
ಕಳೆದ 24 ವರ್ಷಗಳಿಂದ ಬಾಲಿವುಡ್ ನಲ್ಲಿ ಬ್ಯುಸಿಯಾಗಿರುವ ನಟಿ ಕರಿನಾ ಕಪೂರ್ ಖಾನ್, ತಮ್ಮ ನಟನೆ, ಫಿಟ್ನೆಸ್ ಗೆ ಮಾತ್ರವಲ್ಲ ವೈಯಕ್ತಿಕ ವಿಚಾರಕ್ಕೂ ಸಾಕಷ್ಟು ಸುದ್ದಿಯಲ್ಲಿರುತ್ತಾರೆ. ಎರಡು ಮಕ್ಕಳಾದ್ರೂ ಸಂತೂರ್ ಅಮ್ಮನಂತೆ ಮಿಂಚುತ್ತಿರುವ ನಟಿ, ಹಿಂದೂ ಕುಟುಂಬದಿಂದ ಬಂದ್ರೂ ಮುಸ್ಲಿಂ ನಟನನ್ನು ಮದುವೆಯಾಗಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ರು. ಧರ್ಮಕ್ಕಿಂತ ಪ್ರೀತಿ ಮುಖ್ಯ ಎಂಬುದನ್ನು ಬಲವಾಗಿ ನಂಬಿರುವ ಕರೀನಾ ಕಪೂರ್ ಖಾನ್, ಮದುವೆ ಆದ್ಮೇಲೆ ಹಿಂದೂ ಧರ್ಮವನ್ನು ಪಾಲನೆ ಮಾಡ್ತಿದ್ದಾರಾ, ಇಲ್ಲ ಮುಸ್ಲಿಂ ಧರ್ಮವನ್ನು ಪಾಲಿಸ್ತಿದ್ದಾರಾ ಎನ್ನುವ ಪ್ರಶ್ನೆ ಕಾಡೋದು ಸಹಜ. ಅಭಿಮಾನಿಗಳ ಈ ಕುತೂಹಲಕ್ಕೆ ಈಗ ತೆರೆ ಬಿದ್ದಿದೆ. ಕರೀನಾ ಕಪೂರ್ ಖಾನ್ ಇಬ್ಬರು ಮಕ್ಕಳ ದಾದಿ, ಲಲಿತಾ ಡಿಸಿಲ್ವಾ ಕರೀನಾ ಯಾವ ಧರ್ಮ ಪಾಲನೆ ಮಾಡ್ತಾರೆ ಎಂಬ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ.
ಕರೀನಾ ಕಪೂರ್ (Kareena Kapoor) ಯಾವ ಧರ್ಮ (Religion) ವನ್ನು ಅನುಸರಿಸುತ್ತಾರೆ? : ಕರೀನಾ ಕಪೂರ್ ಹಾಗೂ ಸೈಫ್ ಅಲಿ ಖಾನ್ (Saif Ali Khan) ಮಕ್ಕಳಾದ ತೈಮೂರ್ ಮತ್ತು ಜೆಹ್ ಅವರ ದಾದಿ ಲಲಿತಾ ಡಿಸಿಲ್ವಾ ಈ ದಿನಗಳಲ್ಲಿ ಸುದ್ದಿಯಲ್ಲಿದ್ದಾರೆ. ಅನಂತ್ ಅಂಬಾನಿ ಮದುವೆಯಲ್ಲಿ ಪಾಲ್ಗೊಂಡಿದ್ದ ಅವರು, ಅನಂತ್ ಸಣ್ಣವರಿದ್ದಾಗ ಅವರನ್ನು ನೋಡಿಕೊಂಡಿದ್ದರು. ಅವರ ಫೋಟೋ ಸಾಕಷ್ಟು ವೈರಲ್ ಆಗಿತ್ತು. ಈಗ ಸಂದರ್ಶನವೊಂದರಲ್ಲಿ ಮಾತನಾಡಿದ ಲಲಿತಾ ಡಿಸಿಲ್ವಾ, ಕರೀನಾ ಕಪೂರ್ ಮನೆ ಬಗ್ಗೆ ಅನೇಕ ವಿಷ್ಯಗಳನ್ನು ಹಂಚಿಕೊಂಡಿದ್ದಾರೆ. ಕರೀನಾ ಅವರ ಅಮ್ಮನ ದಾರಿ ತುಳಿದಿದ್ದಾರೆಂದು ಲಲಿತಾ ಡಿಸಿಲ್ವಾ ಹೇಳಿದ್ದಾರೆ. ಕರೀನಾ ಕಪೂರ್ ತಮ್ಮ ತಾಯಿ ಬಬಿತಾ ಕಪೂರ್ ರಂತೆ ಕ್ರಿಶ್ಚಿಯನ್ ಧರ್ಮವನ್ನು ಪಾಲನೆ ಮಾಡ್ತಾರೆ ಎಂದು ಲಲಿತಾ ಡಿಸಿಲ್ವಾ ಹೇಳಿದ್ದಾರೆ. ನೀವು ಬಯಸಿದ್ರೆ ಮಕ್ಕಳಿಗೆ ಭಜನೆ ಹೇಳಿಕೊಡಿ ಎಂದು ಕರೀನಾ ಕಪೂರ್, ಲಲಿತಾ ಡಿಸಿಲ್ವಾರಿಗೆ ಹೇಳ್ತಿದ್ದರಂತೆ. ಮಕ್ಕಳಿಗೆ ಲಲಿತಾ, ಭಜನೆ ಹೇಳಿಕೊಡುತ್ತಿದ್ದರು. ಪಂಜಾಬಿ ಭಜನೆ ಏಕ್ ಓಂಕಾರ್ ಹಾಕುವಂತೆ ಕರೀನಾ ಅನೇಕ ಬಾರಿ ಲಲಿತಾ ಡಿಸಿಲ್ವಾ ಅವರಿಗೆ ಹೇಳಿದ್ದರು. ಮಕ್ಕಳ ಸುತ್ತಮುತ್ತ ಸಕಾರಾತ್ಮಕ ವಾತಾವರಣ ಇರಬೇಕು ಎಂದು ಕರೀನಾ ತಿಳಿದಿದ್ದಾರೆ ಎಂದು ಲಲಿತಾ ಡಿಸಿಲ್ವಾ ಹೇಳಿದ್ದಾರೆ.
