ಮಾಧುರಿ ಮದ್ವೆ ವಿಷ್ಯ ತಿಳಿದಾಗ ನನ್ನಪ್ಪ ಬಾತ್‌ರೂಮ್‌ನಲ್ಲಿ.... ಆ ದಿನ ನೆನೆದ ದೀಪಿಕಾ ಪಡುಕೋಣೆ

By Suchethana D  |  First Published Jul 30, 2024, 2:41 PM IST

ಮಾಧುರಿ ದೀಕ್ಷಿತ್‌ ಮದುವೆಯ ವಿಷಯ ತಿಳಿದಾಗ ದೀಪಿಕಾ ಪಡುಕೋಣೆ ತಂದೆ ಪ್ರಕಾಶ್‌ ಪಡುಕೋಣೆ ಮಾಡಿದ್ದೇನು? ಶಾಕಿಂಗ್‌ ವಿಷ್ಯ ರಿವೀಲ್‌ ಮಾಡಿದ ನಟಿ
 


90 ರ ದಶಕದಲ್ಲಿ ಬಾಲಿವುಡ್‌ನ ಸುವರ್ಣ ಯುಗ. ಮಾಧುರಿ ದೀಕ್ಷಿತ್ ಅವರಂಥ ನಟಿಯರು ಕೋಟ್ಯಂತರ ಜನರ ಮನಸ್ಸನ್ನು ಗೆದ್ದಿದ್ದರು. ಎಲ್ಲಾ ಕ್ಷೇತ್ರಗಳ ದಿಗ್ಗಜರು ಸೇರಿದಂತೆ ಕೋಟ್ಯಂತರ ಮಂದಿಯ ಕ್ರಷ್‌ ಕೂಡ ಆಗಿದ್ದರು ಮಾಧುರಿ. ಅವರಲ್ಲಿ ಒಬ್ಬರು  ದೀಪಿಕಾ ಪಡುಕೋಣೆ  ತಂದೆ ಮಾಜಿ ಬ್ಯಾಡ್ಮಿಂಟನ್ ದಂತಕಥೆ ಪ್ರಕಾಶ್ ಪಡುಕೋಣೆ. ಈ ಕುರಿತು ಕಾರ್ಯಕ್ರಮವೊಂದರಲ್ಲಿ ದೀಪಿಕಾ ಪಡುಕೋಣೆ ಅವರು, ಮಾಧುರಿ ದೀಕ್ಷಿತ್‌ ಅವರಿಗೇ ನೇರವಾಗಿ ಹೇಳಿದ್ದಾರೆ. ಕೆಲ ವರ್ಷಗಳ ಹಿಂದಿನ ವಿಡಿಯೋ ಇದಾಗಿದ್ದು, ಮತ್ತೆ ವೈರಲ್‌ ಆಗಿದೆ.    

ನನ್ನ ತಂದೆ ಪ್ರಕಾಶ್‌ ಅವರ ಕ್ರಷ್‌ ಆಗಿದ್ದೀರಿ ನೀವು. ಅವರು ನಿಮ್ಮ ಮೇಲೆ ಸಿಕ್ಕಾಪಟ್ಟೆ ಪ್ರೀತಿ ಹೊಂದಿದ್ದರು. ಬ್ಯಾಡ್ಮಿಂಟನ್‌ ಅವರ ಪ್ರಪಂಚ ಆಗಿತ್ತು. ಅದರಿಂದ ಫ್ರೀ ಆದರೆ  ಬೆಳಿಗ್ಗೆ ಎದ್ದು ದಿನಪತ್ರಿಕೆಗಳನ್ನು ಹಿಡಿದುಕೊಂಡೇ ಇರುತ್ತಿದ್ದರು. ಬಾತ್‌ರೂಮ್‌ಗೆ ಹೋದಾಗ,  ಕಾಫಿ ಕುಡಿಯುವಾಗ ಎಲ್ಲ ಸಮಯದಲ್ಲಿಯೂ ಪತ್ರಿಕೆ ಇರಲೇಬೇಕಿತ್ತು. ಅದೊಂದು ದಿನ ಮಾಧುರಿ ದೀಕ್ಷಿತ್‌ ಮದುವೆಯಾಯಿತು ಎಂಬ ಸುದ್ದಿ ಓದಿ ಶಾಕ್‌ ಆಗಿಬಿಟ್ಟರು. ಮದುವೆಯ ಬಗ್ಗೆ ಮೊದಲೇ ತಿಳಿದಿರಲಿಲ್ಲ. ಈ ಸುದ್ದಿ ಓದುತ್ತಿದ್ದಂತೆಯೇ ಸಿಕ್ಕಾಪಟ್ಟೆ ಆಘಾತಗೊಂಡರು. ಅವರ ಸ್ಥಿತಿ ಯಾರಿಗೂ ಬೇಡ. ಅವರು ಕೂಡಲೇ ಬಾತ್‌ರೂಂ ಒಳಗೆ ಹೋದರು. ಹೊರಗಡೆ ಬಂದಾಗ ಅವರ ಕಣ್ಣುಗಳು ಊದಿಕೊಂಡಿದ್ದವು. ನನ್ನಮ್ಮ ನೀವು ಅತ್ತಿದ್ರಾ ಎಂದು ಕೇಳಿದರು. ಆದರೆ ಅವರು ಏನೂ ಉತ್ತರ ಕೊಡದೇ ಮೌನಕ್ಕೆ ಜಾರಿದ್ದರು ಎಂಬುದನ್ನು ನೆನಪಿಸಿಕೊಂಡಿದ್ದಾರೆ.

