Actress Assault Case; ಪಲ್ಸರ್ ಸುನಿ ಜಾಮೀನು ಅರ್ಜಿ ವಜಾಗೊಳಿಸಿದ ಕೇರಳ ಹೈಕೋರ್ಟ್

By Shruthi KrishnaFirst Published Mar 6, 2023, 1:32 PM IST
Highlights

ಮಲಯಾಳಂ ಖ್ಯಾತ ನಟಿಯ ಮೇಲೆ ದೌರ್ಜನ್ಯ ಮತ್ತು ಹಲ್ಲೆ ಪ್ರಕರಣದ ಪ್ರಮುಖ ಆರೋಪಿ ಪಲ್ಸರ್ ಸುನಿ ಜಾಮೀನು ಅರ್ಜಿಯನ್ನು ಕೇರಳ ಹೈ ಕೋರ್ಟ್ ಮತ್ತೆ ವಜಾಗೊಳಿಸಿದೆ. 

ಕಳೆದ 6 ವರ್ಷಗಳ ಹಿಂದೆ 2017ರಲ್ಲಿ ನಟಿ ಭಾವನಾ ಮೆನನ್ ಮೇಲಿನ ದೌರ್ಜನ್ಯ, ಹಲ್ಲೆ ಪ್ರಕರಣದ ಪ್ರಮುಖ ಆರೋಪಿ ಪಲ್ಸರ್ ಸುನಿ ಸಲ್ಲಿಸಿದ್ದ ಜಾಮೀನು ಅರ್ಜಿನ್ನು ಕೇರಳ ಹೈಕೋರ್ಟ್ 2ನೇ ಬಾರಿಯೂ ವಜಾ ಗೊಳಿಸಿದೆ. ಸೋಮವಾರ ನಡೆದ ವಿಚಾರಣೆಯಲ್ಲಿ ಅರ್ಜಿ ವಜಾಗೊಳಿಸಿದೆ. ಈ ಪ್ರಕರಣದಲ್ಲಿ ಮಲಯಾಳಂ ನಟ ದಿಲೀಪ್ ಕುಮಾರ್ ಕೂಡ ಆರೋಪಿಯಾಗಿದ್ದರು. 

ಖ್ಯಾತ ನಟಿ ಭಾವನಾ ಮೆನನ್ ಅವರನ್ನು ಅಪಹರಿಸಿ, ಕಾರಿನಲ್ಲಿ ಕರೆದೊಯ್ದು, ಫೋಟೋ ಕ್ಲಿಕ್ಕಿಸಿ, ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪಲ್ಸರ್ ಸುನಿ 6 ವರ್ಷಗಳಿಂದ  ನ್ಯಾಯಂಗ ಬಂಧನದಲ್ಲಿದ್ದಾರೆ. ಸುನಿ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿವಿ ಕುಂಜಿಕೃಷ್ಣನ್ ಈ ಆದೇಶ ನೀಡಿದ್ದಾರೆ. ಸುನಿ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸುತ್ತಿರುವುದು ಇದು 2ನೇ ಬಾರಿಯಾಗಿದೆ. ಇದಕ್ಕೂ ಮುನ್ನ ಕಳೆದ  ವರ್ಷ ಇದೇ ನ್ಯಾಯಾಧೀಶರು ಜಾಮೀನು ನೀಡಲು ನಿರಾಕರಿಸಿದ್ದರು. ಪಲ್ಸರ್ ಸುನಿ ಹೆಸರಿನ ಸುನಿಲ್ ಎನ್ ಎಸ್ ಈ ಪ್ರಕರಣದಲ್ಲಿ ಮೊದಲ ಆರೋಪಿಯಾಗಿದ್ದಾನೆ.

Latest Videos

ಆರೋಪಿ ಸುನಿ ಜಾಮೀನು ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಪಿವಿ ಕುಂಜಿಕೃಷ್ಣನ್,  ಆರೋಪಿ ಆರು ವರ್ಷಗಳ ಕಾಲ ಜೈಲುವಾಸ ಅನುಭವಿಸಿದ್ದರೂ, ವಿಚಾರಣೆ ಮುಗಿಯದಿದ್ದರೂ, ಆತ ಎಸಗಿರುವ ಅಪರಾಧದ ಗುರುತನ್ನು ಪರಿಗಣಿಸಿದ ನಂತರವೇ ಜಾಮೀನು ನೀಡಬಹುದು ಎಂದು ಹೇಳಿದರು.

Assault Case: ಭಾವನಾ ಮೆನನ್ ಬೆಂಬಲಕ್ಕೆ ನಿಂತ ತಮಿಳು ನಟ ಸೂರ್ಯ

ಕಳೆದ ವರ್ಷ ಮಾರ್ಚ್‌ನಲ್ಲಿ ಸುನಿ ಕೊನೆಯ ಬಾರಿ ಜಾಮೀನಿಗಾಗಿ ಕೇರಳ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ಜಾಮೀನು ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

ಸುಪ್ರೀಕೋರ್ಟ್ ಕೂಡಗೆ ಜಾಮೀನು ನೀಡಲು ನಿರಾಕರಿಸಿತ್ತು ಮತ್ತು ನಟಿಯ ಹೇಳಿಕೆಯನ್ನು ಗಮನಿಸಿ, ಜಾಮೀನು ನಿರಾಕರಿಸುವ ಕೇರಳ ಹೈಕೋರ್ಟ್ ಆದೇಶದಲ್ಲಿ ಮಧ್ಯಪ್ರವೇಶಿಸಲು ಯಾವುದೇ ಕಾರಣವಿಲ್ಲ ಎಂದು ಹೇಳಿತ್ತು. ಪ್ರಕರಣದ ವಿಚಾರಣೆ ಸದ್ಯ ಎರ್ನಾಕುಲಂನ ಮುಖ್ಯ ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯುತ್ತಿದೆ.

ದೌರ್ಜನ್ಯ, ಹಲ್ಲೆ ಬಗ್ಗೆ ಮೌನ ಮುರಿದ ಭಾವನಾ ಮೆನನ್, ನೋವು ತೋಡಿ ಕೊಂದದ್ಹೀಗೆ!

ಮಲಯಾಳಂ ಚಿತ್ರರಂಗದ ಪ್ರಮುಖ ನಟ ದಿಲೀಪ್ ಈ ಅಪರಾಧದಲ್ಲಿ ಭಾಗಿಯಾಗಿರುವುದು ಮಾತ್ರವಲ್ಲದೆ ಅದರ ಹಿಂದಿನ ಮಾಸ್ಟರ್‌ಮೈಂಡ್‌ಗಳು ಎಂದು ಸುನಿ ತನಿಖಾಧಿಕಾರಿಗಳಿಗೆ ಬಹಿರಂಗಪಡಿಸಿದ್ದರು. 

click me!