ಮಕ್ಕಳಿಗೆ ಆಗತ್ಯ ನೀಡಿ ಸಿನಿಮಾದಿಂದ ದೂರ ಉಳಿದ ಅಮೃತಾ ಸಿಂಗ್. ಫ್ಯಾಮಿಲಿ ಯಾವತ್ತಿದ್ದರೂ ಮೊದಲು ಎಂದ ನಟಿ.....
80ರ ದಶಕದಲ್ಲಿ ಬಾಲಿವುಡ್ ಚಿತ್ರರಂಗವನ್ನು ರೂಲ್ ಮಾಡಿದ ನಟಿ ಅಮೃತಾ ಸಿಂಗ್ 1991ರಲ್ಲಿ ಸೈಫ್ ಅಲಿ ಖಾನ್‌ರನ್ನು ಪ್ರೀತಿಸಿ ಮದುವೆಯಾಗುತ್ತಾರೆ. ತನಗಿಂತ 6 ವರ್ಷ ಕಿರಿಯವನನ್ನು ಮದುವೆಯಾಗುತ್ತಿದ್ದಾಳೆ ಅನ್ನೋ ಗಾಸಿಪ್ ಹಬ್ಬಿದ್ದರೂ ತಲೆ ಕೆಡಿಸಿಕೊಳ್ಳದೆ ಮದುವೆಯಾದರು. ಈ ಜೋಡಿಗೆ ಪುತ್ರಿ ನಟಿ ಸಾರಾ ಅಲಿ ಖಾನ್ ಮತ್ತು ಇಬ್ರಾಹ್ಮಿ ಅಲಿ ಖಾನ್ ಜನಿಸಿದ್ದರು. ಸುಮಾರು 13 ವರ್ಷಗಳ ನಂತ ದಾಂಪತ್ಯ ಜೀವನಕ್ಕೆ ಬ್ರೇಕ್ ಹಾಕಿದ್ದರು. ಫ್ಯಾಮಿಲಿ ಮತ್ತು ಮಕ್ಕಳು ಅಂತ ಸಿನಿಮಾ ಬಿಟ್ಟ ಅಮೃತಾ ತುಂಬಾ ವರ್ಷಗಳ ಹಿಂದೆ ನೀಡಿದ ಸಂದರ್ಶನ ಈಗ ವೈರಲ್ ಆಗುತ್ತಿದೆ.
'ನಾನು ಜೀವನದ ಬಗ್ಗೆ ಕಂಡ ಕನಸ್ಸಿನಲ್ಲಿ ಮದುವೆ ದೊಡ್ಡ ಪಾತ್ರ ವಹಿಸುತ್ತದೆ ಅದರಲ್ಲೂ ಸಿನಿಮಾಗಳಿಗೆ ನನ್ನ ಅಗತ್ಯ ಇರುವುದಕ್ಕಿಂತ ಮಕ್ಕಳಿಗೆ ನನ್ನ ಅಗತ್ಯ ಹೆಚ್ಚಿತ್ತು ಹೀಗಾಗಿ ಕೆಲಸ ಮಾಡುವುದನ್ನು ಬಿಟ್ಟೆ. 18ನೇ ವಯಸ್ಸಿನಿಂದ ಕೆಲಸ ಮಾಡಲು ಶುರು ಮಾಡಿದ ಕಾರಣ ನನಗೆ ಇನ್ನು ಏನೂ ಅಗತ್ಯವಿಲ್ಲ ಅನಿಸಿದ ಮೇಲೆ ಬಿಟ್ಟಿದ್ದು. ಮದುವೆ ಆದ್ಮೇಲೆ ನಾನು ತುಂಬಾ ಸೊಂಬೇರಿ ಆಗಿಬಿಟ್ಟೆ...ಜನರು ಸ್ಟಾರ್ ನಟಿಯ ಪತ್ನಿ ಎಂದು ಕರೆಯುತ್ತಾರೆ ಆದರೆ ನಾನು ಮೊದಲು ಸ್ಟಾರ್ ಆಮೇಲೆ ಸ್ಟಾರ್ ನಟನ ಪತ್ನಿಯಾಗಿದ್ದು. ಈಗ ಬ್ಯೂಟಿ ಪಾರ್ಲರ್‌ನಲ್ಲಿ 5 ಗಂಟೆ ಕುಳಿತುಕೊಳ್ಳಲು ಮನಸ್ಸಿನಲ್ಲ....ನಾನು ಹೇಗಿರಬೇಕೋ ಹಾಗೆ ಇರುತ್ತೀನಿ ನನ್ನ ತನವನ್ನು ಬದಲಾಯಿಸಿಕೊಳ್ಳಲ್ಲ. ನಿನಗೆ ಇಂಟ್ರೆಸ್ಟ್ ಇರಲಿಲ್ಲ ಅಂದ್ರೂ ಪರ್ವಾಗಿಲ್ಲ ನನಗೋಸ್ಕರ ರೆಡಿಯಾಗೂ ಎಂದು ಸೈಫ್ ಅಲಿ ಖಾನ್ ಹೇಳುತ್ತಿದ್ದರು' ಎಂದು ಇಂಗ್ಲಿಷ್ ಮೀಡಿಯಾವೊಂದರಲ್ಲಿ ಅಮೃತಾ ಸಿಂಗ್ ಮಾತನಾಡಿದ್ದರು.