ಮಗು ನೇಹಾ ಗೌಡ ಫೋಸ್, ಇಷ್ಟು ಬೇಗ ಡೆಲಿವರಿ ಆಗೋಯ್ತ?!
ಕುಟುಂಬ ಸದಸ್ಯರು – ಸಿಬ್ಬಂದಿ ಮಧ್ಯೆ ಅಂತರವಿತ್ತಾ? : ಲಲಿತಾ ಡಿಸಿಲ್ವಾ, ಕರೀನಾ ಕಪೂರ್ ಮನೆ ವಾತಾವರಣದ ಬಗ್ಗೆಯೂ ಮಾತನಾಡಿದ್ದಾರೆ. ಕರೀನಾ ಈಗ ಪ್ರಸಿದ್ಧ ಪಟೌಡಿ ಕುಟುಂಬದ ಸೊಸೆ. ಈ ಮನೆಯಲ್ಲಿ ಯಾರನ್ನೂ ಪ್ರತ್ಯೇಕವಾಗಿ ನೋಡಲ್ಲ ಎಂದು ಲಲಿತಾ ಡಿಸಿಲ್ವಾ ಹೇಳಿದ್ದಾರೆ. ಕುಟುಂಬದ ಸದಸ್ಯರು ಹಾಗೂ ಸಿಬ್ಬಂದಿ ಎಲ್ಲರಿಗೂ ಒಂದೇ ರೀತಿಯ ಊಟದ ವ್ಯವಸ್ಥೆ ಇರುತ್ತದೆ. ಸಿಬ್ಬಂದಿಗೆ ಪ್ರತ್ಯೇಕ ಅಡುಗೆ ಅಥವಾ ಬೇರೆ ಗುಣಮಟ್ಟದ ಆಹಾರವಿಲ್ಲ. ಕರೀನಾ, ಸೈಫ್ ತಿನ್ನುವ ಆಹಾರವನ್ನೇ ಸಿಬ್ಬಂದಿ ಸೇವನೆ ಮಾಡ್ಬೇಕು. ಬಹುತೇಕ ಬಾರಿ ಎಲ್ಲರೂ ಒಟ್ಟಿಗೆ ಕುಳಿತು ಆಹಾರ ಸೇವನೆ ಮಾಡ್ತಾರೆ. ಇವರಿಬ್ಬರು ಮನೆ ಅಡುಗೆಗೆಯನ್ನೇ ಹೆಚ್ಚು ತಿನ್ನುತ್ತಾರೆ ಎಂದು ಲಲಿತಾ ಡಿಸಿಲ್ವಾ ಹೇಳಿದ್ದಾರೆ.
ದೀಪಿಕಾ ಜೊತೆ ಇಂಟಿಮೇಟ್ ದೃಶ್ಯ : ಭಯದಲ್ಲಿದ್ದ ಮಗನಿಗೆ ಧೈರ್ಯ ಹೇಳಿದ್ರಂತೆ ಸಿದ್ಧಾಂತ್ ಅಪ್ಪ!
ಮಕ್ಕಳ ಮೇಲೆ ಪ್ರೀತಿ ಇದ್ರೂ ಶಿಸ್ತಿಗೆ ಆದ್ಯತೆ : ಬಾಲಿವುಡ್ ಬೇಬೋ ಯಾವ ರೀತಿಯ ತಾಯಿ ಎಂಬ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತದೆ. ಅದಕ್ಕೆ ಉತ್ತರಿಸಿದ ಲಲಿತಾ ಡಿಸಿಲ್ವಾ, ಕರೀನಾ ಕಪೂರ್ ಮಕ್ಕಳನ್ನು ಪ್ರೀತಿ ಮಾಡ್ತಾರೆ. ಆದ್ರೆ ಶಿಸ್ತಿನ ಪಾಲನೆಗೆ ಆದ್ಯತೆ ನೀಡ್ತಾರೆ ಎಂದಿದ್ದಾರೆ. ಕರೀನಾ ಬಾಲ್ಯವನ್ನು ನಾನು ನೋಡಿಲ್ಲ. ಅವರು ಹೇಳೋದನ್ನು ಕೇಳಿದ್ದೇನೆ. ಕರೀನಾ ತಾಯಿ ಬಬಿತಾ ಅವರನ್ನು ಶಿಸ್ತಿನಿಂದ ಬೆಳೆಸಿದ್ದಾರೆ. ಓದಿಗೆ ಮಹತ್ವ ನೀಡಿದ್ದಲ್ಲದೆ ಟೈಂ ಟೇಬಲ್ ಸಿದ್ಧಪಡಿಸಿ ಅದನ್ನು ಪಾಲನೆ ಮಾಡ್ತಿದ್ದರು ಎಂದು ಲಲಿತಾ ಡಿಸಿಲ್ವಾ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.