ ವಿಚಿತ್ರ ವಿಚಿತ್ರ ಪ್ರಶ್ನೆಗಳನ್ನು ಕೇಳುತ್ತಿದ್ದರು. ಪ್ರತಿ ತಿಂಗಳು ನಾನು ಪ್ರೆಗ್ನೆಂಟ್ ಆಗುತ್ತಿದೆ. ದೇವರಿಗೇ ಗೊತ್ತು ಅದೆಷ್ಟು ಮಕ್ಕಳಿಗೆ ಜನ್ಮ ನೀಡಿರುವೆ ಎಂದು. ನಾನು ದಪ್ಪಗಿರುವ ಫೋಟೋ ಅಪ್ಲೋಡ್ ಮಾಡಿ  ವಿದ್ಯಾ ಪ್ರೆಗ್ನೆಂಟ್ ಎಂದು ಬರೆದುಕೊಂಡಿದ್ದಾರೆ. ನಾನು ದಪ್ಪಗಿರುವೆ ಇದು ನನ್ನ ದೇಹ, ಪ್ರೆಗ್ನೆಂಟ್ ಆದಾಗ ಹೇಗೆ ಕಾಣಿಸುತ್ತೀನಿ ಎಂದು ಗೊತ್ತಿಲ್ಲ ಆದರೆ ಈಗ ನೋಡಲು ಹೀಗಿರುವೆ. ಇಷ್ಟು ವರ್ಷ ಚಿತ್ರರಂಗದಲ್ಲಿ ಇರುವೆ ಈಗಲೂ ನಿಮಗೆ ಅರ್ಥವಾಗಿಲ್ವಾ ನಾನು ಸೈಜ್ ಝಿರೋ ಇಲ್ಲ ನಾನು ಸಣ್ಣಎಂದೂ ಇರಲಿಲ್ಲ ಎಂದು. ನನ್ನ ಬಗ್ಗೆ ಪಾಸಿಟಿವ್ ಯೋಚನೆ ಮಾಡುವುದಿಲ್ಲ. ನಾನು ತೆಗೆದುಕೊಂಡಿರುವ ನಿರ್ಧಾರಗಳಿಗೆ ನನ್ನ ಪತಿ ಸಿದ್ಧಾರ್ಥ್‌ಗೆ ಒಪ್ಪಿಗೆ ಇದ್ಯಾ ಎಂದು ಕೆಲವು ಸಂದರ್ಶನಗಳಲ್ಲಿ ಕೇಳುತ್ತಾರೆ. ಸಿದ್ಧಾರ್ಥ್‌ ಆಯ್ಕೆಗಳ ಬಗ್ಗೆ ನಾನು ಮಾತನಾಡುವುದಿಲ್ಲ ನನ್ನ ಆಯ್ಕೆಗಳ ಬಗ್ಗೆ ಸಿದ್ಧಾರ್ಥ್‌ ಮಾತನಾಡಬಾರದು. ಸಂಬಂಧಗಳಿಗೆ ಹೆಚ್ಚಿಗೆ ಗೌರವ ಕೊಡುವ ವ್ಯಕ್ತಿ ನಾನು ಹಾಗೆ ನನ್ನ ಕೆಲಸವನ್ನು ಹೆಚ್ಚಿಗೆ ಪ್ರೀತಿಸುವ ವ್ಯಕ್ತಿ ನಾನು. ನಾಳೆ ನನ್ನ ಗಂಡ ಒಂದು ಸಲಹೆ ಕೊಟ್ಟ ಅದು ನನ್ನ ಪ್ರಕಾರ ನಡೆದಿಲ್ಲ ಅಂದ್ರೆ ಹೇಗೆ?' ಎಂದು ವಿದ್ಯಾ ಹೇಳಿದ್ದಾರೆ. 