'ಗುಡ್ ನ್ಯೂಸ್ ಯಾವಾಗ' ಅಂತ ಜನರು ಕೇಳೋದು ನಿಲ್ಲಿಸಿದರೆ ಜೀವನ ಸಾರ್ಥಕ ಆಗುತ್ತೆ: ಅನು ಪ್ರಭಾಕರ್
ನಟಿಯಾಗಿದ್ದಾಗ ಇನ್‌ಸೆಕ್ಯೂರಿಟಿಗಳು ತುಂಬಾ ಹೆಲ್ತಿಯಾಗಿರುತ್ತದೆ ಆದರೆ ಸ್ಟಾರ್ ನಟಿಯ ಪತ್ನಿ ಆದ್ಮೇಲೆ ಬರುವ ಇನ್‌ಸೆಕ್ಯೂರಿಟಿಗಳು ಬೇರೆ ರೀತಿ ಇರುತ್ತದೆ ಏಕೆಂದರೆ ಮೈಂಡ್‌ನ ಡ್ಯಾಮೇಜ್ ಮಾಡುತ್ತದೆ. ನನಗೆ ಯಾವುದೇ ಇನ್‌ಸೆಕ್ಯೂರಿಟಿಗಳು ಇಲ್ಲ ಆದರೆ ಮಕ್ಕಳನ್ನು ಖುಷಿಯಾಗಿ ಬೆಳೆಸುತ್ತಿರುವೆ. ನನ್ನ ಜೀವನದ ಕಷ್ಟ ಘಟನೆ ಅಂದ್ರೆ ಡಿವೋರ್ಸ್ ಅಲ್ಲ ನನ್ನ ತಾಯಿಯನ್ನು ಕಳೆದುಕೊಂಡ ಕ್ಷಣ. ಏಕೆಂದರೆ ನನಗೆ ಸಹೋದದರು ಇಲ್ಲ ನಾನು ತಾಯಿ ಇಬ್ಬರೇ ಜೀವನ ಮಾಡುತ್ತಿದ್ದ ಕಾರಣ. ಈಗ ನನ್ನವರು ಎಂದು ಯಾರೂ ಇಲ್ಲ ಎಂದು ಅಮೃತಾ ಹೇಳಿದ್ದಾರೆ.
ನನ್ನ ದೇಹವನ್ನು ಶೋ ಆಫ್ ಮಾಡ್ತೀನಿ, ಯಾವ ನಾಚಿಕೆನೂ ಇಲ್ಲ: ನಿರೂಪಕಿ ಅನಸೂಯ
ಜೀವನದಲ್ಲಿ ಎಂದೂ ನನಗೆ ಮಕ್ಕಳು ಮುಖ್ಯವಾಗುತ್ತದೆ ಯಾವತ್ತೂ ಮೀಡಿಯಾ ಅಥವಾ ಜನರ ಅಭಿಪ್ರಾಯ ಮುಖ್ಯವಾಗುವುದಿಲ್ಲ ಎಂದಿದ್ದಾರೆ ಅಮೃತಾ.