ಕೊನೆಗೂ ಸೌತ್ ಸಿನಿರಂಗಕ್ಕೆ ಕಾಲಿಟ್ಟ ನಟಿ ಜಾನ್ವಿ ಕಪೂರ್; ಪೋಸ್ಟರ್ ರಿಲೀಸ್

Published : Mar 06, 2023, 12:45 PM IST
ಕೊನೆಗೂ ಸೌತ್ ಸಿನಿರಂಗಕ್ಕೆ ಕಾಲಿಟ್ಟ ನಟಿ ಜಾನ್ವಿ ಕಪೂರ್; ಪೋಸ್ಟರ್ ರಿಲೀಸ್

ಸಾರಾಂಶ

ಬಾಲಿವುಡ್ ನಟಿ ಜಾನ್ವಿ ಕಪೂರ್ ಕೊನೆಗೂ ಸೌತ್ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. 

ಬಾಲಿವುಡ್ ಖ್ಯಾತ ನಟಿ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ಸೌತ್ ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದಾರೆ. ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸಬೇಕೆನ್ನುವುದು ಜಾನ್ವಿಯ ದೊಡ್ಡ ಕನಸಾಗಿತ್ತು. ತಾಯಿಯಂತೆ ತಾನು ಕೂಡ ಸೌತ್ ಸಿನಿಮಾರಂಗದಲ್ಲಿ ಮೆರೆಯಬೇಕು ಎನ್ನುವ ಆಸೆ ಇತ್ತು. ಇದೀಗ ಜಾನ್ವಿ ಕನಸು ನನಸಾಗಿದೆ. ಸೌತ್ ಸ್ಟಾರ್ RRR ಹೀರೋ ಜೂ.ಎನ್ ಟಿ ಆರ್‌ಗೆ ನಾಯಕಿಯಾಗಿ ಜಾನ್ವಿ ತೆಲುಗು ಸಿನಿಮಾರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಜೂ.ಎನ್ ಟಿ ಆರ್ ನಟನೆಯ 30ನೇ ಸಿನಿಮಾ 'ಎನ್‌ಟಿಆರ್ 30' (ತಾತ್ಕಾಲಿಕ ಹೆಸರು)ದಲ್ಲಿ ಜಾನ್ವಿ ನಟಿಸುತ್ತಿದ್ದಾರೆ.

ಜೂ.ಎನ್ ಟಿ ಆರ್ 30ನೇ ಸಿನಿಮಾಗೆ ನಾಯಕಿ ಯಾರಾಗ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇತ್ತು. ಅಲ್ಲದೇ ಸಾಕಷ್ಟು ನಾಯಕಿಯಾರ ಹೆಸರು ಕೇಳಿ ಬಂದಿತ್ತು. ಸೌತ್ ನಿಂದ ಬಾಲಿವುಡ್ ವರೆಗೂ ಅನೇಕ ನಟಿಯರ ಹೆಸರು ಕೇಳಿ ಬಂದಿತ್ತು. ಆದರೆ ಇದುವರೆಗೂ ಯಾವ ನಟಿ ಎಂದು ಸಿನಿಮಾತಂಡ ರಿವೀಲ್ ಮಾಡಿರಲಿಲ್ಲ. ಇದೀಗ ಕೊನೆಗೂ ಜೂ.ಎನ್ ಟಿ ಆರ್‌ಗೆ ನಾಯಕಿ ಸಿಕ್ಕಿದ್ದು ಖ್ಯಾತ ನಟಿ ಶ್ರೀದೇವಿ ಪುತ್ರಿ ಆಯ್ಕೆಯಾಗಿದ್ದಾರೆ. 

Oscars 2023: ಕೊನೆಗೂ US ಫ್ಲೈಟ್ ಹತ್ತಿದ RRR ಸ್ಟಾರ್ ಜೂ.ಎನ್ ಟಿ ಆರ್

ಕೊರಟಾಲ ಶಿವ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಎನ್‌ಟಿಆರ್ 30 ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಿದೆ. ಈ ಬಗ್ಗೆ ನಟಿ ಜಾನ್ವಿ ಕಪೂರ್ ಪೋಸ್ಟರ್ ಶೇರ್ ಮಾಡಿ ಅಧಿಕೃತ ಗೊಳಿಸಿದ್ದಾರೆ. ಜಾನ್ವಿ ಕಪೂರ್ ಶೇರ್ ಮಾಡಿರುವ ಪೋಸ್ಟರ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಪೋಸ್ಟರ್ ನೋಡ್ತಿದ್ರೆ ಜಾನ್ವಿ ಡಿಗ್ಲಾಮ್ ಲುಕ್ ನಲ್ಲಿ ಕಾಣಿಸಿಕೊಳ್ತಾರೆ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಜಾನ್ವಿ ಲುಕ್‌ಗೆ ಅಭಿಮಾನಿಗಳು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಮೆಚ್ಚುಗೆ ವ್ಯಕ್ತಪಡಿಸಿ ಹಾರ್ಟ್ ಇಮೋಜಿ ಹಾಕುತ್ತಿದ್ದಾರೆ. ಜಾನ್ವಿ ಲುಕ್ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಹಾಲಿವುಡ್ ಕ್ರಿಟಿಕ್ಸ್ ಅವಾರ್ಡ್ ವಿರುದ್ಧ J.NTR ಅಭಿಮಾನಿಗಳ ಬೇಸರ; ಅಯೋಜಕರ ಸ್ಪಷ್ಟನೆ

ಜಾನ್ವಿ ಕೊನೆಯದಾಗಿ ಮಿಲಿ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಇದು ಮಲಯಾಳಂ ಸಿನಿಮಾದ ರಿಮೇಕ್ ಆಗಿತ್ತು. ಮಲಯಾಳಂನಲ್ಲಿ ದೊಡ್ಡ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆಧರೆ ಮಿಲಿ ಸಿನಿಮಾ ಬಾಲಿವುಡ್‌ನಲ್ಲಿ ನೆಲಕಚ್ಚಿತು. ಈ ಸಿನಿಮಾ ಬಳಿಕ ಜಾನ್ವಿ ಬವಾಲ್ ಮತ್ತು ಮಹಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದೀಗ ಜೂ.ಟಿಆರ್ ಸಿನಿಮಾ ಮಾಡುತ್ತಿರುವುದು ಜಾನ್ವಿ ಸಂತೋಷಕ್ಕೆ ಪಾರವೇ ಇಲ್ಲದಂತೆ ಆಗಿದೆ. ದೊಡ್ಡ ಸಕ್ಸಸ್‌ಗಾಗಿ ಕಾಯುತ್ತಿರುವ ಜಾನ್ವಿ ಸೌತ್ ಸಿನಿಮಾ ಮೂವಕವಾದರೂ ದೊಡ್ಡ  ಹಿಟ್ ಕೊಡ್ತಾರಾ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Victory Venkatesh ಕಟೌಟ್ ನೋಡಿ ಬೆಚ್ಚಿಬಿದ್ದಿದ್ದ ಮೆಗಾಸ್ಟಾರ್ ಚಿರಂಜೀವಿ: ಆ ಕಥೆ ನಿಮಗೆ ಗೊತ್ತಾ?
Niharika Konidela: ಎರಡನೇ ಮದುವೆ ಬಗ್ಗೆ ಮೆಗಾ ಡಾಟರ್ ಸ್ಪಷ್ಟನೆ: ಟ್ರೋಲಿಗರಿಗೆ ಕೊಟ್ರೂ ಖಡಕ್ ಉತ್ತರ