ಮೊಡವೆ ಬರ್ಬಾರ್ದು ಅಂತ 10 ಲೀಟರ್‌ ನೀರು ಕುಡಿದ ವಿದ್ಯಾ ಬಾಲನ್; ವಾಂತಿ ಮಾಡಿದ ಕಥೆ ಇದು

'ನನ್ನ ದೇಹ ಅನುಭವಿಸಿರುವ ಕಷ್ಟಗಳ ಬಗ್ಗೆ ಹೇಳಿಕೊಳ್ಳಲು ಆಗುವುದಿಲ್ಲ ಒಂದು ಪುಸ್ತಕ ಬರೆಯಬೇಕು. ಡರ್ಟಿ ಫಿಕ್ಚರ್ ಸಿನಿಮಾ ನಂತರ ನನ್ನ ವಿರುದ್ಧ ಟ್ರೋಲ್‌ಗಳು ಹೆಚ್ಚಾಗಿತ್ತು. ನೆಗೆಟಿವ್ ಕಾಮೆಂಟ್ ಮಾಡಿದಾಗ ಮನಸ್ಸಿಗೆ ಬೇಸರವಾಗುತ್ತಿತ್ತು. ನಾನು ಸಹಿ ಮಾಡಿರುವ ಪ್ರತಿಯೊಂದು ಚಿತ್ರ ತಂಡದವರು ತೂಕ ಇಳಿಸಿಕೊಳ್ಳಲು ಹೇಳುತ್ತಿದ್ದರು. 6 ವರ್ಷಗಳ ಹಿಂದೆ ನಿರ್ದೇಶಕರು ನನಗೆ ಕರೆ ಮಾಡಿ ತೂಕ ಇಳಿಸಿಕೊಳ್ಳಲು ಹೇಳುತ್ತಿದ್ದರು ಆಗ ನಾನು ಸಾಕಷ್ಟು ಪ್ರಯತ್ನ ಪಟ್ಟಿದ್ದೆ. ಹಾರ್ಮೋನಲ್ ಸಮಸ್ಯೆ ಆಗಿ ತೂಕ ಇಳಿಸಿಕೊಳ್ಳಲು ಆಗುವುದಿಲ್ಲ ಎಂದು ವೈದ್ಯರು ಜನರು ಹೇಳಿದ್ದರು. ತಕ್ಷಣ ನಿರ್ದೇಶಕರು ನಿರ್ಮಾಪಕರಿಗೆ ಕರೆ ಮಾಡಿ ಮೀಟಿಂಗ್ ಮಾಡಬೇಕು ಎಂದು ನಾನು ಸಿನಿಮಾದಿಂದ ಹೊರ ಬರುತ್ತಿರುವ ವಿಚಾರವನ್ನು ತಿಳಿಸಿದೆ. ಯಾಕೆ ಈ ರೀತಿ ಮಾಡಿದೆ ಅಂದ್ರೆ ನಿಮ್ಮ ಚಿತ್ರಕ್ಕೆ ಡಿಫರೆಂಟ್ ಬಾಡಿ ಇರುವ ವ್ಯಕ್ತಿ ಬೇಕು ಅಂದ್ರೆ ಅವರನ್ನು ಸಂಪರ್ಕಿಸಬೇಕು ನನಗೆ ಕಥೆ ಒಪ್ಪಿಸಿ ಬಣ್ಣ ಮಾಡುವ ಪ್ರಯತ್ನ ಮಾಡಬಾರದು. ಯಾವ ಪಾತ್ರ ಕೊಟ್ಟರೂ ಮಾಡಬಹುದು ಎನ್ನುವ ಧೈರ್ಯ ನನಗಿದೆ ಆ ನಂಬಿಕೆ ನಿರ್ದೇಶಕರಿಗೆ ಇರಬೇಕು' ಎಂದಿದ್ದರು ವಿದ್ಯಾ. 

Vidya Balan :10 ವರ್ಷಗಳ ನಂತರ ಪತಿ ಸಿದ್ಧಾರ್ಥ್ ತಾಳ್ಮೆ ಹೊಗಳಿದ ನಟಿ !

'ಜೀವನದಲ್ಲಿ ಎಂದೂ ನಾನು ತೋಳಿಲ್ಲದ ಬೆಟ್ಟೆ ಧರಿಸಿರಲಿಲ್ಲ ಏಕೆಂದರೆ ನಾನು ದಪ್ಪಗಿದ್ದೆ ಅದಿಕ್ಕೆ ನಾಚಿಕೆ ಆಗುತ್ತಿತ್ತು. ಡರ್ಟಿ ಪಿಕ್ಚರ್‌ ಸಿನಿಮಾದಲ್ಲಿ ಹಾಟ್ ಹಾಟ್ ಡ್ರೆಸ್‌ ಧರಿಸಬೇಕಿತ್ತು. ಸೆಕ್ಸಿಯಾಗಿ ಕಾಣಿಸುತ್ತಿರುವೆ ಎಂದು ನನಗೆ ಅನಿಸುತ್ತಿತ್ತು. ಸಿನಿಮಾ ಸೂಪರ್ ಹಿಟ್ ಆದ್ಮೇಲೆ ನನ್ನ ಸೆಲ್ಫ್‌ ಲವ್ ಹೆಚ್ಚಾಗಿತ್ತು. ಸಿನಿಮಾ ಕಥೆಗೆ ತಕ್ಕಂತೆ ನಾವು ಕೆಲಸ ಮಾಡಿದರೆ ಜನರು ಇಷ್ಟ ಪಡುತ್ತಾರೆ' ಎಂದು ವಿದ್ಯಾ ಮಾತನಾಡಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?
10 ಭಾಷೆಗಳಲ್ಲಿ 90 ಸಿನಿಮಾಗಳು, ಗಂಗೂಲಿ ಜೊತೆ ಅಫೇರ್ ವದಂತಿ.. 50 ವರ್ಷವಾದರೂ ಮದುವೆಯಾಗದ ನಟಿ ಯಾರು?