Tap to resize

Latest Videos

ಅಮ್ಮನಾಗಲು ಎರಡೇ ತಿಂಗಳು ಬಾಕಿ: ನಟಿ ದೀಪಿಕಾ ಪಡುಕೋಣೆ ಸೀಮಂತದ ಫೋಟೋಗಳು ವೈರಲ್​
 
ಅಂದಹಾಗೆ, ಪ್ರಕಾಶ್ ಅವರು ಉಜ್ಜಲಾ ಪಡುಕೋಣೆ ಅವರನ್ನು ವಿವಾಹವಾದರು, ಅವರಿಗೆ ದೀಪಿಕಾ ಮತ್ತು ಗಾಲ್ಫ್ ವೃತ್ತಿಜೀವನವನ್ನು ಅನುಸರಿಸುತ್ತಿರುವ ಅನಿಶಾ ಅವರ ಪುತ್ರಿಯರಿದ್ದಾರೆ. ಏತನ್ಮಧ್ಯೆ, ಮಾಧುರಿ ಮತ್ತು ಶ್ರೀರಾಮ್ ಅವರಿಗೆ ಅರಿನ್ ಮತ್ತು ರಿಯಾನ್ ಎಂಬ ಇಬ್ಬರು ಪುತ್ರರನ್ನು ಹೊಂದಿದ್ದಾರೆ. ಮತ್ತೊಂದೆಡೆ ದೀಪಿಕಾ ನಟ ರಣವೀರ್ ಸಿಂಗ್ ಅವರನ್ನು ವಿವಾಹವಾಗಿದ್ದಾರೆ ಮತ್ತು ಈ ವರ್ಷದ ಸೆಪ್ಟೆಂಬರ್‌ನಲ್ಲಿ ತಮ್ಮ ಮೊದಲ ಮಗುವನ್ನು ಹೊಂದಲಿದ್ದಾರೆ.


ಅಂದಹಾಗೆ, ಮಾಧುರಿ ದೀಕ್ಷಿತ್ ಅವರ ಸಿನಿಮಾ ಪ್ರಯಾಣವು 1984 ರಲ್ಲಿ ಅಬೋಧ್‌ನೊಂದಿಗೆ ಪ್ರಾರಂಭವಾಯಿತು. ನಂತರ ನಟಿ ಬೀಟಾ, ತೇಜಾಬ್, ರಾಜಾ, ದಿಲ್, ಮತ್ತು ಮ್ಯಾಗ್ನಮ್ ಆಪಸ್ ಹಮ್ ಆಪ್ಕೆ ಹೈ ಕೌನ್‌ನಂತಹ ಬ್ಲಾಕ್‌ಬಸ್ಟರ್‌ಗಳನ್ನು ನೀಡಿದರು.  ಡಾ. ಶ್ರೀರಾಮ್ ನೆನೆಯೊಂದಿಗೆ ಮದುವೆಯಾದ ನಂತರ 1999 ರಲ್ಲಿ ಅಮೆರಿಕಕ್ಕೆ ತೆರಳಿದರು.  ಸ್ವಲ್ಪ ಸಮಯದವರೆಗೆ  ವೃತ್ತಿಜೀವನವು ಸ್ಥಗಿತಗೊಂಡಿತ್ತು. ಮತ್ತೆ ಪುನರಾರಂಭ ಮಾಡಿ ಮತ್ತಷ್ಟು ಬ್ಲಾಕ್‌ ಬಸ್ಟರ್‌ ಚಿತ್ರ ಕೊಟ್ಟರು.  
 

ವೈಫೈ ಪಾಸ್​ವರ್ಡ್​ ಸೇರಿದಂತೆ ಜೀವನದ ಇಷ್ಟೊಂದು ರಹಸ್ಯ ಹೇಳಿಯೇ ಬಿಟ್ರಲ್ಲಾ ಸಪ್ತಮಿ ಗೌಡ!

 
 
 
 
 
 
 
 
 
 
 
 
 
 
 

A post shared by Only Bolly (@onlybolyrkdp61)

click me!